ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

LPG in EMI: ಗೃಹ ಬಳಕೆ ಗ್ರಾಹಕರಿಗೆ ಗುಡ್‌ ನ್ಯೂಸ್:‌ ‌ಇನ್ನು ಮುಂದೆ ಇಎಂಐನಲ್ಲಿ ಪಡೆಯಿರಿ ಸಿಲಿಂಡರ್

ಎಲ್‌ಪಿಜಿ ಸಿಲಿಂಡ‌ರ್ ಬೆಲೆ ಏರಿಕೆಯಿಂದ ತೊಂದರೆಗೊಳಗಾಗಿರುವ ಹಾಗೂ ಬುಕಿಂಗ್ ವೇಳೆ ಪೂರ್ಣ ಪ್ರಮಾಣದ ಹಣವಿಲ್ಲದೆ ಪರದಾಡುವ ಗೃಹ ಬಳಕೆ ಗ್ರಾಹಕರಿಗೆ ಭಾರತ್ ಗ್ಯಾಸ್ ಸಂಸ್ಥೆಯು ಗುಡ್‌ ನ್ಯೂಸ್‌ ನೀಡಿದೆ. ಎಲ್‌ಪಿಜಿ ಸಿಲಿಂಡ‌ರ್ ಮರುಪೂರಣ (ರೀಫಿಲ್) ಮಾಡಿಸಿ ಕೊಳ್ಳಲು ಈಗ ಬಡ್ಡಿರಹಿತ ಮೈಕ್ರೋ-ಸಾಲ (ಇಎಂಐ) ಸೌಲಭ್ಯವನ್ನು ಘೋಷಿಸಲಾಗಿದೆ.

ಇನ್ನು ಮುಂದೆ ಇಎಂಐನಲ್ಲಿ ಪಡೆಯಿರಿ ಸಿಲಿಂಡರ್

-

Profile
Ashok Nayak Sep 30, 2026 8:12 AM

ದೆಹಲಿ: ಎಲ್‌ಪಿಜಿ ಸಿಲಿಂಡ‌ರ್ ಮರುಪೂರಣ (ರೀಫಿಲ್) ಮಾಡಿಸಿ ಕೊಳ್ಳಲು ಈಗ ಬಡ್ಡಿರಹಿತ ಮೈಕ್ರೋ-ಸಾಲ (ಇಎಂಐ) ಸೌಲಭ್ಯವನ್ನು ಘೋಷಿಸಲಾಗಿದೆ. ಈ ಮೂಲಕ ಭಾರತ್ ಗ್ಯಾಸ್ ಸಂಸ್ಥೆಯು ಗುಡ್‌ ನ್ಯೂಸ್‌ ನೀಡಿದ್ದು, ಎಲ್‌ಪಿಜಿ ಸಿಲಿಂಡ‌ರ್ ಬೆಲೆ ಏರಿಕೆಯಿಂದ ತೊಂದರೆಗೊಳ ಗಾಗಿರುವ ಹಾಗೂ ಬುಕಿಂಗ್ ವೇಳೆ ಪೂರ್ಣ ಪ್ರಮಾಣದ ಹಣವಿಲ್ಲದೆ ಪರದಾಡುವ ಗೃಹ ಬಳಕೆ ಗ್ರಾಹಕರು ನಿರಾಳರಾಗಿದ್ದಾರೆ.

ಪ್ರಸ್ತುತ ಮಾರುಕಟ್ಟೆಯಲ್ಲಿ 14.2 ಕೆಜಿ ತೂಕದ ಎಲ್‌ಪಿಜಿ ಸಿಲಿಂಡರ್ ಬೆಲೆ ಸುಮಾರು ₹950 ಇದ್ದು, ಇಷ್ಟೊಂದು ದೊಡ್ಡ ಮೊತ್ತ ಪಾವತಿಸಲು ಸಾಧ್ಯವಾಗದ ಗ್ರಾಹಕರು ಇನ್ನು ಮುಂದೆ ಕಂತುಗಳ ರೂಪದಲ್ಲಿ ಹಣ ಪಾವತಿಸಿ ಸಿಲಿಂಡರ್ ಪಡೆಯಬಹುದಾಗಿದೆ.

ಇದನ್ನೂ ಓದಿ: LPG Gas Price: ಗುಡ್‌ನ್ಯೂಸ್‌... ಗುಡ್‌ನ್ಯೂಸ್‌! LPG ಗ್ಯಾಸ್‌ ಮತ್ತಷ್ಟು ಅಗ್ಗ!

ವಾರಕ್ಕೆ ₹100ರಂತೆ 6 ವಾರಗಳಲ್ಲಿ ಮರುಪಾವತಿ: ಈ ನೂತನ ಯೋಜನೆಯಡಿ ಗ್ರಾಹಕರು ಸಿಲಿಂಡರ್ ರೀಫಿಲ್‌ಗಾಗಿ ಗರಿಷ್ಠ ₹600 ರವರೆಗೆ ಬಡ್ಡಿರಹಿತ ಸಾಲ ಪಡೆಯಲು ಅರ್ಹರು. ಸಾಲವಾಗಿ ಪಡೆದ ಈ ₹600 ಮೊತ್ತವನ್ನು ಪ್ರತಿ ವಾರ ₹100ರಂತೆ ಒಟ್ಟು 6 ಕಂತುಗಳಲ್ಲಿ (6 ವಾರಗಳಲ್ಲಿ) ಮರು ಪಾವತಿಸಬೇಕು. ವಿಶೇ‍‍ಷವೆಂದರೆ ಈ ಸಾಲದ ಮೊತ್ತಕ್ಕೆ ಬಡ್ಡಿ ವಿಧಿಸಲಾಗುವುದಿಲ್ಲ. ಅಂದರೆ ಗ್ರಾಹಕರು ಪ್ರತಿ ವಾರ ₹100 ಇಎಂಐ ಕಟ್ಟಿ, ಹಣದ ಅಭಾವವಿದ್ದಾಗಲೂ ಮುಂಚಿತವಾಗಿ ಸಿಲಿಂಡರ್ ಪಡೆದುಕೊಳ್ಳಬಹುದು.

ಪಡೆಯುವುದು ಹೇಗೆ?: ಭಾರತ್ ಗ್ಯಾಸ್ ಸಂಸ್ಥೆಯು 'ವನ್‌ಗೋ ಫಿನ್‌ಟೆಕ್' (OneGo Fintech) ಸಹಯೋಗದೊಂದಿಗೆ ಈ ಸೌಲಭ್ಯವನ್ನು ಗ್ರಾಹಕರಿಗೆ ತಲುಪಿಸುತ್ತಿದೆ. ಈ ಬಡ್ಡಿರಹಿತ ಸಾಲದ ಪ್ರಯೋಜನ ಪಡೆಯಲು ಇಚ್ಛಿಸುವ ಗ್ರಾಹಕರು ತಮ್ಮ ಸಮೀಪದ ಭಾರತ್ ಗ್ಯಾಸ್ ವಿತರಕರನ್ನು (ಏಜೆನ್ಸಿ) ಸಂಪರ್ಕಿಸಿ, ಅಗತ್ಯ ದಾಖಲೆಗಳನ್ನು ಒದಗಿಸುವ ಮೂಲಕ ಯೋಜನೆಯ ಮಾಹಿತಿ ಮತ್ತು ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.