ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

‘ತಲೆ, ಕೈಗಳು ಸೀಳಿಹೋಗಿದ್ದವು’: ವಿಮಾನದಲ್ಲಿಯೇ ಭಾರತೀಯ ಪೈಲಟ್‌ಗೆ ತುರ್ತು ಚಿಕಿತ್ಸೆ ನೀಡಿದ ದಂತವೈದ್ಯ ಹೇಳಿದ್ದೇನು?

FlyDubai pilot attack: ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರಿಗೆ ಚಿಕಿತ್ಸೆ ನೀಡಿದ ದಂತವೈದ್ಯರಾದ ಡಾ. ಶೋಟಾ ಮೊಸಾವ್ ಅವರು, ದಾಳಿಯ ಬಳಿಕ ಪೈಲಟ್‌ ಅವರ ಸ್ಥಿತಿ ಗಂಭೀರವಾಗಿತ್ತು ಎಂದು ತಿಳಿಸಿದ್ದಾರೆ. ಅವರ ತಲೆ ಮತ್ತು ಕೈಗಳಿಗೆ ಆಳವಾದ ಗಾಯಗಳಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ರಕ್ತಸ್ರಾವವಾಗಿತ್ತು ಎಂದು ಅವರು ಹೇಳಿದ್ದಾರೆ.

ವಿಮಾನದಲ್ಲಿಯೇ ಭಾರತೀಯ ಪೈಲಟ್‌ಗೆ ತುರ್ತು ಚಿಕಿತ್ಸೆ ನೀಡಿದ ದಂತವೈದ್ಯ!

ವಿಮಾನದಲ್ಲಿ ಭಾರತೀಯ ಪೈಲಟ್ ಮೇಲೆ ಮಾರಣಾಂತಿಕ ಹಲ್ಲೆ -

Priyanka P
Priyanka P Oct 1, 2026 11:55 AM

ರಿಯಾದ್, ಅ.1: ಫ್ಲೈದುಬೈಯ FZ1073 ವಿಮಾನದ ಭಾರತೀಯ ಪೈಲಟ್ ಮೇಲೆ ಕಾಕ್‌ಪಿಟ್‌ನಲ್ಲೇ ಹಲವು ಬಾರಿ ಚಾಕುವಿನಿಂದ ದಾಳಿಗೊಳಗಾಗಿದ್ದರು (pilot attack). ಈ ದಾಳಿಯಿಂದ ಪೈಲಟ್‌ ಅವರ ದೇಹದಿಂದ ಸಾಕಷ್ಟು ರಕ್ತಸ್ರಾವವಾಗಿ, ಅವರು ಪ್ರಜ್ಞೆ ಕಳೆದುಕೊಳ್ಳುವ ಸ್ಥಿತಿಗೆ ತಲುಪಿದ್ದರು. ಅದೇ ವಿಮಾನದಲ್ಲಿದ್ದ ಇಸ್ರೇಲಿ ದಂತವೈದ್ಯರೊಬ್ಬರು ಪರಿಸ್ಥಿತಿಯನ್ನು ಗಮನಿಸಿ ತಕ್ಷಣ ಕಾಕ್‌ಪಿಟ್‌ಗೆ ಧಾವಿಸಿದರು. ಅವರು ಗಾಯಗೊಂಡ ಪೈಲಟ್‌ಗೆ ತುರ್ತು ವೈದ್ಯಕೀಯ ನೆರವು ಮತ್ತು ಚಿಕಿತ್ಸೆ ನೀಡಿದರು. ನಂತರ ವಿಮಾನವನ್ನು ಸೌದಿ ಅರೇಬಿಯಾ (Saudi Arabia) ದಲ್ಲಿ ತುರ್ತು ಭೂಸ್ಪರ್ಶ ಮಾಡಿಸಲಾಯಿತು.

ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರಿಗೆ ಚಿಕಿತ್ಸೆ ನೀಡಿದ ದಂತವೈದ್ಯರಾದ ಡಾ. ಶೋಟಾ ಮೊಸಾವ್ ಅವರು, ದಾಳಿಯ ಬಳಿಕ ಪೈಲಟ್‌ ಅವರ ಸ್ಥಿತಿ ಗಂಭೀರವಾಗಿತ್ತು ಎಂದು ತಿಳಿಸಿದ್ದಾರೆ. ಅವರ ತಲೆ ಮತ್ತು ಕೈಗಳಿಗೆ ಆಳವಾದ ಗಾಯಗಳಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ರಕ್ತಸ್ರಾವವಾಗಿತ್ತು ಎಂದು ಅವರು ಹೇಳಿದ್ದಾರೆ.

ಅವರ ದೇಹದಾದ್ಯಂತ ಕತ್ತರಿಸಿದ ಗಾಯಗಳಿದ್ದವು. ಅವರ ತಲೆ ಮತ್ತು ಕೈಗಳು ಬಹುತೇಕ ಸೀಳಿಹೋಗಿದ್ದವು. ಎರಡು ಭಾಗಗಳಾಗಿ ಕತ್ತರಿಸಿದಂತಾಗಿತ್ತು ಎಂದು ಮೊಸಾವ್ ಹೇಳಿದರು. ಕಾಕ್‌ಪಿಟ್‌ಗೆ ತಲುಪಿದಾಗ ಕ್ಯಾಪ್ಟನ್ ಮಚ್ಚರ್ ಅವರ ಸ್ಥಿತಿಯನ್ನು ವಿವರಿಸಿದ ಅವರು, “ಅವರ ಪರಿಸ್ಥಿತಿ ಗಂಭೀರವಾಗಿತ್ತು. ಬಹುಶಃ ಜೀವಕ್ಕೆ ತಕ್ಷಣದ ಅಪಾಯವಿರಲಿಲ್ಲ. ಆದರೆ ಹೆಚ್ಚಿನ ರಕ್ತಸ್ರಾವದಿಂದ ಅವರ ಸ್ಥಿತಿ ಗಂಭೀರವಾಗಿತ್ತು” ಎಂದು ತಿಳಿಸಿದರು.

ಹೈಜಾಕ್‌ ಆತಂಕದ ನಡುವೆಯೂ ನೂರಾರು ಜನರ ಜೀವ ಉಳಿಸಿದ ಭಾರತೀಯ ಪೈಲಟ್; ಸ್ಮಿತ್ ಮಚ್ಚರ್‌ಗೆ ಕಾರ್ಯಕ್ಕೆ ಮೋದಿ ಮೆಚ್ಚುಗೆ

ಮೊಸಾವ್ ಅವರು ನೀಡಿದ ವಿವರಗಳ ಪ್ರಕಾರ, ದುಬೈಯಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ವಿಮಾನದಲ್ಲಿದ್ದ ಏಕೈಕ ವೈದ್ಯರು ಅವರೇ ಆಗಿದ್ದರು. ವಿಮಾನದಲ್ಲಿ ಕಿರುಚಾಟದ ಶಬ್ಧ ಕೇಳಿದ ತಕ್ಷಣ ಅವರು ಕಾಕ್‌ಪಿಟ್‌ನತ್ತ ಧಾವಿಸಿದರು. ಅಲ್ಲಿ ಗಾಯಗೊಂಡಿದ್ದ ಕ್ಯಾಪ್ಟನ್‌ಗೆ ತಕ್ಷಣ ಚಿಕಿತ್ಸೆ ನೀಡಲು ಆರಂಭಿಸಿದರು. ಇದೇ ವೇಳೆ, ವಿಮಾನದಲ್ಲಿದ್ದ ಕೆಲವು ಪ್ರಯಾಣಿಕರು ದಾಳಿ ಮಾಡಿದ ವ್ಯಕ್ತಿಯನ್ನು ಹಿಡಿದು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದರು.

ಮಚ್ಚರ್ ಅವರ ರಕ್ತದೊತ್ತಡ ಕುಸಿಯಲು ಪ್ರಾರಂಭಿಸಿತು. ಅಂತಿಮವಾಗಿ ಅವರು ಪ್ರಜ್ಞೆ ಕಳೆದುಕೊಂಡರು ಎಂದು ದಂತವೈದ್ಯರು ಹೇಳಿದರು. ಈ ವಿವರಗಳು FZ1073 ವಿಮಾನದಲ್ಲಿ ನಡೆದ ಭಯಾನಕ ಘಟನೆಯನ್ನು ಬಹಿರಂಗಪಡಿಸುತ್ತವೆ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಭಾರತೀಯ ಪ್ರಜೆ ಹಾಗೂ ಪೈಲಟ್ ಸ್ಮಿತ್ ಮಚ್ಚರ್ ಅವರ ಮೇಲೆ ಅವರ ಸಹ ಪೈಲಟ್‌ (ಕೋ-ಪೈಲಟ್) ದಾಳಿ ನಡೆಸಿದ್ದರು. ಈ ಘಟನೆ ಬಳಿಕ ವಿಮಾನವನ್ನು ಸೌದಿ ಅರೇಬಿಯಾದ ವಾಯವ್ಯ ಭಾಗದಲ್ಲಿರುವ ತಬೂಕ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿಸಲಾಯಿತು.

ನಂತರ ಮಚ್ಚರ್ ಅವರನ್ನು ತಬೂಕ್‌ನಲ್ಲಿರುವ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು. ಅವರ ಆರೋಗ್ಯ ಸ್ಥಿರವಾಗಿದ್ದು, ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸೌದಿ ಅರೇಬಿಯಾದಲ್ಲಿರುವ ಭಾರತದ ರಾಯಭಾರ ಕಚೇರಿ ತಿಳಿಸಿದೆ.