Hina Khan: ಪ್ರಧಾನಿ ಮೋದಿಯನ್ನು ಹಾಡಿ ಹೊಗಳಿದ ನಟಿ ಹೀನಾ ಖಾನ್
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದು 11 ವರ್ಷಗಳು ತುಂಬಿವೆ. ಇನ್ನು ಮೋದಿ ಸರ್ಕಾರದ ಕಾರ್ಯವೈಖರಿಯನ್ನು ಕುರಿತು ಹಲವರು ತಮ್ಮ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಬೆನ್ನಲ್ಲೇ ಬಾಲಿವುಡ್ ನಟಿ ಹೀನಾ ಖಾನ್ ಸಂದರ್ಶನವೊಂದರಲ್ಲಿ ಮಾತಮಾಡಿ ನರೆಂದ್ರ ಮೋದಿ ನೇತೃತ್ವದಲ್ಲಿ ಭಾರತ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಿದೆ ಮತ್ತು ಬಲಿಷ್ಠವಾಗಿ ಬೆಳೆದು ನಿಂತಿದೆ ಎಂದಿದ್ದಾರೆ.


ನವದೆಹಲಿ: ನರೇಂದ್ರ ಮೋದಿ(Narendra Modi) ನೇತೃತ್ವದ ಕೇಂದ್ರ ಸರ್ಕಾರ 11 ವರ್ಷ ಪೂರೈಸಿದೆ. ಇದರ ಬೆನ್ನಲ್ಲೇ ಇದೀಗ ಬಾಲಿವುಡ್ ನಟಿ ಹೀನಾ ಖಾನ್(Hina Khan) ಮೋದಿ ಸರ್ಕಾರವನ್ನು ಹಾಡಿ ಹೊಗಳಿದ್ದಾರೆ. ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ ಹೀನಾ ಖಾನ್, ಕೆಲವು ವರ್ಷಗಳಿಂದೀಚೆಗೆ ಭಾರತವು ಎಲ್ಲ ಕ್ಷೇತ್ರಗಳಲ್ಲಿಯೂ ಪ್ರಗತಿ ಸಾಧಿಸಿದೆ. ಇಂದು ಭಾರತ ವಿಶ್ವದಲ್ಲಿಯೇ ಶಕ್ತಿಶಾಲಿ ದೇಶವಾಗಿದೆ. ನಾನು ನೋಡಿರುವ ಪ್ರಕಾರ ಭಾರತ ಶಕ್ತಿಶಾಲಿಯಾಗಿರುವುದು ನಿಜ. ಮೂಲಸೌಕರ್ಯ, ತಂತ್ರಜ್ಞಾನ, ಅಂತರಿಕ್ಷ, ವೈದ್ಯಕೀಯ, ಆಯುಷ್ಮಾನ್ ಭಾರತ ಯೋಜನೆ, ಬಡತನ ನಿರ್ಮೂಲನೆ, ರಕ್ಷಣಾ ಕ್ಷೇತ್ರ ಮತ್ತು ಆರ್ಥಿಕತೆಯಲ್ಲಿ ಭಾರತವನ್ನು 11 ವರ್ಷದ ಹಿಂದಿನ ದಿನಗಳಿಗೆ ಹೋಲಿಸಿದರೆ ಬಹಳಷ್ಟು ಅಭಿವೃದ್ಧಿ ಹೊಂದಿದೆ ಎಂದು ಹೇಳಿದ್ದಾರೆ.
ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಕನಸು ಮೋದಿ ನನಸು ಮಾಡಿದ್ದಾರೆ. ಭಾರತವೂ ಅಭಿವೃದ್ಧಿಶೀಲ ದೇಶವಾಗಬಹುದು. ಅದೂ ಕೂಡ ನಮ್ಮ ಕಾಲಗಟ್ಟದಲ್ಲಿಯೇ ಈಡೇರುವ ಸಾಧ್ಯತೆ ಇದೆ. ಪ್ರಧಾನಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಯೋಜನೆಗಳು ದೇಶದ ಭವಿಷ್ಯ ಹೇಗಿರಬಹುದು ಎಂಬುದನ್ನು ತೋರಿಸುತ್ತಿದೆ.
ಈ ಸುದ್ದಿಯನ್ನೂ ಓದಿ: Narendra Modi: ಝಡ್-ಮೋರ್ಹ್ ಸುರಂಗ ಮಾರ್ಗ ಪ್ರಧಾನಿ ನರೇಂದ್ರ ಮೋದಿಯಿಂದ ಉದ್ಘಾಟನೆ!
ಕೆಲವು ದಿನಗಳ ಹಿಂದೆಯಷ್ಟೇ ಹೀನಾ ಖಾನ್ ತಾವು ವೈವಾಹಿಕ ಬದುಕಿಗೆ ಕಾಲಿಟ್ಟಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ದೀರ್ಘಕಾಲದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಹೀನಾ ಖಾನ್ ಇದೀಗ ಅದರ ವಿರುದ್ಧ ಹೋರಾಡಿ ಗುಣಮುಖರಾಗಿ ಕಮ್ ಬ್ಯಾಕ್ ಮಾಡಿದ್ದಾರೆ. ಜೂ. 4 ರಂದು, ಹೀನಾ ಖಾನ್ ಅವರು ತಮ್ಮ ಬಹುಕಾಲದ ಗೆಳೆಯ ರಾಕಿ ಜೈಸ್ವಾಲ್ ಅವರನ್ನು ವಿವಾಹವಾಗಿರುವುದಾಗಿ ಹೇಳಿಕೊಂಡಿದ್ದರು. ಈ ಜೋಡಿ ಫೋಟೋಗಳೂ ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿದ್ದವು. ಹೀನಾ ಖಾನ್ ಮತ್ತು ರಾಕಿ ಜೈಸ್ವಾಲ್ ಅವರು ಮೊದಲ ಬಾರಿ 'ಯೇ ರಿಷ್ಟಾ ಕ್ಯಾ ಕಹಲಾತಾ ಹೈ' ಧಾರಾವಾಹಿಯಲ್ಲಿ ಭೇಟಿಯಾಗಿದ್ದರು. ಅಲ್ಲಿ ಹೀನಾ 'ಅಕ್ಷರಾ' ಪಾತ್ರದಲ್ಲಿ ನಟಿಸುತ್ತಿದ್ದರೆ, ರಾಕಿ ಈ ಧಾರಾವಾಹಿಯ ಪ್ರೊಡಕ್ಷನ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.