ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

“ನಾನು ಈಗಲೂ ವಿದ್ಯಾರ್ಥಿ, ಪ್ರತಿದಿನ ಹೊಸದನ್ನು ಕಲಿಯುತ್ತೇನೆ”: ವಡ್ನಗರದ ಶಾಲಾ ದಿನಗಳನ್ನು ನೆನಪಿಸಿಕೊಂಡ ಪ್ರಧಾನಿ ಮೋದಿ

PM Modi Recalls His School Days: ಬಾಲ್ಯದಿಂದಲೇ ಕಲಿಯಬೇಕೆಂಬ ಆಸಕ್ತಿ ತಮ್ಮಲ್ಲಿ ಬೆಳೆದುಬಂದಿತು ಎಂದು ಮೋದಿ ಹೇಳಿದ್ದಾರೆ. ತಮ್ಮ ಹಿಂದಿನ ದಿನಗಳನ್ನು ನೆನಪಿಸಿಕೊಂಡ ಅವರು, ಗುಜರಾತ್‌ನ ವಡ್ನಗರದಲ್ಲಿನ ತಮ್ಮ ಶಾಲಾ ದಿನಗಳನ್ನು ಸ್ಮರಿಸಿದ್ದಾರೆ. ಕಲಿಯಬೇಕೆಂಬ ಆಸಕ್ತಿ ನನ್ನ ಜೀವನದ ಒಂದು ಭಾಗವಾಗಿಬಿಟ್ಟಿದೆ. ಇಂದಿಗೂ ನಾನು ನನ್ನನ್ನು ಒಬ್ಬ ವಿದ್ಯಾರ್ಥಿಯೆಂದೇ ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ವಡ್ನಗರದ ಶಾಲಾ ದಿನಗಳನ್ನು ನೆನಪಿಸಿಕೊಂಡ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ) -

Priyanka P
Priyanka P Oct 7, 2026 11:54 AM

ನವದೆಹಲಿ, ಅ.7: ನಾನು ಈಗಲೂ ವಿದ್ಯಾರ್ಥಿಯೇ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಹೇಳಿದ್ದಾರೆ. ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ ನಂತರ ಭಾರತದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ ಸತತ 25 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ಸಂದರ್ಭದಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ. ಬಾಲ್ಯದಿಂದಲೇ ಕಲಿಯಬೇಕೆಂಬ ಆಸಕ್ತಿ ತಮ್ಮಲ್ಲಿ ಬೆಳೆದುಬಂದಿತು ಎಂದು ಮೋದಿ ಹೇಳಿದ್ದಾರೆ. ತಮ್ಮ ಹಿಂದಿನ ದಿನಗಳನ್ನು ನೆನಪಿಸಿಕೊಂಡ ಅವರು, ಗುಜರಾತ್‌ನ ವಡ್ನಗರ (Vadnagar) ದಲ್ಲಿನ ತಮ್ಮ ಶಾಲಾ ದಿನಗಳನ್ನು ಸ್ಮರಿಸಿದ್ದಾರೆ.

ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾಡಿದ ಅವರು, “ನಾನು ವಡ್ನಗರದಲ್ಲಿ ಶಾಲೆಗೆ ಹೋಗುತ್ತಿದ್ದಾಗ, ನಮ್ಮ ಶಿಕ್ಷಕರು ನಮಗೆ ವಿವಿಧ ಪಾಠಗಳನ್ನು ಕಲಿಸುತ್ತಿದ್ದರು. ನಾನು ಯಾವಾಗಲು ತರಗತಿಗೆ ಬೇಗ ಹೋಗುತ್ತಿದ್ದೆ” ಎಂದು ಹೇಳಿದರು.

“ಕಲಿಯಬೇಕೆಂಬ ಆಸಕ್ತಿ ನನ್ನ ಜೀವನದ ಒಂದು ಭಾಗವಾಗಿಬಿಟ್ಟಿದೆ. ಇಂದಿಗೂ ನಾನು ನನ್ನನ್ನು ಒಬ್ಬ ವಿದ್ಯಾರ್ಥಿಯೆಂದೇ ಭಾವಿಸುತ್ತೇನೆ. ಪ್ರತಿದಿನವೂ ಹೊಸದನ್ನು ಕಲಿಯಲು ಪ್ರಯತ್ನಿಸುತ್ತೇನೆ. ಸರ್ಕಾರದ ಮುಖ್ಯಸ್ಥನಾಗಿ 25 ವರ್ಷಗಳನ್ನು ಪೂರ್ಣಗೊಳಿಸಿದ ನಂತರವೂ ಈ ಕಲಿಕೆಯ ಮನೋಭಾವ ನನ್ನಲ್ಲಿ ಮುಂದುವರಿದಿದೆ” ಎಂದು ಅವರು ತಿಳಿಸಿದ್ದಾರೆ. 2001ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವುದರೊಂದಿಗೆ ನರೇಂದ್ರ ಮೋದಿ ಅವರ ಈ ರಾಜಕೀಯ ಪಯಣ ಆರಂಭವಾಯಿತು.

ಗುಜರಾತ್‌ನಿಂದ ದೆಹಲಿಯವರೆಗೆ; ಸರ್ಕಾರದ ಮುಖ್ಯಸ್ಥರಾಗಿ ಸಾರ್ವಜನಿಕ ಸೇವೆಯಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ

“ನನ್ನ ಕಲಿಯುವ ಸಾಮರ್ಥ್ಯ ಎಂದಿಗೂ ಕಡಿಮೆಯಾಗಬಾರದು ಎಂದು ನಾನು ದೇವರಲ್ಲಿ ಕೇಳಿಕೊಳ್ಳುತ್ತೇನೆ. ನಾನು ಹೆಚ್ಚು ಕಲಿಯುತ್ತಿದ್ದಂತೆ, ದೇಶಕ್ಕಾಗಿ ಏನನ್ನಾದರೂ ಮಾಡುವ ನನ್ನ ಸಾಮರ್ಥ್ಯ ಹೆಚ್ಚಾಗುತ್ತದೆ” ಎಂದು ಪ್ರಧಾನಿ ಮೋದಿ ಹೇಳಿದರು.

ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಸಣ್ಣ ಪಟ್ಟಣವಾದ ವಡ್ನಗರದಲ್ಲಿ ಜನಿಸಿದ ನರೇಂದ್ರ ಮೋದಿ, ತಮ್ಮ ಬಾಲ್ಯದ ಬಹುಭಾಗವನ್ನು ಅಲ್ಲಿಯೇ ಕಳೆದರು. ಬಳಿಕ ಅವರು ಆರ್‌ಎಸ್‌ಎಸ್‌ (ರಾಷ್ಟ್ರೀಯ ಸ್ವಯಂಸೇವಕ ಸಂಘ) ಸೇರಿದರು. ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತರಾಗಿ ತಮ್ಮ ರಾಜಕೀಯ ಜೀವನ ಆರಂಭಿಸಿದ ಅವರು, ಶೀಘ್ರದಲ್ಲೇ ಪಕ್ಷದ ಪ್ರಮುಖ ತಂತ್ರಗಾರರಲ್ಲಿ ಒಬ್ಬರಾಗಿ ಬೆಳೆದರು.

2001ರಲ್ಲಿ ಗುಜರಾತ್ ಮುಖ್ಯಮಂತ್ರಿಯಾದ ಮೋದಿ, 12 ವರ್ಷಕ್ಕೂ ಹೆಚ್ಚು ಕಾಲ ಆ ಹುದ್ದೆಯಲ್ಲಿ ಮುಂದುವರಿದರು. ನಂತರ 2014ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, ಬಿಜೆಪಿಗೆ ಮಹತ್ವದ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. 2014 ರಿಂದ 2026ರವರೆಗೂ ಪ್ರಧಾನಿಯಾಗಿ ಮುಂದುವರಿದಿದ್ದಾರೆ.