ದೆಹಲಿ ಶಾಲಾ ಮಕ್ಕಳಿಗೆ ಇನ್ನು ಮಧ್ಯಾಹ್ನ ಊಟಕ್ಕೆ ಇಡ್ಲಿ- ಸಾಂಬಾರ್! ದಿಢೀರ್ ಮೆನು ಬದಲಾಯಿಸಿದ ಶಿಕ್ಷಣ ಇಲಾಖೆ
Delhi Mid Day Meal Scheme: ದೆಹಲಿ ಶಾಲಾ ಮಕ್ಕಳಿಗೆ ಸರ್ಕಾರ ಇನ್ನುಮುಂದೆ ದಕ್ಷಿಣ ಭಾರತದ ತಿನಿಸಾದ ಇಡ್ಲಿ ಮತ್ತು ಸಾಂಬಾರ್ ವಿತರಣೆ ಮಾಡುವುದಾಗಿ ತಿಳಿಸಿದೆ. ಈ ಕುರಿತು ಮಾಹಿತಿ ನೀಡಿರುವ ದೆಹಲಿ ಶಿಕ್ಷಣ ನಿರ್ದೇಶನಾಲಯ ಶೀಘ್ರದಲ್ಲಿಯೇ ಯೋಜನೆ ಜಾರಿಗೆ ಬರಲಿದೆ ಎಂದು ತಿಳಿಸಿದೆ.
ದೆಹಲಿ ಶಾಲಾ ಮಕ್ಕಳಿಗೆ ಇಡ್ಲಿ ಸಾಂಬಾರ್ ನೀಡಲು ನಿರ್ಧರಿಸಿದ ಸರ್ಕಾರ (ಸಂಗ್ರಹ ಚಿತ್ರ) -
ನವದೆಹಲಿ: ದೆಹಲಿಯ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ‘ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್’ ಯೋಜನೆಯಡಿ ಬಿಸಿಊಟದ (Delhi Mid Day Meal) ವೇಳಾಪಟ್ಟಿನ್ನು ದೆಹಲಿ ಶಿಕ್ಷಣ ನಿರ್ದೇಶನಾಲಯ ಪರಿಷ್ಕರಿಸಿದೆ. ದೆಹಲಿಯ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಿಗೆ ಶೀಘ್ರದಲ್ಲಿಯೇ ದಕ್ಷಿಣ ಭಾರತದ ತಿನಿಸಾದ ಇಡ್ಲಿ ಸಾಂಬರ್ (Idli and Sambar) ನೀಡಲಾಗುತ್ತದೆ ಎಂದು ದೆಹಲಿ ಶಿಕ್ಷಣ ನಿರ್ದೇಶನಾಲಯ ಹೇಳಿದೆ. ಆಯಾ ಶಾಲೆಗಳು ಮತ್ತು ಪೂರೈಕೆ ಸಂಸ್ಥೆಗಳು ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸೂಚಿಸಿದೆ.
ಆದೇಶದ ಪ್ರಕಾರ 6 ದಿನದ ಮೆನುವಿನಲ್ಲಿ ಬದಲಾವಣೆಗಳಾಗಿದ್ದು, ತಕ್ಷಣ ಜಾರಿಗೆ ಬರಲಿದೆ. ಸದ್ಯ ಇಡ್ಲಿ-ಸಾಂಬಾರ್ ವಿತರಣೆಗೆ ಮಾತ್ರ ಸಿದ್ಧತೆ ಮಾಡಿಕೊಳ್ಳುಲು 2 ವಾರಗಳ ಕಾಲವಾಶ ನೀಡಲಾಗುವುದು ಎಂದು ತಿಳಿಸಲಾಗಿದೆ. ಹಳೆಯ ಮೆನುವಿನಲ್ಲಿದ್ದ ರಾಗಿ ಹಲ್ವಾ ಮತ್ತು ತರಕಾರಿ ದಲಿಯ ತೆಗೆದುಹಾಕಲಾಗಿದೆ. ಪೋಷಕರ, ಶಿಕ್ಷಕರ ಮತ್ತು ಪ್ರಾಯೋಗಿಕ ಅನುಭವಗಳನ್ನು ಪರಿಶಿಲಿಸದ ನಂತರ ‘ಆಹಾರ ಪರಿಶೀಲನಾ ಸಮಿತಿ’ ನೀಡಿದ ಶಿಪಾರಸ್ಸಿನ ಮೇಲೆ ಬದಲಾವಣೆ ಮಾಡಲಾಗಿದೆ ಎಂದು ನಿರ್ದೇಶನಾಲಯ ತಿಳಿಸಿದೆ.
ಹೊಸ ಮೆನುವಿನಲ್ಲೇನಿದೆ?
- ದಿನ 1- ಪೂರಿ, ಕಪ್ಪು ಕಡಲೆ ಗ್ರೇವಿ, ಮತ್ತು ಮ್ಯಾಶ್ ಮಾಡಿದ ತರಕಾರಿಗಳು
- ದಿನ 2- ಇಡ್ಲಿ ಮತ್ತು ಸಾಂಬಾರ್
- ದಿನ 3- ಅನ್ನ, ಛೋಲೆ ಮತ್ತು ಮ್ಯಾಶ್ ಮಾಡಿದ ತರಕಾರಿಗಳು
- ದಿನ 4- ಪೂರಿ, ಛೋಲೆ ಮತ್ತು ಮ್ಯಾಶ್ ಮಾಡಿದ ತರಕಾರಿಗಳು
- ದಿನ 5- ಅನ್ನ ಮತ್ತು ದಾಲ್
- ದಿನ 6- ಅನ್ನ ಮತ್ತು ಕಢಿ(ಮಜ್ಜಿಗೆ ಹುಳಿ/ಮಸಾಲಾ ಕಢಿ)
ಇದರ ಜೊತೆಗೆ, ರಾಗಿ ಹಲ್ವಾ ಬದಲಿಗೆ ಗೋಧಿ ಹಿಟ್ಟು ಹಾಗೂ ಚನ್ನಾ ಮಸಾಲಾ ಮತ್ತು ತರಕಾರಿ ದಲಿಯಾ ಬದಲಿಗೆ ಜೋಳ ಹಾಗೂ ಸಜ್ಜೆ ಆಧಾರಿತ ಆಹಾರವನ್ನು ಸೇರಿಸಲು ಸಮಿತಿ ಶಿಫಾರಸು ಮಾಡಿದೆ. ಪರಿಷ್ಕೃತ ಮೆನು ತಕ್ಷಣದಿಂದಲೇ ಜಾರಿಗೆ ಬರಲಿದೆ. ಇಡ್ಲಿ ಮತ್ತು ಸಾಂಬಾರ್ ತಯಾರಿಕೆಗೆ ನಿರ್ದಿಷ್ಟ ಉಪಕರಣಗಳು, ಪದಾರ್ಥಗಳು ಮತ್ತು ಪ್ರತ್ಯೇಕ ಮೂಲಸೌಕರ್ಯ ಹಾಗೂ ತರಬೇತಿ ಪಡೆದ ಸಿಬ್ಬಂದಿಗಳ ಅಗತ್ಯವಿದೆ. ಮಾನ್ಯತೆ ಪಡೆದ ಎನ್‌ಜಿಒಗಳು ಮತ್ತು ಕೆಂದ್ರ ಅಡುಗೆಮನೆ ಸಂಸ್ಥೆಗಳಿಗೆ ಇದನ್ನು ಪ್ರಾರಂಭಿಸಲು ಗರಿಷ್ಟ ಎರಡು ವಾರಗಳ ಕಾಲಾವಕಾಶ ನೀಡಲಾಗಿದೆ. ಅದಕ್ಕಿಂತ ಹೆಚ್ಚಿನ ಸಮಯ ನೀಡುವುದಿಲ್ಲ ಎಂದು ದೆಹಲಿ ಶಿಕ್ಷಣ ನಿರ್ದೇಶನಾಲಯ ಸ್ಪಷ್ಟಪಡಿಸಿದೆ.
ಎನ್‌ಜಿಎಗಳು ಮತ್ತು ಕೇಂದ್ರ ಅಡುಗೆಮಣೆ ಸಂಸ್ಥೆಗಳು ನಿರ್ದಿಷ್ಟ ದಿನದಂದೇ ಎಲ್ಲಾ ಶಾಲೆಗಳಿಗೂ ಒಂದೇ ರೀತಿಯ ಆಹಾರವನ್ನು ಪೂರೈಸುವ ಅಗತ್ಯವಿಲ್ಲ. ಸಾಮಗ್ರಿಗಳ ಲಭ್ಯತೆ, ಸಾಗಾಣಿಕೆ ಮತ್ತು ಇತರ ಕಾರ್ಯಚರಣೆಯ ಅಗತ್ಯಗಳಿಗೆ ಅನುಗುಣವಾಗಿ ಪೂರೈಕೆ ಮಾಡಬಹುದು. ಆದರೆ ಪ್ರತಿಯೊಂದು ಶಾಲೆಯಲ್ಲಿ 6 ದಿನಗಳಿಗೆ ಇದೇ ಮೆನುವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದೆ.
ಯೋಜನೆ ಎಲೆಲ್ಲಿ ಅನ್ವಯವಾಗಲಿದೆ?
ಪರಿಷ್ಕೃತ ಮೆನುವು ಶಿಕ್ಷಣ ನಿರ್ದೇಶನಾಲಯದ ಅಡಿಯಲ್ಲಿ ಬರುವ ಪಿಎಂ ಪೋಷಣ್ ಯೋಜನೆ ವ್ಯಾಪ್ತಿಗೆ ಒಳಪಡುವ ಎಲ್ಲಾ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಸಾಲೆಗಳಿಗೆ ಅನ್ವಯಿಸುತ್ತದೆ. ಆಹಾರ ಪೂರೈಸುವ ಸಂಸ್ಥೆಗಳು ಪಿಎಂ ಪೋಷಣ್ ಮಾರ್ಗಸೂಚಿಗಳ ಅಡಿಯಲ್ಲಿ ಬರುವ ಪೌಷ್ಟಿಕ ನಿಯಮಗಳು ಫೆಸ್ಸಿ ಆಹಾರ ಸುರಕ್ಷತೆ ಮತ್ತು ನೈರ್ಮಲ್ಯ ಮಾನದಂಡಗಳು ಹಾಗೂ ನಿರ್ದೇಶನಾಲಯದ ನಿಗದಿಪಡಿಸಿದ ಆಹಾರ ಸುರಕ್ಷತಾ ಮvತ್ತು ಗುಣಮಟ್ಟ ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ.