ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu) ಅವರು ಬುಧವಾರ ಸಂಸತ್ತಿನಲ್ಲಿ ವಿಕಸಿತ ಭಾರತ ರೋಜ್‌ಗಾರ್ ಮತ್ತು ಅಜೀವಿಕಾ ಗ್ರಾಮೀಣ ಮಿಷನ್ (Viksit Bharat Guarantee for Rozgar and Ajeevika Gramin Mission) ಕಾಯ್ದೆಯ ಪ್ರಸ್ತಾಪ ಮಾಡಿರುವುದಕ್ಕೆ ವಿರೋಧ ಪಕ್ಷದ (opposition party) ಸದಸ್ಯರು ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ರಾಷ್ಟ್ರಪತಿಗಳು ಜಿ ರಾಮ್ ಜಿ ಕಾಯ್ದೆಯ (VB-G RAM G) ಪ್ರಸ್ತಾಪ ಮಾಡುತ್ತಿದ್ದಂತೆ ಖಜಾನೆ ಪೀಠಗಳು ಮೇಜುಗಳನ್ನು ಬಡಿದು ಸ್ವಾಗತಿಸಿದರೆ, ವಿರೋಧ ಪಕ್ಷದ ಸದಸ್ಯರು ಕಾನೂನನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು.
ಸಂಸತ್ತಿನ ಬಜೆಟ್ ಅಧಿವೇಶನಕ್ಕೂ ಮೊದಲು ಬುಧವಾರ ಎರಡೂ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಅವರು ವಿಕಸಿತ ಭಾರತ ರೋಜ್‌ಗಾರ್ ಮತ್ತು ಅಜೀವಿಕಾ ಗ್ರಾಮೀಣ ಮಿಷನ್ ಕಾಯ್ದೆಯ ಕುರಿತು ಉಲ್ಲೇಖಿಸಿದರು. ಇದಕ್ಕೆ ತೀವ್ರವಾಗಿ ಘೋಷಣೆಗಳನ್ನು ಕೂಗಿದ ವಿರೋಧ ಪಕ್ಷಗಳು ಕಾನೂನನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿದವು.
ಅಜಿತ್ ಪವಾರ್ ಸಾವಿನ ಹಿಂದಿದೆಯಾ ರಾಜಕೀಯ ನಂಟು? ಮಮತಾ ಬ್ಯಾನರ್ಜಿ ಆರೋಪ ಯಾರ ಮೇಲೆ?
ತಮ್ಮ ಭಾಷಣದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ವಿಕಸಿತ ಭಾರತ ರೋಜ್‌ಗಾರ್ ಮತ್ತು ಅಜೀವಿಕಾ ಗ್ರಾಮೀಣ ಮಿಷನ್ ಕಾಯ್ದೆಯು ಉದ್ಯೋಗ ಖಾತರಿ 125 ದಿನಗಳ ಕೆಲಸದ ಖಾತರಿ ನೀಡುತ್ತದೆ ಮಾತ್ರವಲ್ಲದೆ ಭ್ರಷ್ಟಾಚಾರ ಮತ್ತು ಹಣದ ಸೋರಿಕೆಯನ್ನು ತಡೆಯುತ್ತದೆ. ಇದು ಗ್ರಾಮೀಣಾಭಿವೃದ್ಧಿಗೆ ಹೊಸ ಪ್ರಚೋದನೆಯನ್ನು ಕೊಡುತ್ತದೆ ಎಂದು ತಿಳಿಸಿದರು.
ಇದಕ್ಕೆ ಅಡ್ಡಿ ಪಡಿಸಿದ ವಿರೋಧ ಪಕ್ಷಗಳು ಕಾಯ್ದೆಯನ್ನು ಹಿಂದಕ್ಕೆ ಪಡೆಯಿರಿ ಎಂಬ ಘೋಷಣೆಗಳನ್ನು ಕೂಗಿದರು. ಈ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೆಲವು ನಿಮಿಷಗಳ ಕಾಲ ತಮ್ಮ ಭಾಷಣವನ್ನು ನಿಲ್ಲಿಸಿದರು.
ಏನಿದು ಕಾಯ್ದೆ?
ಪ್ರತಿಪಕ್ಷಗಳ ವಿರೋಧದ ನಡುವೆಯೂ ಕಳೆದ ತಿಂಗಳು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಬದಲಿಸಿ ವರ್ಷಕ್ಕೆ 125 ದಿನಗಳ ಕಾಲ ಉದ್ಯೋಗ ಖಾತರಿ ನೀಡುವ ವಿಬಿ- ಜಿ ರಾಮ್ ಜಿ ಮಸೂದೆಯನ್ನು ಅಂಗೀಕರಿಸಲಾಯಿತು. ಈ ಸಂದರ್ಭದಲ್ಲಿ ಪ್ರತಿ ಪಕ್ಷಗಳು ಕೇಂದ್ರ ಸರ್ಕಾರ ಗ್ರಾಮೀಣ ಆರ್ಥಿಕತೆಯನ್ನು ನಾಶ ಮಾಡುತ್ತಿದೆ ಮತ್ತು ಮಹಾತ್ಮಾ ಗಾಂಧೀಜಿ ಹೆಸರು ಕೈಬಿಡುವ ಮೂಲಕ ಅವರ ತತ್ತ್ವಗಳನ್ನು ಕಡೆಗಣಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದವು. ಅಲ್ಲದೇ ವಿಧೇಯಕದ ಪ್ರತಿಗಳನ್ನು ಹರಿದು ಸ್ಪೀಕರ್ ಕುರ್ಚಿಯತ್ತ ಎಸೆದು ಗದ್ದಲ ಉಂಟು ಮಾಡಿದ್ದರು.
ಜೆಸಿಬಿಯಲ್ಲಿ ಕುಳಿತು ಆಸ್ಪತ್ರೆಗೆ ಬಂದ ವೈದ್ಯ; ಭಾರಿ ಹಿಮಪಾತದ ನಡುವೆಯೂ ಕರ್ತವ್ಯ ಪ್ರಜ್ಞೆ ಮೆರೆದ ಡಾಕ್ಟರ್
ಆದರೂ ಮಸೂದೆಯನ್ನು ಅಂಗೀಕರಿಸಿದ ಸರ್ಕಾರ 20 ವರ್ಷಗಳಷ್ಟು ಹಳೆಯದಾದ ಈ ಯೋಜನೆಯನ್ನು ನವೀಕರಿಸುವ ಅಗತ್ಯವನ್ನು ತಿಳಿಸಿ ತನ್ನ ಹೊಸ ಯೋಜನೆಯನ್ನು ಸಮರ್ಥಿಸಿಕೊಂಡಿತ್ತು. 2005 ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಬದಲಾವಣೆ ಮಾಡಿ ಅದಕ್ಕೆ ವಿಬಿ- ಜಿ ರಾಮ್ ಜಿ ಮಸೂದೆ ಎನ್ನುವ ಹೆಸರು ನೀಡಲಾಗಿದೆ.