ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಜೆಸಿಬಿಯಲ್ಲಿ ಕುಳಿತು ಆಸ್ಪತ್ರೆಗೆ ಬಂದ ವೈದ್ಯ; ಭಾರಿ ಹಿಮಪಾತದ ನಡುವೆಯೂ ಕರ್ತವ್ಯ ಪ್ರಜ್ಞೆ ಮೆರೆದ ಡಾಕ್ಟರ್

Doctor arrives at hospital sitting on a JCB: ಜಮ್ಮು ಕಾಶ್ಮೀರದಲ್ಲಿ ಭಾರಿ ಹಿಮಪಾತದ ನಡುವೆಯೂ ಕರ್ತವ್ಯಪ್ರಜ್ಞೆ ಮೆರೆದ ವೈದ್ಯರೊಬ್ಬರು ಜೆಸಿಬಿಯಲ್ಲಿ ಕುಳಿತು ಆಸ್ಪತ್ರೆಗೆ ತಲುಪಿದ ಘಟನೆ ಮೆಚ್ಚುಗೆಗೆ ಪಾತ್ರವಾಗಿದೆ. ರಸ್ತೆಗಳು ಸಂಪೂರ್ಣವಾಗಿ ಹಿಮದಿಂದ ಮುಚ್ಚಿಕೊಂಡಿದ್ದರೂ, ರೋಗಿಗಳ ಆರೈಕೆಗಾಗಿ ವೈದ್ಯ ಯಾವುದೇ ಅಡಚಣೆಯನ್ನೂ ಲೆಕ್ಕಿಸದೆ ಕರ್ತವ್ಯಕ್ಕೆ ಹಾಜರಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಜೆಸಿಬಿಯಲ್ಲಿ ಕುಳಿತು ಆಸ್ಪತ್ರೆಗೆ ಬಂದ ವೈದ್ಯ

ಸಾಂದರ್ಭಿಕ ಚಿತ್ರ -

Priyanka P
Priyanka P Jan 28, 2026 4:42 PM

ಶ್ರೀನಗರ, ಜ. 28: 'ವೈದ್ಯೋ ನಾರಾಯಣ ಹರಿ' ಎನ್ನುವ ಮಾತಿದೆ. ಈ ಮಾತನ್ನು ಇಲ್ಲೊಬ್ಬ ವೈದ್ಯ ಸಾಬೀತುಪಡಿಸಿದ್ದಾರೆ. ಪ್ರತಿಕೂಲ ಹವಾಮಾನ ಮತ್ತು ಹಿಮಪಾತವಿದ್ದರೂ ಕರ್ತವ್ಯ ಪ್ರಜ್ಞೆ ಮೆರೆದ ವೈದ್ಯರೊಬ್ಬರು ಸಂಕಷ್ಟದ ನಡುವೆಯೂ ಆಸ್ಪತ್ರೆಗೆ ತಲುಪಿ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ರೋಗಿಗಳಿಗೆ ಚಿಕಿತ್ಸೆ ನೀಡಲು ಜೆಸಿಬಿ ಮೇಲೆ ಕುಳಿತು ಅವರು ಆಸ್ಪತ್ರೆಯನ್ನು ತಲುಪಿದ್ದಾರೆ.

ದಕ್ಷಿಣ ಕಾಶ್ಮೀರದ ಪುಲ್ವಾಮಾ ನಿವಾಸಿ ಮತ್ತು ಪ್ರಸ್ತುತ ಶ್ರೀನಗರದಲ್ಲಿ ವಾಸಿಸುತ್ತಿರುವ ಡಾ. ಬಶರತ್ ಪಂಡಿತ್ ಶೋಪಿಯಾನ್‌ನ ಜಿಲ್ಲಾ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞರಾಗಿದ್ದಾರೆ. ಮಂಗಳವಾರ (ಜನವರಿ 27) ಬೆಳಗ್ಗೆ 7.30ಕ್ಕೆ ಮನೆಯಿಂದ ಹೊರಟ ಅವರು ಸುಮಾರು 55 ಕಿ.ಮೀ. ಪ್ರಯಾಣವನ್ನು ಪೂರ್ಣಗೊಳಿಸಿದರು. ಶ್ರೀನಗರ ಮತ್ತು ಸುತ್ತಮುತ್ತ ಹಿಮಪಾತ ಕಡಿಮೆಯಿದ್ದರೂ, ದಕ್ಷಿಣ ಕಾಶ್ಮೀರದಲ್ಲಿ ಪರಿಸ್ಥಿತಿ ಹದಗೆಟ್ಟಿತು. ಅಲ್ಲಿ ಶೋಪಿಯಾನ್‌ನಲ್ಲಿ ಮೂರರಿಂದ ನಾಲ್ಕು ಅಡಿಗಳಷ್ಟು ಹಿಮ ಬಿದ್ದಿತು.

ಜೆಸಿಬಿಯಲ್ಲಿ ಆಸ್ಪತ್ರೆಗೆ ತೆರಳಿದ ವೈದ್ಯ:

#Shopian Doctor Reaches Hospital on Excavator Amid Heavy Snowfall, Wins Praise

These unsung Heroes are always in service of the society,much beyond the duty and pay cheques..

From COVID19 pandemic to hostile weather, they are unstoppable!@srdmk01pic.twitter.com/9MMg6efBxC
— Hinna Nazir (@HinnaNazir) January 28, 2026

ಶೋಪಿಯಾನ್ ತಲುಪಿದ ನಂತರ, ಅವರ ಕಾರು ಸಿಕ್ಕಿಹಾಕಿಕೊಂಡಿತು. ಆಸ್ಪತ್ರೆ ತಲುಪಲು ಅವರು ಸುಮಾರು ಮೂರು ಕಿ.ಮೀ. ನಡೆದು ಹೋಗಬೇಕಾಯಿತು. ''ಬೆಳಗ್ಗೆ ಆಗಿದ್ದರಿಂದ ಹೆಚ್ಚಿನ ರಸ್ತೆಗಳನ್ನು ತೆರವುಗೊಳಿಸಲಾಗಿರಲಿಲ್ಲ. ನಾನು ನಡೆಯಲು ಪ್ರಾರಂಭಿಸಿದೆ. ನಂತರ ಜೆಸಿಬಿ ಬಂತು. ಆದ್ದರಿಂದ ನಾನು ಅದರ ಮೇಲೆ ಹತ್ತಿ ಆಸ್ಪತ್ರೆಗೆ ತೆರಳಿದೆʼʼ ಎಂದು ವೈದ್ಯ ಪಂಡಿತ್ ತಿಳಿಸಿದರು.

ಜೆಸಿಬಿಯಲ್ಲಿ ಕುಳಿತು ಆಸ್ಪತ್ರೆಗೆ ಹೋದ ಅವರು ಬೆಳಗ್ಗೆ 10.30ರ ಸುಮಾರಿಗೆ ಅಲ್ಲಿಗೆ ತಲುಪಿದರು. ʼʼಇದು ಜವಾಬ್ದಾರಿ ಮತ್ತು ಕರ್ತವ್ಯದ ಪ್ರಜ್ಞೆಯಾಗಿತ್ತು. ನನ್ನ ರೋಗಿಗಳನ್ನು ನೋಡಿಕೊಳ್ಳುವುದು ಬಹಳ ಮುಖ್ಯವಾಗಿತ್ತು. ವಿಶೇಷವಾಗಿ ಗರ್ಭಿಣಿಯರಿಗೆ ಚಿಕಿತ್ಸೆ ನೀಡುವುದು ಮುಖ್ಯ. ಇಲ್ಲದಿದ್ದರೆ ಅವರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆʼʼ ಎಂದು ಅವರು ಹೇಳಿದರು.

ಅಮೆರಿಕದಲ್ಲಿ ಭಾರಿ ಹಿಮಪಾತ; ಸಾವಿನ ಸಂಖ್ಯೆ 30ಕ್ಕೆ ಏರಿಕೆ

ಗರ್ಭಿಣಿಯರಿಗೆ ಶಸ್ತ್ರಚಿಕಿತ್ಸೆ ನೀಡಲು ಯಾವುದೇ ಬೆಲೆ ತೆತ್ತಾದರೂ ಆಸ್ಪತ್ರೆಗೆ ತಲುಪಬೇಕಾಯಿತು ಎಂದು ಡಾಕ್ಟರ್ ಪಂಡಿತ್ ವಿವರಿಸಿದರು. ಅನೇಕ ರೋಗಿಗಳು ಶಸ್ತ್ರಚಿಕಿತ್ಸೆಗಾಗಿ ಸಾಲುಗಟ್ಟಿ ನಿಂತಿದ್ದರು. ಕೆಲವು ತುರ್ತು ಪರಿಸ್ಥಿತಿಗಳೂ ಇದ್ದವು. ಈ ಭಾರಿ ಹಿಮಪಾತದಲ್ಲಿ ರೋಗಿಗಳನ್ನು ಇತರ ಆಸ್ಪತ್ರೆಗಳಿಗೆ ದಾಖಲಿಸುವುದು ಕಷ್ಟ ಎಂದರು. ಆ ದಿನ ತಮ್ಮ ವಿಭಾಗವು 10 ಶಸ್ತ್ರಚಿಕಿತ್ಸೆಗಳನ್ನು ಮಾಡಿದೆ. ಎಲ್ಲ ರೋಗಿಗಳ ಆರೋಗ್ಯ ಸ್ಥಿರವಾಗಿದೆ ಎಂದು ಅವರು ಹೇಳಿದರು.

ಜಮ್ಮು-ಕಾಶ್ಮೀರದಲ್ಲಿ ಭಾರಿ ಹಿಮಪಾತ

ಜಮ್ಮು ಮತ್ತು ಕಾಶ್ಮೀರದ ಸೋನಾಮಾರ್ಗ್‌ನ ಸರ್ಬಲ್ ಪ್ರದೇಶದಲ್ಲಿ ಭಾರಿ ಹಿಮಪಾತ ಸಂಭವಿಸಿದ್ದು, ಮನೆಗಳು ಮತ್ತು ವಾಹನಗಳು ಹಿಮದಲ್ಲಿ ಮುಳುಗಿ ಹೋಗಿವೆ. ಮಂಗಳವಾರ ರಾತ್ರಿ 10:12ಕ್ಕೆ ಜನಪ್ರಿಯ ಸೋನಾಮಾರ್ಗ್ ಪ್ರವಾಸಿ ಪ್ರದೇಶಕ್ಕೆ ಹಿಮ ಬಿರುಗಾಳಿ ಅಪ್ಪಳಿಸಿದೆ. ಇದರಿಂದಾಗಿ ಪರ್ವತದ ಕೆಳಗಿದ್ದ ಮನೆಗಳು ಮತ್ತು ಹೋಟೆಲ್‌ಗಳ ಕಡೆಗೆ ದೊಡ್ಡ ಪ್ರಮಾಣದ ಹಿಮ ನುಗ್ಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಿಮ ಬಿರುಗಾಳಿ ಮುಂದಕ್ಕೆ ಚಲಿಸಿ ತನ್ನ ಹಾದಿಯಲ್ಲಿದ್ದ ಕಟ್ಟಡಗಳನ್ನು ಆವರಿಸಿದ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕಣಿವೆಯಾದ್ಯಂತ ನಿರಂತರ ಹಿಮಪಾತದ ನಂತರ ಸೋಮವಾರ (ಜನವರಿ 26) ಈ ಪ್ರದೇಶಕ್ಕೆ ಹೆಚ್ಚಿನ ತೀವ್ರತೆಯ ಹಿಮಪಾತದ ಎಚ್ಚರಿಕೆ ನೀಡಲಾಗಿತ್ತು. ಮಂಗಳವಾರ ಕಾಶ್ಮೀರದಾದ್ಯಂತ ಹಿಮಪಾತ ಉಂಟಾಗಿದ್ದರಿಂದ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಮುಚ್ಚಲ್ಪಟ್ಟಿದ್ದು, ಶ್ರೀನಗರ ವಿಮಾನ ನಿಲ್ದಾಣದಲ್ಲಿ ಎಲ್ಲ ವಿಮಾನಗಳ ಹಾರಾಟ ರದ್ದಾಯಿತು. ಇದರಿಂದಾಗಿ ನೂರಾರು ಪ್ರವಾಸಿಗರು ಕಣಿವೆಯಲ್ಲಿ ಸಿಲುಕಿಕೊಂಡರು.