ಕೊಹ್ಲಿ-ರೋಹಿತ್ ದೇಶಿ ಕ್ರಿಕೆಟ್ ಆಡುವಂತೆ ಬಿಸಿಸಿಐ ಒತ್ತಾಯಿಸಿಲ್ಲ
2026ರ ಜನವರಿಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ವಿರುದ್ಧದ ಸರಣಿಯ ಮೂಲಕ ಕೊಹ್ಲಿ ಮತ್ತು ರೋಹಿತ್ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಭಾರತ 3 ಏಕದಿನ ಪಂದ್ಯಗಳು ಮತ್ತು 5 ಪಂದ್ಯಗಳ ಟಿ20ಐ ಸರಣಿ ಆಡಲಿದೆ.
Virat Kohli- Rohit Sharma -
ಮುಂಬಯಿ, ಡಿ.8: ದಕ್ಷಿಣ ಆಫ್ರಿಕಾ ವಿರುದ್ಧದ (IND vs SA) ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಸರಣಿ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಕ್ರಿಕೆಟ್ ದಿಗ್ಗಜರಾದ ವಿರಾಟ್ ಕೊಹ್ಲಿ (Virat Kohli) ಮತ್ತು ರೋಹಿತ್ ಶರ್ಮಾ (Rohit Sharma) ನ್ಯೂಜಿಲೆಂಡ್ ವಿರುದ್ದದ ಸರಣಿಗೂ ಮುನ್ನ ದೇಶಿ ಕ್ರಿಕೆಟ್ ಆಡಲಿದ್ದಾರೆ. ಇದರ ಬೆನ್ನಲ್ಲೇ ಈ ಜೋಡಿಯನ್ನು ಬಿಸಿಸಿಐ ದೇಶಿ ಕ್ರಿಕೆಟ್‌ಗೆ (Domestic cricket) ಮರಳುವಂತೆ ಒತ್ತಾಯಿಸಿದೆ ಎನ್ನುವ ಆರೋಪಗಳು ಕೇಳಿ ಬಂದಿದ್ದವು. ಈ ಕುರಿತು ಬಿಸಿಸಿಐ ಅಧಿಕಾರಿಯೊಬ್ಬರು ಸಷ್ಟನೆ ನೀಡಿದ್ದು, ಅದು ಅವರ ನಿರ್ಧಾರ ಅವರನ್ನು ದೇಶಿ ಕ್ರಿಕೆಟ್ ಆಡುವಂತೆ ಬಿಸಿಸಿಐ ಒತ್ತಾಯಿಸಿಲ್ಲ ಎಂದು ಹೇಳಿದ್ದಾರೆ.
"ದೇಶಿ ಕ್ರಿಕೆಟ್ ಆಡಲು ರೋಹಿತ್ ಮತ್ತು ಕೊಹ್ಲಿ ನಿರ್ಧರಿಸಿದ್ದಾರೆ. ಅದು ಅವರ ನಿರ್ಧಾರ ಇದರಲ್ಲಿ ಬಿಸಿಸಿಐ ಪಾತ್ರವೇನಿಲ್ಲ" ಎಂದು ಸ್ಪಷ್ಟನೆ ನೀಡಿದ್ದಾರೆ. ವಿಜಯ್ ಹಜಾರೆ ಟ್ರೋಫಿಯ ಲೀಗ್ ಹಂತದ ಪಂದ್ಯಗಳು ಡಿಸೆಂಬರ್ 24ರಿಂದ ಆರಂಭವಾಗಲಿದ್ದು, ಜನವರಿ 8ರಂದು ಕೊನೆಗೊಳ್ಳಲಿವೆ. ಬಳಿಕ ರೋಹಿತ್-ವಿರಾಟ್ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಕಣಕ್ಕಿಳಿಯುದರಿಂದ ಈ ಟೂರ್ನಿಯ ನಾಕೌಟ್ ಪಂದ್ಯಗಳನ್ನು ಆಡುವುದಿಲ್ಲ.
ಇದನ್ನೂ ಓದಿ IND vs SA 1st T20I: ಕಟಕ್ ಟಿ20 ಪಂದ್ಯದ ಪಿಚ್ ರಿಪೋರ್ಟ್, ಹವಾಮಾನ ವರದಿ ಇಲ್ಲಿದೆ
ಕೊನೆಯ ಬಾರಿಗೆ 2010ರಲ್ಲಿ ವಿಜಯ ಹಜಾರೆ ಟ್ರೋಫಿಯಲ್ಲಿ ಕಣಕ್ಕಿಳಿದಿದ್ದ ವಿರಾಟ್ ಕೊಹ್ಲಿಯವರು ದೆಹಲಿ ಪರ ಐದು ಪಂದ್ಯಗಳಲ್ಲಿ ಕೊಹ್ಲಿ 45.80 ಸರಾಸರಿಯಲ್ಲಿ 229 ರನ್ ಗಳಿಸಿದ್ದರು. ಇದೀಗ ಮತ್ತೆ ಅವರು 15 ವರ್ಷಗಳ ಬಳಿಕ ತಮ್ಮ ತವರು ಅಂಗಳದಲ್ಲಿ ಆಡಲು ನಿರ್ಧರಿಸಿದ್ದಾರೆ. ಇತ್ತ ರೋಹಿತ್ ಶರ್ಮಾ ಅವರು ಏಳು ವರ್ಷಗಳ ಬಳಿಕ ಮುಂಬೈ ಪರ ಆಡಲಿದ್ದಾರೆ. ಅವರು ಕೊನೆಯ ಬಾರಿಗೆ 2018ರಲ್ಲಿ ದೇಶಿ ಕ್ರಿಕೆಟ್‌ನಲ್ಲಿ ಕಾಣಸಿಕೊಂಡಿದ್ದರು. ಮುಂಬೈ ಪರ ಎರಡು ಪಂದ್ಯಗಳನ್ನಾಡಿದ್ದ ಅವರು ಒಟ್ಟು 50 ರನ್ ಕಲೆಹಾಕಿದ್ದರು.
2026ರ ಜನವರಿಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ವಿರುದ್ಧದ ಸರಣಿಯ ಮೂಲಕ ಕೊಹ್ಲಿ ಮತ್ತು ರೋಹಿತ್ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಭಾರತ 3 ಏಕದಿನ ಪಂದ್ಯಗಳು ಮತ್ತು 5 ಪಂದ್ಯಗಳ ಟಿ20ಐ ಸರಣಿ ಆಡಲಿದೆ.
ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ವೇಳಾಪಟ್ಟಿ
ಮೊದಲ ಏಕದಿನ ಪಂದ್ಯ; ಜನವರಿ 11, ವಡೋದರ
ದ್ವಿತೀಯ ಏಕದಿನ ಪಂದ್ಯ; ಜನವರಿ 18, ಇಂದೋರ್
ಮೂರನೇ ಏಕದಿನ ಪಂದ್ಯ; ಜನವರಿ 23, ರಾಯ್ಪುರ