ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Daily Horoscope: ಸಿರಿಯಾಳ ಷಷ್ಠಿಯ ಈ ದಿನ ಯಾವ ರಾಶಿಗೆ ಉತ್ತಮ ಫಲವಿದೆ?

ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸದ ಶುಕ್ಲಪಕ್ಷದ ಷಷ್ಠಿ ತಿಥಿ, ಹಸ್ತ ನಕ್ಷತ್ರ, ಸಿರಿಯಾಳ ಷಷ್ಠಿಯ ಈ ದಿನ (ಜುಲೈ 30) ಸ್ಕಂದನ ಆರಾಧನೆ ಮಾಡುವುದು ಬಹಳ ಮುಖ್ಯ. ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಇಂದಿನ ರಾಶಿ ಭವಿಷ್ಯ ಬಗ್ಗೆ ಹೀಗೆ ಹೇಳಿದ್ದಾರೆ.

ಈ ರಾಶಿಗೆ ಇಂದು ಶುಭ ಫಲ!

Horoscope

Profile Pushpa Kumari Jul 30, 2025 6:00 AM

ಬೆಂಗಳೂರು: ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸದ ಶುಕ್ಲಪಕ್ಷದ ಷಷ್ಠಿ ತಿಥಿ, ಹಸ್ತ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಮೇಷ ರಾಶಿಯವರಿಗೆ ಇಂದು ಹಸ್ತ ನಕ್ಷತ್ರದಿಂದಾಗಿ ಉತ್ತಮವಾದ ಫಲ ಲಭಿಸಲಿದೆ. ಮನಸ್ಸಿಗೆ ನೆಮ್ಮದಿ ಪ್ರಾಪ್ತವಾಗಲಿದೆ. ಕೆಲಸದಲ್ಲಿನ ಒತ್ತಡ, ಕಿರಿಕಿರಿ ಎಲ್ಲ ಸಮಸ್ಯೆ ಬಗೆಹರಿಯಲಿದೆ, ಶತ್ರುಗಳ ಸಮಸ್ಯೆ ಇರಲಾರದು ಹೀಗಾಗಿ ಮಾನಸಿಕ ನೆಮ್ಮದಿ ಇರಲಿದೆ.

ವೃಷಭ ರಾಶಿ: ಇಂದು ವೃಷಭ ರಾಶಿಯವರಿಗೆ ಇಂದು ಪ್ರೇಮ, ಪ್ರೀತಿ, ದಾಂಪತ್ಯ ಜೀವನದಲ್ಲಿ ಮಕ್ಕಳ ವಿಚಾರದಲ್ಲಿ ಸಾಕಷ್ಟು ವೈಮನಸ್ಸು ಮೂಡುವ ಸಾಧ್ಯತೆ ಇದೆ. ಕ್ರಿಯಾಶೀಲತೆಯಿಂದ ಕೆಲಸ ಮಾಡಿದರೆ ಗೌರವ ಪ್ರಾಪ್ತವಾಗಲಿದೆ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಇಂದು ಆಸ್ತಿ ಪಾಸ್ತಿ ವಿಚಾರ, ಸಂಸಾರ ವಿಚಾರ, ತಾಯಿಯ ಆರೋಗ್ಯ ವಿಚಾರದಲ್ಲಿ ಸಾಕಷ್ಟು ಕಾಳಜಿ ಹೊಂದಿರಬೇಕು. ನರ್ಸರಿ, ಕೃಷಿ ಮತ್ತು ನೀರಾವರಿ ಕ್ಷೇತ್ರದಲ್ಲಿ ಉದ್ಯೋಗ ಮಾಡುವವರು ಕೆಲಸದಲ್ಲಿ ಹೆಚ್ಚಿನ ಜಾಗೃತಿ ವಹಿಸಬೇಕು.

ಕಟಕ ರಾಶಿ: ಕಟಕ ರಾಶಿಯವರಿಗೆ ಇಂದು ಉತ್ತಮವಾದ ದಿವಸವಾಗಿದ್ದು ಮನಸ್ಸಿಗೆ ನೆಮ್ಮದಿ ಸಿಗಲಿದೆ. ಆತ್ಮವಿಶ್ವಾಸ ಹೆಚ್ಚಾಗಲಿದೆ‌. ಮಾಧ್ಯಮ ರಂಗದಲ್ಲಿ ಇರುವವರಿಗೆ ಇಂದಿನ ದಿನ ಹೊಸ ಜವಾಬ್ದಾರಿ ಬರಲಿದ್ದು ಅದನ್ನು ಯಶಸ್ವಿಯಾಗಿ ನಿಭಾಯಿಸುವರು.

ಇದನ್ನು ಓದಿ:Daily Horoscope: ಈ ದಿನ ಈ ರಾಶಿಯವರ ಮೇಲೆ ಕೇತುವಿನ ಪ್ರಭಾವ

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಇಂದು ಮಾನಸಿಕ ನೆಮ್ಮದಿ ಇರಲಾರದು. ಮನೆಯಲ್ಲಿ ಕೌಟುಂಬಿಕ ವಿಚಾರಕ್ಕೆ ಕಿರಿಕಿರಿ ಉಂಟಾಗಲಿದ್ದು ಮಾನಸಿಕ ನೆಮ್ಮದಿ ಕುರಿತು ಹೆಚ್ಚಿನ ಜಾಗೃತಿ ವಹಿಸಿ. ಅನಗತ್ಯ ವಿಚಾರಕ್ಕೆ ತಲೆಕೆಡಿಸಿ ಕೊಳ್ಳದೆ ಭಗವಂತನ ಆರಾಧನೆ ಮಾಡಿದರೆ ದಿನಾಂತ್ಯದಲ್ಲಿ ಶುಭ ಸುದ್ದಿ ಕೇಳಲಿದ್ದೀರಿ.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಈ ದಿನ ಬಹಳ ಉತ್ತಮವಾದ ದಿವಸವಾಗಲಿದೆ. ಈಗಾಗಲೇ ಸಾಕಷ್ಟು ವಿಚಾರಕ್ಕೆ ಮಾನಸಿಕ ಕಿರಿಕಿರಿ ತೊಂದರೆಯನ್ನು ಅನುಭವಿಸುವವರು ಈಗ ಸ್ವಲ್ಪ ನೆಮ್ಮದಿ ಕಾಣಲಿದ್ದಾರೆ. ಮನಸ್ಸಿಗೆ ಈ ದಿನ ಉಲ್ಲಾಸ ತರುವ ದಿನವಾಗಲಿದೆ.

ತುಲಾ ರಾಶಿ: ತುಲಾ ರಾಶಿಯವರಿಗೆ ಈ ದಿನ ಅಷ್ಟು ಪ್ರಶಸ್ತವಾಗಿಲ್ಲ. ಮನಸ್ಸಿಗೆ ಕ್ಲೇಶ ಉಂಟಾಗುವ ದಿನ ಇದಾಗಲಿದೆ. ಮಿತ್ರತ್ವ ಮತ್ತು ಸಹೋದರ ಸಂಬಂಧಿಗಳ ನಡುವೆ ವೈಮನಸ್ಸು ಉಂಟಾಗಲಿದೆ. ಬಳಿಕ ಸಮಸ್ಯೆ ಶೀಘ್ರವೇ ಪರಿಹಾರ ಆಗಲಿದೆ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಈ ದಿನ ಬಹಳ ಉತ್ತಮವಾಗಿ ಇರಲಿದೆ. ಈ ದಿನ ಇಷ್ಟಾರ್ಥ ಸಿದ್ಧಿ , ಆರೋಗ್ಯ ವೃದ್ಧಿಯಾಗಲಿದೆ. ಮಿತ್ರತ್ವ ಸಂಬಂಧದಿಂದ ಬಹಳ ಖುಷಿಯ ದಿನ ಇದಾಗಲಿದೆ. ನಾಲಿಗೆ ಮೇಲೆ ಹಿಡಿತ ಸಾಧಿಸಿ ಕೆಲಸ ಕಾರ್ಯ ಕೈಗೊಂಡರೆ ಯಶಸ್ಸು ನಿಮಗೆ ಸಿಗಲಿದೆ.

ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಕಾರ್ಯ ಕ್ಷೇತ್ರದ ಜವಾಬ್ದಾರಿ ಹೆಚ್ಚಾಗಲಿದೆ. ಮನಸ್ಸಿಗೆ ಸಂತಸ ಇರಲಿದ್ದು ಎಲ್ಲವೂ ಅಂದುಕೊಂಡಂತೆ ನಡೆಯಲಿದೆ. ಕೆಲವೊಂದು ಅನಿರೀಕ್ಷಿತ ಅಂಶಗಳಿಂದ ಮನಸ್ಸು ಚಂಚಲವಾಗುವ ಸಾಧ್ಯತೆ ಇದೆ. ಯಾವುದಕ್ಕು ಭಯ ಪಡದೆ ಮುನ್ನಡೆದರೆ ಉತ್ತಮ ಫಲಿತಾಂಶ ಸಿಗಲಿದೆ.

ಮಕರ ರಾಶಿ: ಮಕರ ರಾಶಿಯವರಿಗೆ ಈ ದಿನ ಭಾಗ್ಯೋದಯವಾಗಲಿದೆ. ಮನಸ್ಸಿಗೆ ನೆಮ್ಮದಿ ಸಿಗಲಿದೆ. ನಿಮ್ಮನ್ನು ಅನೇಕ ದಿನದಿಂದ ಕಾಡುತ್ತಿದ್ದ ಸಮಸ್ಯೆ ಇಂದು ಪರಿಹಾರ ಆಗಲಿದೆ. ಮಿತ್ರರ ಆಗಮನ ಆಗಲಿದ್ದು ಮನಸ್ಸಿಗೆ ಸಂತೋಷವಾಗಲಿದೆ. ಕ್ಷೇತ್ರ ದರ್ಶನ ಮಾಡಿದರೆ ಉತ್ತಮ ಫಲ ಸಿಗಲಿದೆ.

ಕುಂಭರಾಶಿ: ಕುಂಭ ರಾಶಿಯವರಿಗೆ ಈ ದಿನ ಮಾನಸಿಕ ಖಿನ್ನತೆ ಸಮಸ್ಯೆ ಅನುಭವಿಸಲಿದ್ದಾರೆ. ಮನಸ್ಸಿಗೆ ಕ್ಲೇಶವಾಗಲಿದ್ದು ಮಿತ್ರರೊಡನೆ, ಸಂಬಂಧಿಕರೊಡನೆ ವೈಮನಸ್ಸು ಮೂಡುವ ಸಾಧ್ಯತೆ ಇದೆ. ಯಾವುದೆ ಹೊಸ ಕೆಲಸ ಕಾರ್ಯ ಯೋಜನೆ ಸದ್ಯಕ್ಕೆ ಮಾಡದಿರುವುದು ಒಳ್ಳೆಯದು ಎನ್ನಬಹುದು.

ಮೀನ ರಾಶಿ: ಮೀನ ರಾಶಿಯವರಿಗೆ ಈ ದಿನ ಬಹಳ ಉತ್ತಮವಾಗಿದೆ. ಇಂದು ಮಿತ್ರರಿಂದ ಕುಟುಂಬದಿಂದ ನಿಮ್ಮ ಕೆಲಸಕ್ಕೆ ಬೇಕಾದ ಸಹಕಾರ ನಿಮಗೆ ಪ್ರಾಪ್ತಿಯಾಗಲಿದೆ. ಈ ದಿನ ಶ್ರೀಕೃಷ್ಣನ ಧ್ಯಾನ ಮಾಡಿದರೆ ಉತ್ತಮ ಫಲವನ್ನು ನೀವು ನಿರೀಕ್ಷಿಸಬಹುದು.