ಭಾರತ ಹೊಸ ಮೈಲಿಗಲ್ಲು: ಪರಮಾಣು ಯುಗಕ್ಕೆ ಕಾಲಿಟ್ಟ ಇಂಡಿಯಾ; ಸ್ವದೇಶಿ ನಿರ್ಮಿತ ಕಲ್ಪಾಕಂ ರಿಯಾಕ್ಟರ್ ಪ್ರಾರಂಭ
Kalpakkam attained first criticality: ಕಲ್ಪಾಕಂ ಅಣು ವಿದ್ಯುತ್ ಸ್ಥಾವರದಲ್ಲಿನ ಸಂಪೂರ್ಣ ಸ್ವದೇಶಿ ವಿನ್ಯಾಸ ಮತ್ತು ನಿರ್ಮಾಣದ ಪ್ರೋಟೋಟೈಪ್ ಫಾಸ್ಟ್ ಬ್ರೀಡರ್ ರಿಯಾಕ್ಟರ್ (PFBR) ನಿರ್ಣಾಯಕ ಹಂತವನ್ನು ತಲುಪಿದೆ. ಈ ಮೂಲಕ ಭಾರತವು ಇಂಧನ ಸ್ವಾವಲಂಬನೆ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯನ್ನು ಇಟ್ಟಿತು. ಈ ಸಾಧನೆಗೆ ಭಾರತದ ಪರಮಾಣು ಪ್ರಯಾಣದಲ್ಲಿ ನಿರ್ಣಾಯಕ ಕ್ಷಣ ಎಂದು ಪ್ರಧಾನಿ ಬಣ್ಣಿಸಿದ್ದಾರೆ.
ಸ್ವದೇಶಿ ನಿರ್ಮಿತ ಕಲ್ಪಾಕಂ ರಿಯಾಕ್ಟರ್ ಪ್ರಾರಂಭ -
ನವದೆಹಲಿ, ಏ.9: ತಮಿಳುನಾಡಿನ ಕಲ್ಪಾಕಂ ಅಣು ವಿದ್ಯುತ್ ಸ್ಥಾವರದಲ್ಲಿನ (Kalpakkam reactor) ಸಂಪೂರ್ಣ ಸ್ವದೇಶಿ ವಿನ್ಯಾಸ ಮತ್ತು ನಿರ್ಮಾಣದ ಪ್ರೋಟೋಟೈಪ್ ಫಾಸ್ಟ್ ಬ್ರೀಡರ್ ರಿಯಾಕ್ಟರ್ (PFBR) ನಿರ್ಣಾಯಕ ಹಂತವನ್ನು ತಲುಪಿದೆ. ಈ ಮೂಲಕ ಭಾರತವು ಇಂಧನ ಸ್ವಾವಲಂಬನೆ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯನ್ನು ಇಟ್ಟಿತು. 500 ಮೆಗಾವಾಟ್ ವಿದ್ಯುತ್ ಸಾಮರ್ಥ್ಯದ ಈ ರಿಯಾಕ್ಟರ್‌ನಲ್ಲಿ ಸ್ಥಿರ ಮತ್ತು ನಿಯಂತ್ರಿತ ಪರಮಾಣು ಸರಪಳಿ ಪ್ರತಿಕ್ರಿಯೆ ಪ್ರಾರಂಭವಾದ ಈ ಕ್ಷಣ, ಭಾರತ ಹಲವು ದಶಕಗಳಿಂದ ಹತ್ತಿರದಿಂದ ಅನುಸರಿಸುತ್ತಿದ್ದ ತಂತ್ರಜ್ಞಾನದ ಸಾಧನೆಯಾಗಿದೆ.
ಈ ಸಾಧನೆಯೊಂದಿಗೆ, ದೇಶವು ಹೋಮಿ ಜೆ ಭಾಭಾ (Homi J Bhabha) ಅವರು ಕಲ್ಪಿಸಿದ ಮೂರು ಹಂತಗಳ ಪರಮಾಣು ವಿದ್ಯುತ್ ಕಾರ್ಯಕ್ರಮದ ಎರಡನೇ ಹಂತಕ್ಕೆ ಭಾರತ ಅಧಿಕೃತವಾಗಿ ಪ್ರವೇಶಿಸಿದೆ. ಕಲ್ಪಾಕ್ಕಂನಲ್ಲಿರುವ ಪಿಎಫ್‌ಬಿಆರ್ (Prototype Fast Breeder Reactor) ಒಂದು ಪರೀಕ್ಷಾ ವೇದಿಕೆ (test bed) ಆಗಿ ಕೆಲಸ ಮಾಡುತ್ತದೆ. ಬೆಳೆಯುತ್ತಿರುವ ಆರ್ಥಿಕತೆಗೆ ಅಪಾರ ಇಂಧನ ನಿಕ್ಷೇಪಗಳನ್ನು ಅನ್ಲಾಕ್ ಮಾಡುವ ಸಾಮರ್ಥ್ಯವನ್ನು ಹೊಂದಿರುವ PFBR ರಾಷ್ಟ್ರೀಯ ಪರೀಕ್ಷಾ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ.
ಈ ಯಶಸ್ಸು, ಭಾರತದ ಅಣುಶಕ್ತಿ ಮುಖ್ಯಸ್ಥರಾದ ಡಾ. ಅಜಿತ್ ಕುಮಾರ್ ಮೊಹಂತಿ ಅವರಿಗೆ ನೀಡಲಾದ ಅಭೂತಪೂರ್ವ ಒಂದು ವರ್ಷದ ಅವಧಿ ವಿಸ್ತರಣೆಯೊಂದಿಗೆ ಕೂಡ ಹೊಂದಿಕೆಯಾಗುತ್ತದೆ. ಇದೇ ಶುಕ್ರವಾರ (ಏ.10) ನಿರ್ಗಮಿಸುವವರೆಗೂ ಡಾ. ಮೊಹಂತಿ ಪರಮಾಣು ಇಂಧನ ಸಂಸ್ಥೆಯ ಮುಖ್ಯಸ್ಥರಾಗಿ ಉಳಿಯುತ್ತಾರೆ ಎಂದು ಕ್ಯಾಬಿನೆಟ್ ನೇಮಕಾತಿ ಸಮಿತಿ ದೃಢಪಡಿಸಿದೆ. 2027 ರಲ್ಲಿ ಅವರ ಅವಧಿ ಮುಗಿಯುವ ಹೊತ್ತಿಗೆ ಅವರಿಗೆ ಸುಮಾರು 68 ವರ್ಷ ವಯಸ್ಸಾಗಿರುತ್ತದೆ.
ಭಾರತಕ್ಕೆ 3ನೇ ಪರಮಾಣು ಜಲಾಂತರ್ಗಾಮಿ ನೌಕೆ? ಐಎನ್ಎಸ್ ಅರಿಧಮನ್ ಲೋಕಾರ್ಪಣೆ ಬಗ್ಗೆ ರಾಜನಾಥ್ ಸಿಂಗ್ ಸುಳಿವು
ಪಿಎಫ್‌ಬಿಆರ್ (ಪ್ರೋಟೋಟೈಪ್ ಫಾಸ್ಟ್ ಬ್ರೀಡರ್ ರಿಯಾಕ್ಟರ್) ಭಾರತವು ಇದುವರೆಗೆ ಬಳಸಿಕೊಂಡಿದ್ದ ಸಾಮಾನ್ಯ ಅಣು ರಿಯಾಕ್ಟರ್‌ಗಳಿಂದ ಭಿನ್ನವಾಗಿದೆ. ಇದನ್ನು ಭಾರತೀಯ ನಾಭಿಕಿಯ ವಿದ್ಯುತ್ ನಿಗಮ್ ಲಿಮಿಟೆಡ್ (BHAVINI) ನಿರ್ಮಿಸಿದ್ದು, ಇಂದಿರಾ ಗಾಂಧಿ ಪರಮಾಣು ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿದೆ. ಈ ರಿಯಾಕ್ಟರ್‌ನ ವಿನ್ಯಾಸವು ಭಾರತದ ಬಳಕೆಗೆ ಲಭ್ಯವಿರುವ ಅಣು ಇಂಧನವನ್ನು ಹೆಚ್ಚಿಸುವ ಉದ್ದೇಶ ಹೊಂದಿದೆ.
ಭಾರತದಲ್ಲಿ ಯುರೇನಿಯಂ ಸಂಪತ್ತು ಕಡಿಮೆ ಇದ್ದರೂ, ಥೋರಿಯಂ ಸಂಪತ್ತು ಬಹಳ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿದೆ. PFBR ತಂತ್ರಜ್ಞಾನವು ಈ ಸೀಮಿತ ಯುರೇನಿಯಂ ಬಳಸಿ ಹೆಚ್ಚು ಇಂಧನವನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಇದರಿಂದ ಭವಿಷ್ಯದಲ್ಲಿ ಥೋರಿಯಂ ಆಧಾರಿತ ಶಕ್ತಿ ಉತ್ಪಾದನೆಗೆ ದಾರಿ ಸಿಗುತ್ತದೆ.
ಇನ್ನು ಈ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ಇದು ಭಾರತದ ಪರಮಾಣು ಪ್ರಯಾಣದಲ್ಲಿ ನಿರ್ಣಾಯಕ ಕ್ಷಣ ಎಂದು ಬಣ್ಣಿಸಿದ್ದಾರೆ. ದೇಶದ ಪರಮಾಣು ಸ್ಥಾವರಗಳಲ್ಲಿನ ತಂತ್ರಜ್ಞಾನಗಳು ವಿದೇಶಿ ಮೂಲದ್ದಾಗಿವೆ. ಆದರೆ ಕಲ್ಪಾಕಂ ಸ್ಥಾವರ ಸಂಪೂರ್ಣ ಸ್ವದೇಶಿ ನಿರ್ಮಿತ. ಇದನ್ನು ಭಾರತದಲ್ಲಿಯೇ ವಿನ್ಯಾಸಗೊಳಿಸಿ ನಿರ್ಮಿಸಲಾಗಿದೆ.
ಭಾರತದಲ್ಲಿ ಅಣುಶಕ್ತಿ ಈಗ ದೇಶದ ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿ ಸುಮಾರು ಶೇ. 3 ಪಾಲನ್ನು ನೀಡುತ್ತದೆ. ಇದರ ಸ್ಥಾಪಿತ ಸಾಮರ್ಥ್ಯವು 8.78 ಗಿಗಾವಾಟ್ (GW) ಆಗಿದೆ. ಸರ್ಕಾರದ ಅಂದಾಜುಗಳ ಪ್ರಕಾರ, ಇದು 2030ರ ಆರಂಭದ ವೇಳೆಗೆ 22 ಗಿಗಾವಾಟ್‌ಗಿಂತ ಹೆಚ್ಚು ಆಗುವ ಸಾಧ್ಯತೆಯಿದೆ. ದೀರ್ಘಕಾಲಿಕ ಗುರಿಯಾಗಿ, 2047ರ ವೇಳೆಗೆ 100 ಗಿಗಾವಾಟ್ ಸಾಮರ್ಥ್ಯವನ್ನು ಸಾಧಿಸುವ ಉದ್ದೇಶವಿದೆ.