ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pawan Kalyan: "ಭಾರತಕ್ಕೆ ಎರಡಲ್ಲ, ಬಹು ಭಾಷೆಗಳು ಬೇಕು" ; ಸ್ಟ್ಯಾಲಿನ್‌ಗೆ ಕೌಂಟರ್‌ ಕೊಟ್ಟ ಪವನ್ ಕಲ್ಯಾಣ್

ಕೇಂದ್ರ ಸರ್ಕಾರ ಮತ್ತು ತಮಿಳುನಾಡು ಸರ್ಕಾರದ ನಡುವೆ ನಡೆಯುತ್ತಿರುವ ಭಾಷಾ ವಿವಾದದ ಮಧ್ಯೆ, ಜನಸೇನಾ ಪಕ್ಷದ ಮುಖ್ಯಸ್ಥ ಮತ್ತು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಶುಕ್ರವಾರ ಭಾರತದ ಭಾಷಾ ವೈವಿಧ್ಯತೆಯನ್ನು ಕಾಪಾಡುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ.

ಹಿಂದಿ ಹೇರಿಕೆ ಗಲಾಟೆ ; ಸ್ಟ್ಯಾಲಿನ್‌ಗೆ ಕೌಂಟರ್‌ ಕೊಟ್ಟ ಪವನ್ ಕಲ್ಯಾಣ್

ಪವನ್‌ ಕಲ್ಯಾಣ್‌

Profile Vishakha Bhat Mar 15, 2025 10:53 AM

ಚೆನ್ನೈ: ಕೇಂದ್ರ ಸರ್ಕಾರ ಮತ್ತು ತಮಿಳುನಾಡು ಸರ್ಕಾರದ ನಡುವೆ ನಡೆಯುತ್ತಿರುವ ಭಾಷಾ ವಿವಾದದ ಮಧ್ಯೆ, ಜನಸೇನಾ ಪಕ್ಷದ ಮುಖ್ಯಸ್ಥ ಮತ್ತು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ (Pawan Kalyan) ಶುಕ್ರವಾರ ಭಾರತದ ಭಾಷಾ ವೈವಿಧ್ಯತೆಯನ್ನು ಕಾಪಾಡುವ ಅಗತ್ಯವನ್ನು ಒತ್ತಿ ಹೇಳಿದರು, ದೇಶಕ್ಕೆ "ಎರಡಲ್ಲ, ತಮಿಳು ಸೇರಿದಂತೆ ಬಹು ಭಾಷೆಗಳು ಬೇಕು" ಎಂದು ಹೇಳಿದರು.ಭಾರತಕ್ಕೆ ತಮಿಳು ಸೇರಿದಂತೆ ಬಹು ಭಾಷೆಗಳ ಅಗತ್ಯವಿದೆ, ಕೇವಲ ಎರಡಲ್ಲ. ನಾವು ಭಾಷಾ ವೈವಿಧ್ಯತೆಯನ್ನು ಅಳವಡಿಸಿಕೊಳ್ಳಬೇಕು - ನಮ್ಮ ರಾಷ್ಟ್ರದ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಮಾತ್ರವಲ್ಲದೆ ಅದರ ಜನರಲ್ಲಿ ಪ್ರೀತಿ ಮತ್ತು ಏಕತೆಯನ್ನು ಬೆಳೆಸಲು ಭಾಷೆಗಳು ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ಕಾಕಿನಾಡ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ದೇಶಕ್ಕೆ ಎರಡಲ್ಲ, ತಮಿಳು ಸೇರಿದಂತೆ ಬಹು ಭಾಷೆಗಳು ಬೇಕು ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ 'ಹಿಂದಿ ಹೇರಿಕೆ' ಮತ್ತು ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ) ತ್ರಿಭಾಷಾ ಸೂತ್ರವನ್ನು ಜಾರಿಗೆ ತರಲು ನಿರಾಕರಿಸಿದ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಆರೋಪಗಳ ಮಧ್ಯೆ ಪವನ್‌ ಕಲ್ಯಾಣ್‌ ಅವರಿಂದ ಈ ಹೇಳಿಕೆ ಬಂದಿದೆ. ಡಿಎಂಕೆ ಪಕ್ಷದ ಹೆಸರನ್ನು ನೇರವಾಗಿ ಹೆಸರಿಸದೆ ಅವರು ಸ್ಟಾಲಿನ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.



ಸಂಸ್ಕೃತ ಹಾಗೂ ಹಿಂದಿ ಭಾಷೆಗಳನ್ನು ದ್ವೇಷಿಸುವವರ ಬಗ್ಗೆಯೂ ಕಿಡಿಕಾರಿದ ಅವರು, “ಯಾಕೆ ಕೆಲವರು ಕೆಲವು ಭಾಷೆಗಳನ್ನು ದ್ವೇಷಿಸುತ್ತಾರೋ ನನಗೆ ಅರ್ಥವಾಗುತ್ತಿಲ್ಲ’’ ಎಂದು ಹೇಳಿದರು. “ಕೆಲವರು ಸಂಸ್ಕೃತ ಭಾಷೆಯನ್ನು ಕಟುವಾಗಿ ದ್ವೇಷಿಸುತ್ತಾರೆ. ತಮಿಳುನಾಡಿನ ರಾಜಕಾರಣಿಗಳು ಹಿಂದಿ ಭಾಷೆಯನ್ನು ದ್ವೇಷಿಸುತ್ತಾರೆ. ಶಿಕ್ಷಣದಲ್ಲಿ ತ್ರಿಭಾಷಾ ಸೂತ್ರದಡಿ ಹಿಂದಿಯನ್ನು ಕಡ್ಡಾಯವಾಗಿ ಕಲಿಸಲು ಸಿದ್ಧವಿಲ್ಲ ಎನ್ನುವುದು ಬೇಡ. ಯಾರಾದರೂ ತಮಿಳು ಮಕ್ಕಳು ಹಿಂದಿ ಕಲಿಯಲು ಆಸಕ್ತಿ ಹೊಂದಿದ್ದರೆ ಅವರು ಅದನ್ನು ಕಲಿಯಲು ಅವಕಾಶ ಕೊಡಿ. ಅದನ್ನೇಕೆ ನೀವು ನಿರಾಕರಿಸುತ್ತೀರಿ? ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ: Amit Shah: ಎಲ್ ಕೆಜಿ ವಿದ್ಯಾರ್ಥಿಯಿಂದ ಪಿಹೆಚ್ ಡಿ ಪದವೀಧರನಿಗೆ ಪಾಠ ; ಸ್ಟ್ಯಾಲಿನ್‌ ಹೇಳಿಕೆಗೆ ಅಮಿತ್‌ ಶಾ ಖಡಕ್‌ ಕೌಂಟರ್‌

ಅಣ್ಣಾಮಲೈ ಕಿಡಿ

ತಮಿಳುನಾಡಿನ ದ್ವಿಭಾಷಾ ಶಿಕ್ಷಣ ನೀತಿಯನ್ನು ಟೀಕಿಸಿರುವ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ, “ನೀವೀಗ ತ್ರಿಭಾಷಾ ಸೂತ್ರ ಬೇಡ ಎಂದು ಹೇಳುತ್ತಿದ್ದೀರಿ. ಕೇಂದ್ರ ಸರ್ಕಾರದ ತ್ರಿಭಾಷಾ ಶಿಕ್ಷಣ ಸೂತ್ರವನ್ನು ನೀವು ನಿರಾಕರಿಸುತ್ತೀರಿ. ಆದರೆ, ಇದನ್ನು ಬಿಜೆಪಿ ಮಾಡಿದ್ದಲ್ಲ. 1968ರಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಸರ್ಕಾರವೇ ಇದನ್ನು ಜಾರಿ ಮಾಡಿತ್ತು ಎಂದು ತಮಿಳು ನಾಡಿನ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಕಿಡಿ ಕಾರಿದ್ದಾರೆ.