ನವದೆಹಲಿ: ದೇಶದೆಲ್ಲೆಡೆ ದೀಪಾವಳಿ(Deepavali) ಸಂಭ್ರಮ ಮನೆ ಮಾಡಿದ್ದು, ಹಬ್ಬಕ್ಕೆ ಇನ್ನು 5 ದಿನ ಮಾತ್ರ ಬಾಕಿ ಇದೆ. ಈ ಬೆನ್ನಲೇ ಸುಪ್ರೀಂಕೋರ್ಟ್ (Supreme Court) ಮಹತ್ವದ ತೀಪು ಹೊರಡಿಸಿದೆ. ಆದೇಶದ ಅನ್ವಯ ದೆಹಲಿಯ ಎನ್‌ಸಿಆರ್ (New Delhi) ಪ್ರದೇಶದಲ್ಲಿ ಹಸಿರು ಪಟಾಕಿ (Green Crackers) ಹೊರತುಪಡಿಸಿ ಉಳಿದ ಯಾವುದೇ ರೀತಿಯ ಪಟಾಕಿ ಮಾರಾಟ ಮಾಡಲು ಅವಕಾಶ ಇರುವುದಿಲ್ಲ ಎಂದು ಹೇಳಿದೆ. ಆದೇಶ ಕಟ್ಟು ನಿಟ್ಟಾಗಿ ಪಾಲಿಸಲು ಸೂಚನೆ ನೀಡಿದ್ದು, ಕೇವಲ ಹಸಿರು ಪಟಾಕಿ ಮಾರಾಟಕ್ಕೆ ಅವಕಾಶ ಕಲ್ಪಿಸಿದೆ. ಪರಿಸರ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಹಸಿರು ಪಟಾಕಿಗಳನ್ನು ಸಿಡಿಸಲು ಮಾತ್ರ ಅವಕಾಶ ನೀಡಲಾಗಿದ್ದು, ಈ ಬಾರಿ ಸಾಂಪ್ರದಾಯಿಕ ಪಟಾಕಿಗಳ ಅಬ್ಬರಕ್ಕೆ ಬ್ರೇಕ್ ಹಾಕಿದೆ. ಬೇರಿಯಂ ಸೇರಿ ನಿಷೇಧಿತ ರಾಸಾಯನಿಕ ಬಳಸಿರುವ ಪಟಾಕಿಯನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಹಸಿರು ಪಟಾಕಿಗಳ ಬಳಕೆಗೆ ಮಾತ್ರ ಅನುಮತಿ ಇದೆ ಎಂದಿದೆ. ಈ ಮೂಲಕ ಪಟಾಕಿ ಮಾರಾಟಗಾರರ ಮೇಲೆ ನಿಗಾ ಇಟ್ಟಿದ್ದು, ವ್ಯಾಪರಕ್ಕೆ ಕಟ್ಟುನಿಟ್ಟನ ಕ್ರಮಗಳನ್ನು ಜಾರಿಗೆ ಮಾಡಿದೆ.
ದೀಪಾವಳಿ ಸಮಯದಲ್ಲಿ ದೆಹಲಿಯ ಎನ್‌ಸಿಆರ್ ಪ್ರದೇಶದಲ್ಲಿ ಹಸಿರು ಪಟಾಕಿ ಸಿಡಿಸಲು ಅನುಮತಿ ನೀಡುವಂತೆ ಸುಪ್ರೀಂಕೋರ್ಟ್‌ಗೆ ಮನವಿ ಮಾಡಲಾಗಿದೆ. ಈ ಹಿನ್ನಲೆ ಷರತ್ತಿನ ಅನ್ವಯ ಸುಪ್ರೀಂ ಕೋರ್ಟ್ ಹಸಿರು ಪಟಾಕಿ ಮಾರಾಟ ಹಾಗೂ ಸಿಡಿಸುವಿಕೆಗೆ ಅವಕಾಶ ನೀಡಿದ್ದು, ಹಬ್ಬದಂದು ರಾತ್ರಿ 8 ರಿಂದ 10 ರವರೆಗೆ ಹಸಿರು ಪಟಾಕಿಗಳನ್ನು ಸಿಡಿಸಲು ಅವಕಾಶ ನೀಡಿದೆ. ಇದಕ್ಕಾಗಿ ಹಲವು ಷರತ್ತುಗಳನ್ನು ವಿಧಿಸಿದ್ದು, ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ ಅನುಮೋದಿಸಿದ ಹಸಿರು ಪಟಾಕಿಗಳನ್ನು ಮಾತ್ರ ತಯಾರಿಸಿ ಮಾರಾಟ ಮಾಡಬೇಕು ಎಂಬುದು ಸೇರಿದಂತೆ ಕೆಲವು ಷರತ್ತುಗಳ ಅಡಿಯಲ್ಲಿ ಪಟಾಕಿಗಳ ಬಳಕೆಗೆ ಅನುಮತಿ ನೀಡಿದೆ.
ಈ ಸುದ್ದಿಯನ್ನೂ ಓದಿ: Viral Video: ಜೀವಂತವಾಗಿರುವಾಗಲೇ ತಮ್ಮ ಅಂತ್ಯಕ್ರಿಯೆ ಆಯೋಜಿಸಿದ ನಿವೃತ್ತ ಸೇನಾಧಿಕಾರಿ; ಕಾರಣವೇನು? ಇಲ್ಲಿದೆ ವೈರಲ್ ವಿಡಿಯೊ
ಷರತ್ತುಗಳೇನು...?
- ಹಸಿರು ಪಟಾಕಿ ಬಿಟ್ಟು ಉಳಿದ ಯಾವುದೆ ಪಟಾಕಿ ಮಾರಾಟ ಮಾಡದಂತೆ ಸೂಚನೆ ಕೊಟ್ಟಿದ್ದು, ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ ಇದೆ.
- ಹಸಿರು ಪಟಾಕಿಗಳ ಮೇಲೆ ಹಾಗೂ ಅವುಗಳ ಪ್ಯಾಕೇಟ್ ಮೇಲೆ ಹಸಿರು ಪಟಾಕಿ ಚಿಹ್ನೆಯಿದ್ದು ಕ್ಯೂರ್ಆ ಕೋಡ್ ಇರುವ ಪಟಾಕಿ ಉಪಯೋಗಿಸುವಂತೆ ಹೇಳಿದೆ.
- ದೀಪಾವಳಿ ಹಬ್ಬದ ವೇಳೆ, ಬೆಳಿಗ್ಗೆ 6 ರಿಂದ 7 ರವರೆಗೆ ಮತ್ತು ಸಂಜೆ 8 ರಿಂದ ರಾತ್ರಿ 10 ರವರೆಗೆ ಮಾತ್ರ ಪಟಾಕಿಗಳ ಸಿಡಿಸಲು ಅವಕಾಶ ನೀಡಲಾಗಿದೆ.
- ಅಕ್ಟೋಬರ್ 18 ರಿಂದ 21 ರವರೆಗೆ ಮಾತ್ರ NEERI ಅನುಮೋದಿತ ಕ್ಯೂಆರ್ ಕೋಡ್ ಹೊಂದಿರುವ ಹಸಿರು ಪಟಾಕಿಗಳನ್ನು ಮಾರಾಟಕ್ಕೆ ಅನುಮತಿ.
- ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ ಅನುಮೋದಿಸಿದ ಹಸಿರು ಪಟಾಕಿಗಳನ್ನು ಮಾತ್ರ ತಯಾರಿಸಿ ಮಾರಾಟಕ್ಕೆ ಅವಕಾಶವಿದ್ದು, ಪರವಾನಗಿ ಪಡೆದ ವ್ಯಾಪಾರಿಗಳ ಮೂಲಕವೇ ಮಾರಾಟ ನಡೆಯಬೇಕು.
- NEERI ಅನುಮತಿಸಲಾದ ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕು.
- 125 ಡೆಸಿಬಲ್ ಮೇಲ್ಪಟ್ಟ ಪಟಾಕಿ ಸಿಡಿಸುವುದನ್ನ ನಿಷೇಧ ಮಾಡಲಾಗಿದೆ. 100 ಡೆಸಿಬಲ್ ಮೀರಿದ್ದರೆ ಅವುಗಳು ಹಸಿರು ಪಟಾಕಿ ಎನಿಸಿಕೊಳ್ಳಲ್ಲ. ಅದನ್ನ ಮುಟ್ಟುಗೋಲು ಹಾಕಿಕೊಳ್ಳಲಾಗುವುದು.
- ನಿಯಮ ಉಲ್ಲಂಘಿಸಿದ ವ್ಯಾಪಾರಿಗಳ ಪರವಾನಗಿಯನ್ನು ರದ್ದುಪಡಿಸಲಾಗುವುದು ಮತ್ತು ಅವರಿಗೆ ದಂಡ ವಿಧಿಸಲಾಗುವುದು.
- ಬೇರಿಯಂ ಸೇರಿ ನಿಷೇಧಿತ ರಾಸಾಯನಿಕ ಬಳಸಿರುವ ಪಟಾಕಿಯ ಮಾರಾಟ ನಿಷೇಧ.
- ಮಾರಾಟ ಸ್ಥಳದಲ್ಲಿ ವಿಶೇಷ ಗಸ್ತು ತಂಡಗಳು ನಿಯೋಜನೆ ಹಾಗೂ ನಿಯಮಾನುಸಾರ ಮಾರಾಟ ನಡೆಯುತ್ತಿದೆಯೇ ಎಂದುಮೇಲ್ವಿಚಾರಣೆ
ಹಸಿರು ಪಟಾಕಿ ಎಂದರೇನು?
ಹೆಚ್ಚು ಮಾಲಿನ್ಯವಲ್ಲದ ಈ ಪಟಾಕಿ ಕೇವಲ ಶೇ30ರಷ್ಟು ಪ್ರಮಾಣದ ಹೊಗೆಯನ್ನು ಹೊರಹಾಕುತ್ತದೆ. ಹಸಿರು ಪಟಾಕಿಗಳು ಕಡಿಮೆ ಬೆಳಕು ಮತ್ತು ಶಬ್ದ ಹೊರಸೂಸುವ, ಸಿಡಿತದ ಬಳಿಕ ಕಡಿಮೆ ಪ್ರಮಾಣದ ನೈಟ್ರೋಜನ್ ಆಕ್ಸೈಡ್, ಸಲ್ಫರ್ ಡೈ ಆಕ್ಸೆಡ್ ಹೊರ ಸೂಸುವ ಪಟಾಕಿಗಳನ್ನು ಹಸಿರು ಪಟಾಕಿ ಎಂದು ಪರಿಗಣಿಸಲಾಗುತ್ತದೆ.
ಸಾಮಾನ್ಯ ಪಟಾಕಿಗಳನ್ನು ನೈಟ್ರೇಟ್ ಮತ್ತು ಬೇರಿಯಂಗಳು ಕಂಡು ಬರುತ್ತವೆ. ಈ ರಾಸಾಯನಿಕಗಳು ಹಸಿರು ಪಟಾಕಿಗಳಲ್ಲಿ ಇರುವುದಿಲ್ಲ. ಈ ಹಸಿರು ಪಟಾಕಿಗಳು ಸ್ಪೋಟಿಸಿದಾಗ ನೀರಿನ ಆವಿ ಮತ್ತು ಹೊಗೆ ಹೊರ ಹಾಕುವುದನ್ನು ದುರ್ಬಲಗೊಳಿಸುತ್ತದೆ. ಇದರಲ್ಲಿ ಸುರಕ್ಷಿತ ಅಲ್ಯೂಮಿನಿಯಂ ಮತ್ತು ಥರ್ಮೈಟ್ ಇರುತ್ತದೆ.