ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

New Delhi railway station: ನವದೆಹಲಿ ರೈಲು ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್‌ ಪತ್ತೆ ; ನಿಷ್ಕ್ರಿಯ ದಳದಿಂದ ಸ್ಥಳ ಪರಿಶೀಲನೆ

ಶನಿವಾರ ನವದೆಹಲಿ ರೈಲು ನಿಲ್ದಾಣದ ಗೇಟ್‌ನಲ್ಲಿ ಚೀಲವೊಂದು ಪತ್ತೆಯಾಗಿದೆ. ಚೀಲವನ್ನು ನೋಡಿದ ಪ್ರಯಾಣಿಕರು ಆತಂಕಕ್ಕೊಳಗಾಗಿದ್ದಾರೆ. ಕೂಡಲೇ ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳವನ್ನು ಸ್ಥಳಕ್ಕೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿಲ್ದಾಣದ ಗೇಟ್ ಸಂಖ್ಯೆ 8 ರಲ್ಲಿ ಬ್ಯಾಗ್‌ ಒಂದು ಬಿದ್ದಿರುವ ಬಗ್ಗೆ ಬೆಳಿಗ್ಗೆ 7.55 ಕ್ಕೆ ಕರೆ ಬಂದಿದೆ ಎಂದು ಡಿಎಫ್‌ಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನವದೆಹಲಿ ರೈಲು ನಿಲ್ದಾಣದಲ್ಲಿ ಅನುಮಾನಾಸ್ಪದ  ಬ್ಯಾಗ್‌ ಪತ್ತೆ

Profile Vishakha Bhat May 3, 2025 11:53 AM

ನವದೆಹಲಿ: ಶನಿವಾರ ನವದೆಹಲಿ ರೈಲು (New Delhi railway station) ನಿಲ್ದಾಣದ ಗೇಟ್‌ನಲ್ಲಿ ಚೀಲವೊಂದು ಪತ್ತೆಯಾಗಿದೆ. ಚೀಲವನ್ನು ನೋಡಿದ ಪ್ರಯಾಣಿಕರು ಆತಂಕಕ್ಕೊಳಗಾಗಿದ್ದಾರೆ. ಕೂಡಲೇ ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳವನ್ನು ಸ್ಥಳಕ್ಕೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೆಹಲಿ ಅಗ್ನಿಶಾಮಕ ಸೇವೆಗಳು (ಡಿಎಫ್‌ಎಸ್) ಸ್ಥಳಕ್ಕೆ ಅಗ್ನಿಶಾಮಕ ದಳದ ವಾಹನವನ್ನು ಕಳುಹಿದೆ. ಇಲ್ಲಿಯವರೆಗೆ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ. ನಿಲ್ದಾಣದ ಗೇಟ್ ಸಂಖ್ಯೆ 8 ರಲ್ಲಿ ಬ್ಯಾಗ್‌ ಒಂದು ಬಿದ್ದಿರುವ ಬಗ್ಗೆ ಬೆಳಿಗ್ಗೆ 7.55 ಕ್ಕೆ ಕರೆ ಬಂದಿದೆ ಎಂದು ಡಿಎಫ್‌ಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅನುಮಾನಾಸ್ಪವಾದ ಚೀಲವೊಂದು ಗೇಟ್ ಸಂಖ್ಯೆ 8 ರಲ್ಲಿ ಬ್ಯಾಗ್‌ ಒಂದು ಬಿದ್ದಿರುವ ಬಗ್ಗೆ ಕರೆ ಮಾಡಿ ತಿಳಿಸಿದರು. ನಾವು ಸ್ಥಳಕ್ಕೆ ಅಗ್ನಿಶಾಮಕ ದಳದ ವಾಹನವನ್ನು ರವಾನಿಸಿದೆವು ಎಂದು ಅಧಿಕಾರಿ ತಿಳಿಸಿದರು. ಇಲ್ಲಿಯವರೆಗೆ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ ಮತ್ತು ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು ಅವರು ಹೇಳಿದರು, ಬಾಂಬ್ ನಿಷ್ಕ್ರಿಯ ದಳಗಳು ಮತ್ತು ಶ್ವಾನ ದಳಗಳು ಸ್ಥಳದಲ್ಲಿವೆ ಎಂದು ಅವರು ಮಾಹಿತಿಯನ್ನು ನೀಡಿದ್ದಾರೆ.

ಇತ್ತೀಚೆಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ಅವರ ಕಚೇರಿ ಮತ್ತು ಅವರ ಅಧಿಕೃತ ನಿವಾಸ ಕ್ಲಿಫ್ ಹೌಸ್‌ಗೆ ಬಾಂಬ್ ಬೆದರಿಕೆ ಕರೆ ಬಂದಿತ್ತು.ತಿರುವನಂತಪುರಂನಲ್ಲಿರುವ ಮುಖ್ಯಮಂತ್ರಿ ಕಚೇರಿ ಮತ್ತು ನಿವಾಸಕ್ಕೆ ಬಾಂಬ್ ಬೆದರಿಕೆ ಇಮೇಲ್ ಮೂಲಕ ಬಂದಿದ್ದು, ಕೇರಳ ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ: Zameer Ahmed Khan: ಪಾಕಿಸ್ತಾನಕ್ಕೆ ಆತ್ಮಹತ್ಯಾ ಬಾಂಬ್‌ ಕಟ್ಟಿಕೊಂಡು ಹೋಗುವೆ: ಸಚಿವ ಜಮೀರ್‌ ಅಹಮದ್‌ ವಿಡಿಯೋ ವೈರಲ್!

ಮುಖ್ಯಮಂತ್ರಿಗಳ ನಿವಾಸದದಲ್ಲಿ ಸ್ನಿಫರ್ ನಾಯಿಗಳು ಮತ್ತು ವಿಶೇಷ ತಂಡಗಳು ತಪಾಸಣೆಯನ್ನು ಕೈಗೊಂಡಿದ್ದವು. ಈ ಹಿಂದೆ ಕೇರಳ ರಾಜ್ಯ ರಾಜಧಾನಿಯ ವಿವಿಧ ಹೋಟೆಲ್‌ಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶಗಳು ಬಂದಿದ್ದು, ಪೊಲೀಸರು ಬಾಂಬ್ ನಿಷ್ಕ್ರಿಯ ಘಟಕಗಳು ಮತ್ತು ಶ್ವಾನ ದಳಗಳನ್ನು ನಿಯೋಜಿಸಿ ತಪಾಸಣೆ ನಡೆಸಿದ್ದರು. ತಿರುವನಂತಪುರ ನಗರದ ಹೃದಯಭಾಗದಲ್ಲಿರುವ ಹಿಲ್ಟನ್ ಹೋಟೆಲ್ ಸೇರಿದಂತೆ ವಿವಿಧ ಹೋಟೆಲ್‌ಗಳಲ್ಲಿ ಐಇಡಿ ಸ್ಫೋಟಗಳು ಸಂಭವಿಸುತ್ತವೆ ಎಂದು ಇ ಮೇಲ್‌ ಮೂಲಕ ಬೆದರಿಕೆ ಹಾಕಿದ್ದರು. ಕಳೆದ ವಾರ ಕೇರಳದ ಹೈ ಕೋರ್ಟ್‌ಗೆ ಬಾಂಬ್ ಬೆದರಿಕೆ ಬಂದಿತ್ತು.