ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

114 ರಫೇಲ್ ಜೆಟ್‌ ಖರೀದಿಗೆ ಮುಂದಾದ ಭಾರತ: ಫ್ರಾನ್ಸ್‌ನೊಂದಿಗೆ 3.25 ಲಕ್ಷ ಕೋಟಿ ರೂಪಾಯಿಗಳ ಬೃಹತ್ ಒಪ್ಪಂದ

ಭಾರತೀಯ ಸೇನೆಯ ಬಲ ಹೆಚ್ಚಿಸಲು ಇದೀಗ ಫ್ರಾನ್ಸ್‌ನೊಂದಿಗೆ ಬೃಹತ್ ಒಪ್ಪಂದಕ್ಕೆ ಭಾರತ ಮುಂದಾಗಿದೆ. 3.25 ಲಕ್ಷ ಕೋಟಿ ರೂಪಾಯಿಗಳ ಈ ಒಪ್ಪಂದದಲ್ಲಿ ಒಟ್ಟು 114 ರಫೇಲ್ ಜೆಟ್‌ಗಳನ್ನು ಪಡೆಯಲು ಭಾರತ ಸಿದ್ಧತೆ ನಡೆಸುತ್ತಿದೆ. ಈ ಒಪ್ಪಂದವು ಭಾರತೀಯ ವಾಯು ಸೇನೆಯ ಸಾಮರ್ಥ್ಯವನ್ನು ಹೆಚ್ಚಿಸಲಿದೆ.

ಫ್ರಾನ್ಸ್‌ನೊಂದಿಗೆ ಬೃಹತ್ ರಕ್ಷಣಾ ಒಪ್ಪಂದಕ್ಕೆ ಭಾರತ ಸಿದ್ಧತೆ

ಸಂಗ್ರಹ ಚಿತ್ರ -

ನವದೆಹಲಿ: ಫ್ರಾನ್ಸ್‌ನೊಂದಿಗೆ (france) ಭಾರತ ಈಗ ಬೃಹತ್ ಒಪ್ಪಂದಕ್ಕೆ (Rafale jets deal) ಮುಂದಾಗಿದೆ. ಈ ಒಪ್ಪಂದದ ಪ್ರಕಾರ ಒಟ್ಟು 114 ರಫೇಲ್ ಜೆಟ್‌ಗಳನ್ನು (rafale jets) ಪಡೆಯಲು ಭಾರತ ಸಿದ್ಧತೆ ನಡೆಸುತ್ತಿದೆ. 3.25 ಲಕ್ಷ ಕೋಟಿ ರೂಪಾಯಿಗಳ ಈ ಬೃಹತ್ ಒಪ್ಪಂದವು ಭಾರತೀಯ ವಾಯು ಸೇನೆಯ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ಒಪ್ಪಂದವನ್ನು ಅಂತಿಮಗೊಳಿಸುವ ಸಲುವಾಗಿ ಭಾರತೀಯ ವಾಯುಪಡೆಯ (Indian Air Force) ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ (Air Chief Marshal Amar Preet Singh) ಅವರು ಜೂನ್ 1 ರಂದು ಫ್ರಾನ್ಸ್‌ಗೆ ತೆರಳಿದ್ದಾರೆ.

114 ರಫೇಲ್ ಯುದ್ಧ ವಿಮಾನಗಳನ್ನು ಖರೀದಿ ಮಾಡಲು ಭಾರತವು ಫ್ರಾನ್ಸ್‌ಗೆ ವಿನಂತಿ ಪತ್ರವನ್ನು ಕಳುಹಿಸಿದೆ. ಪ್ರಸ್ತಾವಿತ ಈ ಒಪ್ಪಂದವು ಭಾರತೀಯ ವಾಯುಸೇನೆಯ ಸಾಮರ್ಥ್ಯ ಮತ್ತು ದೇಶೀಯ ಏರೋಸ್ಪೇಸ್ ಉತ್ಪಾದನೆಯನ್ನು ಹೆಚ್ಚಿಸಲಿದೆ. ಈ ಒಪ್ಪಂದಡಿಯಲ್ಲಿ ಭಾರತದ ವಾಯುಸೇನೆ ಮತ್ತು ನೌಕಾ ಸೇನೆಯ ಬಲ ಹೆಚ್ಚಾಗಲಿದೆ. ಇದರೊಂದಿಗೆ ಭಾರತ ಮತ್ತು ಫ್ರಾನ್ಸ್ ನಡುವಿನ ರಕ್ಷಣಾ ಸಂಬಂಧಗಳು ಮತ್ತಷ್ಟು ಸದೃಢವಾಗಲಿದೆ.

ಬ್ಲೂಟೂತ್‌ ಹೆಸರಿನಿಂದ ಹರಡಿದ ‘ಬಾಂಬ್’ ಭೀತಿ: ಅಮೆರಿಕಕ್ಕೆ ವಾಪಸ್ ಬಂದ ಸ್ಪೇನ್‌ಗೆ ಹೊರಟ ವಿಮಾನ

ಸುಮಾರು 3.25 ಲಕ್ಷ ಕೋಟಿ ರೂಪಾಯಿಗಳ ಮೌಲ್ಯದ ಈ ಒಪ್ಪಂದದಲ್ಲಿ ಒಟ್ಟು 114 ಡಸ್ಸಾಲ್ಟ್ ರಫೇಲ್ ಬಹು-ಪಾತ್ರ ಯುದ್ಧ ವಿಮಾನಗಳನ್ನು ಖರೀದಿಸಲಾಗುತ್ತದೆ. ಇದಕ್ಕಾಗಿ ಫ್ರಾನ್ಸ್‌ಗೆ ವಿನಂತಿ ಪತ್ರವನ್ನು ಅಂತಿಮಗೊಳಿಸಲಾಗಿದೆ. ಈ ಮೂಲಕ ಭಾರತವು ತನ್ನ ವಾಯು ಯುದ್ಧ ಸಾಮರ್ಥ್ಯಗಳನ್ನು ಬಲಪಡಿಸುವಲ್ಲಿ ಒಂದು ಮಹತ್ವದ ಹೆಜ್ಜೆಯನ್ನಿರಿಸಿದೆ.

ಈ ಒಪ್ಪಂದದಡಿಯಲ್ಲಿ ಮಾತುಕತೆಗಾಗಿ ಮುಂಬರುವ ವಾರಗಳಲ್ಲಿ ನಿಯೋಗವೊಂದು ಫ್ರಾನ್ಸ್‌ಗೆ ತೆರಳುವ ಸಾಧ್ಯತೆ ಇದೆ. ಇದಕ್ಕೂ ಮೊದಲೇ ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ಅವರು ಜೂನ್ 1ರಂದು ಫ್ರಾನ್ಸ್‌ಗೆ ತೆರಳಿದ್ದಾರೆ. ಮೂರು ದಿನಗಳ ಈ ಪ್ರವಾಸದಲ್ಲಿ ಅವರು ಒಪ್ಪಂದದ ಕುರಿತು ಮಾತುಕತೆ ಆರಂಭಿಸಲಿದ್ದಾರೆ. ಹೆಚ್ಚುವರಿ ರಫೇಲ್ ಯುದ್ಧವಿಮಾನಗಳ ಖರೀದಿಯೊಂದಿಗೆ ನವದೆಹಲಿ ತನ್ನ ಅತಿದೊಡ್ಡ ರಕ್ಷಣಾ ಖರೀದಿ ನಡೆಸುತ್ತಿರುವುದನ್ನು ಸಂಪೂರ್ಣ ವಿಶ್ವವೇ ಗಮನಿಸುತ್ತಿದೆ.

ಈ ಒಪ್ಪಂದದ ಪ್ರಕಾರ 114 ರಫೇಲ್ ಜೆಟ್‌ಗಳಲ್ಲಿ ಸುಮಾರು 90 ಅನ್ನು ಡಸಾಲ್ಟ್ ಏವಿಯೇಷನ್ ​​ಮತ್ತು ಸರ್ಕಾರದ ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ಭಾರತೀಯ ಕಂಪನಿಗಳ ಪಾಲುದಾರಿಕೆ ಮೂಲಕ ಭಾರತದಲ್ಲೇ ತಯಾರಿಸಲಾಗುವುದು. ಉಳಿದ ವಿಮಾನಗಳನ್ನು ಫ್ರಾನ್ಸ್‌ನಲ್ಲಿ ಸಿದ್ದಗೊಳಿಸಿ ಪೂರೈಸಲಾಗುತ್ತದೆ.

ಲವ್‌ ಪ್ರಪೋಸ್‌ ನಿರಾಕರಿಸಿದ್ದಕ್ಕೆ ಸೇಡು; ಸರ್ಕಾರಿ ಕಚೇರಿಯ ಮಹಿಳಾ ಶೌಚಾಲಯದಲ್ಲಿ ರಹಸ್ಯ ಕ್ಯಾಮರಾ ಅಳವಡಿಸಿದ ಗುಮಾಸ್ತ

ಯೋಜನೆಯಲ್ಲಿ ಸುಮಾರು ಶೇಕಡಾ 50ರಷ್ಟು ದೇಶಿಯ ವಸ್ತುಗಳನ್ನು ಬಳಸಲಾಗುತ್ತದೆ. ಇದು ಭಾರತದ ಏರೋಸ್ಪೇಸ್ ಉತ್ಪಾದನಾ ವ್ಯವಸ್ಥೆಗೆ ಪ್ರಮುಖ ಉತ್ತೇಜನವನ್ನು ನೀಡಲಿದೆ. ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆಗಾಗಿ ಈ ಮೂಲಕ ಸರ್ಕಾರ ಬೆಂಬಲ ನೀಡಲಿದೆ.

ರಫೇಲ್ ಯುದ್ಧ ವಿಮಾನವು ಅತ್ಯಂತ ಪ್ರಮುಖ ಬಹು ಪಾತ್ರ ಯುದ್ಧ ವಿಮಾನಗಳಲ್ಲಿ ಒಂದಾಗಿದೆ. ಇದು ವಾಯು, ನೆಲದ ದಾಳಿ, ವಿಚಕ್ಷಣ ಕಾರ್ಯಾಚರಣೆಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.