ಗಡಿಯಲ್ಲಿ ಶಾಂತಿ ಸ್ಥಾಪನೆಗೆ ನಿಯಂತ್ರಣ ರೇಖೆ ಸ್ಪಷ್ಟಗೊಳಿಸಲು ಚೀನಾದೊಂದಿಗೆ ಭಾರತ ಮಾತುಕತೆ
ನಿರಂತರವಾಗಿ ಗಡಿ ವಿವಾದಕ್ಕೆ ಕಾರಣವಾಗಿರುವ ಲಡಾಖ್‌ನಲ್ಲಿನ ಗಡಿ ನಿಯಂತ್ರಣ ರೇಖೆಯ ಕುರಿತು ಭಾರತ ಮತ್ತು ಚೀನಾ ನಡುವೆ ಮಾತುಕತೆ ನಡೆದಿದೆ. ಬೀಜಿಂಗ್‌ನಲ್ಲಿ ಬುಧವಾರ ನಡೆದ ಸಮಾಲೋಚನೆ ಮತ್ತು ಸಮನ್ವಯ ಕಾರ್ಯ ಕಾರ್ಯವಿಧಾನದಲ್ಲಿ ಪೂರ್ವ ಲಡಾಖ್‌ನ ಗಡಿ ಭಾಗದಲ್ಲಿ ಶಾಂತಿ ಕಾಯ್ದುಕೊಳ್ಳಲು ನವದೆಹಲಿಯೂ ಬೀಜಿಂಗ್ ನೊಂದಿಗೆ ಮಾತುಕತೆ ನಡೆಸಿದೆ.
ಸಂಗ್ರಹ ಚಿತ್ರ -
ನವದೆಹಲಿ: ಭಾರತ ಮತ್ತು ಚೀನಾ (India and china) ನಡುವೆ ಲಡಾಖ್‌ನಲ್ಲಿನ (Ladakh) ವಾಸ್ತವ ಗಡಿ ನಿಯಂತ್ರಣ ರೇಖೆಯ (Line of Control) ಕುರಿತು ನವದೆಹಲಿಯು ಬುಧವಾರ ಬೀಜಿಂಗ್ ನೊಂದಿಗೆ ಮಾತುಕತೆ ನಡೆಸಿದೆ. ಹಲವಾರು ವರ್ಷಗಳಿಂದ ನಿರಂತರವಾಗಿ ಗಡಿ ವಿವಾದಕ್ಕೆ ಕಾರಣವಾಗಿರುವ ಲಡಾಖ್‌ನಲ್ಲಿನ ಗಡಿ ನಿಯಂತ್ರಣ ರೇಖೆಯ ಕುರಿತು ಭಾರತ ಮತ್ತು ಚೀನಾ ನಡುವೆ ಬುಧವಾರ ಬೀಜಿಂಗ್‌ನಲ್ಲಿ ಸಮಾಲೋಚನಾ ಸಭೆ ನಡೆಯಿತು. ಈ ಸಂದರ್ಭದಲ್ಲಿ ಪೂರ್ವ ಲಡಾಖ್‌ನ ಗಡಿ ಭಾಗದಲ್ಲಿ ಶಾಂತಿ ಕಾಯ್ದುಕೊಳ್ಳಲು ಇರುವ ಅವಕಾಶಗಳ ಕುರಿತು ಮುಕ್ತ ಮಾತುಕತೆ ನಡೆಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ (Ministry of External Affairs) ತಿಳಿಸಿದೆ.
ಬೀಜಿಂಗ್‌ನಲ್ಲಿ ಬುಧವಾರ ನಡೆದ ಸಮಾಲೋಚನೆ ಮತ್ತು ಸಮನ್ವಯ ಕಾರ್ಯಕಾರ್ಯವಿಧಾನದ (WMCC) ಕುರಿತ ಸಭೆಯಲ್ಲಿ ಎರಡೂ ರಾಷ್ಟ್ರಗಳು ಗಡಿ ಪರಿಸ್ಥಿತಿಯ ವಿವಿಧ ಅಂಶಗಳ ಕುರಿತು ಚರ್ಚೆ ನಡೆಸಿದೆ. ಲಡಾಖ್‌ನಲ್ಲಿನ ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿನ ಪರಿಸ್ಥಿತಿಯ ಕುರಿತು ಭಾರತ ಮತ್ತು ಚೀನಾ ರಚನಾತ್ಮಕ ಮತ್ತು ಭವಿಷ್ಯದ ದೃಷ್ಟಿಕೋನದ ಕುರಿತು ಮಾತುಕತೆಗಳನ್ನು ನಡೆಸಿವೆ.
ಅಮೆರಿಕ ವಾಯುನೆಲೆ ಮೇಲೆ ಇರಾನ್ ಭೀಕರ ಪ್ರತಿಪ್ರಹಾರ: ಮತ್ತಷ್ಟು ಕಠಿಣ ಕ್ರಮದ ಎಚ್ಚರಿಕೆ
ಎರಡು ರಾಷ್ಟ್ರಗಳ ನಡುವಿನ ಸಂಬಂಧದಲ್ಲಿ ಪ್ರಗತಿಗೆ ಗಡಿಯಲ್ಲಿ ಶಾಂತಿ ಕಾಪಾಡಿಕೊಳ್ಳುವುದು ಮುಖ್ಯ ಎಂಬುದನ್ನು ಎರಡು ರಾಷ್ಟ್ರಗಳು ಅರಿತುಕೊಂಡಿವೆ ಎಂದು ವಿದೇಶಾಂಗ ಸಚಿವಾಲಯವು ಹೇಳಿದೆ.
ಗಾಲ್ವಾನ್ ಕಣಿವೆಯಲ್ಲಿ 2020ರಲ್ಲಿ ನಡೆದ ಘರ್ಷಣೆಯ ಪರಿಣಾಮ ನಾಲ್ಕು ವರ್ಷಗಳಿಗೂ ಹೆಚ್ಚು ಕಾಲ ಮಿಲಿಟರಿ ಸಂಘರ್ಷ ಉಂಟಾಗಿತ್ತು. ಇದರ ಬಳಿಕ ಕಳೆದ ವರ್ಷದಿಂದ ಎರಡು ರಾಷ್ಟ್ರಗಳ ನಡುವಿನ ಸಂಬಂಧ ಸುಧಾರಣೆಗೆ ಪ್ರಯತ್ನಗಳು ನಡೆಯುತ್ತಿವೆ. ಇದರ ಭಾಗವಾಗ ಬುಧವಾರ ನಡೆದ ಸಭೆಯಲ್ಲಿ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡಿಕೊಳ್ಳುವಲ್ಲಿ ಸಹಕಾರದ ಭರವಸೆ ಸಿಕ್ಕಿದೆ. ಇದು ದ್ವಿಪಕ್ಷೀಯ ಸಂಬಂಧಗಳ ಸುಧಾರಣೆಯಲ್ಲಿ ಒಂದು ಮಹತ್ವದ ಪ್ರಗತಿ. ಮುಂದೆ ಚೀನಾದಲ್ಲಿ ನಡೆಯಲಿರುವ ವಿಶೇಷ ಪ್ರತಿನಿಧಿಗಳ ಸಭೆಗೆ ಸಿದ್ಧತೆ ನಡೆಸಲು ಎರಡೂ ಕಡೆಯವರು ಒಟ್ಟಾಗಿ ಕೆಲಸ ಮಾಡಲು ಈ ಸಭೆಯಲ್ಲಿ ಒಪ್ಪಿಕೊಂಡರು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ಕಳೆದ ವರ್ಷ ನವದೆಹಲಿಯಲ್ಲಿ ವಿಶೇಷ ಪ್ರತಿನಿಧಿಗಳ ಸಂವಾದದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಗಡಿ ನಿಯಂತ್ರಣ ರೇಖೆ, ಗಡಿ ನಿರ್ವಹಣೆ ಕಾರ್ಯವಿಧಾನ ನಿರ್ಮಾಣ ಮತ್ತು ಗಡಿಯಾಚೆಗಿನ ಸಹಕಾರಕ್ಕೆ ಸಂಬಂಧಿಸಿ ಮಾತುಕತೆ ನಡೆಸಲಾಗಿತ್ತು.
ಬೀಜಿಂಗ್ ನಲ್ಲಿ ಬುಧವಾರ ನಡೆಸಿದ ಮಾತುಕತೆಯಲ್ಲಿ ಭಾರತದ ನಿಯೋಗದ ನೇತೃತ್ವವನ್ನು ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿ (ಪೂರ್ವ ಏಷ್ಯಾ) ಸುಜಿತ್ ಘೋಷ್ ವಹಿಸಿದ್ದು, ಚೀನಾದ ನಿಯೋಗದ ನೇತೃತ್ವವನ್ನು ಚೀನಾದ ವಿದೇಶಾಂಗ ಸಚಿವಾಲಯದ ಗಡಿ ಮತ್ತು ಸಾಗರ ವ್ಯವಹಾರಗಳ ಇಲಾಖೆಯ ಮಹಾನಿರ್ದೇಶಕ ಹೌ ಯಾಂಕಿ ವಹಿಸಿದ್ದರು.
ಜರ್ಮನಿ-ಜಪಾನ್ ಸಾಲಿಗೆ ಭಾರತ: ಹೈಡ್ರೋಜನ್ ರೈಲಿಗೆ ಅನುಮೋದನೆ
ಈ ಸಭೆಯಲ್ಲಿ ಗಡಿ ನಿಯಂತ್ರಣ ರೇಖೆ ಮಾತ್ರವಲ್ಲದೆ ಗಡಿಯಾಚೆಗಿನ ನದಿಗಳ ಕುರಿತು ಮುಂದೆ ತಜ್ಞರ ಮಟ್ಟದ ಸಭೆ ನಡೆಸುವ ಕುರಿತು ಭಾರತ ವಿಶೇಷವಾಗಿ ಚೀನಾದ ಗಮನ ಸೆಳೆದಿದೆ. ಇದರೊಂದಿಗೆ ರಾಜತಾಂತ್ರಿಕ ಮತ್ತು ಮಿಲಿಟರಿ ಮಟ್ಟದಲ್ಲಿ ನಿಯಮಿತ ವಿನಿಮಯ ಮತ್ತು ಸಂಪರ್ಕಗಳನ್ನು ಕಾಪಾಡಿಕೊಳ್ಳಲು ಎರಡೂ ಕಡೆಯವರು ಒಪ್ಪಿಕೊಂಡಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಸಭೆಯ ಬಳಿಕ ಘೋಷ್ ಅವರು ಚೀನಾದ ವಿದೇಶಾಂಗ ಸಚಿವಾಲಯದ ಏಷ್ಯನ್ ವ್ಯವಹಾರಗಳ ಇಲಾಖೆಯ ನಿರ್ದೇಶಕ ಲಿಯು ಜಿನ್ಸಾಂಗ್, ಜಂಟಿ ಕಾರ್ಯದರ್ಶಿ ಚೀನಾದ ಸಹಾಯಕ ವಿದೇಶಾಂಗ ಸಚಿವ ಹಾಂಗ್ ಲೀ ಅವರನ್ನು ಭೇಟಿ ಮಾಡಿದರು.