Sam Pitroda: ನಮ್ಮ ಸೈನಿಕರಿಗೆ ಕಾಂಗ್ರೆಸ್ ಅವಮಾನಿಸಿದೆ; ಸ್ಯಾಮ್ ಪಿತ್ರೋಡಾ ಪಾಕಿಸ್ತಾನ ಪರ ಹೇಳಿಕೆಗೆ ಬಿಜೆಪಿ ಕಿಡಿ
ರಾಹುಲ್ ಗಾಂಧಿ ಆಪ್ತ ಸ್ಯಾಮ್ ಪಿತ್ರೋಡಾ ಪಾಕಿಸ್ತಾನಕ್ಕೆ ತೆರಳಿದರೆ ಮನೆಯಂತೆ ಭಾಸವಾಗುತ್ತದೆ ಎಂಬ ಹೇಳಿಕೆಯು ಭಾರೀ ವಿವಾದವನ್ನು ಹುಟ್ಟುಹಾಕಿದೆ. ಈ ಹೇಳಿಕೆಗೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಶುಕ್ರವಾರ ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬದ ಮೇಲೆ ತೀವ್ರ ದಾಳಿ ನಡೆಸಿದ್ದು, ಇದು "ಸಶಸ್ತ್ರ ಪಡೆಗಳಿಗೆ ಮಾಡಿದ ಅವಮಾನ" ಎಂದು ಕರೆದಿದೆ.

-

ನವದೆಹಲಿ: ರಾಹುಲ್ ಗಾಂಧಿ ಆಪ್ತ ಸ್ಯಾಮ್ ಪಿತ್ರೋಡಾ (Sam Pitroda) ಪಾಕಿಸ್ತಾನಕ್ಕೆ ತೆರಳಿದರೆ ಮನೆಯಂತೆ ಭಾಸವಾಗುತ್ತದೆ ಎಂಬ ಹೇಳಿಕೆಯು ಭಾರೀ ವಿವಾದವನ್ನು ಹುಟ್ಟುಹಾಕಿದೆ. ಈ ಹೇಳಿಕೆಗೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಶುಕ್ರವಾರ ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬದ ಮೇಲೆ ತೀವ್ರ ದಾಳಿ ನಡೆಸಿದ್ದು, ಇದು "ಸಶಸ್ತ್ರ ಪಡೆಗಳಿಗೆ ಮಾಡಿದ ಅವಮಾನ" ಎಂದು ಕರೆದಿದೆ. ಬಿಜೆಪಿ ನಾಯಕ ಪ್ರದೀಪ್ ಭಂಡಾರಿ ಈ ಹೇಳಿಕೆಗಳನ್ನು "ರಾಷ್ಟ್ರ ವಿರೋಧಿ" ಎಂದು ಕರೆದರು ಮತ್ತು ಸೋನಿಯಾ ಮತ್ತು ರಾಹುಲ್ ಗಾಂಧಿಯವರ ಆದೇಶದ ಮೇರೆಗೆ ಪಿತ್ರೋಡಾ ಈ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಭಯೋತ್ಪಾದನಾ ರಾಷ್ಟ್ರ ಪಾಕಿಸ್ತಾನ ಅವರಿಗೆ ನೆಲೆ ಇದ್ದಂತೆ ಎಂದು ದೇಶಭಕ್ತನೊಬ್ಬ ಎಂದಾದರೂ ಹೇಳಲು ಸಾಧ್ಯವೇ? ಆದರೆ, ಗಾಂಧಿ ಕುಟುಂಬದ ಕಾರ್ಯತಂತ್ರವನ್ನು ನಿರ್ಧರಿಸುವ, ಗಾಂಧಿ ಕುಟುಂಬದೊಂದಿಗೆ 30 ವರ್ಷಗಳ ದೀರ್ಘ ಸಂಬಂಧ ಹೊಂದಿರುವ ರಾಹುಲ್ ಗಾಂಧಿಯವರ ಆಪ್ತ ಸಹಾಯಕ ಪಾಕಿಸ್ತಾನದಲ್ಲಿ ತನಗೆ ಮನೆಯಂತೆ ಭಾಸವಾಗುತ್ತಿದೆ ಎಂದು ಹೇಳುತ್ತಾರೆ. ಕಾಂಗ್ರೆಸ್ ನಾಯಕತ್ವವು ಸ್ಯಾಮ್ ಪಿತ್ರೋಡಾ ಅವರನ್ನು ಹೀಗೆ ಹೇಳುವಂತೆ ಮಾಡುತ್ತಿದೆ," ಎಂದು ಭಂಡಾರಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಇದು ನಮ್ಮ ಸೈನಿಕರಿಗೆ ಮತ್ತು 140 ಕೋಟಿ ಭಾರತೀಯರಿಗೆ ಮಾಡಿದ ಅವಮಾನ. ಈ ಹೇಳಿಕೆ ದೇಶ ವಿರೋಧಿಯಲ್ಲದಿದ್ದರೆ, ಮತ್ತೇನು? ಐಎಸ್‌ಐ ಏಜೆಂಟ್ ಶೈದ್ ಅಫ್ರಿದಿ ಕೆಲವು ದಿನಗಳ ಹಿಂದೆ ರಾಹುಲ್ ಗಾಂಧಿಯನ್ನು ತಮ್ಮ ಆದರ್ಶ ವ್ಯಕ್ತಿ ಎಂದು ಕರೆದರು, ಮತ್ತು ಈಗ ರಾಹುಲ್ ಅವರ ಆಪ್ತ ಸಹಾಯಕ ಪಾಕಿಸ್ತಾನ ಅವರಿಗೆ ಮನೆಯಿದ್ದಂತೆ ಹೇಳುತ್ತಾರೆ. ಕೆಲವು ಸಮಯದ ಹಿಂದೆ, ರಾಹುಲ್ ಗಾಂಧಿ ಅವರು ಭಾರತ ರಾಜ್ಯದ ವಿರುದ್ಧ ಹೋರಾಡಲು ಬಯಸುತ್ತಾರೆ ಎಂದು ಹೇಳಿದ್ದರು... ಅವರು ಪಾಕಿಸ್ತಾನವನ್ನು ತಮ್ಮ ಮನೆ ಎಂದು ಕರೆಯುತ್ತಾರೆ ಮತ್ತು ಭಾರತದ ಸಾರ್ವಭೌಮತ್ವವನ್ನು ಅವಮಾನಿಸುತ್ತಾರೆ. ಇಂತಹ ಪಕ್ಷ ನಮಗೆ ಬೇಕೇ ಎಂದು ಜನರೇ ತೀರ್ಮಾನಿಸುತ್ತಾರೆ ಎಂದು ಅವರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Sam Pitroda: ಪಾಕಿಸ್ತಾನಕ್ಕೆ ಹೋದರೆ ಮನೆಯಂತೆ ಭಾಸವಾಯಿತು; ರಾಹುಲ್ ಗಾಂಧಿ ಆಪ್ತ ಸ್ಯಾಮ್ ಪಿತ್ರೋಡಾನಿಂದ ಮತ್ತೊಂದು ವಿವಾದ
ಸ್ಯಾಮ್ ಪಿತ್ರೋಡಾ ಹೇಳಿದ್ದೇನು?
ಸ್ಯಾಮ್ ಪಿತ್ರೋಡಾ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳದಂತಹ ದೇಶಗಳಿಗೆ ಭೇಟಿ ನೀಡಿದ್ದೆ. ಈ ವೇಳೆ ನನಗೆ ನನ್ನ ತಾಯ್ನಾಡಿನಲ್ಲೇ ಇದ್ದೇನೆಂಬ ಭಾವನೆ ಮೂಡಿಸಿತ್ತು ಎಂದು ಹೇಳಿದ್ದಾರೆ. ನಮ್ಮ ವಿದೇಶಾಂಗ ನೀತಿಯು ಮೊದಲು ನಮ್ಮ ನೆರೆಹೊರೆಯ ಮೇಲೆ ಕೇಂದ್ರೀಕರಿಸಬೇಕು. ನಮ್ಮ ನೆರೆಹೊರೆಯವರೊಂದಿಗೆ ನಾವು ನಿಜವಾಗಿಯೂ ಸಂಬಂಧವನ್ನು ಗಣನೀಯವಾಗಿ ಸುಧಾರಿಸಬಹುದೇ? ಎಂಬುದರ ಕುರಿತು ಗಮನ ಹರಿಸಬೇಕು. ಅವರೆಲ್ಲರೂ ಕಷ್ಟದ ಸಮಯವನ್ನು ಎದುರಿಸುತ್ತಿದ್ದಾರೆ. ಅವರೊಂದಿಗೆ ಕೈಜೋಡಿಸಬೇಕು ಎಂದು ಹೇಳಿದ್ದಾರೆ.