Bahubali Rocket Launch: ಅತೀ ಹೆಚ್ಚು ಭಾರದ ಉಪಗ್ರಹ ಉಡಾವಣೆಗೆ ಇಸ್ರೋ ಕ್ಷಣಗಣನೆ
ISRO Rocket Launch: ಚಂದ್ರಯಾನ ಮಿಷನ್-3 ಬಳಿಕ ಇದೀಗ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (Indian Space Research Organisation) ಮತ್ತೊಂದು ದಾಖಲೆ ಬರೆಯಲು ಸಜ್ಜಾಗಿದೆ. ಅತ್ಯಂತ ಭಾರವಾದ ಉಪಗ್ರಹ ಹೊತ್ತುಕೊಂಡು 'ಬಾಹುಬಲಿ' ರಾಕೆಟ್ ಲಾಂಚ್ ವೆಹಿಕಲ್ ಮಾರ್ಕ್-3 (LVM-3) ಭಾನುವಾರ ಸಂಜೆ 5.26ಕ್ಕೆ ನಭೋ ಮಂಡಲಕ್ಕೆ ಜಿಗಿಯಲಿದೆ. ಆಂಧ್ರ ಪ್ರದೇಶದ ಶ್ರೀ ಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಲಿರುವ ರಾಕೆಟ್ ಅತ್ಯಂತ ಭಾರವಾದ ಸಂವಹನ ಉಪಗ್ರಹ ಸಿಎಂಎಸ್-03 ಅನ್ನು ಹೊತ್ತೊಯ್ಯಲಿದೆ. ಈ ಉಪಗ್ರಹವು ದೇಶ ರಕ್ಷಣೆಗಾಗಿ ಮತ್ತು ಭಾರತೀಯ ನೌಕಾಪಡೆಯು ಸಂವಹನಕ್ಕಾಗಿ ಸಿದ್ಧಗೊಂಡಿರುವುದಾಗಿದೆ.
-
ವಿದ್ಯಾ ಇರ್ವತ್ತೂರು
Nov 2, 2025 11:17 AM
ಬೆಂಗಳೂರು: ಅತ್ಯಂತ ಭಾರವಾದ ಸಂವಹನ ಉಪಗ್ರಹ ಹೊತ್ತುಕೊಂಡು ನಭೋ ಮಂಡಲಕ್ಕೆ ಜಿಗಿಯಲು 'ಬಾಹುಬಲಿ' (Bahubali Rocket Launch) ರಾಕೆಟ್ ಲಾಂಚ್ ವೆಹಿಕಲ್ ಮಾರ್ಕ್- 3 (LVM-3) ಸಜ್ಜಾಗಿದೆ. ಭಾನುವಾರ ಸಂಜೆ 5.26ಕ್ಕೆ ಇದನ್ನು ಉಡಾವಣೆ ಮಾಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (Indian Space Research Organisation) ಕ್ಷಣಗಣನೆ ಆರಂಭಿಸಿದೆ. ಆಂಧ್ರಪ್ರದೇಶದ ಶ್ರೀ ಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಎಲ್ ವಿಎಂ3-ಎಂ5 ರಾಕೆಟ್ ಅತ್ಯಂತ ಭಾರವಾದ ಸಂವಹನ ಉಪಗ್ರಹ ಸಿಎಂಎಸ್-03 ಅನ್ನು ಹೊತ್ತುಕೊಂಡು ನಿಂತಿದ್ದು, ಇದರ ಉಡಾವಣೆ ಮಾಡಲು ಇಸ್ರೋ (ISRO) 24 ಗಂಟೆಗಳ ಕ್ಷಣಗಣನೆಯನ್ನು ಪ್ರಾರಂಭಿಸಿದೆ.
ಸುಮಾರು 4,410 ಕೆ.ಜಿ. ತೂಕದ ಉಪಗ್ರಹವನ್ನು ಜಿಯೋಸಿಂಕ್ರೋನಸ್ ಟ್ರಾನ್ಸ್‌ಫರ್ ಆರ್ಬಿಟ್‌ನಲ್ಲಿ ಇರಿಸಲಾಗಿದ್ದು, 4,000 ಕೆ.ಜಿ.ಗಿಂತ ಹೆಚ್ಚು ತೂಕದ ಸಂವಹನ ಉಪಗ್ರಹ ಸಿಎಂಎಸ್-03 ಉಡಾವಣೆಗೆ 24 ಗಂಟೆಗಳ ಕ್ಷಣಗಣನೆಯನ್ನು ಶನಿವಾರ ಪ್ರಾರಂಭಿಸಲಾಗಿದೆ ಎಂದು ಇಸ್ರೋ ಹೇಳಿದೆ.
ಇದನ್ನೂ ಓದಿ: Bahubali Rocket Launch: ಅತ್ಯಂತ ಭಾರದ ಬಾಹುಬಲಿ ರಾಕೆಟ್ ಉಡಾವಣೆಗೆ ಇಸ್ರೋ ಸಜ್ಜು
ಭಾರತದ ನೆಲದಿಂದ ಉಡಾವಣೆಯಾಗುವ ಅತ್ಯಂತ ಭಾರದ ಉಪಗ್ರಹವೆಂದು ಸುಮಾರು 4,410 ಕೆಜಿ ತೂಕದ ಜಿಯೋಸಿಂಕ್ರೋನಸ್ ಟ್ರಾನ್ಸ್‌ಫರ್ ಆರ್ಬಿಟ್ (GTO) ಕರೆಯಲಾಗುತ್ತದೆ. ಅದರ ಹೆವಿಲಿಫ್ಟ್ ಸಾಮರ್ಥ್ಯಕ್ಕಾಗಿ ಬಾಹ್ಯಾಕಾಶ ನೌಕೆಯು 'ಬಾಹುಬಲಿ' ಎಂದು ಕರೆಯಲ್ಪಡುವ ಎಲ್ ವಿಎಂ 3-ಎಂ5 ರಾಕೆಟ್‌ನಲ್ಲಿ ಪ್ರಯಾಣ ನಡೆಸಲಿದೆ ಎಂದು ಇಸ್ರೋ ತಿಳಿಸಿದೆ.
ಈಗಾಗಲೇ ಉಡಾವಣಾ ವಾಹನವನ್ನು ಸಂಪೂರ್ಣವಾಗಿ ಜೋಡಿಸಲಾಗಿದ್ದು, ಬಾಹ್ಯಾಕಾಶ ನೌಕೆಯೊಂದಿಗೆ ಸಂಯೋಜಿಸಲಾಗಿದೆ. ಪೂರ್ವ ಉಡಾವಣಾ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಎರಡನೇ ಉಡಾವಣಾ ಪ್ಯಾಡ್ ಕೂಡ ಸಿದ್ಧಗೊಂಡಿರುವುದಾಗಿ ಬೆಂಗಳೂರು ಪ್ರಧಾನ ಕಚೇರಿಯ ಬಾಹ್ಯಾಕಾಶ ಸಂಸ್ಥೆ ಶನಿವಾರ ತಿಳಿಸಿದೆ.
ಈ ಕುರಿತು ಸಾಮಾಜಿಕ ಮಾಧ್ಯಮ ಖಾತೆಯಾದ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಇಸ್ರೋ, ಕೌಂಟ್‌ಡೌನ್ ಆರಂಭವಾಗಿದೆ !! ಅಂತಿಮ ಸಿದ್ಧತೆಗಳು ಪೂರ್ಣಗೊಂಡಿವೆ ಮತ್ತು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಎಲ್ ವಿಎಂ3-ಎಂ5 ಮಿಷನ್ ಗಾಗಿ ಕೌಂಟ್‌ಡೌನ್ ಅಧಿಕೃತವಾಗಿ ಪ್ರಾರಂಭವಾಗಿದೆ ಎಂದು ತಿಳಿಸಿದೆ.
ಭಾನುವಾರ ಸಂಜೆ 5.26ಕ್ಕೆ ಉಡಾವಣೆಗೆ ಸಿದ್ದವಾಗಿರುವ 43.5 ಮೀಟರ್ ಎತ್ತರದ ರಾಕೆಟ್ ನ ಎಲ್ಲ ವ್ಯವಸ್ಥೆಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಲಾಂಚ್ ವೆಹಿಕಲ್ ಮಾರ್ಕ್- 3 (LVM3) ಇಸ್ರೋದ ಹೊಸ ಹೆವಿ ಲಿಫ್ಟ್ ಉಡಾವಣಾ ವಾಹನವಾಗಿದೆ. ಇದನ್ನು ಜಿಟಿಒನಲ್ಲಿ 4,000 ಕೆ.ಜಿ. ಬಾಹ್ಯಾಕಾಶ ನೌಕೆಯನ್ನು ಇರಿಸಲು ಬಳಸಲಾಗುತ್ತದೆ. ಇದರಲ್ಲಿ ಎರಡು ಘನ ಮೋಟಾರ್ ಸ್ಟ್ರಾಪ್ ಆನ್‌ಗಳು (S200), ದ್ರವ ಪ್ರೊಪೆಲ್ಲಂಟ್ ಕೋರ್ ಹಂತ (L110) ಮತ್ತು ಕ್ರಯೋಜೆನಿಕ್ ಹಂತ (C25) ಹೊಂದಿರುವ ಮೂರು ಹಂತದ ಉಡಾವಣಾ ವಾಹನವು ಸಂವಹನ ಉಪಗ್ರಹಗಳನ್ನು ಹೊತ್ತು ಸಾಗಲಿದೆ. ಎಲ್ ವಿಎಂ 3 ಅನ್ನು ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (GSLV) MkIIIಎಂದು ಕರೆಯಲಾಗುತ್ತದೆ ಎಂದು ಇಸ್ರೋ ಹೇಳಿದೆ.
Countdown Commences!
— ISRO (@isro) November 1, 2025
Final preparations complete and the countdown for #LVM3M5 has officially begun at SDSC-SHAR.
All systems are GO as we move closer to liftoff! ✨
For more Information Visithttps://t.co/yfpU5OTEc5 pic.twitter.com/6pPYS5rl9d
ಎಲ್ ವಿಎಂ3-ಎಂ5 ಇಸ್ರೋದ ಐದನೇ ಉಡಾವಣೆಯಾಗಿದೆ. ಎಲ್ ವಿಎಂ3 ವಾಹನವನ್ನು ಸಿ25 ಕ್ರಯೋಜೆನಿಕ್ ಹಂತ ಸೇರಿದಂತೆ ಸಂಪೂರ್ಣವಾಗಿ ಸ್ಥಳೀಯ ತಂತ್ರಜ್ಞಾನಗಳೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಈ ಹಿಂದೆ 2014ರ ಡಿಸೆಂಬರ್ ನಲ್ಲಿ ಉಡಾವಣೆಯಾದ ಮೊದಲ ಎಲ್ವಿಎಂ -3 ಕ್ರೂ ಮಾಡ್ಯೂಲ್ ಅಟ್ಮಾಸ್ಫಿಯರಿಕ್ ರೀ-ಎಂಟ್ರಿ ಎಕ್ಸ್‌ಪರಿಮೆಂಟ್ (CARE) ಯಶಸ್ವಿ ಉಡಾವಣೆಗಳ ದಾಖಲೆಯನ್ನು ಹೊಂದಿದೆ. ಗಗನ್ ಯಾನ್ ಕಾರ್ಯಾಚರಣೆಗಾಗಿ ಇಸ್ರೋ ಎಲ್ವಿಎಂ3 ರಾಕೆಟ್ ಅನ್ನು ಉಡಾವಣಾ ವಾಹನವಾಗಿ ನಿಯೋಜಿಸಿತ್ತು. ಇದಕ್ಕೆ HRLV ಎಂದು ಹೆಸರಿಸಲಾಗಿದೆ.
2018ರ ಡಿಸೆಂಬರ್ 5ರಂದು ಫ್ರೆಂಚ್ ಗಯಾನಾದ ಕೌರೌ ಉಡಾವಣಾ ನೆಲೆಯಿಂದ ಏರಿಯನ್-5 VA-246 ರಾಕೆಟ್ ಮೂಲಕ ಅತ್ಯಂತ ಭಾರವಾದ ಸಂವಹನ ಉಪಗ್ರಹ GSAT-11 ಅನ್ನು ಉಡಾವಣೆ ಮಾಡಿತ್ತು. ಸುಮಾರು 5,854 ಕೆಜಿ ತೂಕವಿರುವ GSAT-11 ಇಸ್ರೋ ನಿರ್ಮಿಸಿದ ಮೊದಲ ಅತ್ಯಂತ ಭಾರವಾದ ಉಪಗ್ರಹವಾಗಿದೆ.
ಭಾನುವಾರ ಉಡಾವಣೆಯಾಗುವ ಸಂವಹನ ಉಪಗ್ರಹವಾದ ಸಿಎಂಎಸ್ -03 ಭಾರತೀಯ ಭೂಪ್ರದೇಶ ಸೇರಿದಂತೆ ವಿಶಾಲ ಸಾಗರ ಪ್ರದೇಶಗಳಿಗೂ ತನ್ನ ಸೇವೆಯನ್ನು ಒದಗಿಸಲಿದೆ. ಎಲ್ವಿಎಂ3- ರಾಕೆಟ್ 8,000 ಕೆ.ಜಿ. ಕಡಿಮೆ ಭೂಮಿಯ ಕಕ್ಷೆಯ ಪೇಲೋಡ್‌ಗಳನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ರಾಕೆಟ್‌ನ ಬದಿಗಳಲ್ಲಿರುವ ಎರಡು S200 ಘನ ರಾಕೆಟ್ ಬೂಸ್ಟರ್‌ಗಳು ಉಡಾವಣೆಗೆ ಅಗತ್ಯವಾದ ಒತ್ತಡವನ್ನು ಒದಗಿಸಲಿದೆ. ಇದನ್ನು ತಿರುವನಂತಪುರದ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಮೂರನೇ ಹಂತದಲ್ಲಿ ಎರಡು ವಿಕಾಸ್ ಎಂಜಿನ್‌ಗಳಿಂದ ಚಾಲಿತವಾಗುವ L110 ಲಿಕ್ವಿಡ್ ಇದ್ದು, ಇದನ್ನು ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಕೇಂದ್ರದಲ್ಲಿ ಅಭಿವೃದ್ಧಿಪಡಿಸಲಾಗಿದೆ.