ಆಹಾರ ದೋಚಿಕೊಂಡು ಹೋದ ಭಯೋತ್ಪಾದಕರಿಗೆ ಉಧಂಪುರದಲ್ಲಿ ಶೋಧ
ಜಮ್ಮು ಮತ್ತು ಕಾಶ್ಮೀರದ ಉಧಂಪುರದಲ್ಲಿ ಮನೆಯೊಂದಕ್ಕೆ ಬಂದಿದ್ದ ಭಯೋತ್ಪಾದಕರು ಆಹಾರ ದೋಚಿಕೊಂಡು ಪರಾರಿಯಾದ ಘಟನೆ ನಡೆದಿದೆ. ಇದರ ಬಳಿಕ ಭದ್ರತಾ ಪಡೆ ಸಿಬ್ಬಂದಿ ತೀವ್ರ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ. ಚೋರ್ ಮೋಟು ಗ್ರಾಮದ ಮಂಗ್ತು ರಾಮ್ ಎಂಬವರ ಮನೆಗೆ ಇಬ್ಬರು ಭಯೋತ್ಪಾದಕರು ಭೇಟಿ ನೀಡಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದ ಬಳಿಕ ಈ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ.
(ಸಂಗ್ರಹ ಚಿತ್ರ) -
ಕಾಶ್ಮೀರ: ಇಬ್ಬರು ಭಯೋತ್ಪಾದಕರು (terrorists) ಜಮ್ಮು ಮತ್ತು ಕಾಶ್ಮೀರದ (Jammu and kashmir) ಉಧಂಪುರದಲ್ಲಿನ (udhampur) ಮನೆಯೊಂದರಿಂದ ಆಹಾರವನ್ನು ದೋಚಿಕೊಂಡು (food stolen) ಹೋದ ಘಟನೆ ನಡೆದಿದೆ. ಇದರ ಬಳಿಕ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೀವ್ರ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಉಧಂಪುರದ ಚೋರ್ ಮೋಟು ಗ್ರಾಮದ ಮಂಗ್ತು ರಾಮ್ ಎಂಬವರ ಮನೆಗೆ ಇಬ್ಬರು ಅಪರಿಚಿತರು ಬಂದು ಆಹಾರವನ್ನು ದೋಚಿಕೊಂಡು ಹೋಗಿದ್ದಾರೆ ಎನ್ನುವ ಗುಪ್ತಚರ ಇಲಾಖೆ ಮಾಹಿತಿ ಹಿನ್ನೆಲೆಯಲ್ಲಿ ಭದ್ರತಾ ಪಡೆ (Security forces) ಸಿಬ್ಬಂದಿ ತೀವ್ರ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅಧಿಕಾರಿಗಳು, ಉಧಂಪುರ ಜಿಲ್ಲೆಯ ಗ್ರಾಮವೊಂದಕ್ಕೆ ಶನಿವಾರಸಂಜೆ ಬಂದಿದ್ದ ಭಯೋತ್ಪಾದಕರು ಮನೆಯಿಂದ ಆಹಾರವನ್ನು ದೋಚಿ ಹತ್ತಿರದ ಅರಣ್ಯ ಪ್ರದೇಶಕ್ಕೆ ಪರಾರಿಯಾಗಿದ್ದಾರೆ. ಮಾಹಿತಿ ತಿಳಿದ ಬಳಿಕ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಆರಂಭಿಸಿವೆ ಎಂದು ತಿಳಿಸಿದ್ದಾರೆ.
ದೆಹಲಿ ವಿಮಾನ ನಿಲ್ದಾಣದಲ್ಲಿ ದಟ್ಟ ಮಂಜು: 200ಕ್ಕೂ ಹೆಚ್ಚು ವಿಮಾನಗಳ ಹಾರಾಟ ವಿಳಂಬ; ರೈಲು ಸಂಚಾರಕ್ಕೂ ಅಡ್ಡಿ
ಈ ಹಿಂದೆ ನಡೆದಿರುವ ಎನ್‌ಕೌಂಟರ್ ಪ್ರದೇಶದಿಂದ ಸುಮಾರು 5 ಕಿ.ಮೀ. ಪಶ್ಚಿಮದಲ್ಲಿರುವ ಮಜಲ್ಟಾ ಪ್ರದೇಶದ ಚೋರ್ ಮೋಟು ಮತ್ತು ಅದರ ಪಕ್ಕದ ಅರಣ್ಯ ಗ್ರಾಮಗಳಲ್ಲಿ ಪೊಲೀಸ್ ಮತ್ತು ಅರೆಸೈನಿಕ ಪಡೆಗಳ ಜಂಟಿ ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿವೆ ಎಂದರು.
ಚೋರ್ ಮೋಟು ಗ್ರಾಮದ ಮಂಗ್ತು ರಾಮ್ ಎಂಬವರ ಮನೆಗೆ ಅವರ ಮನೆಗೆ ಶನಿವಾರ ಸಂಜೆ 6.30 ರ ಸುಮಾರಿಗೆ ಇಬ್ಬರು ಅಪರಿಚಿತ ಭಯೋತ್ಪಾದಕರು ಬಂದಿದ್ದು, ಆಹಾರ ದೋಚಿಕೊಂಡು ಹೋಗಿದ್ದರು. ಈ ಕುರಿತು ಶನಿವಾರ ತಡರಾತ್ರಿ ಗುಪ್ತಚರ ಇಲಾಖೆಗೆ ಮಾಹಿತಿ ಸಿಕ್ಕಿತ್ತು. ತಕ್ಷಣವೇ ಪೊಲೀಸ್ ಮತ್ತು ಅರೆಸೈನಿಕ ಪಡೆಗಳನ್ನು ಸಿದ್ದಗೊಂಡು ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು ಎಂದು ತಿಳಿಸಿದರು.
ಗ್ರಾಮದ ಸಮೀಪವಿರುವ ಅರಣ್ಯ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರಿದಿದ್ದು, ಭಾನುವಾರ ಬೆಳಗಿನ ಜಾವದವರೆಗೆ ವಿವಿಧ ಕಡೆಗಳಿಂದ ಏಕಕಾಲದಲ್ಲಿ ಕೂಂಬಿಂಗ್ ಕಾರ್ಯಾಚರಣೆಯನ್ನು ನಡೆಸಲಾಯಿತು. ಆದರೆ ಯಾವುದೇ ಕುರುಹು ಪತ್ತೆಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ವಿಶ್ವದ ಅತ್ಯಂತ ಶೀತದ ವಾತಾವರಣ ಇರುವ ಸ್ಥಳ ಯಾವುದು ಗೊತ್ತಾ? ಈ ವಿಡಿಯೋ ನೋಡಿ
ನವೆಂಬರ್ ತಿಂಗಳಾಂತ್ಯದಲ್ಲಿ ಇದೇ ಪ್ರದೇಶದಲ್ಲಿ ಮೂವರು ಭಯೋತ್ಪಾದಕರು ಬಂದು ಆಹಾರ ಕೇಳಿದ್ದರು. ಅದಾಗಿ ಮೂರು ವಾರಗಳ ಬಳಿಕ ಈ ಘಟನೆ ನಡೆದಿದೆ.
ಉಧಮ್‌ಪುರದ ಬಸಂತಗಢ ಪ್ರದೇಶದಲ್ಲಿ ಬಕರಾಲ್ ಕುಟುಂಬದ ಮನೆಗೆ ಬಂದಿದ್ದ ಭಯೋತ್ಪಾದಕರು ಆಹಾರವನ್ನು ಕೇಳಿದ್ದಾರೆ ಎನ್ನುವ ಮಾಹಿತಿ ಹಿನ್ನೆಲೆಯಲ್ಲಿ ಹೆಚ್ಚಿನ ಅಪಾಯವಿರುವ ಒಳನುಸುಳುವಿಕೆ ಪ್ರದೇಶಗಳಿರುವ ದಟ್ಟವಾದ ಕಾಡುಗಳಲ್ಲಿ ಶಂಕಿತರನ್ನು ಪತ್ತೆಹಚ್ಚಲು ತೀವ್ರ ಶೋಧ ಕಾರ್ಯಾಚರಣೆಯನ್ನು ನಡೆಸಲಾಗಿತ್ತು.