Viral News: ಗಣೇಶ ಮೂರ್ತಿ ಇರುವ ಸ್ಥಳದಲ್ಲೇ ಚಿಕನ್ ಬಿರಿಯಾನಿ ಹಂಚಿಕೆ; ಜಗನ್ ರೆಡ್ಡಿ ಬೆಂಬಲಿಗರ ಮೇಲೆ ಬಿತ್ತು ಕೇಸ್
ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ ಸ್ಥಳದಲ್ಲಿಯೇ ಜಗನ್ ರೆಡ್ಡಿ ಪಕ್ಷದ ನಾಯಕರಿಂದ ಚಿಕನ್ ಬಿರಿಯಾನಿ ಬಡಿಸಿದ ಘಟನೆ ನಡೆದಿದೆ. ಮಾಜಿ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಅವರ ಪುಣ್ಯತಿಥಿ ಆಚರಣೆಯ ಸಂದರ್ಭದಲ್ಲಿ ನಂದಿಗಾಮದ ಗಣೇಶ ಮಂಟಪದ ಬಳಿ ಚಿಕನ್ ಬಿರಿಯಾನಿ ಊಟ ಬಡಿಸಲಾಗಿದೆ.

-

ಹೈದರಾಬಾದ್: ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ ಸ್ಥಳದಲ್ಲಿಯೇ ಜಗನ್ ರೆಡ್ಡಿ (Janan Reddy) ಪಕ್ಷದ ನಾಯಕರಿಂದ ಚಿಕನ್ ಬಿರಿಯಾನಿ ಬಡಿಸಿದ ಘಟನೆ ನಡೆದಿದೆ. (Viral News) ಮಾಜಿ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಅವರ ಪುಣ್ಯತಿಥಿ ಆಚರಣೆಯ ಸಂದರ್ಭದಲ್ಲಿ ನಂದಿಗಾಮದ ಗಣೇಶ ಮಂಟಪದ ಬಳಿ ಚಿಕನ್ ಬಿರಿಯಾನಿ ಊಟ ಬಡಿಸಿದ ಆರೋಪದ ಮೇಲೆ ಆಂಧ್ರಪ್ರದೇಶದ ಎನ್‌ಟಿಆರ್ ಜಿಲ್ಲೆಯ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ನಾಯಕರ ವಿರುದ್ಧ ಪ್ರಕರಣ ದಾಖಲಾಗಿದೆ. ಮಂಗಳವಾರ ಭಕ್ತರು ಈ ಕಾರ್ಯಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಕೆಲ ಕಾಲ ಉದ್ವಿಗ್ನತೆ ಉಂಟಾಗಿತ್ತು.
ಅನುಮತಿಯಿಲ್ಲದೆ ಕಾರ್ಯಕ್ರಮ ನಡೆಸಿದ್ದಕ್ಕೆ ಮತ್ತು ಪೆಂಡಲ್ ಬಳಿ ಮಾಂಸಾಹಾರಿ ಆಹಾರವನ್ನು ಬಡಿಸಿದ್ದಕ್ಕೆ ಸರ್ಕಲ್ ಇನ್ಸ್‌ಪೆಕ್ಟರ್ ವೈ.ವಿ.ವಿ.ಎಲ್. ನಾಯ್ಡು ಸ್ಥಳಕ್ಕಾಗಮಿಸಿ ಕಾರ್ಯಕರ್ತರನ್ನು ತಡೆದಿದ್ದಾರೆ. ಆದರೂ ಕೆಲ ಕಾರ್ಯಕರ್ತರು ವೈ.ಎಸ್. ರಾಜಶೇಖರ ರೆಡ್ಡಿ ಅವರ ಪುಣ್ಯತಿಥಿಯಂದು ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ನಂತರ ಗಣೇಶ ಮಂಟಪದ ಪಕ್ಕದಲ್ಲಿರುವ ಪಕ್ಷದ ಕಾರ್ಯಕರ್ತರಿಗೆ ಚಿಕನ್ ಬಿರಿಯಾನಿ ವಿತರಿಸಿದ್ದಾರೆ.
ಈ ಕೃತ್ಯದಿಂದ ಕೋಪಗೊಂಡ ಭಕ್ತರು ಪೊಲೀಸರಿಗೆ ದೂರು ನೀಡಿದರು. ಇದರ ನಂತರ, ಸಬ್-ಇನ್ಸ್‌ಪೆಕ್ಟರ್ ಶಾತಕರ್ಣಿ ಅವರು ಅರುಣ್ ಕುಮಾರ್, ಜಗನ್ಮೋಹನ್ ರಾವ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿದರು. ಪೊಲೀಸರು ಆಹಾರ ಪಾತ್ರೆಗಳು, ನೀರಿನ ಕ್ಯಾನ್‌ಗಳು ಮತ್ತು ಸಂಬಂಧಿತ ವಸ್ತುಗಳನ್ನು ಸ್ಥಳದಿಂದ ತೆಗೆದುಹಾಕಿದ್ದಾರೆ.
ಈ ಸುದ್ದಿಯನ್ನೂ ಓದಿ: Jagan Reddy: ಜಗನ್ ಮೋಹನ್ ರೆಡ್ಡಿ ವಾಹನದ ಅಡಿಗೆ ಬಿದ್ದು ವೈಎಸ್‌ಆರ್‌ಸಿಪಿಯ ಕಾರ್ಯಕರ್ತ ಸಾವು; ವಿಡಿಯೊ ವೈರಲ್
ಛತ್ತೀಸ್‌ಗಡದ ಜಶಪುರ ಜಿಲ್ಲೆಯ ಜುರುದಂಡ್ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ನಡೆಯುತ್ತಿದ್ದ ಗಣೇಶ ವಿಸರ್ಜನೆ ಮೆರವಣಿಗೆಯ ಮೇಲೆ ಪಾನಮತ್ತ ಚಾಲಕನೋರ್ವ ತನ್ನ ಕಾರನ್ನು ನುಗ್ಗಿಸಿದ ಪರಿಣಾಮ ಮೂವರು ಮೃತಪಟ್ಟಿದ್ದು,ಇತರ 22 ಜನರು ಗಾಯಗೊಂಡಿದ್ದಾರೆ ಎಂದು ಪೋಲಿಸರು ತಿಳಿಸಿದ್ದಾರೆ. ಮೆರವಣಿಗೆಯಲ್ಲಿ 100ಕ್ಕೂ ಅಧಿಕ ಸ್ಥಳೀಯರು ಭಾಗಿಯಾಗಿದ್ದರು. 17ರಿಂದ 32 ವರ್ಷ ವಯೋಮಾನದ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಕೆಲವರನ್ನು ನೆರೆಯ ಸರ್ಗುಜಾ ಜಿಲ್ಲೆಯ ಅಂಬಿಕಾಪುರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ,ಇತರರು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹಿರಿಯ ಎಸ್‌ಪಿ ಶಶಿ ಮೋಹನ ಸಿಂಗ್ ತಿಳಿಸಿದರು. ಚಾಲಕನನ್ನು ಬಂಧಿಸಿರುವ ಪೋಲಿಸರು ಕಾರನ್ನು ವಶಪಡೆಯಾಗಿದೆ ಎಂದು ತಿಳಿದು ಬಂದಿದೆ.