ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವಿರಾಟ್‌ ಕೊಹ್ಲಿಯ ನಾಯಕತ್ವದ ಬಗ್ಗೆ ತಮ್ಮದೇ ಅಭಿಪ್ರಾಯ ವ್ಯಕ್ತಪಡಿಸಿದ ರಾಹುಲ್‌ ಚಹರ್!

ಆಧುನಿಕ ಕ್ರಿಕೆಟ್‌ ದಿಗ್ಗಜ ವಿರಾಟ್‌ ಕೊಹ್ಲಿ ಈಗಾಗಲೇ ಟಿ20ಐ ಹಾಗೂ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇದೀಗ ಅವರು ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಮುಂದುವರಿಯುತ್ತಿದ್ದಾರೆ. ಅಂದ ಹಾಗೆ ಭಾರತದ ಲೆಗ್‌ ಸ್ಪಿನ್ನರ್‌ ರಾಹುಲ್‌ ಚಹರ್‌, ವಿರಾಟ್‌ ಕೊಹ್ಲಿಯ ನಾಯಕತ್ವದ ಬಗ್ಗೆ ಮಾತನಾಡಿದ್ದಾರೆ ಹಾಗೂ 2021ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಸಂದರ್ಭದಲ್ಲಿನ ಘಟನೆಯನ್ನು ಸ್ಮರಿಸಿಕೊಂಡಿದ್ದಾರೆ.

ವಿರಾಟ್‌ ಕೊಹ್ಲಿಯ ನಾಯಕತ್ವದ ಬಗ್ಗೆ ರಾಹುಲ್‌ ಚಹರ್‌ ಅಭಿಪ್ರಾಯ!

ವಿರಾಟ್‌ ಕೊಹ್ಲಿಯ ನಾಯಕತ್ವವನ್ನು ಶ್ಲಾಘಿಸಿದ ರಾಹುಲ್‌ ಚಹರ್‌. -

Profile Ramesh Kote Sep 4, 2025 4:38 PM

ನವದೆಹಲಿ: ವಿರಾಟ್‌ ಕೊಹ್ಲಿ (Virat Kohli) ಅವರ ನಾಯಕತ್ವದಲ್ಲಿ ಸಾಕಷ್ಟು ಯುವ ಪ್ರತಿಭೆಗಳು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪರಿಚಯವಾಗಿದ್ದಾರೆ. ಅದರಂತೆ ಲೆಗ್‌ ಸ್ಪಿನ್ನರ್‌ ರಾಹುಲ್‌ ಚಹರ್‌ (Rahul Chahar) ಕೂಡ ಒಬ್ಬರು. ಇದೀಗ ಭಾರತ ತಂಡದ ಹೊರಗಿರುವ ಲೆಗ್‌ ಸ್ಪಿನ್ನರ್‌ ರಾಹುಲ್‌ ಚಹರ್‌, ವಿರಾಟ್‌ ಕೊಹ್ಲಿಯ ನಾಯಕತ್ವದ ಸಾಮರ್ಥ್ಯವನ್ನು ರಿವೀಲ್‌ ಮಾಡಿದ್ದಾರೆ. 2021ರ ಐಸಿಸಿ ಟಿ20 ವಿಶ್ವಕಪ್‌ (T20 World Cup 2021) ಟೂರ್ನಿಗೂ ಮುನ್ನ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಅಭ್ಯಾಸ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ನೀಡಿದ್ದ ಸಲಹೆಯಿಂದ ಅಪಾಯಕಾರಿ ಬ್ಯಾಟ್ಸ್‌ಮನ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರನ್ನು ಔಟ್‌ ಮಾಡಿದ್ದೆ ಎಂದು ರಾಹುಲ್‌ ಚಹರ್‌ ತಿಳಿಸಿದ್ದಾರೆ.

ಈ ಅಭ್ಯಾಸ ಪಂದ್ಯದಲ್ಲಿ ಟಾಸ್‌ ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಆಸ್ಟ್ರೇಲಿಯಾ ತನ್ನ ಪಾಲಿನ 20 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 152 ರನ್‌ಗಳನ್ನು ಕಲೆ ಹಾಕಿತ್ತು. ಈ ಇನಿಂಗ್ಸ್‌ನಲ್ಲಿ ರಾಹುಲ್‌ ಚಹರ್‌ಗೆ ರಿವರ್ಸ್‌ ಸ್ವೀಪ್‌ ಸೇರಿದಂತೆ ತನ್ನ ಸ್ಪೋಟಕ ಬ್ಯಾಟಿಂಗ್‌ ಮೂಲಕ ಗ್ಲೆನ್‌ ಮ್ಯಾಕ್ಸ್‌ವೆಲ್‌ ಪ್ರಾಬಲ್ಯ ಸಾಧಿಸಿದ್ದರು. ಈ ವೇಳೆ ಅಂದಿನ ನಾಯಕ ವಿರಾಟ್‌ ಕೊಹ್ಲಿ ಅವರ ಜತೆ ರಾಹುಲ್‌ ಚಹರ್‌ ಚರ್ಚೆಯನ್ನು ನಡೆಸಿದ್ದರು. ತದ ನಂತರ ಫೀಲ್ಡಿಂಗ್‌ ಬದಲಾವಣೆ ಬಗ್ಗೆ ಈ ಇಬ್ಬರೂ ನಿರ್ಧರಿಸಿದ್ದರು.

ವಿರಾಟ್‌ ಕೊಹ್ಲಿಯನ್ನು ಕೈ ಬಿಟ್ಟು ಟಾಪ್‌ 5 ಕ್ರಿಕೆಟಿಗರನ್ನು ಆರಿಸಿದ ಎಬಿ ಡಿ ವಿಲಿಯರ್ಸ್‌!

ಫೀಲ್ಡ್‌ ಬದಲಾವಣೆಯ ಬಳಿಕ ಗ್ಲೆನ್‌ ಮ್ಯಾಕ್ಸ್‌ವೆಲ್‌ಗೆ ಬ್ಯಾಟಿಂಗ್‌ನಲ್ಲಿ ಸ್ವಲ್ಪ ಎಡವಿದ್ದರು ಹಾಗೂ ಆರಾಮದಾಯಕವಾಗಿ ಕಂಡಿದ್ದರು. ನಂತರ ಅವರು ವಿಕೆಟ್‌ ಒಪ್ಪಿಸಿದ್ದರು. ರಾಹುಲ್‌ ಚಹರ್‌ ಅವರು 12ನೇ ಓವರ್‌ನ ಐದನೇ ಎಸೆತದಲ್ಲಿ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರನ್ನು ಕ್ಲೀನ್‌ ಬೌಲ್ಡ್‌ ಮಾಡಿದ್ದರು. ಈ ವೇಳೆ ಬ್ಯಾಕೆಂಡ್‌ನಲ್ಲಿ ವಿರಾಟ್‌ ಕೊಹ್ಲಿಯ ಬುದ್ದಿವಂತಿಕೆಯನ್ನು ಚಹರ್‌ ಹೊಗಳಿದ್ದಾರೆ ಹಾಗೂ ಅಂದು ಕೊಹ್ಲಿ ಏನು ಹೇಳಿದ್ದರು ಎಂಬುದನ್ನು ಲೆಗ್‌ ಸ್ಪಿನ್ನರ್‌ ಬಹಿರಂಗಪಡಿಸಿದ್ದಾರೆ.

"ಅವರು (ವಿರಾಟ್‌ ಕೊಹ್ಲಿ) ಏನೆಲ್ಲಾ ಸಾಧನೆಯನ್ನು ಮಾಡಿದ್ದಾರೆಂದು ನಮಗೆ ಗೊತ್ತಿದೆ. ಅವರು ತುಂಬಾ ಬುದ್ದಿವಂತ ಕ್ರಿಕೆಟಿಗರು. ಫೀಲ್ಡಿಂಗ್‌ ಸ್ಥಾನದ ಬದಲಾವಣೆ ಬಗ್ಗೆ ನಾವು ಚರ್ಚೆಯನ್ನು ನಡೆಸಿದ್ದೆವು. ಮ್ಯಾಕ್ಸ್‌ವೆಲ್‌ ನನಗೆ ಸಾಕಷ್ಟು ರಿವರ್ಸ್‌ ಸ್ವೀಪ್‌ ಮಾಡುತ್ತಿದ್ದರು. ಡೀಪ್‌ ಸ್ಕೈರ್‌ ಲೆಗ್‌ನಲ್ಲಿ ಇಬ್ಬರು ಫೀಲ್ಡರ್‌ಗಳನ್ನು ನಿಲ್ಲಿಸಬೇಕಾಗಿತ್ತು ಹಾಗೂ ಫೀಲ್ಡಿಂಗ್‌ ಬದಲಾವಣೆಯ ಬಳಿಕ ಗ್ಲೆನ್‌ ಮ್ಯಾಕ್ಸ್‌ವೆಲ್‌ ಬೇರೆ ಕಡೆಗೆ ಹೊಡೆಯಲು ಪ್ರಯತ್ನಿಸಿದರು. ಆದರೆ, ಅವರಿಂದ ತಮ್ಮ ಶಾಟ್ಸ್‌ ಆಡಲು ಸಾಧ್ಯವಾಗಲಿಲ್ಲ ಹಾಗೂ ವಿಕೆಟ್‌ ಒಪ್ಪಿಸಿದ್ದರು. ಬುದ್ದಿವಂತಿಕೆ ಎಂದರೆ ಇದು," ಎಂದು ರಾಹುಲ್‌ ಚಹರ್‌ ಸಂದರ್ಶನದಲ್ಲಿ ತಿಳಿಸಿದ್ದಾರೆ.

Asia Cup 2025: ಟಿ20 ಕ್ರಿಕೆಟ್‌ನಲ್ಲಿ ದೊಡ್ಡ ದಾಖಲೆಯ ಸನಿಹದಲ್ಲಿ ಹಾರ್ದಿಕ್‌ ಪಾಂಡ್ಯ!

2019ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ದದ ಪಂದ್ಯದಲ್ಲಿ ವಿರಾಟ್‌ ಕೊಹ್ಲಿಯ ನಾಯಕತ್ವದ ಅಡಿಯಲ್ಲಿ ರಾಹಲ್‌ ಚಹರ್‌ ಅಂತಾರಾಷ್ಟ್ರೀಯ ಚುಟುಕು ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಆದರೆ, ಸ್ಥಿರ ಪ್ರದರ್ಶನದ ಕೊರತೆಯಿಂದ ಭಾರತ ತಂಡದಲ್ಲಿ ನಿಯಮಿತವಾಗಿ ಆಡಲು ಸಾಧ್ಯವಾಗಿಲ್ಲ. ಅವರು ಒಂದು ಒಡಿಐ ಹಾಗೂ ಆರು ಟಿ20ಐ ಪಂದ್ಯಗಳನ್ನು ಆಡಿದ್ದಾರೆ. 2021ರಲ್ಲಿ ಭಾರತದ ಪರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು.