ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಛೀ… ಮನುಷ್ಯತ್ವ ಇಲ್ವಾ? ಅತ್ತೆ-ಮಾವನ ವರದಕ್ಷಿಣೆ ಕಿರುಕುಳ, ಗಂಡನ ಚಿತ್ರಹಿಂಸೆ; ಟೆರೇಸ್‍ನಿಂದ ಕೆಳಗೆ ಹಾರಿದ ಮಹಿಳೆ

Woman jumps off roof: ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ ಮಹಿಳೆಯೊಬ್ಬರು ಮನೆಯ ಟೆರೇಸ್‌ನಿಂದ ಜಿಗಿದು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಅಲಿಗಢದಲ್ಲಿ ನಡೆದಿದೆ. ಪತಿ, ಅತ್ತೆ-ಮಾವನ ಚಿತ್ರಹಿಂಸೆಗೆ ಬೇಸತ್ತ ಮಹಿಳೆ ಇಂತಹ ತೀರ್ಮಾನ ತೆಗೆದುಕೊಂಡಿದ್ದಾಳೆ. ವರದಕ್ಷಿಣೆ ರೂಪವಾಗಿ 5 ಲಕ್ಷ ರೂ. ಹಾಗೂ ಬೈಕ್ ಬೇಡಿಕೆ ಇಡಲಾಗಿತ್ತು.

ಚಿತ್ರಹಿಂಸೆ ತಾಳಲಾರದೆ ಟೆರೇಸ್‍ನಿಂದ ಕೆಳಗೆ ಹಾರಿದ ಮಹಿಳೆ

-

Priyanka P Priyanka P Sep 4, 2025 4:03 PM

ಅಲಿಗಢ: ವರದಕ್ಷಿಣೆ (dowry) ಕಿರುಕುಳಕ್ಕೆ ಬೇಸತ್ತ ಮಹಿಳೆಯೊಬ್ಬರು ತನ್ನ ಎರಡು ಅಂತಸ್ತಿನ ಮನೆಯ ಟೆರೇಸ್‌ನಿಂದ ಜಿಗಿದಿದ್ದಾರೆ. ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿರುವ ಘಟನೆ ಉತ್ತರ ಪ್ರದೇಶ (Uttar Pradesh) ದ ಅಲಿಗಢದಲ್ಲಿ ನಡೆದಿದೆ. ಮನಕಲಕುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದ್ದು, ನೆಟ್ಟಿಗರು ಸಿಡಿಮಿಡಿಗೊಂಡಿದ್ದಾರೆ. ಟೆರೇಸ್‍ಗೆ ಹತ್ತಿದ ಮಹಿಳೆಯನ್ನು ಜಿಗಿಯುವಂತೆ ಪತಿಯು ಪದೇ ಪದೆ ಕೆಣಕಿದ್ದಾನೆ. ಕೊನೆಗೆ ಆಕೆ ಮೇಲಿನಿಂದ ಕೆಳಕ್ಕೆ ಬಿದ್ದು ತೀವ್ರ ಗಾಯಗೊಂಡಿದ್ದಾಳೆ.

ಆರು ವರ್ಷಗಳ ಹಿಂದೆ ಸೋನು ಎಂಬಾತನನ್ನು ಅರ್ಚನಾ ವಿವಾಹವಾಗಿದ್ದು, ದಂಪತಿಗೆ ನಾಲ್ಕು ಮತ್ತು ಎರಡು ವರ್ಷದ ಇಬ್ಬರು ಮಕ್ಕಳಿದ್ದಾರೆ. ಮದುವೆಗೆ ಸುಮಾರು 10 ಲಕ್ಷ ರೂಪಾಯಿ ಖರ್ಚು ಮಾಡಿರುವುದಾಗಿ ಮಹಿಳೆಯ ಕುಟುಂಬ ತಿಳಿಸಿದೆ. ಆದರೆ ಅರ್ಚನಾ ಅವರ ಅತ್ತೆ-ಮಾವಂದಿರು ವರದಕ್ಷಿಣೆಯಿಂದ ಸಂತುಷ್ಠವಾಗಿರಲಿಲ್ಲ. ಮತ್ತಷ್ಟು ಹಣ ಕೊಡುವಂತೆ ಪೀಡಿಸಿದ್ದಾರೆ. ನಗದಿನ ರೂಪದಲ್ಲಿ 5 ಲಕ್ಷ ರೂಪಾಯಿ ಹಾಗೂ ರಾಯಲ್ ಎನ್‌ಫೀಲ್ಡ್ ಬೈಕ್ ಅನ್ನು ಕೊಡಿಸುವಂತೆ ಹಿಂಸಿಸಿದ್ದಾರೆ. ವರದಕ್ಷಿಣೆ ಬೇಡಿಕೆ ಈಡೇರದಿದ್ದಾಗ ಅರ್ಚನಾಗೆ ಮಾನಸಿಕ ಹಾಗೂ ದೈಹಿಕವಾಗಿ ಚಿತ್ರಹಿಂಸೆ ನೀಡಲು ಪ್ರಾರಂಭಿಸಿದರು ಎಂದು ಮಹಿಳೆಯ ಕುಟುಂಬ ಆರೋಪಿಸಿದೆ.

ವಿಡಿಯೊ ವೀಕ್ಷಿಸಿ:



ಅರ್ಚನಾ ಅವರ ಸಹೋದರ ಅಂಕಿತ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ, ಸೋನು ಅವರ ಸಹೋದರ ಪ್ರಮೋದ್ ಎಂಬಾತ ಅರ್ಚನಾಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಅರ್ಚನಾ ತನ್ನ ಪತಿ ಸೋನು ಮತ್ತು ಅವರ ತಾಯಿ (ಅತ್ತೆ) ನೆಹ್ನಿ ದೇವಿ ಬಳಿ ನೋವು ತೋಡಿಕೊಂಡಾಗ, ಆಕೆಯ ಬಾಯಿ ಮುಚ್ಚಿಸಿದ್ದಾರೆ.

ಸೆಪ್ಟೆಂಬರ್ 1 ರಂದು, ಅರ್ಚನಾಳ ಅತ್ತೆ-ಮಾವ ತನ್ನ ಸಹೋದರಿಯ ಮಕ್ಕಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದರು. ಇದಕ್ಕೆ ನನ್ನ ಸಹೋದರಿ ಛಾವಣಿಯಿಂದ ಹಾರುವುದಾಗಿ ಹೇಳಿದಳು. ಅದಕ್ಕೆ ಅವರು ಮೇಲಿನಿಂದ ಹಾರುವಂತೆ ಪ್ರಚೋದಿಸಿದ್ದಾರೆ. ನೆರೆಹೊರೆಯವರು ಈ ವಿಡಿಯೊ ಚಿತ್ರೀಕರಿಸಿ ನಮಗೆ ಕಳುಹಿಸಿದರು. ಅತ್ತೆ-ಮಾವ ಅವಳನ್ನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಚಿತ್ರಹಿಂಸೆ ನೀಡಿ, ಇದೀಗ ಈ ಸ್ಥಿತಿಗೆ ತಲುಪಿಸಿದ್ದಾರೆ. ಆಕೆ ಗಂಭೀಕ ಗಾಯದಿಂದ ಬಳಲುತ್ತಿದ್ದಾಳೆ ಎಂದು ಅರ್ಚನಾ ಸಹೋದರ ದೂರಿನಲ್ಲಿ ತಿಳಿಸಿದ್ದಾರೆ.

ಗೊಂಡಾ ಪ್ರದೇಶದ ಡಕೌಲಿ ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ. “ಪತಿ ಪ್ರಚೋದಿಸಿದ ನಂತರ ಮಹಿಳೆ ಛಾವಣಿಯಿಂದ ಹಾರಿದ್ದಾಳೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ನಾವು ಆಕೆಯ ಹೇಳಿಕೆಯನ್ನು ದಾಖಲಿಸಿದ್ದೇವೆ ಮತ್ತು ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ” ಎಂದು ಪೊಲೀಸ್ ಅಧಿಕಾರಿ ಮಹೇಶ್ ಕುಮಾರ್ ತಿಳಿಸಿದ್ದಾರೆ.

ವಿಡಿಯೊದಲ್ಲಿ ಪತಿ ಮಹಾಶಯ ತನ್ನ ಹೆಂಡತಿಯನ್ನು ಪದೇ ಪದೆ ಕೆಳಗೆ ಹಾರುವಂತೆ ಪ್ರಚೋದಿಸುತ್ತಿರುವುದನ್ನು ಕೇಳಬಹುದು. ಆಕೆ ಕೆಳಗೆ ಜಿಗಿದ ಬಳಿಕ ಒಬ್ಬ ವ್ಯಕ್ತಿ ಆಕೆಯನ್ನು ಥಳಿಸಿದ್ದಾನೆ. ಈ ವೇಳೆ ಮಗುವೊಂದು ಅಮ್ಮ.. ಅಮ್ಮ.. ಎಂದು ಕೂಗುತ್ತಿರುವ ದೃಶ್ಯ ಮನಕಲಕುವಂತಿದೆ. ತನಿಖೆಯ ಭಾಗವಾಗಿ ವಿಡಿಯೊವನ್ನು ಪರಿಶೀಲಿಸುತ್ತಿರುವುದಾಗಿ ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: Viral News: ಭೂಮಿಯ ಮೇಲಿದೆ ನಿಗೂಢ ಸ್ಥಳ- ಇಲ್ಲಿ ಎಲೆಕ್ಟ್ರಾನಿಕ್ ಸಾಧನಗಳು ವರ್ಕ್‌ ಆಗೋದೇ ಇಲ್ವಂತೆ!