ಕೇರಳ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎಲ್‍ಡಿಎಫ್‍ಗೆ ಸೋಲು; ಮೀಸೆ ಬೋಳಿಸಿಕೊಂಡ ಕಾರ್ಯಕರ್ತ
LDF Worker Shaves Moustache: 2025ರ ಕೇರಳ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎಡಪಕ್ಷ (ಎಲ್‌ಡಿಎಫ್) ಸೋತು ಸುಣ್ಣವಾಗಿದೆ. ಗೆಲ್ಲುವ ಪಣತೊಟ್ಟಿದ್ದ ಕಾರ್ಯಕರ್ತ ಬಾಬು ವರ್ಗೀಸ್ ಸೋತಿದ್ದಕ್ಕೆ ಕೊಟ್ಟ ಮಾತಿನಂತೆ ಮೀಸೆ ಬೋಳಿಸಿ ಸುದ್ದಿಯಾಗಿದ್ದಾರೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಮೀಸೆ ಬೋಳಿಸಿಕೊಂಡ ಎಲ್‍ಡಿಎಫ್ ಕಾರ್ಯಕರ್ತ -
ತಿರುವನಂತಪುರ, ಡಿ. 14: ಕೇರಳ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎಡ ಪ್ರಜಾಸತ್ತಾತ್ಮಕ ರಂಗ (LDF)ದ ಹೀನಾಯ ಸೋಲು ಕಾರ್ಯಕರ್ತ ಬಾಬು ವರ್ಗೀಸ್ (Babu Varghese) ಎಂಬವವರಿಗೆ ಅಪಾರ ದುಃಖ ತಂದಿದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ತಮ್ಮ ಪಕ್ಷದ ಸೋಲಿನ ನಂತರ ಅವರು ತಮ್ಮ ಟ್ರೇಡ್‌ಮಾರ್ಕ್ ಮೀಸೆಯನ್ನು (LDF Worker Shaves Moustache) ಬೋಳಿಸಿಕೊಂಡರು. ಮೀಸೆ ಬೋಳಿಕೊಳ್ಳುತ್ತಿರುವುದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (viral video) ಆಗಿದೆ.
ಪಟ್ಟಣಂತಿಟ್ಟ ಪುರಸಭೆ ಚುನಾವಣೆಗೂ ಮುನ್ನ ವರ್ಗೀಸ್ ಎಡಪಕ್ಷಗಳು ಈ ಪ್ರದೇಶದಲ್ಲಿ ಅಧಿಕಾರ ಉಳಿಸಿಕೊಳ್ಳಲು ವಿಫಲವಾದರೆ ತಮ್ಮ ಮೀಸೆಯನ್ನು ಬೋಳಿಸಿಕೊಳ್ಳುವುದಾಗಿ ಸಾರ್ವಜನಿಕವಾಗಿ ಪ್ರತಿಜ್ಞೆ ಮಾಡಿದ್ದರು. ಶನಿವಾರ ಎಣಿಕೆಯಾದ ಫಲಿತಾಂಶ, ಪತ್ತನಂತಿಟ್ಟ ಪುರಸಭೆಯಲ್ಲಿ ಮಾತ್ರವಲ್ಲದೆ ಜಿಲ್ಲೆಯಾದ್ಯಂತ ಎಲ್‌ಡಿಎಫ್‌ಗೆ ದೊಡ್ಡ ಹೊಡೆತ ಬಿದ್ದರುವುದು ಸ್ಪಷ್ಟವಾಯಿತು.
ಪುರುಷರೇ ತುಂಬಿದ ರೈಲಿನ ಶೌಚಾಲಯದೊಳಗೆ ಸಿಕ್ಕಿ ಹಾಕಿಕೊಂಡ ಮಹಿಳೆ... ಮುಂದೇನಾಯ್ತು?
ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಅಲೈಯನ್ಸ್ (ಯುಡಿಎಫ್) ಜಿಲ್ಲೆಯ ಪತ್ತನಂತಿಟ್ಟ, ತಿರುವಲ್ಲಾ ಮತ್ತು ಪಂದಳ ಸೇರಿದಂತೆ ನಾಲ್ಕು ಪುರಸಭೆಗಳಲ್ಲಿ ಮೂರನ್ನು ಗೆದ್ದುಕೊಂಡಿತು. ಈ ಮೂರರಲ್ಲಿ, ಪತ್ತನಂತಿಟ್ಟ ಮತ್ತು ತಿರುವಲ್ಲಾವನ್ನು ಈ ಹಿಂದೆ ಎಡಪಕ್ಷಗಳು ಹೊಂದಿದ್ದವು. ಅದು ಅಡೂರ್ ಅನ್ನು ಮಾತ್ರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
ಇದಲ್ಲದೆ 16 ಸದಸ್ಯರ ಜಿಲ್ಲಾ ಪಂಚಾಯತ್‌ನಲ್ಲಿ 12 ಸ್ಥಾನಗಳನ್ನು ಸುಲಭವಾಗಿ ಗೆದ್ದುಕೊಂಡು ಯುಡಿಎಫ್ ಸಂಪೂರ್ಣ ಹಿಡಿತ ಸಾಧಿಸಿದೆ. ಈ ಹಿಂದೆ 12 ಸ್ಥಾನಗಳನ್ನು ಹೊಂದಿದ್ದ ಎಡಪಕ್ಷಗಳು ಈ ಬಾರಿ ಕೇವಲ ನಾಲ್ಕು ಸ್ಥಾನಗಳಿಗೆ ಸೀಮಿತವಾಗಿವೆ. ಜಿಲ್ಲೆಯ ಗ್ರಾಮ ಹಾಗೂ ಬ್ಲಾಕ್ ಪಂಚಾಯತ್‌ಗಳಲ್ಲಿಯೂ ಯುಡಿಎಫ್ ಭರ್ಜರಿ ಪುನರಾಗಮನ ತೋರಿದ್ದು, 34 ಗ್ರಾಮ ಪಂಚಾಯತ್‌ಗಳು ಮತ್ತು ಏಳು ಬ್ಲಾಕ್ ಪಂಚಾಯತ್‌ಗಳ ನಿಯಂತ್ರಣವನ್ನು ತನ್ನದಾಗಿಸಿಕೊಂಡಿದೆ. ಇದರಿಂದ ಜಿಲ್ಲೆಯಲ್ಲಿ ದೀರ್ಘಕಾಲದಿಂದ ನಡೆದುಕೊಂಡು ಬಂದ ಎಡಪಕ್ಷಗಳ ಪ್ರಾಬಲ್ಯಕ್ಕೆ ಸ್ಪಷ್ಟ ಸವಾಲು ಎಸಗಿದಂತಾಗಿದೆ.
ಪ್ರಚಾರದ ವೇಳೆ ಸ್ನೇಹಿತರೊಂದಿಗೆ ಮೀಸೆ ಕತ್ತರಿಸುವುದಾಗಿ ಪಣ ತೊಟ್ಟಿದ್ದ ವರ್ಗೀಸ್, ತನ್ನ ಮಾತಿಗೆ ಬದ್ಧರಾಗಿ ನಿಂತರು. ಮತ ಎಣಿಕೆಯಲ್ಲಿ ಜಿಲ್ಲೆಯಾದ್ಯಂತ ಹಾಗೂ ತನ್ನದೇ ನಗರಸಭೆಯಲ್ಲಿ ಯುಡಿಎಫ್ ಭರ್ಜರಿ ಜಯ ಸಾಧಿಸಿದಾಗ ಕೊಟ್ಟ ಮಾತಿನಂತೆ, ಅವರು ಸ್ಥಳೀಯ ಸಲೂನ್‌ಗೆ ತೆರಳಿ ತಮ್ಮ ಮೀಸೆಯನ್ನು ಕತ್ತರಿಸಿಕೊಂಡರು. ಈ ಕ್ಷಣವನ್ನು ಜೋರಾದ ಹರ್ಷಧ್ವನಿ ಮತ್ತು ಸಿಳ್ಳೆಗಳ ನಡುವೆ ಕ್ಯಾಮರಾದಲ್ಲಿ ಸೆರೆಹಿಡಿಯಲಾಯಿತು.
ಇಲ್ಲಿದೆ ವಿಡಿಯೊ:
LDF party worker Babu Varghese, who had vowed to shave his moustache if the LDF failed to win the Pathanamthitta Municipality, has now gone through with it after the party’s defeat. #Pathanamthitta #LDF #KeralaLocalBodyElection2025 #KeralaLocalBodyElection pic.twitter.com/gxQ9dKFQSt
— Harish M (@chnmharish) December 13, 2025
ಕೇರಳದ ಸ್ಥಳೀಯ ಸಂಸ್ಥೆಗಳ ಫಲಿತಾಂಶಗಳು ಏನನ್ನು ಸೂಚಿಸುತ್ತವೆ?
2025ರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶಗಳು ರಾಜ್ಯದಾದ್ಯಂತ ಯುಡಿಎಫ್ ಭರ್ಜರಿ ಪುನರಾಗಮನ ಸಾಧಿಸಿರುವುದನ್ನು ಸ್ಪಷ್ಟವಾಗಿ ತೋರಿಸುತ್ತವೆ. ಯುಡಿಎಫ್ 86 ಪುರಸಭೆಗಳ ಪೈಕಿ 54ರಲ್ಲಿ, 941 ಗ್ರಾಮ ಪಂಚಾಯತ್‌ಗಳ ಪೈಕಿ 504ರಲ್ಲಿ ಹಾಗೂ 152 ಬ್ಲಾಕ್ ಪಂಚಾಯತ್‌ಗಳ ಪೈಕಿ 79ರಲ್ಲಿ ಜಯಗಳಿಸಿದೆ.
ಕೇರಳದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶಗಳು ವಿಧಾನಸಭಾ ಚುನಾವಣೆಯ ಫಲಿತಾಂಶಗಳೊಂದಿಗೆ ಗಟ್ಟಿಯಾದ ಸಂಬಂಧ ಹೊಂದಿವೆ. ಈ ಹಿನ್ನೆಲೆಯಲ್ಲಿ ನೋಡಿದರೆ, ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಸರ್ಕಾರದಿಂದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟದತ್ತ ಸಾರ್ವಜನಿಕ ಮನೋಭಾವದಲ್ಲಿ ಬದಲಾವಣೆ ಸಂಭವಿಸುತ್ತಿರುವುದರ ಸ್ಪಷ್ಟ ಸೂಚನೆ ಎಂಬ ನೆಲೆಯಲ್ಲಿ ಈ ತೀರ್ಪನ್ನು ನೋಡಬಹುದು.