Kangana Ranaut: ರಕ್ತಸಿಕ್ತ ಜಿರಳೆಗಳಿರುವ ದೇಶ ವಿಶ್ವ ಭೂಪಟದಿಂದ ಅಳಿಸಿಹೋಗಲಿ- ಪಾಕ್ ವಿರುದ್ಧ ಕಂಗನಾ ಕಿಡಿ
ಭಾರತದ ಹಲವು ಭಾಗಗಳಿಗೆ ಪಾಕಿಸ್ತಾನವು ಮೇ 8ರಂದು ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸುವ ಪ್ರಯತ್ನ ಮಾಡಿದ ಬಳಿಕ ಪ್ರತಿಕ್ರಿಯೆ ನೀಡಿರುವ ಕಂಗನಾ ರಣಾವತ್ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ಪಾತ್ರಕ್ಕಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪ್ರಶ್ನಿಸಲ್ಪಟ್ಟ ಬಗ್ಗೆ ಪ್ರಕಟವಾದ ಸುದ್ದಿಯನ್ನು ಹಂಚಿಕೊಂಡಿದ್ದು, ಇದರೊಂದಿಗೆ ರಕ್ತಸಿಕ್ತ ಜಿರಳೆಗಳು... ಭಯೋತ್ಪಾದಕರಿಂದ ತುಂಬಿರುವ ಭಯಾನಕ ರಾಷ್ಟ್ರವನ್ನು ವಿಶ್ವ ಭೂಪಟದಿಂದ ಅಳಿಸಿಹಾಕಬೇಕು ಎಂದು ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಬರೆದಿದ್ದಾರೆ.


ಮುಂಬೈ: ಪಹಲ್ಗಾಮ್ ಭಯೋತ್ಪಾದಕ ದಾಳಿಯ (Pahalgam terrorist attack) ಬಳಿಕ ಪಾಕಿಸ್ತಾನದ (Pakistan) ವಿರುದ್ಧ ಭಾರತೀಯರ ಆಕ್ರೋಶ ಹೆಚ್ಚಾಗುತ್ತಿದೆ. ಅದರಲ್ಲೂ ಆಪರೇಷನ್ ಸಿಂದೂರ್ (Operation Sindoor) ಕಾರ್ಯಾಚರಣೆ ಆರಂಭವಾದ ಬಳಿಕ ಸಾಕಷ್ಟು ಪಾಕಿಸ್ತಾನದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನೇರ ಮಾತು ಮತ್ತು ತಮ್ಮ ರಾಜಕೀಯ ನಿಲುವಿನಿಂದ ಸದಾ ಸುದ್ದಿಯಲ್ಲಿರುವ ಬಾಲಿವುಡ್ ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್ (Kangana Ranaut), ಭಯೋತ್ಪಾದಕರನ್ನು ರಕ್ತಸಿಕ್ತ ಜಿರಳೆಗಳು ಎಂದು ಕರೆದಿದ್ದು, ಪಾಕಿಸ್ತಾನವನ್ನು ವಿಶ್ವ ಭೂಪಟದಿಂದ ಅಳಿಸಿಹಾಕಬೇಕು ಎಂದು ಹೇಳಿದ್ದಾರೆ.
ಭಾರತದ ಮೇಲಿನ ಡ್ರೋನ್ ದಾಳಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಂಗನಾ, ಪಾಕಿಸ್ತಾನ ಅಸಹ್ಯ ರಾಷ್ಟ್ರ ಮತ್ತು ಅದನ್ನು ವಿಶ್ವ ಭೂಪಟದಿಂದ ಅಳಿಸಿಹಾಕಬೇಕು ಎಂದು ಹೇಳಿದರು. ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾದ ಬಳಿಕ ಪಾಕಿಸ್ತಾನವನ್ನು ಗುರಿಯಾಗಿಸಿಕೊಂಡು ಕಂಗನಾ ಮತ್ತೊಮ್ಮೆ ತಮ್ಮ ಹೇಳಿಕೆ ನೀಡಿದ್ದಾರೆ.
ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಬರೆದಿರುವ ಅವರು, ಭಯೋತ್ಪಾದಕರಿಂದ ತುಂಬಿರುವ ಅಸಹ್ಯ ರಾಷ್ಟ್ರವದು. ಅದನ್ನು ವಿಶ್ವ ಭೂಪಟದಿಂದ ಅಳಿಸಿಹಾಕಬೇಕು ಎಂದು ತಿಳಿಸಿದ್ದಾರೆ. ಜಮ್ಮು ಕಾಶ್ಮೀರದ ಸಾಂಬಾ, ಸತ್ವಾರಿ, ಉಧಂಪುರ, ಪಂಜಾಬ್‌ನ ಅಮೃತಸರ, ಜಲಂಧರ್, ರಾಜಸ್ಥಾನದ ಬಿಕಾನೇರ್ ಜೈಸಲ್ಮೇರ್ ಸೇರಿದಂತೆ ಭಾರತದ ಹಲವು ಭಾಗಗಳಿಗೆ ಪಾಕಿಸ್ತಾನವು ಮೇ 8ರಂದು ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸುವ ಪ್ರಯತ್ನ ಮಾಡಿತ್ತು. ಇದರಲ್ಲಿ ಹೆಚ್ಚಿನವುಗಳನ್ನು ಭಾರತೀಯ ಸೇನೆ ತಡೆದಿದೆ. ಈ ಬಳಿಕ ಕಂಗನಾ ಈ ಹೇಳಿಕೆ ನೀಡಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಪಾಕಿಸ್ತಾನದ ಪಾತ್ರಕ್ಕಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪ್ರಶ್ನಿಸಲ್ಪಟ್ಟ ಬಗ್ಗೆ ಪ್ರಕಟವಾದ ಸುದ್ದಿಯನ್ನು ಹಂಚಿಕೊಂಡಿರುವ ಕಂಗನಾ ಇದರೊಂದಿಗೆ ರಕ್ತಸಿಕ್ತ ಜಿರಳೆಗಳು... ಭಯೋತ್ಪಾದಕರಿಂದ ತುಂಬಿರುವ ಭಯಾನಕ ರಾಷ್ಟ್ರವನ್ನು ವಿಶ್ವ ಭೂಪಟದಿಂದ ಅಳಿಸಿಹಾಕಬೇಕು ಎಂದು ಬರೆದಿದ್ದಾರೆ.
ಭಾರತದ ಮಿಲಿಟರಿ ಪ್ರತಿಕ್ರಿಯೆಗೆ ಬೆಂಬಲ ವ್ಯಕ್ತಪಡಿಸಿರುವ ಕಂಗನಾ ಈ ಹಿಂದೆ ಅಮೃತಸರ ಬಳಿಯಿಂದ ಭಾರತದ ಎಸ್ -400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಶ್ಲಾಘಿಸುವ ವೀಡಿಯೊವನ್ನು ಹಂಚಿಕೊಂಡಿದ್ದರು.
ಇದನ್ನೂ ಓದಿ: Operation Sindoor: ಪಾಕಿಸ್ತಾನದ ಡ್ರೋನ್‌ಗಳನ್ನು ಹೊಡೆದುರುಳಿಸಿದ ಭಾರತೀಯ ಸೇನೆ; ವಿಡಿಯೋ ನೋಡಿ
ಮತ್ತೊಂದು ಪೋಸ್ಟ್‌ನಲ್ಲಿ ಬೆದರಿಕೆಗಳ ನಡುವೆಯೂ ಚೇತರಿಸಿಕೊಳ್ಳುವಂತೆ ಜಮ್ಮುವಿನ ಜನರನ್ನು ಒತ್ತಾಯಿಸಿದರು. ಈ ಕುರಿತು ಬರೆದಿರುವ ಅವರು ಪಾಕಿಸ್ತಾನದ ಗುರಿ ಜಮ್ಮು. ಭಾರತೀಯ ವಾಯು ರಕ್ಷಣಾ ವ್ಯವಸ್ಥೆಯು ಜಮ್ಮುವಿನಲ್ಲಿ ಪಾಕಿಸ್ತಾನ ಡ್ರೋನ್ ಅನ್ನು ತಟಸ್ಥಗೊಳಿಸುತ್ತದೆ. ಧೈರ್ಯವಾಗಿರಿ ಮತ್ತು ನಿಮ್ಮ ಶಕ್ತಿಯನ್ನು ತೋರಿಸಿ ಎಂದು ಜನರನ್ನು ಉದ್ದೇಶಿಸಿ ಹೇಳಿದ್ದರು.
ಕಂಗನಾ ಕೊನೆಯದಾಗಿ "ಎಮರ್ಜೆನ್ಸಿ" ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಹಲವಾರು ವಿವಾದಗಳ ಬಳಿಕ ಜನವರಿ 17ರಂದು ಈ ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಈ ಚಿತ್ರವನ್ನು ಕಂಗನಾ ಸ್ವತಃ ನಿರ್ದೇಶಿಸಿದ್ದು ಥಿಯೇಟರ್ ಪ್ರದರ್ಶನದ ಅನಂತರ ನೆಟ್‌ಫ್ಲಿಕ್ಸ್‌ನಲ್ಲಿ ಮೊದಲು ಪ್ರದರ್ಶನಗೊಂಡಿತು. ಸುಮಾರು 60 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಈ ಚಿತ್ರ ಬಿಡುಗಡೆಯಾದ ಮೊದಲ ದಿನ 2.5 ಕೋಟಿ ರೂಪಾಯಿ ಗಳಿಸಿದ್ದು ಮಿಶ್ರ ಪ್ರತಿಕ್ರಿಯೆ ಪಡೆದಿತ್ತು.