LIC: ಪಹಲ್ಗಾಮ್ ದಾಳಿ: ಮೃತರ ಕುಟುಂಬಸ್ಥರ ನೆರವಿಗೆ ವಿಶೇಷ ವಿನಾಯಿತಿ ನೀಡಿದ ಎಲ್‌ಐಸಿ!
Pahalgam Terror Attack: ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಬಲಿಯಾದವರಿಗೆ ಭಾರತೀಯ ಜೀವ ವಿಮಾ ನಿಗಮವು ಸಂತಾಪ ಸೂಚಿಸಿದೆ. ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳಿಗಾಗಿ ಲೈಫ್ ಇನ್ಶೂರೆನ್ಸ್ ಪಾಲಿಸಿಯಲ್ಲಿ (LIC) ವಿನಾಯಿತಿ ಪ್ರಕಟಿಸಿದೆ. ಭಯೋತ್ಪಾದನ ದಾಳಿಯಲ್ಲಿ ಬಾಧಿತರನ್ನು ಬೆಂಬಲಿಸಲು ಮತ್ತು ಅವರ ಕುಟುಂಬಕ್ಕೆ ಆರ್ಥಿಕ ಸಹಾಯ ಒದಗಿಸಲು ಎಲ್‌ಐಸಿ ಬದ್ಧವಾಗಿದೆ ಎಂದು ಕಂಪೆನಿ ತಿಳಿಸಿದೆ.


ಮುಂಬೈ: ಜಮ್ಮು- ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿ(Pahalgam Terror Attack)ಯಲ್ಲಿ ಬಲಿಯಾದವರಿಗೆ ಭಾರತೀಯ ಜೀವ ವಿಮಾ ನಿಗಮವು ಸಂತಾಪ ಸೂಚಿಸಿದೆ. ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳಿಗಾಗಿ ಲೈಫ್ ಇನ್ಶೂರೆನ್ಸ್ ಪಾಲಿಸಿ (LIC) ವಿನಾಯಿತಿ ಪ್ರಕಟಿಸಿದೆ. ಭಯೋತ್ಪಾದನ ದಾಳಿಯಲ್ಲಿ ಬಾಧಿತರನ್ನು ಬೆಂಬಲಿಸಲು ಮತ್ತು ಅವರ ಕುಟುಂಬಕ್ಕೆ ಆರ್ಥಿಕ ಸಹಾಯ ಒದಗಿಸಲು ಎಲ್‌ಐಸಿ ಬದ್ಧವಾಗಿದೆ ಎಂದು ಕಂಪೆನಿ ತಿಳಿಸಿದೆ. ಪಹಲ್ಗಾಮ್ ದಾಳಿಯ ಸಂತ್ರಸ್ತರಿಗೆ ನೆರವಾಗಲು ತ್ವರಿತವಾಗಿ ಕಾರ್ಯ ನಿರ್ವಹಿಸಲಾಗುವುದು ಎಂದು ಕಂಪೆನಿ ಈ ಬಗ್ಗೆ ತಿಳಿಸಿದೆ.
ಎಲ್ಐಸಿ ಗ್ರಾಹಕರ ಸಂಕಷ್ಟ ಹೋಗಲಾಡಿಸಲು ಅನೇಕ ರಿಯಾಯಿತಿಗಳನ್ನು ಘೋಷಿಸಲಾಗಿದೆ. ದಾಳಿಗೆ ಒಳಗಾದ ಸಂತ್ರಸ್ತರ ಮರಣ ಪ್ರಮಾಣಪತ್ರಗಳ ಬದಲಾಗಿ, ಸರ್ಕಾರಿ ದಾಖಲೆಗಳಲ್ಲಿ ಇರುವ ಯಾವುದೇ ಸಾಕ್ಷಿ, ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ನೀಡಲಾದ ಪರಿಹಾರದ ಡಾಕ್ಯುಮೆಂಟ್ಸ್‌ನ್ನು ಪುರಾವೆಯಾಗಿ ಎಲ್‌ಐಸಿ ಪರಿಗಣಿಸಲಿದೆ ಎಂದು ಭಾರತೀಯ ಜೀವ ವಿಮಾ ನಿಗಮದ ಸಿಇಒ ಮತ್ತು ಎಂಡಿ ಸಿದ್ಧಾರ್ಥ ಮೊಹಂತಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ: Driving License: ಫೈನ್ ಬಾಕಿ ಇದ್ಯಾ? ಹಾಗಿದ್ರೆ ಡ್ರೈವಿಂಗ್ ಲೈಸೆನ್ಸ್ ರದ್ದಾಗುವುದು ಗ್ಯಾರಂಟಿ!
ಗ್ರಾಹಕರಿಗೆೆ ಪರಿಹಾರ ಮೊತ್ತ ತಲುಪಿದೆಯೇ ಎಂದು ಖಚಿತಪಡಿಸಿಕೊಳ್ಳಲು ಎಲ್ಲಾ ಕ್ರಮಗಳನ್ನು ಶೀಘ್ರವಾಗಿ ತೆಗೆದುಕೊಳ್ಳಲಾಗುತ್ತದೆ ಎಂದು ಈ ಸಂದರ್ಭದಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಯಾವುದೇ ಗೊಂದಲ ಇದ್ದಲ್ಲಿ ಹೆಚ್ಚಿನ ಸಹಾಯ ಕ್ಕಾಗಿ ಹಕ್ಕುದಾರರು ಹತ್ತಿರದ LIC ಶಾಖೆ/ವಿಭಾಗ/ಗ್ರಾಹಕ ವಲಯಗಳನ್ನು ಅಥವಾ ಕಾರ್ಯನಿರ್ವಾಹಕ ನಿರ್ದೇಶಕರು (CC) LIC ಆಫ್ ಇಂಡಿಯಾ, ಕೇಂದ್ರ ಕಚೇರಿ, ಮುಂಬೈ. ಇಮೇಲ್ ಐಡಿ: ed_cc@licindia.com, www.licindia.in ಸಂಪರ್ಕಿಸಬಹುದು.
ಇನ್ನಷ್ಟು ಹೆಚ್ಚಿನ ಮಾಹಿತಿಗೆ ಹಕ್ಕುದಾರರು ಎಲ್‌ಐಸಿ ಕಾಲ್ ಸೆಂಟರ್ -022 68276827 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದು ಎಂದು ಎಲ್ ಐಸಿ ಕಂಪೆನಿಯೂ ಎಪ್ರಿಲ್ 24 ರ ಪ್ರಕಟನೆಯಲ್ಲಿ ತಿಳಿಸಿದೆ.