ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆ ಬಿಸಿ; ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ದರ 29 ರೂ. ಹೆಚ್ಚಳ
Domestic LPG Cylinder Price Hike: ವಾಣಿಜ್ಯ ಸಿಲಿಂಡರ್, ಪೆಟ್ರೋಲ್, ಡೀಸೇಲ್, ಬೆಲೆ ಏರಿಕೆಯಿಂದ ಹೈರಾಣಿಗಿದ್ದ ಜನರಿಗೆ ಇದೀಗ ಮತ್ತೆ ಶಾಕ್ ಎದುರಾಗಿದೆ. ಗೃಹಬಳಕೆಯ ಎಲ್‌ಪಿಜಿ (LPG) ಸಿಲಿಂಡರ್ ಬೆಲೆಯಲ್ಲಿ ಪ್ರತಿ ಸಿಲಿಂಡರ್‌ಗೆ 29 ರೂ. ಹೆಚ್ಚಳ ಮಾಡಲಾಗಿದೆ. ಕಳೆದ ಮೂರು ತಿಂಗಳಲ್ಲಿ ನಡೆದಿರುವ ಎರಡನೇ ದರ ಏರಿಕೆ ಇದಾಗಿದೆ.
ಸಂಗ್ರಹ ಚಿತ್ರ -
ನವದೆಹಲಿ: ವಾಣಿಜ್ಯ ಸಿಲಿಂಡರ್, ಪೆಟ್ರೋಲ್, ಡೀಸೇಲ್, ಬೆಲೆ ಏರಿಕೆಯಿಂದ ಹೈರಾಣಿಗಿದ್ದ ಜನರಿಗೆ ಇದೀಗ ಮತ್ತೆ ಶಾಕ್ ಎದುರಾಗಿದೆ. ಗೃಹಬಳಕೆಯ ಎಲ್‌ಪಿಜಿ (LPG) ಸಿಲಿಂಡರ್ ಬೆಲೆಯಲ್ಲಿ ಪ್ರತಿ ಸಿಲಿಂಡರ್‌ಗೆ 29 ರೂ. ಹೆಚ್ಚಳ ಮಾಡಲಾಗಿದೆ. (Domestic LPG Cylinder Price Hike) ಕಳೆದ ಮೂರು ತಿಂಗಳಲ್ಲಿ ನಡೆದಿರುವ ಎರಡನೇ ದರ ಏರಿಕೆ ಇದಾಗಿದೆ. ಈ ಹೊಸ ಪರಿಷ್ಕರಣೆಯೊಂದಿಗೆ, ದೆಹಲಿಯಲ್ಲಿ 14.2 ಕೆಜಿ ತೂಕದ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ 913 ರೂಪಾಯಿಯಿಂದ 942 ರೂಪಾಯಿಗೆ ಏರಿಕೆಯಾಗಿದೆ. ಪರಿಷ್ಕೃತ ದರಗಳು ಜೂನ್ 7 ರಿಂದಲೇ ಜಾರಿಗೆ ಬಂದಿವೆ.
ಜಾಗತಿಕ ಇಂಧನ ಬೆಲೆ ಏರಿಕೆ ಮತ್ತು ಆಮದು ವೆಚ್ಚ ಏರಿಕೆಯಿಂದಾಗಿ ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳು ಹೆಚ್ಚುತ್ತಿರುವ ಒತ್ತಡವನ್ನು ಎದುರಿಸುತ್ತಿರುವ ಸಮಯದಲ್ಲಿ ಇತ್ತೀಚಿನ ಎಲ್‌ಪಿಜಿ ಬೆಲೆ ಏರಿಕೆಯಾಗಿದೆ. ಇದಕ್ಕೂ ಮುನ್ನ, ಮಾರ್ಚ್ 7 ರಂದು ಪ್ರತಿ ಸಿಲಿಂಡರ್ ಬೆಲೆಯನ್ನು 60 ರೂ. ಹೆಚ್ಚಿಸಲಾಗಿತ್ತು. ಪ್ರಸ್ತುತ ಮಾಡಲಾದ ದರ ಏರಿಕೆಯು ತೈಲ ಕಂಪನಿಗಳಿಗೆ ದೇಶೀಯ ಎಲ್‌ಪಿಜಿ ಮಾರಾಟದಲ್ಲಿ ಆಗುತ್ತಿರುವ ನಷ್ಟವನ್ನು ಭಾಗಶಃ ಮಾತ್ರ ಸರಿದೂಗಿಸಿದೆ ಎಂದು ಮೂಲಗಳು ತಿಳಿಸಿವೆ.ಈ ದರ ಪರಿಷ್ಕರಣೆಯು ದೇಶಾದ್ಯಂತ ಅನ್ವಯವಾಗಲಿದ್ದರೂ, ಸ್ಥಳೀಯ ತೆರಿಗೆಗಳು ಮತ್ತು ಸಾರಿಗೆ ವೆಚ್ಚಗಳ ವ್ಯತ್ಯಾಸದಿಂದಾಗಿ ಪ್ರತಿ ನಗರದಲ್ಲೂ ಸಿಲಿಂಡರ್‌ನ ಅಂತಿಮ ಬೆಲೆಯಲ್ಲಿ ವ್ಯತ್ಯಾಸವಿರಲಿದೆ.
ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ
ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಜೂನ್ 1 ರಿಂದ ಜಾರಿಗೆ ಬರುವಂತೆ ತೈಲ ಕಂಪನಿಗಳು ಭಾರಿ ಏರಿಕೆ ಮಾಡಿವೆ. 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ದೇಶಾದ್ಯಂತ 42 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ. ದೆಹಲಿಯಲ್ಲಿ 19 ಕೆಜಿಯ ವಾಣಿಜ್ಯ ಸಿಲಿಂಡರ್ ಬೆಲೆ 3,071.50 ರೂಪಾಯಿಗಳಿಂದ 3,113.50 ರೂಪಾಯಿಗಳಿಗೆ ಏರಿಕೆಯಾಗಿದೆ.
ಇಂದಿನಿಂದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಏರಿಕೆ; ಗೃಹಬಳಕೆಯ ಅಡುಗೆ ಅನಿಲ ದರದಲ್ಲಿ ಯಾವುದೇ ಬದಲಾವಣೆ ಇಲ್ಲ
ಕೋಲ್ಕತ್ತಾದಲ್ಲಿ ಅತ್ಯಧಿಕವಾಗಿ 53.50 ರೂಪಾಯಿ ಹಾಗೂ ಚೆನ್ನೈನಲ್ಲಿ 46 ರೂಪಾಯಿಗಳಷ್ಟು ಬೆಲೆ ಏರಿಕೆಯಾಗಿದೆ. ಜಾಗತಿಕ ಇಂಧನ ಬಿಕ್ಕಟ್ಟು ಮತ್ತು ಪಶ್ಚಿಮ ಏಷ್ಯಾದಲ್ಲಿನ ರಾಜಕೀಯ ಉದ್ವಿಗ್ನತೆಯಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ದರ ಹೆಚ್ಚುತ್ತಿರುವುದು ಈ ಬೆಲೆ ಏರಿಕೆಗೆ ಪ್ರಮುಖ ಕಾರಣ ಎಂದು ಉದ್ಯಮದ ಮೂಲಗಳು ತಿಳಿಸಿವೆ.