ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Halli Power Winner: ಹಳ್ಳಿ ಪವರ್-ರಿ ಲೋಡೆಡ್ ರಿಯಾಲಿಟಿ ಶೋ ವಿನ್ನರ್‌ ಇವರೇ! ಫಿನಾಲೆ ಸಂಚಿಕೆ ಪ್ರಸಾರ ಯಾವಾಗ?

Halli Power Winner: ‘ಹಳ್ಳಿ ಪವರ್‌ ಸೀಸನ್‌-1’ ಕಾರ್ಯಕ್ರಮವು ಜೀ ಪವರ್‌ ವಾಹಿನಿಯಲ್ಲಿ (Zee Power) ಭರ್ಜರಿಯಾಗಿ ಮೂಡಿಬಂದಿತ್ತು. ಉತ್ತರಕರ್ನಾಟಕದ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಗೋಳ್ಳಿ ಗ್ರಾಮದಲ್ಲಿ ಕಾರ್ಯಕ್ರಮದ ಚಿತ್ರೀಕರಣ ಮಾಡಲಾಗಿತ್ತು. ಬಳಿಕ ಜೀ ಕನ್ನಡ ವಾಹಿನಿಯ 'ಹಳ್ಳಿ ಪವರ್-ರಿ ಲೋಡೆಡ್' ರಿಯಾಲಿಟಿ ಶೋನ ಎರಡನೇ ಸಂಚಿಕೆ ಮೂಡಿ ಬಂತು. ಈಗ ಫಿನಾಲೆ ಐಹೊಳೆಯಲ್ಲಿ ಮುಕ್ತಾಯಗೊಂಡಿದೆ. ವೈರಲ್ ವಿಡಿಯೋಗಳ ಪ್ರಕಾರ, ಫಿನಾಲೆಯಲ್ಲಿ ಇಬ್ಬರು ಸ್ಪರ್ಧಿಗಳು ನಿಂತಿದ್ದಾರೆ. ಈ ವಾರ ಫಿನಾಲೆ ಸಂಚಿಕೆ ಪ್ರಸಾರವಾಗಲಿದೆ.

ಹಳ್ಳಿ ಪವರ್-ರಿ ಲೋಡೆಡ್ ರಿಯಾಲಿಟಿ ಶೋ ವಿನ್ನರ್‌ ಇವರೇ!

ಹಳ್ಳಿ ಪವರ್‌ ಶೋ -

Yashaswi Devadiga
Yashaswi Devadiga Nov 20, 2026 11:04 AM

‘ಹಳ್ಳಿ ಪವರ್‌ ಸೀಸನ್‌-1’ ಕಾರ್ಯಕ್ರಮವು ಜೀ ಪವರ್‌ ವಾಹಿನಿಯಲ್ಲಿ (Zee Power) ಭರ್ಜರಿಯಾಗಿ ಮೂಡಿಬಂದಿತ್ತು. ಉತ್ತರಕರ್ನಾಟಕದ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಗೋಳ್ಳಿ ಗ್ರಾಮದಲ್ಲಿ ಕಾರ್ಯಕ್ರಮದ ಚಿತ್ರೀಕರಣ ಮಾಡಲಾಗಿತ್ತು. ಬಳಿಕ ಜೀ ಕನ್ನಡ ವಾಹಿನಿಯ 'ಹಳ್ಳಿ ಪವರ್-ರಿ (Halli Poer) ಲೋಡೆಡ್' ರಿಯಾಲಿಟಿ ಶೋನ ಎರಡನೇ ಸಂಚಿಕೆ ಮೂಡಿ ಬಂತು. ಈಗ ಫಿನಾಲೆ ಐಹೊಳೆಯಲ್ಲಿ ಮುಕ್ತಾಯಗೊಂಡಿದೆ. ವೈರಲ್ ವಿಡಿಯೋಗಳ ಪ್ರಕಾರ, ಫಿನಾಲೆಯಲ್ಲಿ ಇಬ್ಬರು ಸ್ಪರ್ಧಿಗಳು ನಿಂತಿದ್ದಾರೆ. ಈ ವಾರ ಫಿನಾಲೆ ಸಂಚಿಕೆ ಪ್ರಸಾರವಾಗಲಿದೆ.

ಫಿನಾಲೆ ಸಂಚಿಕೆಯ ಚಿತ್ರೀಕರಣ ಮುಕ್ತಾಯಗೊಂಡಿದ್ದು, ವಿಡಿಯೋ ಕ್ಲಿಪ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. . 2026ರ ರೀಲೋಡೆಡ್ ಸೀಸನ್‌ನಲ್ಲಿ ವೀರ ಸೈನಿಕ ನಿವೇದಿತಾ ರೈ ಮತ್ತು ಬೆಂಕಿ ಬಿಬಿ ಹಜೀರಾ ಫಿನಾಲೆ ನಿಂತಿದ್ದರು.

ಇದನ್ನೂ ಓದಿ: Bigg Boss kannada 13: ಮೊದಲ ನಿರ್ಧಾರದಲ್ಲೇ ಎಡವಿದ್ರಾ ಮಹರಾಣಿಯಾದ ಗಾನವಿ?

ತಮ್ಮ ಪ್ರಖರ ಮಾತುಗಳಿಂದ ಬಿಬಿ ಹಜೀರಾ ಅಭಿಮಾನಿಗಳನ್ನು ಸಂಪಾದಿಸಿದ್ರ, ವೀರ ಸೈನಿಕ ನಿವೇದಿತಾ ತಮ್ಮ ಸಂಯಮದ ಆಟದಿಂದ ಎಲ್ಲರ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರೋ ವಿಡಿಯೋ ಪ್ರಕಾರ, ನಿವೇದಿತಾ ಹಳ್ಳಿ ಪವರ್ ಕಾರ್ಯಕ್ರಮದ ವಿಜೇತೆಯಾಗಿದ್ದಾರೆ. ಬೆಂಕಿ ಬಿಬಿ ಹಜೀರಾ ಅವರು ಹಳ್ಳಿ ಪವರ್ ಶೋನ ಮೊದಲ ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದಾರೆ. ರಿಯಾಲಿಟಿ ಶೋ ಹಳ್ಳಿ ಪವರ್-ರಿಲೋಡೆಡ್‌ ರಿಯಾಲಿಟಿ ಶೋ ವಿನ್ನರ್‌ಗೆ 20 ಲಕ್ಷ ರೂಪಾಯಿ ನಗದು ಬಹುಮಾನ ಸಿಗಲಿದೆ.

ಇದನ್ನೂ ಓದಿ: Bigg Boss Kannada 13: ಪ್ರೋಮೋ ಕಟ್‌ಗಾಗಿ ಶೆಟ್ಟಿ ಡಾನ್‌ ಪ್ಲ್ಯಾನ್‌? ಸೌಂದರ್ಯ ವಿರುದ್ಧ ಸ್ಪರ್ಧಿಗಳ ಅಸಮಾಧಾನ

ಕಳೆದ ಬಾರಿ ಕ್ರಾಂತಿವೀರ ರಾಯಣ್ಣನ ಊರು ಸಂಗೋಳ್ಳಿಯಲ್ಲಿ ‘ಹಳ್ಳಿ ಪವರ್‌’ ಚಿತ್ರೀಕರಣ ನಡೆದಿತ್ತು. ಈ ಬಾರಿ ಬಾದಾಮಿ ಬನಶಂಕರಿ ಪಕ್ಕದಲ್ಲಿರುವ ಐಹೊಳೆ ಪಟ್ಟದಕಲ್ಲು ಗ್ರಾಮಗಳಲ್ಲಿ ನಡೆದಿದೆ. ಜೀ ಪವರ್‌' ವಾಹಿನಿಯಲ್ಲಿ ಕಳೆದ ಬಾರಿ ಶೋ ಮೂಡಿಬಂದಿತ್ತು. ಈ ಬಾರಿ ಮುಖ್ಯ ವಾಹಿನಿ 'ಜೀ ಕನ್ನಡ'ದಲ್ಲಿಯೇ ಶೋ ಶುರುವಾಗಿತ್ತು,