ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Delhi Air Pollution: ದೆಹಲಿಯಲ್ಲಿ ತಾರಕಕ್ಕೇರಿದ ಪ್ರತಿಭಟನೆಯಲ್ಲಿ ನಕ್ಸಲ್‌ ನಾಯಕನ ಪೋಸ್ಟರ್‌ ಪತ್ತೆ, ಪೊಲೀಸರ ಮೇಲೆ ಪೆಪ್ಪರ್‌ ಸ್ಪ್ರೇ ಬಳಕೆ

Madvi Hidma Poster: ಇಂಡಿಯಾ ಗೇಟ್​ ಮುಂದೆ ಪ್ರತಿಭಟನಕಾರರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಪೊಲೀಸರು ಗುಂಪನ್ನ ಚದುರಿಸಲು ಯತ್ನಿಸಿದ್ದಾರೆ. ಆದ್ರೆ ಈ ವೇಳೆ ವಾಗ್ವಾದ ಉಂಟಾಗಿದ್ದು, ಪ್ರತಿಭಟನಕಾರರು ಪೊಲೀಸರ ಮೇಲೆ ಪೆಪ್ಪರ್​ ಸ್ಪ್ರೇ ಸಿಂಪಡಿಸಿದ್ದಾರೆ. ನಾಲ್ಕು ಪೊಲೀಸರು ಗಾಯಗೊಂಡಿದ್ದು, ಪೊಲೀಸರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದೇ ವೇಳೆ ಮೃತ ನಕ್ಸಲ್‌ ನಾಯಕ ಮಾದ್ವಿ ಹಿಡ್ಮಾ ಪೋಸ್ಟರ್‌ ಹಾಗೂ ಸ್ಲೋಗನ್‌ಗಳು ಪ್ರತಿಭಟನೆಯಲ್ಲಿ ಕಂಡುಬಂದಿವೆ.

ದೆಹಲಿಯಲ್ಲಿ ನಕ್ಸಲ್‌ ನಾಯಕನ ಪೋಸ್ಟರ್‌, ಪೊಲೀಸರ ಮೇಲೆ ಪೆಪ್ಪರ್‌ ಸ್ಪ್ರೇ!

ದೆಹಲಿ ವಾಯುಮಾಲಿನ್ಯ ಪ್ರತಿಭಟನೆಯಲ್ಲಿ ಮಾದ್ವಿ ಹಿಡ್ಮಾ ಪೋಸ್ಟರ್ -

ಹರೀಶ್‌ ಕೇರ
ಹರೀಶ್‌ ಕೇರ Nov 24, 2025 10:24 AM

ನವದೆಹಲಿ, ನ.24: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (New Delhi) ವಾಯು ಗುಣಮಟ್ಟ (Delhi Air Pollution) ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ಈ ಕುರಿತು ಕೆಲವು ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ಭಾನುವಾರ ತುಸು ಗೊಂದಲಕಾರಿ ಸನ್ನಿವೇಶದತ್ತ ತಿರುಗಿತು. ಜನ ಬೀದಿಗಿಳಿದು ಇಂಡಿಯಾ ಗೇಟ್ (India Gate)​ ಮುಂದೆ ಪ್ರತಿಭಟನೆ ನಡೆಸಿದ್ದು, ಈ ವೇಳೆ ಪ್ರತಿಭಟನಕಾರರು ಮತ್ತು ಪೊಲೀಸರ ನಡುವೆ ತಳ್ಳಾಟ ನೂಕಾಟ ಉಂಟಾಗಿದೆ. ಇದೇ ಸಂದರ್ಭದಲ್ಲಿ ಕೆಲವು ಪ್ರತಿಭಟನಾಕಾರರು ಮಾವೋವಾದಿ ನಾಯಕ, ಮೃತ ನಕ್ಸಲ್‌ ಕಮಾಂಡರ್ ಮಾದ್ವಿ ಹಿಡ್ಮಾ (Madvi Hidma) ಚಿತ್ರದ ಪೋಸ್ಟರ್‌ಗಳನ್ನು ಹಿಡಿದಿದ್ದುದು ಕಂಡುಬಂತು. ʼಮಾದ್ವಿ ಹಿಡ್ಮಾ ಅಮರ್‌ ರಹೇʼ ಎಂಬ ಘೋಷಣೆಗಳೂ ಮೊಳಗಿವೆ.

ದೆಹಲಿಯ ವಿಷಕಾರಿ ವಾಯುಗುಣದ ಕುರಿತು ಇಂಡಿಯಾ ಗೇಟ್‌ನಲ್ಲಿ ನಡೆದ ಪ್ರತಿಭಟನೆ ಗೊಂದಲ ಸೃಷ್ಟಸಿದ್ದು, ಕಳೆದ ವಾರ ಆಂಧ್ರಪ್ರದೇಶದಲ್ಲಿ ನಡೆದ ಪೊಲೀಸ್ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ ಮಾವೋವಾದಿ ಕಮಾಂಡರ್ ಮಾದ್ವಿ ಹಿಡ್ಮಾ ಪೋಸ್ಟರ್‌ಗಳನ್ನು ಪ್ರತಿಭಟನಾಕಾರರು ಪ್ರದರ್ಶಿಸಿದರು. ಭಾನುವಾರ ಸಂಜೆ ಪ್ರತಿಭಟನಾಕಾರರು ಸಂಚಾರವನ್ನು ತಡೆಯಲು ಪ್ರಯತ್ನಿಸಿದರು. ಪೊಲೀಸರು ಅವರನ್ನು ಚದುರಿಸಲು ಪ್ರಯತ್ನಿಸಿದರು. ಆಗ ಪ್ರತಿಭಟನಾಕಾರರು ಪೊಲೀಸ್ ಅಧಿಕಾರಿಗಳ ಮೇಲೆ ಪೆಪ್ಪರ್‌ ಸ್ಪ್ರೇ ಸಿಂಪಡಿಸಿದರು.

ಇಂಡಿಯಾ ಗೇಟ್​ ಮುಂದೆ ಪ್ರತಿಭಟನಕಾರರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಪೊಲೀಸರು ಗುಂಪನ್ನ ಚದುರಿಸಲು ಯತ್ನಿಸಿದ್ದಾರೆ. ಆದ್ರೆ ಈ ವೇಳೆ ವಾಗ್ವಾದ ಉಂಟಾಗಿದ್ದು, ಪ್ರತಿಭಟನಕಾರರು ಪೊಲೀಸರ ಮೇಲೆ ಪೆಪ್ಪರ್​ ಸ್ಪ್ರೇ ಸಿಂಪಡಿಸಿದ್ದಾರೆ. ನಾಲ್ಕು ಪೊಲೀಸರು ಗಾಯಗೊಂಡಿದ್ದು, ಪೊಲೀಸರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಪ್ರತಿಭಟನೆ ನಡೆಸಲು ಜಂತರ್​ ಮಂತರ್​ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಆದರೆ ಪ್ರತಿಭಟನಕಾರರು ಇಂಡಿಯಾ ಗೇಟ್​ ಮುಂದೆ ಪ್ರತಿಭಟನೆ ನಡೆಸಿದ್ದು, ಇದರಿಂದ ಕೆಲ ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ಪ್ರತಿಭಟನಕಾರರನ್ನು ಪೊಲೀಸರು ತಡೆಯಲು ಹೋದ ವೇಳೆ ತಳ್ಳಾಟ ನೂಕಾಟ ಉಂಟಾಗಿದೆ. ಕೆಲವರು ಬ್ಯಾರಿಕೇಡ್​​ಗಳನ್ನ ಕಿತ್ತು ಎಸೆದಿದ್ದು, ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಹಾಗೂ ಪೊಲೀಸರ ಮೇಲೆ ಮೆಣಸಿನ ಸ್ಪ್ರೇ ಸಿಂಪಡಿಸಿದ ಹನ್ನೊಂದು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: Naxal Encounter: 26 ಸಶಸ್ತ್ರ ದಾಳಿಗಳ ರೂವಾರಿ ನಕ್ಸಲ್‌ ಕಮಾಂಡರ್ ಮದ್ವಿ ಹಿಡ್ಮಾ ಎನ್‌ಕೌಂಟರ್‌

ವಾಯುಮಾಲಿನ್ಯ ನಿಯಂತ್ರಣಕ್ಕೆ ದೆಹಲಿ ಸರ್ಕಾರ ಕೈಗೊಂಡಿರುವ ನೀರಿನ ಸಿಂಪರಣೆ, ಮೋಡ ಬಿತ್ತನೆ ಮುಂತಾದ ಕ್ರಮಗಳನ್ನು ವಿರೋಧಿಸಿ, ದೆಹಲಿ ಸಮನ್ವಯ ಸಮಿತಿ ಈ ಪ್ರತಿಭಟನೆಯನ್ನು ಆಯೋಜಿಸಿತ್ತು. ರೇಖಾ ಗುಪ್ತಾ ನೇತೃತ್ವದ ದೆಹಲಿ ಸರ್ಕಾರ ಈ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ವಿಫಲವಾಗಿದೆ ಎಂದು ಎತ್ತಿ ತೋರಿಸಿದೆ. ಈ ತಿಂಗಳು ದೆಹಲಿಯ ಹದಗೆಡುತ್ತಿರುವ ವಾಯು ಮಾಲಿನ್ಯದ ವಿರುದ್ಧ ನಡೆದ ಎರಡನೇ ಪ್ರತಿಭಟನೆ ಇದಾಗಿದೆ.

ನವೆಂಬರ್ 8ರಂದು, ಕಾರ್ಯಕರ್ತರು ಮತ್ತು ಪ್ರತಿಭಟನಾಕಾರರು ಇಂಡಿಯಾ ಗೇಟ್ ಕಡೆಗೆ ಮೆರವಣಿಗೆ ನಡೆಸಿದ್ದರು. ರಾಜಧಾನಿಯಲ್ಲಿ ವಾಯು ಮಾಲಿನ್ಯವನ್ನು ಎದುರಿಸಲು ಸರ್ಕಾರ ಪರಿಣಾಮಕಾರಿ ನೀತಿಗಳನ್ನು ರೂಪಿಸಬೇಕೆಂದು ಒತ್ತಾಯಿಸಿದರು. ಇದರಲ್ಲಿ ಎಎಪಿ ಮತ್ತು ಕಾಂಗ್ರೆಸ್‌ನಂತಹ ವಿರೋಧ ಪಕ್ಷಗಳ ನಾಯಕರು ಸೇರಿಕೊಂಡಿದ್ದರು. ದಿಲ್ಲಿಯ ಅನೇಕ ಪ್ರದೇಶಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕವು ತೀವ್ರ ವರ್ಗದ ಅಡಿಯಲ್ಲಿ 400 ಅಂಕಗಳನ್ನು ದಾಟಿದೆ.

ಇದನ್ನೂ ಓದಿ: Delhi Air Pollution: ದೆಹಲಿ ವಾಯು ಮಾಲಿನ್ಯ ತಡೆಗೆ ಕ್ರಮ ಕೈಗೊಳ್ಳುವಂತೆ ಪ್ರತಿಭಟನೆ; ಪ್ರತಿಭಟನಾಕಾರರನ್ನೇ ಬಂಧಿಸಿದ ಪೊಲೀಸರು!