Dubai Tejas Crash: ವಿಂಗ್ ಕಮಾಂಡರ್‌ಗೆ ನಮಾಂಶ್‌ಗೆ ಪತ್ನಿಯ ಅಂತಿಮ ಸೆಲ್ಯೂಟ್ ಹೀಗಿತ್ತು
Wing Commander Namansh Syal: ಏಳು ವರ್ಷದ ಪುತ್ರಿಯ ಕೈ ಹಿಡಿದುಕೊಂಡು ಬಂದ ಅವರು ಕಣ್ಣೀರು ಹಾಕುತ್ತಲೇ ಪತಿಗೆ ಸೆಲ್ಯೂಟ್ ಹೊಡೆದ ದೃಶ್ಯ ಮನಕಲಕುವಂತಿತ್ತು. ನಮಾಂಶ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ನೂರಾರು ಸ್ಥಳೀಯರು ಜಮಾಯಿಸಿದ್ದರು. ಕುಶಾಲತೋಪು ಸಿಡಿಸಿ ಸರ್ಕಾರಿ ಗೌರವ ಸಲ್ಲಿಸಲಾಯಿತು. ನಮಾಂಶ್ ಅವರ ಪತ್ನಿ ಕೂಡ IAF ಅಧಿಕಾರಿಯಾಗಿದ್ದು, ಕೋಲ್ಕತ್ತಾದಲ್ಲಿ ತರಬೇತಿ ಪಡೆಯುತ್ತಿದ್ದರು.
ಹುತಾತ್ಮ ಕ್ಯಾ. ನಮಾಂಶ್‌ಗೆ ಪತ್ನಿಯ ಸೆಲ್ಯೂಟ್ -
ಧರ್ಮಶಾಲಾ: ದುಬೈ ಏರ್ ಶೋ (Dubai Air Show) ವೇಳೆ ತೇಜಸ್ ಯುದ್ಧ ವಿಮಾನ ಪತನಗೊಂಡು (Tejas Crash) ಹುತಾತ್ಮರಾಗಿದ್ದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಪೈಲಟ್ ನಮಾಂಶ್ ಸಯಾಲ್ (Namansh Syal) ಅವರ ಅಂತ್ಯಸಂಸ್ಕಾರ ನಿನ್ನೆ ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿ ನಡೆಯಿತು. ನಮಾಂಶ್ ಅವರ ಪತ್ನಿ ಅಫ್ಸಾನ (Afasana) ಅವರು ವಿಂಗ್ ಕಮಾಂಡರ್ ಆಗಿ ಸೇವೆ ಸಲ್ಲಿಸುತ್ತಿದ್ದು, ಸಮವಸ್ತ್ರ ಧರಿಸಿ ಬಂದು ತಮ್ಮ ಪತಿಗೆ ಅಂತಿಮ ನಮನ ಸಲ್ಲಿಸಿದರು.
ಏಳು ವರ್ಷದ ಪುತ್ರಿಯ ಕೈ ಹಿಡಿದುಕೊಂಡು ಬಂದ ಅವರು ಕಣ್ಣೀರು ಹಾಕುತ್ತಲೇ ಪತಿಗೆ ಸೆಲ್ಯೂಟ್ ಹೊಡೆದ ದೃಶ್ಯ ಮನಕಲಕುವಂತಿತ್ತು. ನಮಾಂಶ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ನೂರಾರು ಸ್ಥಳೀಯರು ಜಮಾಯಿಸಿದ್ದರು. ಕುಶಾಲತೋಪು ಸಿಡಿಸಿ ಸರ್ಕಾರಿ ಗೌರವ ಸಲ್ಲಿಸಲಾಯಿತು.
ಭಾರತೀಯ ವಾಯುಪಡೆ (IAF)ನ ಅಧಿಕಾರಿಯ ಮೃತದೇಹವನ್ನು ವಿಶೇಷ ವಿಮಾನದಲ್ಲಿ ನಿನ್ನೆ ಬೆಳಗ್ಗೆ ಭಾರತಕ್ಕೆ ತರಲಾಯಿತು. ಇದಕ್ಕೂ ಮುನ್ನ ಎಮಿರೇಟ್ಸ್ ರಕ್ಷಣಾ ಪಡೆಗಳು ವಿಧ್ಯುಕ್ತ ಗೌರವ ಸಲ್ಲಿಸಿ, ನಮಾಂಶ್ ಶೌರ್ಯ, ಸಾಹಸವನ್ನು ಶ್ಲಾಘಿಸಿದವು. ಅಲ್ಲದೇ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಭಾರತೀಯ ರಾಯಭಾರಿ ದೀಪಕ್ ಮಿತ್ತಲ್ ಮತ್ತು ಕಾನ್ಸುಲೇಟ್ ಜನರಲ್ ಸತೀಶ್ ಶಿವನ್ ಕೂಡ ಅಂತಿಮ ಗೌರವ ಸಲ್ಲಿಸಿದ್ದರು. ಈ ಕುರಿತು ಯುಎಇಯಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಕೂಡ ಹಂಚಿಕೊಂಡಿತ್ತು.
#WATCH | Himachal Pradesh: Wing Commander Afshan salutes her husband, Wing Commander Namansh Syal, as she pays her last respects to him.
— ANI (@ANI) November 23, 2025
Wing Commander Namansh Syal lost his life in the LCA Tejas crash in Dubai on 21st November. pic.twitter.com/DPKwARut4r
ನಗ್ರೋಟಾ ಬಾಗ್ವಾನ್‌ನ ಪಟಿಯಾಲಕಾಡ್ ಗ್ರಾಮದ ನಿವಾಸಿ ವಿಂಗ್ ಕಮಾಂಡರ್ ಸಯಾಲ್, ತಮ್ಮ ಶಿಸ್ತು ಮತ್ತು ಭಾರತೀಯ ವಾಯುಪಡೆಯಲ್ಲಿ ಸೇವೆಗೆ ಹೆಸರುವಾಸಿಯಾಗಿದ್ದರು. 2009 ರಲ್ಲಿ ಎನ್‌ಡಿಎಗೆ ಸೇರುವ ಮೊದಲು ಅವರು ಡಾಲ್ಹೌಸಿಯ ಪ್ರಾಥಮಿಕ ಶಾಲೆ, ಆರ್ಮಿ ಪಬ್ಲಿಕ್ ಸ್ಕೂಲ್ ಯೊಲ್ ಕ್ಯಾಂಟ್ ಧರ್ಮಶಾಲಾ ಮತ್ತು ಹಿಮಾಚಲ ಪ್ರದೇಶದ ಸುಜನ್‌ಪುರ್ ತಿರಾದ ಸೈನಿಕ್ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು.
ಇದನ್ನೂ ಓದಿ: ತೇಜಸ್ ಯುದ್ಧ ವಿಮಾನ ಅಪಘಾತ: ಪೈಲೆಟ್ ನಮಾಂಶ್ ಸಯಾಲ್ ಕೊನೆಯ ಕ್ಷಣದ ವಿಡಿಯೊ ಇಲ್ಲಿದೆ
ನಮಾಂಶ್ ಸಯಾಲ್ ತಂದೆ- ತಾಯಿ ವೀಣಾ ಸಯಾಲ್ ಸೇರಿದಂತೆ ಸಯಾಲ್ ಕುಟುಂಬ ಪ್ರಸ್ತುತ ತಮಿಳುನಾಡಿನ ಕೊಯಮತ್ತೂರಿನಲ್ಲಿ ನೆಲೆಸಿದೆ. ನಮಾಂಶ್ ಅವರ ಪತ್ನಿ ಕೂಡ IAF ಅಧಿಕಾರಿ. ಕೋಲ್ಕತ್ತಾದಲ್ಲಿ ತರಬೇತಿ ಪಡೆಯುತ್ತಿದ್ದರು.
ದುಬೈ ಏರ್ ಶೋ 2025 ರ ಸಮಯದಲ್ಲಿ ತೇಜಸ್ ವಿಮಾನ ಅಪಘಾತದ ಸ್ವರೂಪವನ್ನು ನೋಡಿದರೆ, ಪೈಲಟ್ ನಿಯಂತ್ರಣ ಕಳೆದುಕೊಂಡ ಕಾರಣ ಅಥವಾ ಗುರುತ್ವಾಕರ್ಷಣೆಯಿಂದ ಉಂಟಾದ ಬ್ಲ್ಯಾಕೌಟ್‌ನಿಂದ ಈ ಘಟನೆ ಸಂಭವಿಸಿರಬಹುದು ಎಂದು ರಕ್ಷಣಾ ತಜ್ಞ ಕ್ಯಾಪ್ಟನ್ ಅನಿಲ್ ಗೌರ್ (ನಿವೃತ್ತ) ಊಹಿಸಿದ್ದಾರೆ. ಕಾಕ್‌ಪಿಟ್‌ನಿಂದ ಡೇಟಾವನ್ನು ಪಡೆದ ನಂತರವೇ ಅಪಘಾತದ ನಿಖರವಾದ ಕಾರಣವನ್ನು ನಿರ್ಧರಿಸಬಹುದು ಎಂದು ಹೇಳಿದರು.
ಇದನ್ನೂ ಓದಿ: Tejas Crash: ಏಕಾಏಕಿ ತೇಜಸ್ ಯುದ್ಧ ವಿಮಾನ ಪತನಗೊಳ್ಳಲು ಕಾರಣವೇನು? ಅದೊಂದು ತಪ್ಪು ನಿರ್ಧಾರವೇ ಕಾರಣವಾಯಿತಾ?