ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Manipur Unrest: ವಕ್ಛ್‌ ಮಸೂದೆಗೆ ಬೆಂಬಲ; ಬಿಜೆಪಿ ಮುಖಂಡನ ಮನೆಗೆ ಬೆಂಕಿ

ವಕ್ಛ್‌ ತಿದ್ದುಪಡಿ ಮಸೂದೆಯನ್ನು ಬೆಂಬಲಿಸಿದ್ದಕ್ಕಾಗಿ ಮಣಿಪುರ ಬಿಜೆಪಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಆಸ್ಕರ್ ಅಲಿ ಅವರ ನಿವಾಸಕ್ಕೆ ಉದ್ರಿಕ್ತರ ಗುಂಪೊಂದು ಬೆಂಕಿ ಹಚ್ಚಿದೆ. ಭಾನುವಾರ ಗಲಭೆಕೋರರು ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತೌಬಲ್ ಜಿಲ್ಲೆಯ ಲಿಲಾಂಗ್‌ನಲ್ಲಿರುವ ಮನೆಗೆ ಬೆಂಕಿ ಹಚ್ಚಲಾಗಿದೆ.

ವಕ್ಛ್‌ ಮಸೂದೆಗೆ ಬೆಂಬಲ; ಬಿಜೆಪಿ ಮುಖಂಡನ ಮನೆಗೆ ಬೆಂಕಿ ಹಚ್ಚಿದ ದುರುಳರು

Profile Vishakha Bhat Apr 7, 2025 1:29 PM

ಇಂಫಾಲ್‌: ವಕ್ಛ್‌ ತಿದ್ದುಪಡಿ ಮಸೂದೆಯನ್ನು ಬೆಂಬಲಿಸಿದ್ದಕ್ಕಾಗಿ ಮಣಿಪುರ ಬಿಜೆಪಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಆಸ್ಕರ್ ಅಲಿ ಅವರ ನಿವಾಸಕ್ಕೆ ಉದ್ರಿಕ್ತರ ಗುಂಪೊಂದು ಬೆಂಕಿ ಹಚ್ಚಿದೆ. ಭಾನುವಾರ (Manipur Unrest) ಗಲಭೆಕೋರರು ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಕ್ಛ್‌ ತಿದ್ದುಪಡಿ ಮಸೂದೆ ಬೆಂಬಲಿಸಿ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದರು. ಇದರಿಂದ ಜನರು ಕೆರಳಿದ್ದರು ಎಂದು ತಿಳಿದು ಬಂದಿದೆ. ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ತೌಬಲ್ ಜಿಲ್ಲೆಯ ಲಿಲಾಂಗ್‌ನಲ್ಲಿರುವ ಮನೆಗೆ ಬೆಂಕಿ ಹಚ್ಚಲಾಗಿದೆ.

ವರದಿಗಳ ಪ್ರಕಾರ, ಗುಂಪೊಂದು ಮೊದಲು ಅಲಿಯವರ ಮನೆಯನ್ನು ಧ್ವಂಸ ಮಾಡಿ ನಂತರ ಬೆಂಕಿ ಹಚ್ಚಿತು. ಅದೃಷ್ಟವಶಾತ್, ದಾಳಿಯ ಸಮಯದಲ್ಲಿ ಮನೆಯಲ್ಲಿರುವ ಜನರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ವಕ್ಫ್ ತಿದ್ದುಪಡಿ ಕಾಯ್ದೆ ಸಂವಿಧಾನದ ನೀತಿಗೆ ವಿರುದ್ಧವಾಗಿದೆ. ಇದು ಮುಸ್ಲಿಂ ಸಮುದಾಯಕ್ಕೆ ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ" ಎಂದು ಪ್ರತಿಭಟನಾಕಾರನೊಬ್ಬ ಹೇಳಿದ್ದಾನೆ.

ಘಟನೆಯ ನಂತರ, ಅಕ್ಸರ್ ಅಲಿ ಅವರು ಜನರ ಭಾವನೆಗಳಿಗೆ ನೋವುಂಟುಮಾಡುವ ತಮ್ಮ ಮಾತುಗಳಿಗಾಗಿ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಪೋಸ್ಟ್ ಮೂಲಕ ಜನರಲ್ಲಿ ಕ್ಷಮೆಯಾಚಿಸಿದರು ಮತ್ತು ವಕ್ಛ್‌ ತಿದ್ದುಪಡಿಗಳನ್ನು ಇನ್ನು ಮುಂದೆ ಬೆಂಬಲಿಸುವುದಿಲ್ಲ ಎಂದು ಹೇಳುವ ಮೂಲಕ ಯೂ-ಟರ್ನ್ ತೆಗೆದುಕೊಂಡಿದ್ದಾರೆ. ಭಾನುವಾರ ಇಂಫಾಲ್‌ನ ಕ್ಷತ್ರಿ ಅವಾಂಗ್ ಲೈಕೈ, ಕೈರಾಂಗ್ ಮುಸ್ಲಿಂ, ಕಿಯಾಮ್‌ಗೇ ಸೇರಿದಂತೆ ಹಲವು ಕಡೆ ವಕ್ಛ್‌ ತಿದ್ದುಪಡಿ ಮಸೂದೆಯ ವಿರುದ್ಧ ಪ್ರತಿಭಟನೆಗಳು ನಡೆದವು. ಲಿಲಾಂಗ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ, 5,000 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.

ಪ್ರತಿಭಟನೆಕಾರರು ರಾಷ್ಟ್ರೀಯ ಹೆದ್ದಾರಿ 102 ಅನ್ನು ತಡೆದು ಪ್ರತಿಭಟನೆ ನಡೆಸಿದ್ದರು. ಇದರಿಂದಾಗಿ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗಿತ್ತು. ಪ್ರತಿಭಟನಾಕರರನ್ನು ಚದುರಿಸಲು ಬಂದಿದ್ದ ಭದ್ರತಾಪಡೆಗಳೊಂದಿಗೆ ಪ್ರತಿಭಟನಾಕಾರರು ವಾಗ್ವಾದ ನಡೆಸಿದ್ದಾರೆ. ತೌಬಲ್‌ನ ಇರೋಂಗ್ ಚೆಸಾಬಾದಿಂದಲೂ ಭದ್ರತಾ ಪಡೆಗಳು ಮತ್ತು ಪ್ರತಿಭಟನಾಕಾರರ ನಡುವೆ ಇದೇ ರೀತಿಯ ಘರ್ಷಣೆಗಳು ವರದಿಯಾಗಿವೆ.



ಈ ಸುದ್ದಿಯನ್ನೂ ಓದಿ: Waqf Amendment Bill: ವಕ್ಫ್ ತಿದ್ದುಪಡಿ ಮಸೂದೆಗೆ ವಿರೋಧವೇಕೆ? ವಕ್ಫ್ ಹೊಂದಿರುವ ಭೂಮಿ ಎಷ್ಟು ಗೊತ್ತೇ?

ವಕ್ಛ್‌ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಮತ್ತು ಕಾರ್ಯಕರ್ತರು ಈ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದು, ವಿಶ್ವವಿದ್ಯಾಲಯದ ಪ್ರವೇಶದ್ವಾರದಲ್ಲಿ ಆಯೋಜಿಸಲಾದ ಪ್ರತಿಭಟನೆ ನಡೆಸಿದರು. ಸರ್ಕಾರವು ಅಲ್ಪಸಂಖ್ಯಾತ ಸಮುದಾಯ ಮತ್ತು ಅದರ ಆಸ್ತಿಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದರು. ಪ್ರತಿಭಟನೆಯ ಕ್ರಮವಾಗಿ, ಅವರು ಮಸೂದೆಯ ಪ್ರತಿಗಳನ್ನು ಸುಟ್ಟುಹಾಕಿದರು.