ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಮೀರತ್ ಕೊಲೆ ಪ್ರಕರಣ: ಭೋಜ್ಪುರಿ ಹಾಡಿನಲ್ಲಿ ಭೀಕರ ಘಟನೆ ಅನಾವರಣ; ವಿಡಿಯೊ ನೋಡಿ

ಮೀರತ್‍ನಲ್ಲಿ ಸೌರಭ್ ರಜಪೂತ್ ಹತ್ಯೆಯಲ್ಲಿ ಆತನ ಪತ್ನಿ ಮತ್ತು ಆಕೆಯ ಪ್ರಿಯಕರ ಮಾಡಿದ ಕೃತ್ಯ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು.ಇದೀಗ ಅವರ ಕೊಲೆ ಮಾಡಿದ ವಿಧಾನವನ್ನು ಪ್ರತಿಬಿಂಬಿಸುವ “ಡ್ರಮ್ ಮೇ ರಾಜಾ" ಎಂಬ ಶೀರ್ಷಿಕೆಯ ಭೋಜ್ಪುರಿ ಹಾಡೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಈ ಹಾಡಿನ ಸಾಹಿತ್ಯವನ್ನು ಕಂಡು ನೆಟ್ಟಿಗರು ಶಾಕ್‌ ಆಗಿದ್ದಾರೆ.

ಮೀರತ್ ಕೊಲೆ ಪ್ರಕರಣ; 'ಡ್ರಮ್ ಮೇ ರಾಜಾ' ಹಾಡು ಫುಲ್‌ ವೈರಲ್‌

Profile pavithra Apr 9, 2025 6:57 PM

ಲಖನೌ: ಮೀರತ್‍ನಲ್ಲಿ ನೌಕಾಪಡೆ ಅಧಿಕಾರಿ ಸೌರಭ್ ರಜಪೂತ್‌ನನ್ನು ಆತನ ಪತ್ನಿ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಬರ್ಬರವಾಗಿ ಹತ್ಯೆ ಮಾಡಿದ ನಂತರ ಡ್ರಮ್‍ನಲ್ಲಿ ತುಂಬಿಸಿಟ್ಟ ಪ್ರಕರಣವು ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇದೀಗ ಆ ಕೊಲೆ ಪ್ರಕರಣ ಹಾಡೊಂದರ ಮೂಲಕ ಮತ್ತೆ ಸುದ್ದಿಯಾಗಿದೆ. "ಡ್ರಮ್ ಮೇ ರಾಜಾ" ಎಂಬ ಶೀರ್ಷಿಕೆಯ ಈ ಹಾಡು ಕೊಲೆ ಪ್ರಕರಣಕ್ಕೆ ಹೋಲಿಕೆಯಾದ್ದರಿಂದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ. ಮೀರತ್ ಹತ್ಯೆಯಲ್ಲಿ ಬಳಸಲಾದ ಭೀಕರ ವಿಧಾನವನ್ನು ಪ್ರತಿಬಿಂಬಿಸುವ ಈ ಹಾಡಿನ ಸಾಲು ಪ್ರಿಯಕರನಿಗಾಗಿ ಮಹಿಳೆ ಪತಿಯನ್ನು ಕೊಂದು ಡ್ರಮ್‍ನಲ್ಲಿ ತುಂಬಿಸುವ ಸಾಹಿತ್ಯವನ್ನು ಕಂಡು ನೆಟ್ಟಿಗರು ಶಾಕ್‌ ಆಗಿದ್ದಾರೆ.

ವೈರಲ್ ವಿಡಿಯೊದಲ್ಲಿ ಹಿನ್ನೆಲೆ ನೃತ್ಯಗಾರರು ಪ್ರದರ್ಶನದುದ್ದಕ್ಕೂ ನೀಲಿ ಡ್ರಮ್‍ಗಳನ್ನು ಆಧಾರವಾಗಿ ಬಳಸುವುದು ಸೆರೆಯಾಗಿದೆ. ಈ ವಿಡಿಯೊ ವೈರಲ್ ಆದ ಕಾರಣ ಇದು ಅನೇಕರ ಗಮನ ಸೆಳೆದಿದ್ದು, ಕೆಲವರು ಕಾಮೆಂಟ್ ವಿಭಾಗಕ್ಕೆ ಹೋಗಿ ಹಾಡಿನ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ "ಒಂದು ಕಾಲದಲ್ಲಿ ಬಿಹಾರವು ಪ್ರಪಂಚದಾದ್ಯಂತದ ಜನರು ನಾಗರಿಕತೆಯ ಬಗ್ಗೆ ಕಲಿಯಲು ಇದ್ದ ಸ್ಥಳವಾಗಿತ್ತು. ಆದರೆ ಈಗ ಅಲ್ಲಿನ ಅನೇಕ ಜನರಲ್ಲಿ ನಾಗರಿಕತೆಯ ಪ್ರಜ್ಞೆ ಸತ್ತು ಹೋಗಿದೆ ಎಂದು ತೋರುತ್ತದೆ" ಎಂದು ಒಬ್ಬರು ಹೇಳಿದ್ದಾರೆ. "ನೀವು ಆಕರ್ಷಕ ಬೀಟ್ಸ್ ಮತ್ತು ಆದ್ಭುತವಾದ ಹೆಜ್ಜೆಗಳೊಂದಿಗೆ ಬೇರೆ ಯಾವುದಾದರು ಟ್ರೆಂಡಿಂಗ್ ವಿಷಯದೊಂದಿಗೆ ಸಾಹಿತ್ಯವನ್ನು ರಚಿಸಿದ್ರೆ ಒಳ್ಳೆದಿತ್ತು, ಆದರೆ ಇದು ಬೇಡ ಇತ್ತು." ಎಂದು ಇನ್ನೊಬ್ಬರು ಹೇಳಿದ್ದಾರೆ.

ಹಾಡಿನ ವಿಡಿಯೊ ಇಲ್ಲಿದೆ ನೋಡಿ...



ನೆಟ್ಟಿಗರೊಬ್ಬರು ಗೀತರಚನೆಕಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದ್ದಾರೆ. "ದಯವಿಟ್ಟು ಕ್ರಮ ತೆಗೆದುಕೊಳ್ಳಿ. ಈ ಜನರು ಸಮಾಜದಲ್ಲಿ ಶಾಂತಿಯನ್ನು ಭಂಗಗೊಳಿಸುವ ಭಯಾನಕ ಅಪರಾಧವನ್ನು ಮಾಡುತ್ತಿದ್ದಾರೆ” ಎಂದಿದ್ದಾರೆ. ಕ್ರೂರ ಕೊಲೆ ಪ್ರಕರಣವನ್ನು ಅಣಕಿಸಿದ ಕಾರಣ ಈ ಹಾಡು ಯಾವುದೇ ಕಾನೂನು ತೊಂದರೆಗೆ ಸಿಲುಕುತ್ತದೆಯೇ ಎಂದು ಕಾದು ನೋಡಬೇಕಾಗಿದೆ.

ಈ ಸುದ್ದಿಯನ್ನೂ ಓದಿ:Viral Video: ರೈಲ್ವೇ ಸಿಬ್ಬಂದಿಯಿಂದ ಘೋರ ಕೃತ್ಯ! ಚಲಿಸುತ್ತಿದ್ದ ರೈಲಿನಿಂದ ಯುವಕನನ್ನು ತಳ್ಳಿದ GRP ಮತ್ತು TTE
ಮೀರತ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಬೆಳವಣಿಗೆಯೊಂದು ಕೇಳಿಬಂದಿದೆ. ಪ್ರಮುಖ ಆರೋಪಿ ಮುಸ್ಕಾನ್ ರಸ್ತೋಗಿ ಗರ್ಭಿಣಿ ಎಂದು ವರದಿಯಾಗಿದೆ. ಆಕೆಯ ಸ್ಥಿತಿಯನ್ನು ಪರಿಶೀಲಿಸಲು ಅಲ್ಟ್ರಾಸೌಂಡ್ ನಡೆಸಲಾಗುವುದು ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಮಾರ್ಚ್ 4ರ ರಾತ್ರಿ ಮುಸ್ಕಾನ್ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಸೇರಿ ಸೌರಭ್ ರಜಪೂತ್‌ನನ್ನು ಕೊಲೆ ಮಾಡಿದ್ದರು. ಇವರಿಬ್ಬರು ಸೌರಭ್‌ನ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಸಿಮೆಂಟ್ ತುಂಬಿದ ನೀಲಿ ಡ್ರಮ್‍ನಲ್ಲಿ ಬಚ್ಚಿಟ್ಟಿದ್ದರು. ಈ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದ್ದು, ಮುಸ್ಕಾನ್ ಮತ್ತು ಸಾಹಿಲ್ ಇಬ್ಬರೂ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.