Viral Video: ರೈಲ್ವೇ ಸಿಬ್ಬಂದಿಯಿಂದ ಘೋರ ಕೃತ್ಯ! ಚಲಿಸುತ್ತಿದ್ದ ರೈಲಿನಿಂದ ಯುವಕನನ್ನು ತಳ್ಳಿದ GRP ಮತ್ತು TTE
ಇತ್ತೀಚೆಗೆ ಮಹೋಬಾ ಜಿಲ್ಲೆಯ ಘುಟೈ ಮತ್ತು ಬೆಲಾಟಾಲ್ ನಿಲ್ದಾಣಗಳ ನಡುವೆ ಚಲಿಸುವ ರೈಲಿನಿಂದ 28 ವರ್ಷದ ಯುವಕನನ್ನು ಜಿಆರ್‌ಪಿ ಮತ್ತು ಟಿಟಿಇ ತಳ್ಳಿದ್ದರಿಂದ ಆತ ರೈಲಿನಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ. ಪ್ರಯಾಣಿಕರು ಜಿಆರ್‌ಪಿಯನ್ನು ತರಾಟೆಗೆ ತೆಗೆದುಕೊಂಡಿದ್ದು ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿದೆ.


ಲಖನೌ: ಇತ್ತೀಚೆಗೆ ಮಹೋಬಾ ಜಿಲ್ಲೆಯ ಘುಟೈ ಮತ್ತು ಬೆಲಾಟಾಲ್ ನಿಲ್ದಾಣಗಳ ನಡುವೆ ಚಲಿಸುವ ರೈಲಿನಿಂದ ಬಿದ್ದು 28 ವರ್ಷದ ಯುವಕ ಸಾವನ್ನಪ್ಪಿದ್ದಾನೆ. ಆದರೆ ಈ ಪ್ರಕರಣದಲ್ಲಿ ಗಂಭೀರ ಆರೋಪವೊಂದು ಕೇಳಿಬಂದಿದೆ. ಅದೇನೆಂದರೆ ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಕಾನ್‌ಸ್ಟೇಬಲ್ ಮತ್ತು ಟಿಕೆಟ್ ಕಲೆಕ್ಟರ್ (ಟಿಟಿಇ) ಯುವಕನನ್ನು ವೇಗವಾಗಿ ಚಲಿಸುತ್ತಿದ್ದ ರೈಲಿನಿಂದ ತಳ್ಳಿದ್ದಾರೆ ಎಂದು ಕೆಲವು ಪ್ರಯಾಣಿಕರು ಆರೋಪಿಸಿದ್ದಾರೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿದೆ. ಪೊಲೀಸರು ಈಗ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರಂತೆ.ವೈರಲ್ ಆದ ವಿಡಿಯೊದಲ್ಲಿ ಪ್ರಯಾಣಿಕರು ಆರೋಪಿ ಕಾನ್‌ಸ್ಟೇಬಲ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಮತ್ತು ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರು ಮತ್ತು ಕಾನ್‌ಸ್ಟೇಬಲ್ ನಡುವೆ ತೀವ್ರ ವಾಗ್ವಾದ ನಡೆದಿದ್ದು ಸೆರೆಯಾಗಿದೆ.
महोबा में महाकौशल एक्सप्रेस से गिरकर युवक की मौत, घटना का वीडियो हुआ वायरल, घुटई-हरपालपुर स्टेशन के बीच हुई घटना !!
— MANOJ SHARMA LUCKNOW UP🇮🇳🇮🇳🇮🇳 (@ManojSh28986262) April 8, 2025
टीसी ने पैसे मांगे, धक्का देने का लगा आरोप, जनरल की जगह स्लीपर में कर रहा था यात्रा !!
टीसी और सिपाहियों पर गंभीर आरोप, नाराज यात्रियों ने सिपाही से की हाथापाई की… pic.twitter.com/eqBHVSZi4q
ವರದಿ ಪ್ರಕಾರ, ಈ ಯುವಕ ದೆಹಲಿಯಿಂದ ಜಬಲ್ಪುರಕ್ಕೆ ಚಲಿಸುವ ಮಹಾಕೋಶಲ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದನಂತೆ. ಟಿಕೆಟ್ ಕಲೆಕ್ಟರ್ (ಟಿಟಿಇ) ಮತ್ತು ಜಿಆರ್‌ಪಿ ಕಾನ್‌ಸ್ಟೇಬಲ್ ಟಿಕೆಟ್ ಪರಿಶೀಲಿಸಲು ಬಂದಾಗ ಆ ಯುವಕ ತಪ್ಪಾಗಿ ಈ ಭೋಗಿಯನ್ನು ಕುಳಿತಿರುವುದನ್ನು ಕಂಡು ಅವನ ಜೊತೆ ವಾಗ್ವಾದ ನಡೆಸಿದ್ದಾರೆ. ಈ ವಾಗ್ವಾದದ ಮಧ್ಯದಲ್ಲಿ, ಕಾನ್‌ಸ್ಟೇಬಲ್ ಯುವಕನನ್ನು ತಳ್ಳಿದ ಕಾರಣ ಅವನು ಚಲಿಸುವ ರೈಲಿನಿಂದ ಕೆಳಗೆ ಬಿದ್ದಿದ್ದಾನೆ ಎಂದು ಕೆಲವು ಪ್ರಯಾಣಿಕರು ಹೇಳಿದ್ದಾರೆ.
ರೈಲು ಬೆಲಾಟಾಲ್ ನಿಲ್ದಾಣವನ್ನು ತಲುಪಿದ ನಂತರ, ರೈಲಿನಲ್ಲಿದ್ದ ಪ್ರಯಾಣಿಕರು ಗಲಾಟೆ ಮಾಡಿ ಆರೋಪಿ ಕಾನ್‌ಸ್ಟೇಬಲ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಜಗಳದಿಂದಾಗಿ ಸುಮಾರು 30 ನಿಮಿಷಗಳ ಕಾಲ ರೈಲು ಸಂಚಾರ ಸ್ಥಗಿತಗೊಂಡಿತ್ತು. ಘಟನೆಯ ಬಳಿಕ ಕಾನ್‌ಸ್ಟೇಬಲ್ ಸ್ಥಳದಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ನಂತರ ಈ ಘಟನೆಯಲ್ಲಿ ಭಾಗಿಯಾದ ಟಿಟಿಇ ಕೂಡ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.
ಆದರೆ ಜಿಆರ್‌ಪಿ ಪೊಲೀಸ್ ಠಾಣೆಯ ಉಸ್ತುವಾರಿಗಳು ಈ ಘಟನೆಯ ಬಗ್ಗೆ ಬೇರೆಯೇ ಕಥೆ ಹೇಳಿದ್ದಾರೆ. ಯುವಕ ಮಾನಸಿಕ ಅಸ್ವಸ್ಥನಾಗಿ ಕಾಣುತ್ತಿದ್ದು, ತೆರೆದ ರೈಲಿನ ಬಾಗಿಲ ಬಳಿ ಕುಳಿತಿದ್ದನು. ಆಗ ಕಾನ್‌ಸ್ಟೇಬಲ್ ಆ ಯುವಕನಿಗೆ ಬಾಗಿಲ ಬಳಿ ಕುಳಿತುಕೊಳ್ಳಬೇಡಿ ಎಂದು ಹೇಳಿ ಸುರಕ್ಷತೆಗಾಗಿ ಬಾಗಿಲು ಮುಚ್ಚಲು ಪ್ರಯತ್ನಿಸಿದ್ದಾರೆ. ಆ ಕ್ಷಣದಲ್ಲಿ, ಆ ಯುವಕ ಇದ್ದಕ್ಕಿದ್ದಂತೆ ರೈಲಿನಿಂದ ಜಿಗಿದಿದ್ದಾನೆ. ಆ ವ್ಯಕ್ತಿಯ ಬಳಿ ಯಾವುದೇ ಟಿಕೆಟ್ ಅಥವಾ ಇತರ ಸಾಮಾನುಗಳು ಕಂಡುಬಂದಿಲ್ಲ ಮತ್ತು ಪೊಲೀಸರು ಇನ್ನೂ ಅವನನ್ನು ಗುರುತಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ನೂಕಾಟ-ತಳ್ಳಾಟದ ನಡುವೆಯೇ ಮಹಿಳಾ ಪೊಲೀಸ್ ಅಧಿಕಾರಿಯನ್ನೇ ತಬ್ಬಿಕೊಂಡ ಕಿಡಿಗೇಡಿ- ಶಾಕಿಂಗ್ ವಿಡಿಯೊ ವೈರಲ್
ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸಾಕ್ಷಿಗಳನ್ನು ಪ್ರಶ್ನಿಸುತ್ತಿದ್ದಾರೆ ಮತ್ತು ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ. ಘಟನೆಯ ಬಗ್ಗೆ ಪ್ರಯಾಣಿಕರು ಮತ್ತು ಪೊಲೀಸರು ಬೇರೆ ಬೇರೆ ಕಥೆ ಹೇಳುತ್ತಿದ್ದಾರೆ. ಹೀಗಾಗಿ ಈ ಬಗ್ಗೆ ತನಿಖೆ ನಡೆಯುತ್ತಿದ್ದು, ತನಿಖೆ ಪೂರ್ಣಗೊಂಡ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.