Meteor shower: ಭಾರಿ ಉಲ್ಕಾಪಾತ! ಅಪರೂಪದ ದೃಶ್ಯ ಕಣ್ತುಂಬಿಕೊಂಡ ದೆಹಲಿ ಜನತೆ
ದೆಹಲಿ, ಗುರುಗ್ರಾಮ್‌ದಲ್ಲಿ ಶುಕ್ರವಾರ ರಾತ್ರಿ ಆಕಾಶದ ಅತ್ಯಂತ ಅಪರೂಪದ ದೃಶ್ಯವೊಂದು ಗೋಚರಿಸಿದೆ. ಭಾರಿ ಪ್ರಮಾಣದ ಉಲ್ಕಾಪಾತದ ದೃಶ್ಯಗಳು ದೆಹಲಿ, ಗುರುಗ್ರಾಮ್‌ನಲ್ಲಿ ಆಕಾಶವನ್ನು ಬೆಳಗಿಸಿತ್ತು. ಕೆಲವು ಸೆಕೆಂಡುಗಳ ಕಾಲ ಗೋಚರಿಸಿದ ಈ ದೃಶ್ಯವನ್ನು ದೆಹಲಿ ಎನ್ ಸಿಆರ್ ನಾದ್ಯಂತ ಜನರು ಕಣ್ತುಂಬಿಕೊಂಡರು. ಇದರ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

-

ನವದೆಹಲಿ: ಆಕಾಶದ ಅತ್ಯಂತ ಅಪರೂಪದ ದೃಶ್ಯವೊಂದಕ್ಕೆ (spectacular celestial) ದೆಹಲಿ (delhi), ಗುರುಗ್ರಾಮ್‌ನ (Gurugram) ಜನತೆ ಸಾಕ್ಷಿಯಾದರು. ಶುಕ್ರವಾರ ರಾತ್ರಿ ಉಲ್ಕಾಪಾತದ (Meteor shower) ದೃಶ್ಯಗಳು ದೆಹಲಿ, ಗುರುಗ್ರಾಮ್‌ನಲ್ಲಿ ಆಕಾಶವನ್ನು ಬೆಳಗಿಸಿತ್ತು. ಕೆಲವು ಸೆಕೆಂಡುಗಳ ಕಾಲ ಗೋಚರಿಸಿದ ಈ ದೃಶ್ಯವನ್ನು ದೆಹಲಿ ಎನ್ ಸಿಆರ್ (Delhi NCR) ನಾದ್ಯಂತ ಜನರು ಕಣ್ತುಂಬಿಕೊಂಡರು. ಉಲ್ಕಾಪಾತದ ದೃಶ್ಯ ನಗರದ ದೀಪಗಳನ್ನು ಮೀರಿಸುವಷ್ಟು ಪ್ರಕಾಶಮಾನವಾಗಿತ್ತು. ಇದು ಸ್ಥಳೀಯ ನಿವಾಸಿಗಳನ್ನು ವಿಸ್ಮಯಗೊಳಿಸಿತು ಮತ್ತು ಆನ್‌ಲೈನ್‌ನಲ್ಲಿ ಉತ್ಸಾಹದ ಅಲೆಯನ್ನು ಹುಟ್ಟುಹಾಕಿತು.
ಆಕಾಶವನ್ನು ಬೆಳಗಿಸಿದ ಬೆಳಕಿನ ಗೆರೆಗಳು ಉಲ್ಕೆಯ ಮಳೆ ಸುರಿಸಿದಂತೆ ಭಾಸವಾಗುತ್ತಿತ್ತು. ಇದು ದೆಹಲಿ, ನೋಯ್ಡಾ, ಗಾಜಿಯಾಬಾದ್, ಗುರಗಾಂವ್ ಮತ್ತು ಅಲಿಗಢ ಸೇರಿದಂತೆ ಹಲವಾರು ನಗರಗಳಲ್ಲಿ ಗೋಚರಿಸಿತ್ತು. ಇದರ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಇದರಲ್ಲಿ ಸಣ್ಣ ಪ್ರಜ್ವಲಿಸುವ ತುಂಡುಗಳಾಗಿ ವಿಭಜನೆಯಾಗಿ ಆಕಾಶದಾದ್ಯಂತ ಉರಿಯುತ್ತಿರುವ ಬೆಂಕಿಯಂತೆ ಗೋಚರಿಸುತ್ತಿತ್ತು. ಅನೇಕ ಇದನ್ನು ನಕ್ಷತ್ರ ಸ್ಫೋಟ ಎಂದು ಕರೆದಿದ್ದು, ಇನ್ನು ಕೆಲವರು ಇದು ಅತ್ಯಂತ ಪ್ರಕಾಶಮಾನವಾದ ಉಲ್ಕೆಗಳಲ್ಲಿ ಒಂದು ಎಂದು ಬಣ್ಣಿಸಿದರು.
ಈ ಕುರಿತು ಪ್ರತಿಕ್ರಿಯಿಸಿರುವ ಖಗೋಳ ವಿಜ್ಞಾನ ತಜ್ಞರು, ಇದು ಬೊಲೈಡ್ ಆಗಿರಬಹುದು. ಇನ್ನು ಒಂದು ರೀತಿಯ ತೀವ್ರ ಘರ್ಷಣೆಯಿಂದ ಉಂಟಾಗುವಂತದ್ದು. ಹೆಚ್ಚಿನ ಶಾಖದಿಂದಾಗಿ ಭೂಮಿಯ ವಾತಾವರಣದೊಳಗೆ ಪ್ರವೇಶಿದ ಇದು ತುಂಡುಗಳಾಗಿ ಸಿಡಿಯುವ ಒಂದು ರೀತಿಯ ಉಲ್ಕೆಯಾಗಿದೆ. ಉಲ್ಕೆಗಳು ಅಸಾಮಾನ್ಯವಲ್ಲ. ಆದರೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಗೋಚರಿಸುವುದು ಅಪರೂಪ ಎಂದು ಅವರು ತಿಳಿಸಿದರು. ಹೆಚ್ಚಿನ ಉಲ್ಕೆಗಳು ನೆಲವನ್ನು ತಲುಪುವ ಮೊದಲೇ ವಿಭಜನೆಯಾಗಿರುವುದರಿಂದ ಯಾವುದೇ ಹಾನಿಯಾಗಿಲ್ಲ.
Just witnessed this incredible fire streak in the night sky
— Ujjwal Yadav (@ujjwal1710) September 19, 2025
Looks like a meteor or maybe part of a rocket burning up in the atmosphere nature’s own light show from my rooftop.
Did anyone else spot it too?#noida #delhi #Meteor #NightSky @isro @NASA pic.twitter.com/tQYs27WWrC
ಸೆಪ್ಟೆಂಬರ್ ತಿಂಗಳಲ್ಲಿ ಉಲ್ಕಾಪಾತವಾಗುವ ಬಗ್ಗೆ ಅಮೆರಿಕನ್ ಸೊಸೈಟಿ ಈ ಮೊದಲೇ ತಿಳಿಸಿತ್ತು. ದೆಹಲಿಯ ಎನ್ ಸಿಆರ್ ನಾದ್ಯಂತದ ನಿವಾಸಿಗಳು ಕೆಲವೇ ಸೆಕೆಂಡುಗಳ ಕಾಲ ಈ ಅಪರೂಪದ ಸನ್ನಿವೇಶವನ್ನು ಕಣ್ತುಂಬಿಕೊಂಡರು. ಇದು ನಗರದ ದೀಪಗಳನ್ನು ಮೀರಿಸುವಷ್ಟು ಪ್ರಕಾಶಮಾನವಾಗಿತ್ತು.ಕೆಲವರು ಇದರೊಂದಿಗೆ ಘರ್ಜನೆ ಶಬ್ದವನ್ನು ಕೇಳಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Aamir Khan: ಬಹುನಿರೀಕ್ಷಿತ ಮಹಾಭಾರತ ಸಿನಿಮಾದ ಕುರಿತು ಬಿಗ್ ಅಪ್ಡೇಟ್! ನಟ ಆಮೀರ್ ಖಾನ್ ಹೇಳಿದ್ದೇನು?
ಅಪರೂಪದ ಉಲ್ಕಾಪಾತದಿಂದ ಯಾವುದೇ ಹಾನಿಯಾಗಿಲ್ಲ. ಅನೇಕರು ಇದು ತಮ್ಮ ಜೀವಿತಾವಧಿಯಲ್ಲಿ ಕಂಡಿರುವ ಅಪರೂಪದ ಬಾಹ್ಯಾಕಾಶ ದೃಶ್ಯ ಎಂದು ಹೇಳಿಕೊಂಡಿದ್ದಾರೆ.