ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

PM Modi: ಮೋದಿಗೂ ಇಷ್ಟ ಕನ್ನಡ; ಕಮಲದ ಮೊಗದೊಳೆ ಹಾಡನ್ನು ಹಂಚಿಕೊಂಡು ನವರಾತ್ರಿಗೆ ಶುಭಕೋರಿದ ಪ್ರಧಾನಿ

ಪ್ರಧಾನಿ ಮೋದಿ ಅವರು 1984ರಲ್ಲಿ ಬಿಡುಗಡೆಗೊಂಡ ‘ಹೊಸ ಇತಿಹಾಸ’ಚಿತ್ರದಲ್ಲಿ ಖ್ಯಾತ ಗಾಯಕಿ ಎಸ್. ಜಾನಕಿ ಅವರು ಹಾಡಿರುವ ‘ಕಮಲದ ಮೊಗದೊಳೆ ಕಮಲದ ಕಣ್ಣೋಳೆ ಕಮಲವ ಕೈಯಲ್ಲಿ ಹಿಡಿದೊಳೆ ಎಂಬ ಕನ್ನಡದ ಭಕ್ತಿಗೀತೆಯನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಕಮಲದ ಮೊಗದೊಳೆ ಹಾಡನ್ನು ಹಂಚಿಕೊಂಡು ನವರಾತ್ರಿಗೆ ಶುಭಕೋರಿದ ಪ್ರಧಾನಿ

-

Vishakha Bhat Vishakha Bhat Sep 26, 2025 7:05 PM

ನವರಾತ್ರಿಯ ಸಂದರ್ಭದಲ್ಲಿ ದೇವಿ ಕುರಿತಾದ ಹಾಡನ್ನು ಹಾಡಿ ದೇವಿಗೆ ಪೂಜೆ ಸಲ್ಲಿಸುವುದು ವಾಡಿಕೆ. ಕನ್ನಡದಲ್ಲಿಯೇ ಮಾತೆ ಸರಸ್ವತಿ, ದುರ್ಗೆಗೆ ಸಂಬಂಧಿಸದಂತೆ ಸಾಕಷ್ಟು ಹಾಡುಗಳನ್ನು ರಚಿಸಲಾಗಿದೆ. ಇದೀಗ ಪ್ರಧಾನಿ ಮೋದಿ ಅವರು 1984ರಲ್ಲಿ ಬಿಡುಗಡೆಗೊಂಡ ‘ಹೊಸ ಇತಿಹಾಸ’ಚಿತ್ರದಲ್ಲಿ ಖ್ಯಾತ ಗಾಯಕಿ ಎಸ್. ಜಾನಕಿ ಅವರು ಹಾಡಿರುವ ‘ಕಮಲದ ಮೊಗದೊಳೆ ಕಮಲದ ಕಣ್ಣೋಳೆ ಕಮಲವ ಕೈಯಲ್ಲಿ ಹಿಡಿದೊಳೆ ಎಂಬ ಕನ್ನಡದ ಭಕ್ತಿಗೀತೆಯನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡು ದೇಶ ನಿವಾಸಿಗಳಿಗೆ ನವರಾತ್ರಿಗೆ ಶುಭ ಕೋರಿದ್ದಾರೆ.

ನರೇಂದ್ರ ಮೋದಿಯವರ ಅಧಿಕೃತ ಟ್ವಿಟರ್​​ ಖಾತೆ(@narendramodi)ಯಲ್ಲಿ ಕನ್ನಡದ ಈ ಪ್ರಸಿದ್ಧ ಭಕ್ತಿಗೀತೆಯ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಲಕ್ಷಾಂತರ ಜನ ಈ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶ್ರೀದೇವಿಯು ಎಲ್ಲಾ ಭಕ್ತರಿಗೆ ಸಂತೋಷ, ಸಮೃದ್ಧಿ ಮತ್ತು ಅದೃಷ್ಟವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಆಕೆಯ ಪ್ರೀತಿಯ ವಾತ್ಸಲ್ಯವು ಪ್ರತಿಯೊಬ್ಬರ ಜೀವನದಲ್ಲೂ ಹೊಸ ಶಕ್ತಿ ಮತ್ತು ಉತ್ಸಾಹವನ್ನು ತುಂಬಲಿ ಎಂದು ಟ್ವೀಟ್ ಮಾಡಲಾಗಿದೆ. ಇಂದು (ಶುಕ್ರವಾರ) ಬೆಳಗ್ಗೆ 9.48ಕ್ಕೆ ಹಂಚಿಕೊಂಡಿರುವ ಈ ಪೋಸ್ಟ್​​ ಈಗಾಗಲೇ 10ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಜೊತೆಗೆ ಸಾಕಷ್ಟು ಕನ್ನಡಿಗರು ಇದು ಕನ್ನಡಿಗರ ಗರಿಮೆ ಎಂದು ಕಾಮೆಂಟ್​​ ಮಾಡಿದ್ದಾರೆ.



ನವರಾತ್ರಿ ಮೊದಲ ದಿನದಂದು ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದರು. ಈ ಬಾರಿಯ ಶುಭ ಅವಧಿಯು ವಿಶೇಷವಾಗಿದೆ. ಏಕೆಂದರೆ ಇದು "GST-ಉಳಿತಾಯ ಹಬ್ಬ"ದ ಜೊತೆಗೆ 'ಸ್ವದೇಶಿ'ಯ ಮಂತ್ರದ ಜತೆ ಹೊಸ ಶಕ್ತಿಯನ್ನು ನೀಡುತ್ತದೆ ಎಂದು ಅವರು ಬಣ್ಣಿಸಿದ್ದರು. ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ಭಾರತದ ಸಂಕಲ್ಪವನ್ನು ಸಾಕಾರಗೊಳಿಸಲು ಸಾಮೂಹಿಕ ಪ್ರಯತ್ನದ ಭಾಗವಾಗಲು ಅವರು ಜನರಿಗೆ ಕರೆ ನೀಡಿದ್ದಾರೆ. ಹಬ್ಬದ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜನರಿಗೆ ಶುಭ ಹಾರೈಸಿದ್ದು, ಹೆಚ್ಚಿನ ಸಂಖ್ಯೆಯ ವಸ್ತುಗಳ ಮೇಲಿನ ಕಡಿಮೆಯಾದ GST ದರಗಳು ಸೋಮವಾರದಿಂದ ಜಾರಿಗೆ ಬರಲಿವೆ ಎಂದು ಮೋದಿ ಹೇಳಿದ್ದರು.

ಈ ಸುದ್ದಿಯನ್ನೂ ಓದಿ: PM Narendra Modi: ರಾಜಸ್ಥಾನದಲ್ಲಿ 1.22 ಲಕ್ಷ ಕೋಟಿ ರೂ. ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ಸ್ಥಳೀಯ ಉತ್ಪನ್ನಗಳನ್ನು ಖರೀದಿಸಲು ಜನರನ್ನು ಒತ್ತಾಯಿಸಿದ ಅವರು, 'ಸ್ವದೇಶಿ' ಭಾರತದ ಸ್ವಾತಂತ್ರ್ಯ ಚಳವಳಿಗೆ ಶಕ್ತಿ ತುಂಬಿದ ರೀತಿಯಲ್ಲಿಯೇ ದೇಶದ ಸಮೃದ್ಧಿಗೆ ಶಕ್ತಿಯನ್ನು ನೀಡುತ್ತದೆ. ನಾವು ಪ್ರತಿಯೊಂದು ಮನೆಯನ್ನು ಸ್ವದೇಶಿಯ ಸಂಕೇತವನ್ನಾಗಿ ಮಾಡಬೇಕು. ನಾವು ಪ್ರತಿಯೊಂದು ಅಂಗಡಿಯನ್ನು ಸ್ವದೇಶಿ (ಸರಕು) ಗಳಿಂದ ಅಲಂಕರಿಸಬೇಕು ಎಂದು ಅವರು ದೇಶದ ಜನರಿಗೆ ಕರೆ ನೀಡಿದ್ದರು.