Live In Relationship: ಮಕ್ಕಳು ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿರುವುದೇ ಈ ಊರಿನ ಒಂದು ಸಂಪ್ರದಾಯ!
ಜಾರ್ಖಂಡ್‌ನ ಬುಡಕಟ್ಟು ಸಮುದಾಯದ ಬಾಲಕಿಯೊಬ್ಬಳಿ ಲಿವ್ ಇನ್ ರಿಲೇಷನ್ ನಲ್ಲಿದ್ದು, ಇದೀಗ ಹೆಣ್ಣು ಮಗುವಿಗೆ ಅವಧಿಪೂರ್ವ ಜನ್ಮ ನೀಡಿದ್ದಾಳೆ. 14 ವರ್ಷದ ಬಾಲಕಿ ಮತ್ತು 16 ವರ್ಷದ ಬಾಲಕ ಲಿವ್ ಇನ್ ಸಂಬಂಧದಲ್ಲಿದ್ದರು. ಇವರಿಬ್ಬರ ಸಂಬಂಧಕ್ಕೆ ಕುಟುಂಬದ ಅನುಮತಿಯೂ ಇತ್ತು. ಬುಡಕಟ್ಟು ಪ್ರದೇಶಗಳಲ್ಲಿ ಇದನ್ನು ಸಂಪ್ರದಾಯವಾಗಿ ಪಾಲಿಸಲಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.

-

ಜಾರ್ಖಂಡ್: ಲಿವ್ ಇನ್ ರಿಲೇಷನ್ (Live In Relationship) ಸಂಬಂಧದಲ್ಲಿದ್ದ ಮಕ್ಕಳಿಬ್ಬರು ಪೋಷಕರಾದ ಘಟನೆ ಜಾರ್ಖಂಡ್‌ನಲ್ಲಿ (Jharkhand) ನಡೆದಿದೆ. 14 ವರ್ಷದ ಬಾಲಕಿ ಮತ್ತು 16 ವರ್ಷದ ಬಾಲಕ ಲಿವ್ ಇನ್ ಸಂಬಂಧದಲ್ಲಿದ್ದರು. ಬುಡಕಟ್ಟು ಪ್ರದೇಶಗಳಲ್ಲಿ (tribal areas) ಈ ಸಂಬಂಧಕ್ಕೆ ಸಂಪ್ರದಾಯದ ಹೆಸರು ನೀಡಲಾಗಿದೆ. ಇದು ಬಾಲ್ಯಾವಸ್ಥೆ ಮತ್ತು ಮಕ್ಕಳ ಹಕ್ಕುಗಳ (early pregnancy and child rights ) ಕುರಿತು ಪ್ರಶ್ನಿಸುವಂತೆ ಮಾಡಿದೆ. ಒಂಬತ್ತನೇ ತರಗತಿ ಓದುತ್ತಿದ್ದ ಬಾಲಕಿ ಈಗ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.
‘ಧುಕು’ ಎಂದು ಕರೆಯಲ್ಪಡುವ ಬುಡಕಟ್ಟು ಸಂಪ್ರದಾಯದಡಿಯಲ್ಲಿ ಇವರಿಬ್ಬರು ಒಟ್ಟಿಗೆ ವಾಸಿಸಲು ಕುಟುಂಬಗಳ ಒಪ್ಪಿಗೆಯು ದೊರೆತಿತ್ತು. ಇದು ಈಗ ಬಾಲ್ಯವಿವಾಹ ಮತ್ತು ಅಪ್ರಾಪ್ತ ವಯಸ್ಸಿನ ಗರ್ಭಧಾರಣೆಯ ವಿರುದ್ಧ ಜಾಗೃತಿ ಅಭಿಯಾನಗಳನ್ನುಹೆಚ್ಚಿಸಲು ಸ್ಥಳೀಯ ಅಧಿಕಾರಿಗಳ ಮೇಲೆ ಒತ್ತಡ ಹೇರಿದೆ.
ಸಾಂಪ್ರದಾಯದ ಹೆಸರಿನಲ್ಲಿ ಈ ಪದ್ಧತಿ
ಕಿಯೋರಾ ಪಂಚಾಯತ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅಪ್ರಾಪ್ತ ವಯಸ್ಕರ ನಡುವಿನ ಒಮ್ಮತದ ಲಿವ್ ಇನ್ ಸಂಬಂಧಕ್ಕೆ ಸಾಂಪ್ರದಾಯಿಕ ಬುಡಕಟ್ಟು ಪದ್ಧತಿ ಅನುಮತಿ ನೀಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಅಲ್ತಾಫ್ ಖಾನ್, ಬುಡಕಟ್ಟು ಸಮುದಾಯಗಳಲ್ಲಿ ಈ ಪದ್ಧತಿ ಸಾಂಸ್ಕೃತಿಕವಾಗಿ ಅಂಗೀಕರಿಸಲ್ಪಟ್ಟಿದ್ದರೂ ಮಕ್ಕಳ ಕಲ್ಯಾಣ, ಶಿಕ್ಷಣ ಮತ್ತು ಆರೋಗ್ಯದ ಮೇಲೆ ಅದರ ಪರಿಣಾಮಕ್ಕಾಗಿ ಈಗ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಶಾಲಾ ಶಿಕ್ಷಣಕ್ಕಾಗಿ ಸ್ಥಳಾಂತರಗೊಂಡ ಮುರ್ಹುವಿನಿಂದ ಸುಮಾರು 14 ಕಿ.ಮೀ. ದೂರದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಒಂಬತ್ತನೇ ತರಗತಿಯ ವಿದ್ಯಾರ್ಥಿನಿ ಸ್ಥಳೀಯ ಮಾರುಕಟ್ಟೆಯಲ್ಲಿ ಹುಡುಗನನ್ನು ಭೇಟಿಯಾಗಿದ್ದಳು. ಬಳಿಕ ಅವರಿಬ್ಬರ ನಡುವೆ ಸಂಬಂಧ ಬೆಳೆದಿದೆ. ಇದರ ಪರಿಣಾಮ ಆಕೆ ಗರ್ಭಧಾರಣೆ ಮಾಡಿದ್ದಾಳೆ. ಬಳಿಕ ಆಕೆ ಶಾಲೆಗೆ ಹೋಗಿಲ್ಲ ಎಂದು ಅಲ್ತಾಫ್ ಖಾನ್ ತಿಳಿಸಿದ್ದಾರೆ.
ಬಾಲ್ಯವಿವಾಹ ಮತ್ತು ಬಾಲಕಾರ್ಮಿಕರ ವಿರುದ್ಧ ಎನ್‌ಜಿಒಗಳು ಮತ್ತು ನಾಗರಿಕ ಸಮಾಜ ಸಂಸ್ಥೆಗಳ ಸಹಯೋಗದೊಂದಿಗೆ ಜಾಗೃತಿ ಅಭಿಯಾನಗಳನ್ನು ನಡೆಸುತ್ತಿದ್ದೇವೆ. ಗ್ರಾಮ ಮಟ್ಟದಲ್ಲಿ ಇಂತಹ ಘಟನೆಗಳನ್ನು ತಡೆಯುವ ಏಕೈಕ ಮಾರ್ಗ ಇದಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: Viral Video: ರಸ್ತೆಯಲ್ಲೇ ವ್ಯಕ್ತಿಯೊಬ್ಬನ ಶರ್ಟ್ ಹಿಡಿದು ಎಳೆದಾಡಿದ ಮಹಿಳೆ; ರೆಕಾರ್ಡ್ ಮಾಡ್ತಾ ನಿಂತ ಜನ!
ಆರಂಭದಲ್ಲಿ ಬಾಲಕಿಯನ್ನು ಮುರ್ಹುವಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ (CHC) ದಾಖಲಿಸಲಾಯಿತು. ಆಕೆಯ ತಾಯಿ ಮತ್ತು ಹುಡುಗ ಜೊತೆಯಲ್ಲಿದ್ದರು. ತೊಡಕುಗಳ ಕಾರಣ ಆಕೆಯನ್ನು ಖುಂಟಿಯ ಸದರ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ಅವಳು ಏಳು ತಿಂಗಳಿಗೆ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಅದೃಷ್ಟವಶಾತ್ ತಾಯಿ ಮತ್ತು ನವಜಾತ ಶಿಶು ಇಬ್ಬರೂ ಆರೋಗ್ಯವಾಗಿದ್ದು, ವೈದ್ಯರು ನಿಗಾ ವಹಿಸಿದ್ದಾರೆ.