ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND v PAK: ಭಾರತದ ವಿರುದ್ಧ ಪ್ರಚೋದನಕಾರಿ ಸನ್ನೆ ಮಾಡಿದ ಹ್ಯಾರಿಸ್‌ ರೌಫ್‌ಗೆ ದಂಡ!

ಸಪ್ಟೆಂಬರ್ 26ರಂದು ದುಬೈನಲ್ಲಿ ನಡೆದಿದ್ದ ಭಾರತ ಹಾಗೂ ಪಾಕಿಸ್ತಾನ ಪಂದ್ಯ ಹಲವು ವಿವಾದಗಳಿಗೆ ಸಾಕ್ಷಿಯಾಗಿತ್ತು. ಇನ್ನು ಈ ಪಂದ್ಯದಲ್ಲಿ ಪ್ರಚೋದನಕಾರಿ ಸನ್ನೆ ಮಾಡಿದ ಪಾಕಿಸ್ತಾನ ತಂಡದ ವೇಗದ ಬೌಲರ್‌ ಹ್ಯಾರಿಸ್ ರೌಫ್‌ಗೆ ಐಸಿಸಿ ದಂಡವನ್ನು ವಿಧಿಸಿದೆ. ಪಂದ್ಯದ ಸಂಭಾವನೆಯಲ್ಲಿ ಶೇ 30ರಷ್ಟು ದಂಡವನ್ನು ಪಾಕ್‌ ವೇಗಿಗೆ ವಿಧಿಸಲಾಗಿದೆ.

ಭಾರತದ ಎದುರು ಬಾಲ ಬಿಚ್ಚಿದ ಹ್ಯಾರಿಸ್‌ ರೌಫ್‌ಗೆ ದಂಡ!

ಭಾರತ ವಿರುದ್ಧದ ಪಂದ್ಯದಲ್ಲಿ ಅಧಿಕ ಪ್ರಸಂಗ ಮಾಡಿದ್ದ ಹ್ಯಾರಿಸ್‌ ರೌಫ್‌ಗೆ ದಂಡ. -

Profile Ramesh Kote Sep 26, 2025 8:41 PM

ದುಬೈ: ಸಪ್ಟೆಂಬರ್ 21ರಂದು ದುಬೈನಲ್ಲಿ ನಡೆದಿದ್ದ ಏಷ್ಯಾ ಕಪ್ (Asia Cup 2025) ಟೂರ್ನಿಯ ಸೂಪರ್-4ರ ಭಾರತ ಮತ್ತು ಪಾಕಿಸ್ತಾನ (IND vs PAK) ನಡುವಣ ಪಂದ್ಯ ಹಲವು ವಿವಾದಗಳಿಗೆ ಸಾಕ್ಷಿಯಾಗಿತ್ತು. ಇನ್ನು ಈ ಪಂದ್ಯದಲ್ಲಿ ಪಾಕಿಸ್ತಾನ ವೇಗಿ ಹ್ಯಾರಿಸ್ ರೌಫ್ ಪ್ರಚೋದನಕಾರಿ ಸನ್ನೆ ಮಾಡಿದ್ದಕ್ಕಾಗಿ ಪಂದ್ಯದ ಸಂಭಾವನೆಯಲ್ಲಿ ಶೇ 30 ರಷ್ಟು ದಂಡವನ್ನು ವಿಧಿಸಲಾಗಿದೆ. ಈ ಪಂದ್ಯದಲ್ಲಿ ಪಾಕ್ ವೇಗಿ ಭಾರತೀಯ ಬ್ಯಾಟ್ಸ್‌ಮನ್‌ನನ್ನು ಔಟ್ ಮಾಡಿದ ನಂತರ ಅಪಘಾತಕ್ಕೀಡಾದ ವಿಮಾನವನ್ನು ಅನುಕರಿಸಿ ಪ್ರಚೋದನಕಾರಿ ಸನ್ನೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಐಸಿಸಿ ಮ್ಯಾಚ್ ರೆಫರಿ, ಹ್ಯಾರಿಸ್‌ ರೌಫ್ ಅವರ ನಡೆಯನ್ನು ಖಂಡಿಸಿದೆ. ಇದು ಎದುರಾಳಿ ತಂಡದ ಆಟಗಾರರ ಉತ್ಸಾಹಕ್ಕೆ ವಿರುದ್ಧವಾದ ಕೃತ್ಯವೆಂದು ಪರಿಗಣಿಸಲಾಗಿದೆ. ಸೆಪ್ಟೆಂಬರ್ 26 ರಂದು ಐಸಿಸಿ ವಿಚಾರಣೆಯ ಸಂದರ್ಭದಲ್ಲಿ ರೌಫ್ ತಪ್ಪನ್ನು ಒಪ್ಪಿಕೊಂಡಿದ್ದರು. ಭಾರತೀಯ ಪ್ರೇಕ್ಷಕರ ಕಡೆಗೆ ಅವರ ಸನ್ನೆಗಳು ಪ್ರಚೋದನಕಾರಿ ವರ್ತನೆ ತೋರಿ ವೇಗಿ ವಿವಾದದಕ್ಕೆ ಎಡೆ ವಿಮಾಡಿಕೊಟ್ಟಿದ್ದರು. ಈ ಕುರಿತು ಟೀಮ್ ಇಂಡಿಯಾದ ಹಲವು ಆಟಗಾರರು ಮತ್ತು ಅಭಿಮಾನಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

2022ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಎಂಸಿಜಿಯಲ್ಲಿ ವಿರಾಟ್ ಕೊಹ್ಲಿ, ಹ್ಯಾರಿಸ್ ರೌಫ್ ಬೌಲಿಂಗ್‌ನಲ್ಲಿ ಬಾರಿಸಿದ್ದ ಎರಡು ಐಕಾನಿಕ್ ಸಿಕ್ಸರ್‌ಗಳ ನೆನಪಿಗಾಗಿ "ಕೊಹ್ಲಿ, ಕೊಹ್ಲಿ" ಎಂದು ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾ ಅಭಿಮಾನಿಗಳು ಘೋಷಣೆ ಕೂಗಿದಾಗ ಈ ಘಟನೆ ನಡೆದಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ, ರೌಫ್ ವಿಮಾನವನ್ನು ಉರುಳಿಸುವ ಕ್ರಿಯೆಯನ್ನು ಅನುಕರಿಸಿದರು. ಇದನ್ನು ಭಾರತದ ಮಿಲಿಟರಿ ಕಾರ್ಯಾಚರಣೆಗಳನ್ನು ಟೀಕಿಸುವ ಒಂದು ಪ್ರಯತ್ನವೆಂದು ವ್ಯಾಪಕವಾಗಿ ಚರ್ಚೆಗಳು ಶುರುವಾಗಿದ್ದವು. ಭಾರತದ ಯುವ ಆರಂಭಿಕ ಜೋಡಿ ಶುಭಮನ್ ಗಿಲ್ ಮತ್ತು ಅಭಿಷೇಕ್ ಶರ್ಮಾ ಅವರನ್ನು ನಿಂದಿಸುತ್ತಾ ಅವರ ಹತಾಶೆ ಮೈದಾನದಲ್ಲಿ ಎದ್ದು ಕಾಣುತ್ತಿತ್ತು.

IND vs PAK: 'ಎಲ್' ಕೈ ಸನ್ನೆಯಿಂದ ಸಂಭ್ರಮಿಸಲು ಕಾರಣ ಬಹಿರಂಗಪಡಿಸಿದ ಅಭಿಷೇಕ್ ಶರ್ಮಾ!

ವಿಚಾರಣೆಯಲ್ಲಿ ತನ್ನ ನಡೆಯನ್ನ ಸಮರ್ಥಿಸಿಕೊಂಡ ರೌಫ್

ವಿಚಾರಣೆಯಲ್ಲಿ ತಮ್ಮ ನಡೆಯ ಕುರಿತು ಪ್ರತಿಕ್ರಿಯೆ ನೀಡಿದ್ದ ರೌಫ್, "6-0 ಗೆಸ್ಚರ್" ಯಾವುದೇ ಅರ್ಥವನ್ನು ಹೊಂದಿಲ್ಲ ಮತ್ತು ಭಾರತವನ್ನು ಗುರಿಯಾಗಿರಿಸಿಕೊಂಡಿಲ್ಲ ಎಂದು ಹೇಳಿದ್ದರು. ಅವರನ್ನು ಐಸಿಸಿ ಅಧಿಕಾರಿಗಳು ಈ ಸನ್ನೆಯು ಏನನ್ನು ಸೂಚಿಸುತ್ತದೆ ಎಂದು ಪ್ರಶ್ನಿಸಿದರು. ಅವರು ಸ್ಪಷ್ಟ ಉತ್ತರವನ್ನು ನೀಡಲು ಸಾಧ್ಯವಿಲ್ಲ ಎಂದು ತೋರಿಸಿದರು. ರೌಫ್ ತಮ್ಮ ವರ್ತನೆಯಲ್ಲಿ ಭಾರತದ ಬಗ್ಗೆ ಯಾವುದೇ ಉಲ್ಲೇಖವಿಲ್ಲ ಎಂದು ಸಮರ್ಥಿಸಿಕೊಂಡರು.

ಪಂದ್ಯದ ನಂತರ ನಡೆದ ಐಸಿಸಿ ವಿಚಾರಣೆಯಲ್ಲಿ ಹ್ಯಾರಿಸ್ ರೌಫ್ ಮತ್ತು ಆರಂಭಿಕ ಆಟಗಾರ ಸಾಹಿಬ್‌ಝಾದಾ ಫರ್ಹಾನ್ ಇಬ್ಬರೂ ನೀತಿ ಸಂಹಿತೆಯ ಅಡಿಯಲ್ಲಿ ಮೊದಲ ಹಂತದ ಅಪರಾಧಗಳಲ್ಲಿ ತಪ್ಪಿತಸ್ಥರೆಂದು ಕಂಡುಬಂದಿದೆ. ಪ್ರಚೋದನಕಾರಿ ವರ್ತನೆಗಾಗಿ ರೌಫ್‌ಗೆ ಪಂದ್ಯ ಶುಲ್ಕದ 30 ಪ್ರತಿಶತದಷ್ಟು ದಂಡ ವಿಧಿಸಲಾಯಿತು, ಆದರೆ ಫರ್ಹಾನ್ ಅರ್ಧಶತಕವನ್ನು ತಲುಪಿದ ನಂತರ ತನ್ನ ಬ್ಯಾಟ್ ಅನ್ನು ಬಂದೂಕಿನಂತೆ ತೋರಿಸಿ ವಿವಾದಕ್ಕೆ ಗುರಿಯಾದ ಕಾರಣ ದಂಡ ವಿಧಿಸಲಾಗಿತ್ತು.

ʻಧೈರ್ಯದಿಂದ ಆಡಿ ಭಾರತವನ್ನು ಸೋಲಿಸಿʼ: ಪಾಕಿಸ್ತಾನ ತಂಡಕ್ಕೆ ಶೋಯೆಬ್‌ ಅಖ್ತರ್‌ ಸಲಹೆ!

ಇದಕ್ಕೂ ಮುನ್ನ ಐಸಿಸಿ ಅಧಿಕಾರಿಗಳ ಮುಂದೆ ಹಾಜರಾದ ಫರ್ಹಾನ್ ತಮ್ಮ ಬಂದೂಕಿನ ವರ್ತನೆಯ ಕುರಿತು ಇದು ರಾಜಕೀಯವಲ್ಲ ಎಂದು ಸಮರ್ಥಿಸಿಕೊಂಡಿದ್ದು, ಭಾರತದ ಮಾಜಿ ನಾಯಕರಾದ ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ಕೂಡ ಈ ಹಿಂದೆ ಇದೇ ರೀತಿಯ ಸನ್ನೆಯನ್ನು ಮಾಡಿದ್ದರು ಎಂದು ಅವರು ಆರೋಪ ಮಾಡಿದ್ದರು.

ವಿಚಾರಣೆಗೆ ಹಾಜರಾದ ರೌಫ್

ಗುರುವಾರ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಅವರು ಭಾರತದ ಗೆಲುವನ್ನು ಸಶಸ್ತ್ರ ಪಡೆಗಳಿಗೆ ಅರ್ಪಿಸಿದ ನಂತರ ಪಂದ್ಯದ ನಂತರದ ಹೇಳಿಕೆಗಳ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ಮಂಡಳಿ ದೂರು ದಾಖಲಿಸಿದ ನಂತರ ಅವರು ಸ್ವಂತ ವಿಚಾರಣೆಗೆ ಹಾಜರಾದರು. ಏಪ್ರಿಲ್‌ನಲ್ಲಿ ನಡೆದಿದ್ದ ಫೆಹಲ್ಗಾಮ್ ದಾಳಿಗೆ ಭಾರತದ ಮಿಲಿಟರಿ ಪ್ರತಿಕ್ರಿಯೆಯಾದ ಆಪರೇಷನ್ ಸಿಂಧೂರ್ ಬಗ್ಗೆ ಸೂರ್ಯಕುಮಾರ್ ಅವರ ಪ್ರಸ್ತಾಪವು ರಾಜಕೀಯ ಉದ್ದೇಶವನ್ನು ಹೊಂದಿದೆ ಎಂದು ಪಿಸಿಬಿ ವಾದಿಸಿತು. ಪಂದ್ಯದ ರೆಫರಿ ರಿಚಿ ರಿಚರ್ಡ್ಸನ್ ಅವರ ಮುಂದೆ ಹಾಜರಾದಾಗ ಸೂಯಕುಮಾರ್‌ ಯಾದವ್ ತಪ್ಪೊಪ್ಪಿಕೊಳ್ಳಲಿಲ್ಲ. ಆದಾಗ್ಯೂ, ಮುಂದಿನ ದಿನಗಳಲ್ಲಿ ಈ ರೀತಿಯ ಹೇಳಿಕೆಗಳನ್ನು ನೀಡದಂತೆ ಐಸಿಸಿ ಅವರಿಗೆ ಎಚ್ಚರಿಕೆ ನೀಡಿತು.