ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನಾನಾ ಪಾಟೇಕರ್ ನಿಧನದಿಂದ ದೊಡ್ಡ ಶೂನ್ಯ ಉಂಟಾಗಿದೆ: ಪ್ರಧಾನಿ ನರೇಂದ್ರ ಮೋದಿ

Prime Minister Narendra Modi: ಹಿರಿಯ ನಟ ನಾನಾ ಪಾಟೇಕರ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಅವರು ಹಿಂದಿ ಮತ್ತು ಮರಾಠಿ ಚಿತ್ರರಂಗಕ್ಕೆ ನೀಡಿದ ಅಪಾರ ಕೊಡುಗೆಯನ್ನು ಸ್ಮರಿಸಿದ ಪ್ರಧಾನಿ ಮೋದಿ, ತೆರೆಯಲ್ಲಿನ ಅವರ ಪಾತ್ರಗಳು ತಲೆಮಾರುಗಳವರೆಗೆ ನೆನಪಿನಲ್ಲಿ ಉಳಿಯುತ್ತವೆ ಎಂದು ತಿಳಿಸಿದರು.

ಹಿರಿಯ ನಟ ನಾನಾ ಪಾಟೇಕರ್ ನಿಧನ: ಪ್ರಧಾನಿ ನರೇಂದ್ರ ಮೋದಿ ಸಂತಾಪ

ಸಂಗ್ರಹ ಚಿತ್ರ -

ನವದೆಹಲಿ: ಹಿರಿಯ ನಟ ನಾನಾ ಪಾಟೇಕರ್ (veteran actor Nana Patekar) ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಗುರುವಾರ ಸಂತಾಪ ಸೂಚಿಸಿದ್ದಾರೆ. ನಾನಾ ಪಾಟೇಕರ್ ಅವರ ವಿಶಿಷ್ಟ ವ್ಯಕ್ತಿತ್ವ ಮತ್ತು ಬಹುಮುಖ ಪ್ರತಿಭೆಯನ್ನು ಶ್ಲಾಘಿಸಿದ ಅವರು ನಾನಾ ಪಾಟೇಕರ್ ಅವರ ನಿಧನದಿಂದ ಹಿಂದಿ ಮತ್ತು ಮರಾಠಿ ಚಿತ್ರರಂಗದಲ್ಲಿ ದೊಡ್ಡ ಶೂನ್ಯ ಉಂಟಾಗಿದೆ ಎಂದರು. ಹಿಂದಿ (Hindi) ಮತ್ತು ಮರಾಠಿ (Marati) ಚಿತ್ರರಂಗಕ್ಕೆ ಅವರು ನೀಡಿದ ಅಪಾರ ಕೊಡುಗೆಯನ್ನು ಸ್ಮರಿಸಿ, ತೆರೆಯಲ್ಲಿನ ಅವರ ಪಾತ್ರಗಳು ಹಲವಾರು ತಲೆಮಾರುಗಳವರೆಗೆ ನೆನಪಿನಲ್ಲಿ ಉಳಿಯುತ್ತವೆ ಎಂದು ಹೇಳಿದರು.

ನಾನಾ ಪಾಟೇಕರ್ ಅವರಲ್ಲಿದ್ದಂತಹ ತೀವ್ರತೆ, ವಿಶಿಷ್ಟ ವ್ಯಕ್ತಿತ್ವ ಮತ್ತು ಅಪ್ರತಿಮ ಗುಣಗಳು ಕೆಲವೇ ಕೆಲವು ನಟರಲ್ಲಿ ಮಾತ್ರ ಕಂಡುಬರುತ್ತವೆ. ಪ್ರತಿ ಪಾತ್ರಕ್ಕೂ ಅಸಾಧಾರಣ ಬಹುಮುಖತೆ ಮತ್ತು ಸೃಜನಶೀಲತೆಯನ್ನುತರುತ್ತಿದ್ದ ಅವರು ನೇರ ಮತ್ತು ಮುಕ್ತ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರು.

Nana Patekar: ಹಿರಿಯ ನಟ ನಾನಾ ಪಾಟೇಕರ್​ ಇನ್ನಿಲ್ಲ

ಹಿಂದಿ ಮತ್ತು ಮರಾಠಿ ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ. ಅವರ ನಿಧನವು ದೊಡ್ಡ ಶೂನ್ಯವನ್ನು ಸೃಷ್ಟಿಸಿದೆ ಎಂದು ಹೇಳಿದ ಪ್ರಧಾನಿ ಮೋದಿ, ಅವರ ನಿಧನಕ್ಕೆ ಸಂತಾಪ ಸೂಚಿಸಿದರು.

ಗೋವಾದ ನಿವಾಸದಲ್ಲಿ ತೀವ್ರ ಎದೆನೋವಿನಿಂದ ಅಸ್ವಸ್ಥರಾದ ಹಿರಿಯ ನಟ ನಾನಾ ಪಾಟೇಕರ್ ಗುರುವಾರ (75) ನಿಧನರಾದರು. ಅವರಿಗೆ ಹೃದಯ ಸ್ತಂಭನ ಉಂಟಾಗಿತ್ತು. ತಕ್ಷಣವೇ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ವೈದ್ಯಕೀಯ ತಂಡವು ಬೆಳಗ್ಗೆ 5:20ರ ಸುಮಾರಿಗೆ ಅವರು ಮೃತಪಟ್ಟಿದ್ದಾರೆಂದು ಘೋಷಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಮಣಿಪಾಲ್ ಆಸ್ಪತ್ರೆಯ ಆಂಕೊಲಾಜಿ ವಿಭಾಗದ ಮುಖ್ಯಸ್ಥ ಡಾ. ಶೇಖರ್ ಸಾಲ್ಕರ್, ನಾನಾ ಪಾಟೇಕರ್ ಅವರನ್ನು ಆಸ್ಪತ್ರೆಗೆ ಕರೆತಂದಾಗ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಅವರನ್ನು ಉಳಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡಿದೆವು ಆದರೆ ಸಾಧ್ಯವಾಗಲಿಲ್ಲ ಎಂದು ಹೇಳಿದರು.

ಅವರನ್ನು ಬೆಳಗ್ಗೆ 4 ಅಥವಾ 4.30ರ ಸುಮಾರಿಗೆ ಆಸ್ಪತ್ರೆಗೆ ಕರೆ ತರಲಾಯಿತು. ಆಸ್ಪತ್ರೆಗೆ ಬರುವಷ್ಟರಲ್ಲಿಯೇ ಅವರು ಮೃತಪಟ್ಟಿದ್ದರು. ಆದರೂ ಸುಮಾರು 45 ನಿಮಿಷದಿಂದ ಒಂದು ಗಂಟೆಯವರೆಗೆ ಕಾರ್ಡಿಯಾಕ್ ಮಸಾಜ್ ನೀಡಲಾಯಿತು. ಆದರೆ ಚೇತರಿಕೆ ಕಾಣಲಿಲ್ಲ ಎಂದರು.

ನಾನಾ ಪಾಟೇಕರ್ ಅವರು ಮುಂಜಾನೆ ಸುಮಾರು 2.30 ರ ವೇಳೆ ಯಾರೊಂದಿಗೋ ಮಾತನಾಡಿದ್ದರು. ತಮಗೆ ಹುಷಾರಿಲ್ಲ ಎಂದು ತಿಳಿಸಿ ಸ್ನೇಹಿತರೊಬ್ಬರಿಗೆ ಸಂದೇಶವನ್ನು ಕಳುಹಿಸಿದ್ದರು. ಅದನ್ನು ನೋಡಿ ಅವರ ಸ್ನೇಹಿತ ಮುಂಜಾನೆ 4 ಗಂಟೆ ಸುಮಾರಿಗೆ ಅವರ ಮನೆಗೆ ಬಂದರು. ಅಷ್ಟರಲ್ಲಿ ಅವರಿಗೆ ತುಂಬಾ ಬೆವರಿತ್ತು. ಅವರು ಪ್ರಜ್ಞೆ ತಪ್ಪುವ ಸ್ಥಿತಿಯಲ್ಲಿದ್ದರು. ಅವರ ಆರೈಕೆದಾರರು ಆಸ್ಪತ್ರೆಗೆ ತೆರಳಿ ಆಂಬ್ಯುಲೆನ್ಸ್ ಕರೆತಂದರು ಮತ್ತು ತಕ್ಷಣವೇ ತುರ್ತು ಚಿಕಿತ್ಸಾ ತಂಡವು ಅವರ ನಿವಾಸಕ್ಕೆ ಆಗಮಿಸಿ ಕಾರ್ಡಿಯಾಕ್ ಮಸಾಜ್ ನೀಡಲು ಪ್ರಾರಂಭಿಸಿತು.ಆದರೆ ಪ್ರಯೋಜನವಾಗಲಿಲ್ಲ ಎಂದರು.

ನಾನಾ ಪಾಟೇಕರ್ ಅವರು ಮನೆಯಲ್ಲೇ ಸಾವನ್ನಪ್ಪಿದ್ದರಿಂದ ನಿಯಮದಂತೆ ಮೊದಲು ಅವರ ಸಾವಿನ ಮಾಹಿತಿಯನ್ನು ಪೊಲೀಸರಿಗೆ ನೀಡಲಾಯಿತು. ಬಳಿಕ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಗೋವಾ ವೈದ್ಯಕೀಯ ಕಾಲೇಜಿಗೆ ಕೊಂಡೊಯ್ಯಲಾಯಿತು. ಪರೀಕ್ಷೆಯ ಅನಂತರ ಅದನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ಹೇಳಿದರು.

ʻರಾಮಾಯಣʼ ಸಿನಿಮಾ ನಿರ್ಮಾಪಕ ನಮಿತ್‌ ಮಲ್ಹೋತ್ರಾ ಕಚೇರಿ ಮೇಲೆ ಐಟಿ ದಾಳಿ: ಪ್ರೈಮ್ ಫೋಕಸ್ ಷೇರು ಮೌಲ್ಯದಲ್ಲಿ ಕುಸಿತ!

ನಾನಾ ಪಾಟೇಕರ್ 1978ರಲ್ಲಿ 'ಗಮನ್' ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಬಳಿಕ ಮರಾಠಿ ಚಿತ್ರರಂಗದಲ್ಲೂ ಅವರು ತಮ್ಮ ಛಾಪು ಮೂಡಿಸಿದರು. ವೃತ್ತಿಜೀವನದುದ್ದಕ್ಕೂ ಖಳನಾಯಕ, ನೈತಿಕವಾಗಿ ಸಂಕೀರ್ಣವಾದ ಪಾತ್ರಗಳಲ್ಲಿ ಮಿಂಚಿದ್ದ ಅವರು ಒಬ್ಬ ಶ್ರೇಷ್ಠ ಕಲಾವಿದನಾಗಿ ಅಭಿಮಾನಿಗಳ ಮನದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.