ಕೃಷಿ ಕ್ಷೇತ್ರದಲ್ಲಿ ಎಐ ಬಳಕೆ ಹೆಚ್ಚಾಗಲಿ: ನರೇಂದ್ರ ಮೋದಿ ಕರೆ
PM Narendra Modi: ಪ್ರಧಾನ ಮಂತ್ರಿಯವರ ಕಾರ್ಯಾಲಯ ಸೇವಾ ತೀರ್ಥದಲ್ಲಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು ಐಸಿಟಿ ಸಕ್ರಿಯ, ಬಹು ಮಾದರಿ ವೇದಿಕೆಯಾದ ಪ್ರಗತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೃಷಿಯಲ್ಲಿ ಕೃತಕ ಬುದ್ದಿ ಮತ್ತೆಯ ಬಳಕೆ, ಸೈಬರ್ ವಂಚನೆ ವಿರುದ್ಧದ ಹೋರಾಟಕ್ಕೆ ಕರೆ ನೀಡಿದರು.
ಸಂಗ್ರಹ ಚಿತ್ರ -
ನವದೆಹಲಿ: ಮೂಲಸೌಕರ್ಯ ಯೋಜನೆಗಳಲ್ಲಿ ವಿಳಂಬ ಮಾಡುವುದರಿಂದ ವೆಚ್ಚ ಹೆಚ್ಚಳವಾಗುತ್ತಿದೆ. ಇದು ಸಾಕಷ್ಟು ಪರಿಣಾಮಗಳನ್ನು ಉಂಟು ಮಾಡುತ್ತದೆ. ನಾಗರಿಕರು, ವ್ಯವಹಾರಗಳು ಮತ್ತು ಆರ್ಥಿಕತೆಗಾಗಿ ಉದ್ದೇಶಿಸಲಾದ ಇತರ ಕಾರ್ಯಗಳ ವಿಳಂಬಕ್ಕೆ ಕಾರಣವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು. ಐಸಿಟಿ-ಸಕ್ರಿಯ, ಬಹು-ಮಾದರಿ ವೇದಿಕೆಯಾದ ಪ್ರಗತಿ 53ನೇ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೃಷಿಯಲ್ಲಿ ಕೃತಕ ಬುದ್ಧಿಮತ್ತೆ ಬಳಸಬೇಕು, ಸೈಬರ್ ವಂಚನೆ ವಿರುದ್ಧದ ಹೋರಾಡಬೇಕು ಎಂದು ಕರೆ ನೀಡಿದರು.
ರೈಲ್ವೆ, ರಸ್ತೆ, ವಿದ್ಯುತ್ ವಲಯ ಸೇರಿದಂತೆ ಆರು ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಪರಿಶೀಲಿಸಿದ ಅವರು ದೇಶದ ಒಂಬತ್ತು ರಾಜ್ಯಗಳಲ್ಲಿ 30,000 ಕೋಟಿ ರೂ.ಗಳಿಗಿಂತ ಹೆಚ್ಚಿನ ವೆಚ್ಚವನ್ನು ಹೊಂದಿವೆ. ಇದರಿಂದ ಇತರ ಯೋಜನೆಗಳ ಮೇಲೆ ಪರಿಣಾಮ ಉಂಟು ಮಾಡುತ್ತದೆ ಎಂದು ತಿಳಿಸಿದರು.
ಮೋದಿ ಟಾಸ್ಕ್ ಎಫೆಕ್ಟ್: ಇನ್‌ಸ್ಟಾಗ್ರಾಂನಲ್ಲಿ ಸಕ್ರಿಯರಾದ 97% ಕೇಂದ್ರ ಸಚಿವರು
ಸಂಪರ್ಕ ಬಲಪಡಿಸುವುದು, ಕೈಗಾರಿಕಾ ಮತ್ತು ಆರ್ಥಿಕ ಚಟುವಟಿಕೆಗಳನ್ನು ಬೆಂಬಲಿಸುವುದು ಮತ್ತು ಸಾರ್ವಜನಿಕ ಸೇವೆಗಳನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಯೋಜನೆಗಳನ್ನು ಸಮಯಕ್ಕೆ ಸರಿಯಾಗಿ ತ್ವರಿತವಾಗಿ ಪೂರ್ಣಗೊಳಿಸಬೇಕಿದೆ. ಇದರಿಂದ ವೆಚ್ಚವನ್ನು ಕಡಿಮೆ ಮಾಡಬಹುದು ಎಂದರು.
Rs. 30,000 crore worth of projects across 9 states covering railways, roads and power sectors…this is what we reviewed during today’s PRAGATI session.
— Narendra Modi (@narendramodi) August 25, 2026
Focus areas remain - better connectivity, higher growth, better public services and lesser delays.
Here are the details……
ಮೂಲಸೌಕರ್ಯ ಯೋಜನೆಗಳನ್ನು ಸಮಗ್ರವಾಗಿ ನೋಡಿ, ಮೇಲ್ವಿಚಾರಣೆ ಮಾಡಬೇಕು. ಬೇರೆಬೇರೆ ಪ್ಯಾಕೇಜ್‌ಗಳಾಗಿ ನೋಡುವುದರಿಂದ ಪ್ರಗತಿಯ ಮೇಲೆ ಪರಿಣಾಮ ಬೀರುತ್ತದೆ. ಸಚಿವಾಲಯಗಳು ಮತ್ತು ರಾಜ್ಯಗಳು ಯೋಜನೆಗಳ ಅನುಷ್ಠಾನಕ್ಕೆ ವಿಳಂಬವಾಗುವ ಅಂಶಗಳನ್ನು ಗುರುತಿಸಬೇಕು. ಇದಕ್ಕೆ ಪರಿಹಾರವನ್ನು ಒದಗಿಸುವಂತೆ ತಿಳಿಸಿದರು.
ಮೂಲಸೌಕರ್ಯಗಳ ಕಾರಿಡಾರ್‌ಗಳನ್ನು ಅನ್ವೇಷಿಸುವ ಅಗತ್ಯದ ಬಗ್ಗೆ ಮಾತನಾಡಿದ ಅವರು, ಇದನ್ನು ಯೋಜನಾ ಹಂತದಲ್ಲಿಯೇ ಪರಿಶೀಲನೆ ನಡೆಸಬೇಕು. ಯಾವುದೇ ಯೋಜನೆಯನ್ನು ಕಾರ್ಯಗತಗೊಳಿಸುವಾಗ ವೇಗ ಮತ್ತು ಗುಣಮಟ್ಟದಲ್ಲಿ ರಾಜಿಯಾಗಕೂಡದು ಎಂದರು.
ಕೃಷಿಯಲ್ಲಿ ಕೃತಕ ಬುದ್ಧಿಮತ್ತೆಯನ್ನು ಸೇರಿಸಿ ಡಿಜಿಟಲ್ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವ ಅಗತ್ಯದ ಬಗ್ಗೆ ತಿಳಿಸಿದ ಅವರು, ಅಗ್ರಿಸ್ಟ್ಯಾಕ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ರಾಜ್ಯಗಳು ಮತ್ತು ಕೇಂದ್ರ ಸರ್ಕಾರಗಳ ಪ್ರಯತ್ನಗಳ ಬಗ್ಗೆ ಶ್ಲಾಘಿಸಿದರು. ರೈತರಿಗೆ ಉತ್ತಮ ಫಲಿತಾಂಶ ನೀಡಲು ಅದರ ಬಳಕೆಯನ್ನು ಮತ್ತಷ್ಟು ಬಲಪಡಿಸುವಂತೆ ಕರೆ ನೀಡಿದರು.
ಸೈಬರ್ ವಂಚನೆಗಳ ವಿರುದ್ಧ ತರಬೇತಿ, ಜಾಗೃತಿ ಮತ್ತು ಶಿಕ್ಷಣದ ಮೇಲೆ ನಿರಂತರ ಗಮನ ಹರಿಸುವಂತೆ ಸೂಚಿಸಿದ ಪ್ರಧಾನಿ ಮೋದಿ, ನಿರಂತರ ಮತ್ತು ಉದ್ದೇಶಿತ ಸಾರ್ವಜನಿಕ ಜಾಗೃತಿ ಅಭಿಯಾನಗಳಲ್ಲಿ ವಿಶೇಷವಾಗಿ ಹಿರಿಯ ನಾಗರಿಕರು, ಯುವಕರು ಮತ್ತು ಇತರ ದುರ್ಬಲ ವರ್ಗವನ್ನು ಸೇರಿಸುವಂತೆ ತಿಳಿಸಿದರು.