ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನೀಟ್ ಮರುಪರೀಕ್ಷೆ ಆರಂಭಕ್ಕೂ ಮುನ್ನ ಪ್ರಶ್ನೆ ಪತ್ರಿಕೆ ಬೇಕಾದರೆ 30,000 ರುಪಾಯಿ ನೀಡುವಂತೆ ಬಂತು ಕರೆ!

NEET Question Paper Scam Allegation: ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೃಷ್ಣ ಸಿಂಗ್ ಠಾಕೂರ್ ಪೊಲೀಸರಿಗೆ ದೂರು ನೀಡಿದ್ದು, ಆಪಾದಿತ ಪ್ರಶ್ನೆ ಪತ್ರಿಕೆಯನ್ನು ವಿಡಿಯೊ ಕರೆಯಲ್ಲಿ ಪ್ರದರ್ಶಿಸುವ ಮೂಲಕ ವಿದ್ಯಾರ್ಥಿಗಳಿಂದ ಸುಲಿಗೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಕಾಲೇಜಿನ ವಿದ್ಯಾರ್ಥಿಯೊಬ್ಬರು ಈ ಬಗ್ಗೆ ತನಗೆ ಮಾಹಿತಿ ನೀಡಿದ್ದರು ಎಂದು ಹೇಳಿದ್ದಾರೆ.

ನೀಟ್ ವಂಚನೆ ಆರೋಪ: ಕರೆ ಮಾಡಿದಾತನಿಂದ 30,000 ರುಪಾಯಿ ಬೇಡಿಕೆ

ನೀಟ್ ಪ್ರಶ್ನೆಪತ್ರಿಕೆ ವಂಚನೆ ಆರೋಪ: ಕರೆ ಮಾಡಿದ ವ್ಯಕ್ತಿಯಿಂದ 30,000 ರೂ.ಗೆ ಬೇಡಿಕೆ -

Priyanka P
Priyanka P Jun 21, 2026 7:04 PM

ಜೈಪುರ, ಜೂ. 21: ವೈದ್ಯಕೀಯ ಪ್ರವೇಶಕ್ಕಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET) ಮರುಪರೀಕ್ಷೆಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಭಾಗವಹಿಸಿದರು. ಈ ಮಧ್ಯೆ ಪರೀಕ್ಷೆ ಆರಂಭಕ್ಕೂ ಮುನ್ನ ಪ್ರಶ್ನೆ ಪತ್ರಿಕೆ ಬೇಕಾದರೆ ಹಣ ಪಾವತಿಸುವಂತೆ ಕೋರಿ ಹಲವು ಅಭ್ಯರ್ಥಿಗಳಿಗೆ ವಂಚಕರ ಕರೆ ಬಂದಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜಸ್ಥಾನದ ಅಜ್ಮೀರ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆಯ ಕೇಂದ್ರಬಿಂದುವಾಗಿ ಅಪರಿಚಿತ ವ್ಯಕ್ತಿಯೊಬ್ಬ ನೀಟ್ ಪತ್ರಿಕೆಯನ್ನು ಹೊಂದಿರುವುದಾಗಿ ಹೇಳಿಕೊಂಡು ಅದಕ್ಕಾಗಿ 30,000 ರುಪಾಯಿ ಬೇಡಿಕೆ ಇಟ್ಟಿರುವ ಆರೋಪ ಕೇಳಿಬಂದಿದೆ.

ಡಿಎವಿ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೃಷ್ಣ ಸಿಂಗ್ ಠಾಕೂರ್ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದು, ಅಪರಿಚಿತ ಪ್ರಶ್ನೆ ಪತ್ರಿಕೆಯನ್ನು ವಿಡಿಯೊ ಕರೆಯಲ್ಲಿ ಪ್ರದರ್ಶಿಸುವ ಮೂಲಕ ವಿದ್ಯಾರ್ಥಿಗಳಿಂದ ಸುಲಿಗೆ ಮಾಡಲು ಮುಂದಾಗಿದ್ದಾನೆ ಎಂದು ಹೇಳಿದ್ದಾರೆ. ಕಾಲೇಜಿನ ವಿದ್ಯಾರ್ಥಿನಿಯೊಬ್ಬರು ಈ ಬಗ್ಗೆ ತನಗೆ ಮಾಹಿತಿ ನೀಡಿದ್ದರು. ಆಕೆಯ ಹೇಳಿಕೆ ಪರಿಶೀಲಿಸಲು ತಾನೇ ಆ ಸಂಖ್ಯೆಗೆ ಡಯಲ್ ಮಾಡಿದ್ದಾಗಿ ಠಾಕೂರ್ ಹೇಳಿದ್ದಾರೆ.

“ನಾಳೆ ನೀಟ್ ಪರೀಕ್ಷೆ ಇದೆ. ವಿದ್ಯಾರ್ಥಿಗಳನ್ನು ದಾರಿ ತಪ್ಪಿಸಿ ಸುಲಿಗೆ ಮಾಡಲಾಗುತ್ತಿದೆ. ನನಗೆ ಒಂದು ಪತ್ರಿಕೆ ತೋರಿಸಿ ಅದಕ್ಕೆ 30,000 ರುಪಾಯಿ ಪಾವತಿಸುವಂತೆ ಹೇಳಲಾಯಿತು. ನಾನು ದಾಖಲೆ ಸಲ್ಲಿಸಿದ್ದೇನೆʼʼ ಎಂದು ಅವರು ತಿಳಿಸಿದ್ದಾರೆ. ಕರೆ ಮಾಡಿದವರು ಹಣ ಪಾವತಿಸಲು ಕ್ಯುಆರ್‌ ಕೋಡ್ ಸಹ ಕಳುಹಿಸಿದ್ದರು.

ನೀಟ್‌ ಅಭ್ಯರ್ಥಿಗಳಿಗೆ ತೊಂದರೆಯಾಗದಿರಲು 45 ನಿಮಿಷ ವಿಮಾನ ನಿಲ್ದಾಣದಲ್ಲೇ ಕಾದ ನರೇಂದ್ರ ಮೋದಿ

ಇಂತಹ ವಂಚನೆಗೆ ಈಗಾಗಲೇ ಹಲವು ವಿದ್ಯಾರ್ಥಿಗಳು ಬಲಿಯಾಗಿದ್ದಾರೆ ಎಂದು ಆರೋಪಿಸಿದ ಠಾಕೂರ್, ಪರೀಕ್ಷಾರ್ಥಿಗಳು ಇಂತಹ ಸುಳ್ಳು ಭರವಸೆಗಳಿಗೆ ಮರುಳಾಗಬಾರದು ಎಂದು ಮನವಿ ಮಾಡಿದರು. ಅಲ್ಲದೆ, ಈ ಘಟನೆ ಕುರಿತು ಮಾಹಿತಿ ನೀಡಲು ಹೆಚ್ಚುವರಿ ಪೊಲೀಸ್ ಅಧೀಕ್ಷಕ (SP) ಹಿಮಾಂಶು ಜಾಂಗಿಡ್ ಅವರನ್ನು ಭೇಟಿಯಾಗಿ, ಕ್ಯುಆರ್‌ ಕೋಡ್ ಹಾಗೂ ಕರೆ ಮಾಡಿದ ವ್ಯಕ್ತಿಯ ಮೊಬೈಲ್ ಸಂಖ್ಯೆಯನ್ನು ಒಳಗೊಂಡ ಡಿಜಿಟಲ್ ಸಾಕ್ಷ್ಯಗಳನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾಗಿ ವಿವರಿಸಿದರು.

ತನಿಖೆ ಆರಂಭ

ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪೊಲೀಸರು ಮೊಬೈಲ್ ಸಂಖ್ಯೆ ಮತ್ತು ಕ್ಯುಆರ್ ಕೋಡ್‌ಗೆ ಲಿಂಕ್ ಮಾಡಲಾದ ಬ್ಯಾಂಕ್ ಖಾತೆಯ ಸ್ಥಳವನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ. ವಿಡಿಯೊ ಕರೆಯ ಸಮಯದಲ್ಲಿ ಪ್ರದರ್ಶಿಸಲಾದ ಪ್ರಶ್ನೆಪತ್ರಿಕೆಯ ಸತ್ಯಾಸತ್ಯತೆಯನ್ನು ಕಂಡುಹಿಡಿಯಲು ತನಿಖೆ ನಡೆಸಲಾಗುತ್ತಿದೆ.

ʼʼವಿಡಿಯೊ ಕಾಲ್ ಮೂಲಕ ಪ್ರಶ್ನೆ ಪತ್ರಿಕೆಗಳ ಮಾರಾಟಕ್ಕೆ ಸಂಬಂಧಿಸಿದ ಈ ಪ್ರಕರಣ ನಮ್ಮ ಗಮನಕ್ಕೆ ಬಂದಿದೆ. ಪೊಲೀಸರು ಈ ಬಗ್ಗೆ ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ. ಪರೀಕ್ಷಾ ಸಮಯದಲ್ಲಿ ಸೈಬರ್ ವಂಚಕರು ಸಕ್ರಿಯರಾಗುತ್ತಾರೆ ಮತ್ತು ಅಭ್ಯರ್ಥಿಗಳಿಗೆ ಆಮಿಷ ಒಡ್ಡಲು ಪ್ರಯತ್ನಿಸುತ್ತಾರೆʼʼ ಎಂದು ಅಜ್ಮೀರ್ ಎಸ್‌ಪಿ ಉಷಾ ಯಾದವ್ ಹೇಳಿದ್ದಾರೆ.

ಇದು ದೊಡ್ಡ ಪ್ರಶ್ನೆಪತ್ರಿಕೆ ಸೋರಿಕೆ ಜಾಲದ ಭಾಗವೇ ಅಥವಾ ವಿದ್ಯಾರ್ಥಿಗಳನ್ನು ವಂಚಿಸುವ ಹೊಸ ತಂತ್ರವೇ ಎಂಬುದರ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೇ 3ರಂದು ನಡೆದ ನೀಟ್-ಯುಜಿ ಪರೀಕ್ಷೆಯನ್ನು ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ಮೇಲೆ ರದ್ದುಗೊಳಿಸಿ ಜೂನ್‌ 21ರಂದು ಮರುಪರೀಕ್ಷೆ ನಡೆಲಾಯಿತು.