Income Tax Bill 2025: ಪಾರ್ಲಿಮೆಂಟ್‌ನಲ್ಲಿ ಆದಾಯ ತೆರಿಗೆ ಮಸೂದೆ ಮಂಡನೆ: ಐಟಿ ಬಿಲ್‌ನಲ್ಲಿ ಏನಿದೆ?
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು(ಫೆ.13) ವಿಪಕ್ಷಗಳ ವಿರೋಧದ ನಡುವೆಯೂ ಹೊಸ ಆದಾಯ ತೆರಿಗೆ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದಾರೆ. . ಸಂಸತ್ನ ಹಣಕಾಸು ಸ್ಥಾಯಿ ಸಮಿತಿಯಿಂದ ಪರಿಶೀಲನೆಯಾಗಿ, ಸಂಸತ್ನಲ್ಲಿ ಅಂತಿಮ ಒಪ್ಪಿಗೆ ಸಿಕ್ಕಿದ ಬಳಿಕ ಇದು ಕಾಯ್ದೆಯಾಗಿ ಬದಲಾಗುತ್ತದೆ.
![ಲೋಕಸಭೆಯಲ್ಲಿ ಹೊಸ ಆದಾಯ ತೆರಿಗೆ ಮಸೂದೆ ಮಂಡನೆ](https://cdn-vishwavani-prod.hindverse.com/media/original_images/Income_Tax_Bill_2025.jpg)
ಹೊಸ ಆದಾಯ ತೆರಿಗೆ ಮಸೂದೆ ಮಂಡನೆ
![Profile](https://vishwavani.news/static/img/user.png)
ನವದೆಹಲಿ: ಕೇಂದ್ರ ಹಣಕಾಸು ಸಚಿವೆ(Union Finance Minister) ನಿರ್ಮಲಾ ಸೀತಾರಾಮನ್( Nirmala Sitharaman) ಅವರು ಇಂದು(ಫೆ.13) ವಿಪಕ್ಷಗಳ ವಿರೋಧದ ನಡುವೆಯೂ ಹೊಸ ಆದಾಯ ತೆರಿಗೆ ಮಸೂದೆಯನ್ನು ಲೋಕಸಭೆಯಲ್ಲಿ(Loksabha) ಮಂಡಿಸಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಹೊಸ ಐಟಿ ಬಿಲ್ ಅನ್ನು ಘೋಷಣೆ ಮಾಡಲಾಗಿತ್ತು. ಇದೀಗ ಲೋಕಸಭೆಯಲ್ಲಿ ಮಂಡನೆಯಾಗಿದೆ. ಸಂಸತ್ನ ಹಣಕಾಸು ಸ್ಥಾಯಿ ಸಮಿತಿಯಿಂದ ಪರಿಶೀಲನೆಯಾಗಿ, ಸಂಸತ್ನಲ್ಲಿ ಅಂತಿಮ ಒಪ್ಪಿಗೆ ಸಿಕ್ಕಿದ ಬಳಿಕ ಇದು ಕಾಯ್ದೆಯಾಗಲಿದೆ.
ಕೇಂದ್ರ ಸರ್ಕಾರ ಬಜೆಟ್ ಅಧಿವೇಶನದಲ್ಲಿ ಆದಾಯ ತೆರಿಗೆ ಮಸೂದೆಯನ್ನು ಸಂಸತ್ತಿನ ಮುಂದಿಟ್ಟಿತ್ತು. ಇಂದು ಮಧ್ಯಾಹ್ನ 2 ಗಂಟೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೊಸ ಆದಾಯ ತೆರಿಗೆ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದಾರೆ. ಸರಿ ಸುಮಾರು 622 ಪುಟಗಳಿರುವ ಆದಾಯ ತೆರಿಗೆ ಮಸೂದೆ 2025 ಅನ್ನು ಈ ಬಾರಿಯ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಫೆಬ್ರುವರಿ 7ರಂದು ಕೇಂದ್ರ ಸಂಪುಟ ಕೂಡ ಅನುಮೋದನೆ ಮಾಡಿತ್ತು.
🚨 Lok Sabha passes the New Income Tax Bill which is a huge relief for middle class🔥
— BALA (@erbmjha) February 13, 2025
FYI, anti-middle class Congress MPs were absent when Nirmala ji tabled the bill. pic.twitter.com/IDozH4ix8v
ಲೋಕಸಭೆಯಲ್ಲಿ ಈ ಮಸೂದೆಗೆ ಅಂಗೀಕಾರ ಸಿಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಇದಾದ ಬಳಿಕ ಸಂಸತ್ನ ಹಣಕಾಸು ಸ್ಥಾಯಿ ಸಮಿತಿಯ ಅವಗಾಹನೆಗೆ ಈ ಮಸೂದೆಯನ್ನು ಕಳುಹಿಸಲಾಗುತ್ತದೆ. ನಂತರ ಬದಲಾವಣೆಯ ಅಗತ್ಯವಿದ್ದರೆ ಸಂಸತ್ತಿನ ಎರಡೂ ಸದನಗಳ ಬಳಿ ಈ ಮಸೂದೆ ಮರಳಿ ಬರಲಿದೆ. ಸಂಸತ್ನಿಂದ ಅಂತಿಮ ಒಪ್ಪಿಗೆ ದೊರೆತ ಬಳಿಕ ಅದು ಕಾಯ್ದೆಯಾಗಿ ಜಾರಿಗೆ ಬರಲಿದೆ. 2026ರ ಏಪ್ರಿಲ್ನಿಂದ ಈ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರುವ ಸಾಧ್ಯತೆಯಿದೆ ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ: Modi Meets JD Vance: ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮಕ್ಕಳಿಗೆ ಸ್ಪೆಷಲ್ ಗಿಫ್ಟ್ ಕೊಟ್ಟ ಪ್ರಧಾನಿ ಮೋದಿ
ಅರವತ್ತು ವರ್ಷಗಳ ಹಿಂದೆ ರಚನೆಯಾಗಿದ್ದ 1961ರ ಆದಾಯ ತೆರಿಗೆ ಕಾಯ್ದೆಯ ಬದಲಾಗಿ ಹೊಸ ಕಾಯ್ದೆ ತರಲು ಈ ಮಸೂದೆಯನ್ನು ರೂಪಿಸಲಾಗಿದೆ. ಈ ಮಸೂದೆ 622 ಪುಟಗಳಿದ್ದು, ಹಳೆಯ ಕಾಯ್ದೆಯ ನಿಯಮ ಮತ್ತು ಕಾನೂನುಗಳನ್ನು ಸರಳಗೊಳಿಸಲಾಗಿದೆ. ವಿವಿಧ ಸೆಕ್ಷನ್ಗಳ ಸಂಖ್ಯೆಯನ್ನು ಶೇ. 25ರಿಂದ 30ರಷ್ಟು ಕಡಿಮೆ ಮಾಡಲಾಗಿದೆ. ಪರಿಭಾಷೆಗಳನ್ನು ಸುಲಭಗೊಳಿಸಲಾಗಿದೆ. ಕಾನೂನು ಪರಿಣಿತರು ಅಲ್ಲದವರಿಗೂ ಅರ್ಥವಾಗುವ ರೀತಿಯಲ್ಲಿ ಕಾನೂನನ್ನು ವಿವರಿಸಲಾಗಿದೆ.
ಐಟಿ ರಿಟರ್ನ್ ಫೈಲ್ ಮಾಡುವಾಗ ಅಸೆಸ್ಮೆಂಟ್ ವರ್ಷ, ಹಣಕಾಸು ವರ್ಷ ಎಂದು ಎರಡು ವರ್ಗೀಕರಣ ಇತ್ತು. ಇದು ತೆರಿಗೆ ಪಾವತಿದಾರರಿಗೆ ಗೊಂದಲ ಮೂಡಿಸುತ್ತದೆ. ಇವೆರಡರ ಬದಲು ಒಂದೇ ಟ್ಯಾಕ್ಸ್ ಇಯರ್ ಎಂದು ಪರಿಗಣಿಸಲಾಗುತ್ತದೆ. ನಾವು 2024-25ರ ಹಣಕಾಸು ವರ್ಷಕ್ಕೆ ತೆರಿಗೆ ಪಾವತಿಸುವಾಗ, ಅದರ ಅಸೆಸ್ಮೆಂಟ್ ವರ್ಷ 2025-26 ಎಂದು ಕರೆಯಲಾಗುತ್ತಿತ್ತು. ಈಗ ಈ ಅಸೆಸ್ಮೆಂಟ್ ಇಯರ್ನ ಸಮಸ್ಯೆಯನ್ನು ತೆಗೆಯಲಾಗಿದೆ. ಯಾವ ವರ್ಷಕ್ಕೆ ತೆರಿಗೆ ಪಾವತಿಸುತ್ತೇವೆಯೋ ಅದನ್ನು ಆ ಟ್ಯಾಕ್ಸ್ ಇಯರ್ ಎಂದು ಪರಿಗಣಿಸಲಾಗುತ್ತದೆ.