Modi Meets JD Vance: ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮಕ್ಕಳಿಗೆ ಸ್ಪೆಷಲ್ ಗಿಫ್ಟ್ ಕೊಟ್ಟ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮತ್ತು ಅವರ ಕುಟುಂಬವನ್ನು ಭೇಟಿಯಾಗಿದ್ದಾರೆ. ಜೆ.ಡಿ. ವ್ಯಾನ್ಸ್ ಹಾಗೂ ಅವರ ಪತ್ನಿ ಮತ್ತು ಮೂರು ಮಕ್ಕಳ ಜೊತೆ ಪ್ರಧಾನಿ ಮತನಾಡಿದ್ದಾರೆ. ವ್ಯಾನ್ಸ್ ಮಕ್ಕಳಿಗೆ ಮೋದಿ ಉಡುಗೊರೆಯನ್ನು ನೀಡಿದ್ದಾರೆ.
![ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಮಕ್ಕಳಿಗೆ ಮೋದಿಯ ಸ್ಪೆಷಲ್ ಗಿಫ್ಟ್](https://cdn-vishwavani-prod.hindverse.com/media/original_images/Narendra_Modi_6_aQc5D8b.jpg)
ಅಮೆರಿಕ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ಕುಟುಂಬದ ಜೊತೆ ನರೇಂದ್ರ ಮೋದಿ
![Profile](https://vishwavani.news/static/img/user.png)
ಪ್ಯಾರಿಸ್: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಫೆ. ಮಂಗಳವಾರ ಹಾಗೂ ಬುಧವಾರ ಫ್ರಾನ್ಸ್ ಪ್ರವಾಸದಲ್ಲಿದ್ದರು. ಪ್ಯಾರಿಸ್‌ನಲ್ಲಿ ನಡೆದ AI ಶೃಂಗ ಸಭೆಯಲ್ಲಿ ಅವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರು ಫ್ರಾನ್ಸ್‌ನಲ್ಲಿ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ (JD Vance's) ಮತ್ತು ಅವರ ಕುಟುಂಬವನ್ನು ಭೇಟಿಯಾಗಿದ್ದಾರೆ. ಜೆ.ಡಿ. ವ್ಯಾನ್ಸ್ ಹಾಗೂ ಅವರ ಪತ್ನಿ ಮತ್ತು ಮೂರು ಮಕ್ಕಳ ಜೊತೆ ಪ್ರಧಾನಿ ಮತನಾಡಿದ್ದಾರೆ. ವ್ಯಾನ್ಸ್ ಮಕ್ಕಳಿಗೆ ಮೋದಿ ಉಡುಗೊರೆಯನ್ನು ನೀಡಿದ್ದಾರೆ.
ಮೋದಿ ಜೆ.ಡಿ. ವ್ಯಾನ್ಸ್ ಮಕ್ಕಳಾದ ವಿವೇಕ್ ವ್ಯಾನ್ಸ್‌ಗೆ ಮರದ ರೈಲ್ವೆ ಆಟಿಕೆ ಸೆಟ್ ಅನ್ನು ಮತ್ತು ಇವಾನ್ ಬ್ಲೇನ್ ವ್ಯಾನ್ಸ್‌ಗೆ ಭಾರತೀಯ ಜಾನಪದ ವರ್ಣಚಿತ್ರಗಳನ್ನು ಒಳಗೊಂಡ ಜಿಗ್ಸಾ ಪಜಲ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಮರದ ರೈಲ್ವೆ ಆಟಿಕೆ ನೈಸರ್ಗಿಕವಾಗಿ ಮಾಡಿದ್ದು, ಪರಿಸರ ಸ್ನೇಹಿ ಬಣ್ಣಗಳನ್ನು ಇದರಲ್ಲಿ ಬಳಸಲಾಗಿದೆ. ಜಿಗ್ಸಾ ಪಜಲ್ ಭಾರತದ ಶ್ರೀಮಂತ ಕಲಾತ್ಮಕ ರಚನೆಯನ್ನು ಒಳಗೊಂಡಿದೆ. , ಪಶ್ಚಿಮ ಬಂಗಾಳದ ಕಾಳಿಘಾಟ್ ಪಾಟ್ ಚಿತ್ರಕಲೆ, ಸಂತಾಲ್ ಬುಡಕಟ್ಟು ಜನಾಂಗದ ಸಂತಾಲ್ ಚಿತ್ರಕಲೆ ಮತ್ತು ಬಿಹಾರದ ಮಧುಬನಿ ಚಿತ್ರಕಲೆ ಸೇರಿದಂತೆ ವಿವಿಧ ಜಾನಪದ ಚಿತ್ರಕಲೆ ಶೈಲಿಗಳನ್ನು ಇದರ ಮೇಲೆ ಕಾಣಬಹುದಾಗಿದೆ. ಇನ್ನು . ವ್ಯಾನ್ಸ್ ಅವರ ಪುತ್ರಿ ರೋಸ್ ವ್ಯಾನ್ಸ್‌ಗೆ ಪ್ರಧಾನಿ ಮೋದಿ ಪರಿಸರ ಸ್ನೇಹಿ ಮರದ ವರ್ಣಮಾಲೆಯ ಸೆಟ್ ಅನ್ನು ಉಡುಗೊರೆಯಾಗಿ ನೀಡಿದರು. ಇದು ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಲು ಸಹಕಾರಿಯಾಗಿದೆ.
Prime Minister Modi was gracious and kind, and our kids really enjoyed the gifts. I’m grateful to him for the wonderful conversation. https://t.co/wto64QM9qa
— JD Vance (@JDVance) February 11, 2025
ಪ್ರಧಾನಿ ಮೋದಿಯನ್ನು ಭೇಟಿ ಮಾಡಿದ ಕ್ಷಣದ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡ ಜೆ.ಡಿ. ವ್ಯಾನ್ಸ್ ಪ್ರಧಾನಿ ಮೋದಿ ಅವರು ಅತ್ಯಂತ ದಯಾಳು ಹಾಗೂ ಒಳ್ಳೆಯ ಮನುಷ್ಯ. ಅವರು ನೀಡಿದ ಉಡುಗೊರೆ ನನ್ನ ಮಕ್ಕಳಿಗೆ ತುಂಬಾ ಇಷ್ಟವಾಗಿದೆ. ಅವರೊಟ್ಟಿಗೆ ಕಳೆದ ಕ್ಷಣವನ್ನು ನಮ್ಮ ಕುಟುಂಬವು ಆನಂದಿಸಿದೆ ನಾನು ಅವರಿಗೆ ಕೃತಜ್ಞನಾಗಿದ್ದೇನೆ ಎಂದು ಅವರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Narendra Modi: ಫೆ.13ರಂದು ಡೊನಾಲ್ಡ್ ಟ್ರಂಪ್ ಭೇಟಿಯಾಗಲಿರುವ ನರೇಂದ್ರ ಮೋದಿ!
ಫ್ರಾನ್ಸ್‌ನಲ್ಲಿ AI ಶೃಂಗ ಸಭೆ ಮುಗಿಸಿ ಪ್ರಧಾನಿ ಮೋದಿ ಬುಧವಾರ ಅಮೆರಿಕಕ್ಕೆ ತೆರಳಿದ್ದಾರೆ. ಎರಡು ದಿನ ಅಲ್ಲಿಯೇ ತಂಗಲಿದ್ದಾರೆ. ಜಾಯಿಂಟ್ ಆಂಡ್ರ್ಯೂಸ್ ಬೇಸ್‌ಗೆ ಬಂದಿಳಿದ ಅವರಿಗೆ ಅನಿವಾಸಿ ಭಾರತೀಯರು ಅದ್ದೂರಿ ಸ್ವಾಗತ ಕೋರಿದ್ದಾರೆ. ಅಲ್ಲಿಂದ ಪ್ರಧಾನಿ ಮೋದಿ ಬ್ಲೇರ್ ಹೌಸ್‌ನಲ್ಲಿ ತಂಗಲಿದ್ದಾರೆ. ಈ ವೇಳೆ ಅಮೆರಿಕದ ರಾಷ್ಟ್ರೀಯ ಗುಪ್ತಚರ ವಿಭಾಗದ ನಿರ್ದೇಶಕಿ (ಡಿಎನ್‌ಐ) ತುಳಸಿ ಗಬ್ಬಾರ್ಡ್ ಅವರನ್ನು ಭೇಟಿ ಮಾಡಿದ್ದಾರೆ.