Border Security Force: ಪಾಕ್-ಭಾರತ ಉದ್ವಿಗ್ನತೆ ನಡುವೆಯೇ ಬಿಎಸ್ಎಫ್ ಯೋಧರಿಗೆ ಸಿಕ್ತು ಗುಡ್ನ್ಯೂಸ್!
2022ರಲ್ಲಿ ಸೈನಿಕರ ಸಮವಸ್ತ್ರವನ್ನು ಡಿಜಿಟಲ್ ಮರೆಮಾಚುವ ಮಾದರಿಯ ಸಮವಸ್ತ್ರದೊಂದಿಗೆ ಬದಲಾವಣೆ ಮಾಡಲು ಬಿಎಸ್ಎಫ್ ( Border Security Force) ಸಿದ್ಧತೆ ನಡೆಸಿಕೊಂಡಿತ್ತು. ಭಾರತೀಯ ಸೇನೆ ಮತ್ತು ಭಾರತೀಯ ವಾಯುಪಡೆಯು ತಮ್ಮ ಪಡೆಗಳಿಗೆ ಡಿಜಿಟಲ್ ಮರೆಮಾಚುವ ಸಮವಸ್ತ್ರಗಳನ್ನು ಈಗಾಗಲೇ ಪರಿಚಯಿಸಿದೆ. ಶೀಫ್ರದಲ್ಲೇ ಗಡಿ ಭದ್ರತಾ ಪಡೆಯ ಸೈನಿಕರು ಕೂಡ ಹೊಸ ಡಿಜಿಟಲ್ ಮರೆಮಾಚುವ ಮಾದರಿಯ ಸಮವಸ್ತ್ರವನ್ನು ಪಡೆಯಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ನವದೆಹಲಿ: ಗಡಿ ಭದ್ರತಾ ಪಡೆ (Border Security Force) ಸಿಬ್ಬಂದಿಗೆ ಶೀಘ್ರದಲ್ಲೇ ಹೊಸ ಸಮವಸ್ತ್ರ (uniform) ಬರಲಿದೆ. ಅತ್ಯಾಧುನಿಕವಾಗಿ ವಿನ್ಯಾಸಗೊಳಿಸಲಾಗಿರುವ ಈ ಸಮವಸ್ತ್ರ ಡಿಜಿಟಲ್ ಪ್ರಿಂಟೆಡ್ (digital camouflage pattern) ಒಳಗೊಂಡಿರಲಿದೆ. 2022ರಲ್ಲಿ ಸೈನಿಕರ ಸಮವಸ್ತ್ರವನ್ನು ಡಿಜಿಟಲ್ ಮರೆಮಾಚುವ ಮಾದರಿಯ ಸಮವಸ್ತ್ರದೊಂದಿಗೆ ಬದಲಾವಣೆ ಮಾಡಲು ಬಿಎಸ್ಎಫ್ ಸಿದ್ಧತೆ ನಡೆಸಿಕೊಂಡಿತ್ತು. ಭಾರತೀಯ ಸೇನೆ ಮತ್ತು ಭಾರತೀಯ ವಾಯುಪಡೆಯು ತಮ್ಮ ಪಡೆಗಳಿಗೆ ಡಿಜಿಟಲ್ ಮರೆಮಾಚುವ ಸಮವಸ್ತ್ರಗಳನ್ನು ಈಗಾಗಲೇ ಪರಿಚಯಿಸಿದೆ. ಶೀಫ್ರದಲ್ಲೇ ಗಡಿ ಭದ್ರತಾ ಪಡೆಯ ಸೈನಿಕರು ಕೂಡ ಹೊಸ ಡಿಜಿಟಲ್ ಮರೆಮಾಚುವ ಮಾದರಿಯ ಸಮವಸ್ತ್ರವನ್ನು ಪಡೆಯಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡಿಜಿಟಲ್ ಮರೆಮಾಚುವ ಮಾದರಿಯ ಸಮವಸ್ತ್ರಗಳನ್ನು ನಕಲು ಮಾಡುವುದು ಕಷ್ಟ. ಈಗಾಗಲೇ ಸಮವಸ್ತ್ರದ ಬಣ್ಣವನ್ನು ಅಂತಿಮಗೊಳಿಸಲಾಗಿದೆ. ಒಂದು ವರ್ಷದೊಳಗೆ ಗಡಿ ಭದ್ರತಾ ಪಡೆಯ ಜವಾನರು ಈ ಹೊಸ ಯುದ್ಧ ಉಡುಗೆಯಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
2022ರಲ್ಲಿ ಭಾರತೀಯ ಸೇನೆ ಮತ್ತು ಭಾರತೀಯ ವಾಯುಪಡೆಯು ತಮ್ಮ ಸೈನಿಕರಿಗೆ ಡಿಜಿಟಲ್ ಮರೆಮಾಚುವ ಸಮವಸ್ತ್ರಗಳನ್ನು ಪರಿಚಯಿಸಿತ್ತು. ಪ್ರಸ್ತುತ ಇರುವ ಗಡಿ ಭದ್ರತಾ ಪಡೆ ಸಿಬ್ಬಂದಿಯ ಸಮವಸ್ತ್ರಕ್ಕಿಂತ ಇದು ಭಿನ್ನವಾಗಿರುತ್ತದೆ. ಈಗ ಇರುವ ಸಮವಸ್ತ್ರವು ಶೇ. 50 ಹತ್ತಿ ಮತ್ತು ಶೇ. 50 ಪಾಲಿಸ್ಟರ್ ಅನ್ನು ಒಳಗೊಂಡಿದೆ. ಆದರೆ ಹೊಸ ಸಮವಸ್ತ್ರವು ಶೇ. 80 ಹತ್ತಿ, ಶೇ. 19 ಪಾಲಿಸ್ಟರ್ ಮತ್ತು ಶೇ. 1 ಸ್ಪ್ಯಾಂಡೆಕ್ಸ್ ಆಗಿರುತ್ತದೆ. ಇದು ವಿವಿಧ ರೀತಿಯ ಹವಾಮಾನಗಳಲ್ಲಿ ಸೈನಿಕರನ್ನು ಆರಾಮದಾಯಕವಾಗಿಸುತ್ತದೆ. ಸಮವಸ್ತ್ರದಲ್ಲಿರುವ ಸ್ಪ್ಯಾಂಡೆಕ್ಸ್ ವಸ್ತುವು ಅದರ ಹಿಗ್ಗುವಿಕೆ ಮತ್ತು ಮರಳಿ ಮೊದಲಿನ ಸ್ಥಿತಿಗೆ ಬರುವುದನ್ನು ಖಚಿತಪಡಿಸುತ್ತದೆ.

ಹೊಸ ಸಮವಸ್ತ್ರದ ಬಣ್ಣದಲ್ಲೂ ಬದಲಾವಣೆಯಾಗಿದೆ. ಹೊಸ ಸಮವಸ್ತ್ರವು ಶೇ. 50 ಖಾಕಿ, ಶೇ. 45 ಹಸಿರು ಮತ್ತು ಶೇ. 5 ಕಂದು ಬಣ್ಣದ್ದಾಗಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಗ ಬಳಸಲಾಗುತ್ತಿರುವ ಯುದ್ಧ ಉಡುಗೆಗಳ ಮೇಲ್ಮೈ ಮಾದರಿಯನ್ನು ಬಟ್ಟೆಯ ಮೇಲೆ ಮುದ್ರಿಸಲಾಗುತ್ತದೆ. ಆದರೆ ಹೊಸ ಸಮವಸ್ತ್ರದಲ್ಲಿ ಅದನ್ನು ಫೈಬರ್ ಮೇಲೆ ಮುಚ್ಚಲಾಗುತ್ತದೆ. ಇದರಿಂದ ಅದು ಮಸುಕಾಗುವುದಿಲ್ಲ. ದೀರ್ಘಕಾಲ ಬಾಳಿಕೆ ಬರುವುದನ್ನು ಖಚಿತಪಡಿಸುತ್ತದೆ. ಈಗಾಗಲೇ ಭಾರತೀಯ ಭೂ ಸೇನೆ ಮತ್ತು ವಾಯು ಸೇನೆಯ ಸಿಬ್ಬಂದಿ ಒಂದೂವರೆ ವರ್ಷಗಳಿಂದ ಹೊಸ ಯುದ್ಧ ಉಡುಗೆಯಲ್ಲಿ ಕೆಲಸ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಎಸ್ಎಫ್ ಸಮವಸ್ತ್ರದ ಡಿಜಿಟಲ್ ಮುದ್ರಣವನ್ನು ಕೂಡ ಹಕ್ಕುಸ್ವಾಮ್ಯಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಬಿಎಸ್ಎಫ್ ನಲ್ಲಿ 2,70,000 ಸಿಬ್ಬಂದಿ ಇದ್ದು, ಅವರಲ್ಲಿ ಹೆಚ್ಚಿನವರು ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಗಡಿಗಳಲ್ಲಿ ನಿಯೋಜಿಸಲ್ಪಟ್ಟಿದ್ದಾರೆ. ಈ ಪಡೆ ಭಯೋತ್ಪಾದನಾ ವಿರೋಧಿ ಮತ್ತು ಮಾವೋವಾದಿ ವಿರೋಧಿ ಕಾರ್ಯಾಚರಣೆಗಳಲ್ಲಿಯೂ ತೊಡಗಿಸಿಕೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.