New Rules: ನಾಳೆಯಿಂದ ಈ ಎಲ್ಲಾ ನಿಯಮಗಳಲ್ಲಿ ಬದಲಾವಣೆ, ಇದೆಲ್ಲಾ ದುಬಾರಿ!
ಪ್ರತಿ ತಿಂಗಳ ಆರಂಭದಲ್ಲಿ ಒಂದಿಷ್ಟು ನಿಯಮಗಳು ಬದಲಾಗುತ್ತವೆ. ಅದೇ ರೀತಿ ಫ್ರೆಬ್ರವರಿ ಆರಂಭದಲ್ಲೂ ಒಂದಿಷ್ಟು ಬದಲಾವಣೆಯಾಗಲಿದ್ದು, ಪ್ರತಿ ತಿಂಗಳ ಆರಂಭದಲ್ಲಿ ಸರ್ಕಾರವು ಅನೇಕ ನಿಯಮಗಳನ್ನು ಬದಲಾಯಿಸುತ್ತದೆ. ನಾಳೆಯಿಂದ ವಿವಿಧ ಆರ್ಥಿಕ ಮತ್ತು ಬ್ಯಾಂಕಿಂಗ್ ನಿಯಮಗಳು ಬದಲಾಗಲಿದ್ದು, ಇವು ಸಾಮಾನ್ಯ ಜನರ ದೈನಂದಿನ ವಹಿವಾಟು, ಸಾಲ, ಮತ್ತು ಉಳಿತಾಯವನ್ನು ನೇರವಾಗಿ ಪ್ರಭಾವಿಸಬಹುದು.
ಬೆಂಗಳೂರು: ಹೊಸ ವರ್ಷ (New Year) ಆರಂಭವಾಗಿ ಒಂದು ತಿಂಗಳು ಕಳೆಯಲು ಇಂದು ಒಂದು ದಿನ ಬಾಕಿ ಇದ್ದು, ರಲ್ಲಿ ಒಂದು ತಿಂಗಳು ಕಳೆದು ಬಿಟ್ಟಿದೆ(New Rule 1st Feb 2025). ಇನ್ನು ಹೊಸ ವರ್ಷ ಆರಂಭವಾಗುವಾಗಲೂ ವಿವಿಧ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು, ಫೆಬ್ರವರಿ ಒಂದರಿಂದ ಅಂದರೆ ನಾಳೆಯಿಂದ ಕೆಲ ವಸ್ತುಗಳ ಬೆಲೆಯಲ್ಲಿ ವ್ಯತ್ಯಯ ಆಗಲಿದೆ.
ಹೌದು ಪ್ರತಿ ತಿಂಗಳ ಆರಂಭದಲ್ಲಿ ಒಂದಿಷ್ಟು ನಿಯಮಗಳು ಬದಲಾಗುತ್ತವೆ. ಅದೇ ರೀತಿ ಫ್ರೆಬ್ರವರಿ ಆರಂಭದಲ್ಲೂ ಒಂದಿಷ್ಟು ಬದಲಾವಣೆಯಾಗಲಿದ್ದು, ಪ್ರತಿ ತಿಂಗಳ ಆರಂಭದಲ್ಲಿ ಸರ್ಕಾರವು ಅನೇಕ ನಿಯಮಗಳನ್ನು ಬದಲಾಯಿಸುತ್ತದೆ. ನಾಳೆಯಿಂದ ವಿವಿಧ ಆರ್ಥಿಕ ಮತ್ತು ಬ್ಯಾಂಕಿಂಗ್ ನಿಯಮಗಳು ಬದಲಾಗಲಿದ್ದು, ಇವು ಸಾಮಾನ್ಯ ಜನರ ದೈನಂದಿನ ವಹಿವಾಟು, ಸಾಲ, ಮತ್ತು ಉಳಿತಾಯವನ್ನು ನೇರವಾಗಿ ಪ್ರಭಾವಿಸಬಹುದು. ಈ ಬದಲಾವಣೆಗಳನ್ನು ಮುಂಚಿತವಾಗಿ ತಿಳಿದುಕೊಂಡರೆ ತೊಂದರೆಗಳನ್ನು ತಪ್ಪಿಸಲು ಸಹಾಯವಾಗುತ್ತದೆ.
LPG ಸಿಲಿಂಡರ್ ಬೆಲೆ ಹೆಚ್ಚಳ:
ಫೆಬ್ರವರಿ 1ರಿಂದ 14.2 ಕೆಜಿ ಲಿಪಿಜಿ ಸಿಲಿಂಡರ್ ಬೆಲೆ 50 ರೂ. ಗಳಷ್ಟು ಹೆಚ್ಚಾಗಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸಬ್ಸಿಡಿ ಯೋಜನೆ ಜಾರಿಯಲ್ಲಿದ್ದರೂ, ನಗರಗಳಲ್ಲಿ ಬಳಕೆದಾರರು ಹೆಚ್ಚಿನ ಹಣ ವ್ಯಯಿಸಬೇಕಾದೀತು.
ಯುಪಿಐ ಪಾವತಿ ಸುರಕ್ಷತಾ ನಿಯಮ:
ಎನ್ಪಿಸಿಐ ಯುಪಿಐ ಟ್ರಾನ್ಸಾಕ್ಷನ್ IDಗಳಿಗೆ ಬಯೋಮೆಟ್ರಿಕ್ ಒಟಿಪಿಯನ್ನು ಕಡ್ಡಾಯಗೊಳಿಸಲಿದ್ದು, ಹೊಸ ಸುರಕ್ಷತಾ ನಿಯಮಗಳು ಸ್ಕ್ಯಾಮ್ ಅಪಾಯವನ್ನು ಕಡಿಮೆ ಮಾಡಲು ಉದ್ದೇಶಿಸಿವೆ.
ಐಎಂಪಿಎಸ್ ಲಿಮಿಟ್ ಅಪ್ಗ್ರೇಡ್:
ಆರ್ಬಿಐ ಐಎಂಪಿಎಸ್ ಮೂಲಕ ದಿನಕ್ಕೆ 10 ಲಕ್ಷ ರೂ .ವರೆಗೆ ವರ್ಗಾವಣೆ ಮಾಡಲು ಅನುವು ಮಾಡಿಕೊಡಲಿದೆ. ಫಲಾನುಭವಿಯ ಹೆಸರು ಇಲ್ಲದೆ 7 ಲಕ್ಷ ರೂ. ವರೆಗೆ ಟ್ರಾನ್ಸ್ಕ್ಷನ್ ಮಾಡಬಹುದಾಗಿದೆ.
ಈ ಸುದ್ಧಿಯನ್ನು ಓದಿ: Union Budget 2025 : ಭಾರತದಲ್ಲಿ ಮೊದಲ ಬಜೆಟ್ ಯಾರು, ಯಾವಾಗ ಮಂಡಿಸಿದರು ಗೊತ್ತಾ..?
ಫಾಸ್ಟ್‌ಟ್ಯಾಗ್ KYC ನವೀಕರಣ:
ಫಾಸ್ಟ್ಯಾಗ್ KYC ಪೂರ್ಣಗೊಳಿಸದಿದ್ದರೆ, ಟೋಲ್ ಪ್ಲಾಜಾಗಳಲ್ಲಿ ತಡೆರಹಿತ ಸೇವೆ ನಿಷೇಧಿಸಲಾಗುತ್ತದೆ. ಆನ್ಲೈನ್ನಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸಲು ಸುಲಭವಾಗಿದೆ.
ಎನ್ ಪಿಎಸ್ ಹಿಂಪಡೆಯುವಿಕೆಯ ಸುಧಾರಣೆ:
PFRDA NPS ಹಿಂಪಡೆಯುವಿಕೆಗೆ ಸಂಬಂಧಿಸಿದಂತೆ ಸುತ್ತೋಲೆಯನ್ನು ಹೊರಡಿಸಿದ್ದು, ಖಾತೆದಾರರ ಹಿಂಪಡೆಯುವಿಕೆಯ ಮಿತಿಯನ್ನು ಶೇ.30ರಷ್ಟು ಹೆಚ್ಚಿಸಿದೆ. ಇದು ವೈದ್ಯಕೀಯ ಅನಿರೀಕ್ಷಿತ ವೆಚ್ಚಗಳಿಗೆ ರಕ್ಷಣೆ ನೀಡುತ್ತದೆ.
ಎಸ್ ಬಿಐ ಗೃಹ ಸಾಲದ ರಿಯಾಯಿತಿ:
ಎಸ್ ಬಿಐ ಫೆಬ್ರವರಿ 2025ರಲ್ಲಿ ಹೊಸ ಗೃಹ ಸಾಲದ ಅಭಿಯಾನವನ್ನು ಪ್ರಾರಂಭಿಸಿದೆ. 8.4% ರಿಂದ 8.1% ವಾರ್ಷಿಕ ಬಡ್ಡಿದರದೊಂದಿಗೆ, ಸಾಲದ ಅನುಕೂಲವನ್ನು ಪಡೆಯಬಹುದು.