ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಏಮ್ಸ್‌ ಮಾಜಿ ವಿದ್ಯಾರ್ಥಿನಿ ನಿಶಾ ಮೆಹ್ತಾ ಇದೀಗ ನೇಪಾಳದ ಆರೋಗ್ಯ ಸಚಿವೆ!

ದೆಹಲಿ ಏಮ್ಸ್‌ನ ನರ್ಸಿಂಗ್ ಪದವೀಧರೆ ನಿಶಾ ಮೆಹ್ತಾ ಅವರು ನೇಪಾಳದ ಆರೋಗ್ಯ ಸಚಿವೆಯಾಗಿ ನೇಮಕಗೊಂಡಿದ್ದಾರೆ. ನರ್ಸಿಂಗ್ ವೃತ್ತಿಯಿಂದ ರಾಷ್ಟ್ರದ ಆರೋಗ್ಯ ನೀತಿ ರೂಪಿಸುವ ಹಂತಕ್ಕೆ ಏರಿದ ಅವರ ಸಾಧನೆ ಗಮನಾರ್ಹವಾಗಿದ್ದು, ಈ ಬಗ್ಗೆ ಏಮ್ಸ್‌ ಭಾನುವಾರ ಅಧಿಕೃತ ಪ್ರಕಟಣೆ ಹೊರಡಿಸಿ ಸಂತಸ ವ್ಯಕ್ತಪಡಿಸಿದೆ.

ಏಮ್ಸ್ ಹಳೆಯ ವಿದ್ಯಾರ್ಥಿನಿ ಸಚಿವೆ ಸ್ಥಾನಕ್ಕೆ

ನೇಪಾಳ ಆರೋಗ್ಯ ಸಚಿವೆ ನಿಶಾ ಮೆಹ್ತಾ -

Profile
Sushmitha Jain Mar 30, 2026 12:58 PM

ನವದೆಹಲಿ: ದೆಹಲಿಯ ಏಮ್ಸ್‌ ನರ್ಸಿಂಗ್ ಕಾಲೇಜಿನ (AIIMS Delhi) ಹಳೆಯ ವಿದ್ಯಾರ್ಥಿನಿ ನಿಶಾ ಮೆಹ್ತಾ(Nisha Mehta) ಅವರು ನೇಪಾಳದ ಆರೋಗ್ಯ ಸಚಿವೆಯಾಗಿ (Nepal Health Minister) ನೇಮಕಗೊಂಡಿರುವುದು ದೇಶಾಂತರ ಮಟ್ಟದಲ್ಲಿ ಗಮನ ಸೆಳೆದಿದೆ. ಈ ಬಗ್ಗೆ ಏಮ್ಸ್‌ ಭಾನುವಾರ ಅಧಿಕೃತ ಪ್ರಕಟಣೆ ಹೊರಡಿಸಿ ಸಂತಸ ವ್ಯಕ್ತಪಡಿಸಿದೆ. ‘ನಮ್ಮ ಸಂಸ್ಥೆಯೊಬ್ಬರು ಜಾಗತಿಕ ಮಟ್ಟದಲ್ಲಿ ಮಹತ್ವದ ಹುದ್ದೆಗೆ ಏರಿರುವುದು ಹೆಮ್ಮೆಯ ಸಂಗತಿ. ಶುಷ್ರೂಷಕಿಯಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ನಿಶಾ ಅವರು ಇಂದು ದೇಶದ ಆರೋಗ್ಯ ನೀತಿಗಳನ್ನು ರೂಪಿಸುವ ಸ್ಥಾನಕ್ಕೇರಿರುವುದು ನರ್ಸಿಂಗ್ ಕ್ಷೇತ್ರದ ಮಹತ್ವವನ್ನು ಮತ್ತಷ್ಟು ಹೆಚ್ಚಿಸುತ್ತದೆ’ ಎಂದು ಏಮ್ಸ್‌ ಹೇಳಿದೆ.


ಏಮ್ಸ್‌ನಲ್ಲಿ ಅಧ್ಯಯನ ಮಾಡುವ ಅವಧಿಯಲ್ಲಿ ನಿಶಾ ಅವರು ಪಾಠ್ಯ ಚಟುವಟಿಕೆಗಳ ಜೊತೆಗೆ ವಿವಿಧ ಪಠ್ಯೇತರ ಕಾರ್ಯಕ್ರಮಗಳಲ್ಲೂ ಸಕ್ರಿಯವಾಗಿ ಭಾಗವಹಿಸಿದ್ದರು. ವಿದ್ಯಾರ್ಥಿ ನಾಯಕತ್ವ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದ ಅವರು, ಶಿಸ್ತಿನ ಜೀವನ ಶೈಲಿ ಮತ್ತು ಸೇವಾಭಾವದಿಂದ ಗುರುತಿಸಿಕೊಂಡಿದ್ದರು. ಇದೇ ಗುಣಗಳು ಅವರನ್ನು ಸಾರ್ವಜನಿಕ ಸೇವೆ ಮತ್ತು ಆಡಳಿತ ಕ್ಷೇತ್ರದತ್ತ ಕೊಂಡೊಯ್ದವು ಎಂದು ಸಂಸ್ಥೆ ತಿಳಿಸಿದೆ.

ಚುನಾವಣೆಗೂ ಮುನ್ನ ಪಶ್ಚಿಮ ಬಂಗಾಳದಲ್ಲಿ 173 ಪೊಲೀಸ್ ಅಧಿಕಾರಿಗಳ ವರ್ಗಾವಣೆ; ಮಮತಾ ಬ್ಯಾನರ್ಜಿ ಕಿಡಿ


2006ರಿಂದ 2010ರವರೆಗೆ ನರ್ಸಿಂಗ್ ಪದವಿ ಪಡೆದ ಬಳಿಕ, ನಿಶಾ ಅವರು ಆರೋಗ್ಯ ಸೇವಾ ಕ್ಷೇತ್ರದಲ್ಲಿ ವಿವಿಧ ಹಂತಗಳಲ್ಲಿ ಸೇವೆ ಸಲ್ಲಿಸಿ ಅನುಭವ ಸಂಪಾದಿಸಿದ್ದಾರೆ. ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳಲ್ಲಿ ಆರೋಗ್ಯ ಸೇವೆ ಒದಗಿಸುವಲ್ಲಿ ಅವರು ತೊಡಗಿಸಿಕೊಂಡಿದ್ದು, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಒಳನೋಟವನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಮಾರ್ಚ್‌ 27ರಂದು ನಿಶಾ ಮೆಹ್ತಾ ಅವರು ನೇಪಾಳದ ಆರೋಗ್ಯ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಅವರ ಮುಂದಿರುವ ಪ್ರಮುಖ ಸವಾಲುಗಳಲ್ಲಿ ಆರೋಗ್ಯ ಮೂಲಸೌಕರ್ಯ ಬಲಪಡಿಸುವುದು, ಗ್ರಾಮೀಣ ಆರೋಗ್ಯ ಸೇವೆ ಸುಧಾರಿಸುವುದು ಹಾಗೂ ಸಾರ್ವಜನಿಕ ಆರೋಗ್ಯ ನೀತಿಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವುದು ಸೇರಿವೆ.
ನೇಪಾಳದ ಆರೋಗ್ಯ ಕ್ಷೇತ್ರಕ್ಕೆ ಅವರು ಮಹತ್ವದ ಕೊಡುಗೆ ನೀಡಲಿ ಹಾಗೂ ಯಶಸ್ವಿ ಆಡಳಿತ ನಡೆಸಲಿ ಎಂದು ಏಮ್ಸ್‌ನ ನರ್ಸಿಂಗ್ ಕಾಲೇಜು ಶುಭ ಹಾರೈಸಿದೆ.