ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಓಡು ಗೆಲುವೆ ನೀ ಆದಷ್ಟು ದೂರ.. ಪಡೆದೆ ತೀರುವೆವು ನೀ ಹೋದಷ್ಟು ದೂರʼ; ಸದ್ದಿಲ್ಲದೇ ಹೊಸ ಸಿನಿಮಾ ಅನೌನ್ಸ್‌ ಮಾಡಿದ ‌ʻಡಾಲಿʼ ಧನಂಜಯ್

ಡಾಲಿ ಧನಂಜಯ್‌ ಅವರು ತಮ್ಮ ಮುಂದಿನ ಸಿನಿಮಾ ಕುರಿತು ಸದ್ದಿಲ್ಲದೆ ಅಪ್‌ಡೇಟ್ ನೀಡಿದ್ದಾರೆ. ಗೆಳೆಯ ಪೂರ್ಣಚಂದ್ರ ಬರೆದಿದ್ದ ಚಿತ್ರಕಥೆಯನ್ನು ಆರು ತಿಂಗಳ ನಂತರ ಓದಿದ ಧನಂಜಯ್, ಅದಕ್ಕೆ ಫಿದಾ ಆಗಿ ತಾವೇ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಶೀಘ್ರದಲ್ಲೇ ಚಿತ್ರದ ಶೀರ್ಷಿಕೆ ಘೋಷಣೆಯಾಗಲಿದೆ.

ಡಾಲಿ ಧನಂಜಯ್ ಸರ್ಪ್ರೈಸ್; 6 ತಿಂಗಳು ಟೇಬಲ್ ಮೇಲಿದ್ದ ಕಥೆ ಈಗ ಬೆಳ್ಳಿತೆರೆಗೆ

-

Avinash GR
Avinash GR Mar 30, 2026 1:13 PM

ʻಡಾಲಿʼ ಧನಂಜಯ್‌ ಅವರು ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಅಣ್ಣಾ ಫ್ರಮ್‌ ಮೆಕ್ಸಿಕೋ, ಹಲಗಲಿ, 666 ಆಪರೇಷನ್ ಡ್ರೀಮ್ ಥಿಯೇಟರ್ ಹೀಗೆ ಹಲವು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಜೊತೆಗೆ ಸಿನಿಮಾ ನಿರ್ಮಾಣವನ್ನು ಕೂಡ ಮುಂದುವರಿಸಿದ್ದಾರೆ. ಈ ಮಧ್ಯೆ ಸದ್ದಿಲ್ಲದೇ ಹೊಸ ಸಿನಿಮಾವೊಂದರ ಬಗ್ಗೆ ಮಹತ್ವದ ವಿಚಾರಗಳನ್ನು ʻಡಾಲಿʼ ಧನಂಜಯ್‌ ಹಂಚಿಕೊಂಡಿದ್ದಾರೆ. ಅದು ಅವರ ಗೆಳೆಯ ಪೂರ್ಣ ನಿರ್ದೇಶನ ಮಾಡುತ್ತಿರುವ ಸಿನಿಮಾ. ಅದರಲ್ಲಿ ಡಾಲಿ ಕೂಡ ನಟಿಸಿದ್ದು, ಸಿನಿಮಾವನ್ನು ನಿರ್ಮಾಣ ಕೂಡ ಮಾಡಿದ್ದಾರೆ. ಸುದೀರ್ಘ ಪೋಸ್ಟ್‌ ಹಂಚಿಕೊಳ್ಳುವುದರ ಜೊತೆಗೆ ಈ ಚಿತ್ರದ ಕುರಿತ ಮಾಹಿತಿಯನ್ನು ನೀಡಿದ್ದಾರೆ.

ಒಬ್ಬರಿಂದ ಚಿತ್ರಕಥೆ ಕೇಳುವುದು ಬಹಳ ಪ್ರಯಾಸದ ಕೆಲಸ

"ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು.. ಒಬ್ಬರಿಂದ ಚಿತ್ರಕಥೆ ಕೇಳುವುದು ಬಹಳ ಪ್ರಯಾಸದ ಕೆಲಸ. ಆದರೆ ನಮ್ಮ ಕೆಲಸವೇ ಕಥೆ ಕೇಳುವುದು. ಆದಷ್ಟು ಕೇಳುವುದನ್ನು ತಡೆದು, ‘ಓದುವೆ, ಬೌಂಡ್ ಸ್ಕ್ರಿಪ್ಟ್ ಕೊಟ್ಟು ಹೋಗಿ’ ಅಂತ ಕೇಳ್ತಿನಿ. ಓದೋ ಪ್ರಯತ್ನ ಮಾಡ್ತಿನಿ. ಓದಿಸಿಕೊಳ್ಳೋದು ಚಿತ್ರಕಥೆಯ ತಾಕತ್ತು. ಹಾಗೆ, ಓದುತ್ತಲೇ ನಕ್ಕು ನಗಿಸಿದ್ದು, ಕಣ್ತುಂಬಿಸಿದ್ದು, ʻಬಡವ ರಾಸ್ಕಲ್ʼ, ʻಟಗರುಪಲ್ಯʼ ಹಾಗೂ ಇನ್ನು ಬಿಡುಗಡೆಯಾಬೇಕಿರುವ ಪೂರ್ಣಚಂದ್ರ ನಟನೆಯ, ಅವಿನಾಶ್ ಬಲೆಕ್ಕಳ ನಿರ್ದೇಶನದ ʻಹೆಗ್ಗಣ ಮುದ್ದುʼ. ಈ ಮಧ್ಯೆ ಗೆಳೆಯ ಪೂರ್ಣ ಒಂದು ಕಥೆಯ ಮೇಲೆ ಕೆಲಸ ಮಾಡುತ್ತಿರುವುದು ಆಗಾಗ ಕಣ್ಣಿಗೆ ಬೀಳುತ್ತಿತ್ತು. ‘ಈ ಕಥೆ ಕೇಳು’ ಅಂತ ಹೇಳ್ತಾ ಇದ್ರೂ, ನನ್ನ ಕೆಲಸದ ಒತ್ತಡದಲ್ಲಿ ಕೇಳೋಕೆ ಆಗಿರಲಿಲ್ಲ. ‘ಪೂರ್ತಿ ಬರೆದು ಮುಗಿಸಿಕೊಡಿ, ಓದ್ತೀನಿ’ ಅಂತ ಹೇಳಿ ನಾನೂ ಮರೆತು ಹೋದೆ"

ʻಡಾಲಿʼ ಬಿರಿಯಾನಿ ಸೇವನೆ ಬಗ್ಗೆ ಭಾರಿ ಚರ್ಚೆ; ಸ್ಪಷ್ಟನೆ ಜೊತೆಗೆ ಬೇಸರವನ್ನೂ ಹಂಚಿಕೊಂಡ ನಟ ಧನಂಜಯ್‌!

ಬದುಕು ಎಷ್ಟೇ ಹೆದರಿಸಿದ್ರೂ, ತಮಾಷೆಯಿಂದಿರುವ ವ್ಯಕ್ತಿ

"ಸುಮಾರು 6 ತಿಂಗಳ ನಂತರ, ಒಂದು ದಿನ ಬಾಲ್ಕನಿ ಅಲ್ಲಿ ನಿಂತು ಮಾತಾಡ್ತಾ ನೆನಪಾಗಿ ಕೇಳ್ದೆ ‘ಬರಿತಿದ್ರಲ್ಲ, ಏನಾಯ್ತು?’. ‘ಬರಿತಿದ್ವಿ, ಆದ್ರೆ.. ಅಲ್ಲೇ ಟೇಬಲ್ ಮೇಲಿದೆ ನೋಡು 6 ತಿಂಗಳಿಂದ... ಇದನ್ನ ಸಿನಿಮಾ ಮಾಡಬಹುದಾ ಇಲ್ವಾ ಗೊತ್ತಾಗಲಿಲ್ಲ, ಅದಿಕ್ಕೆ ನಿಲ್ಸಿದಿವಿ’ ಅಂತ ಹೇಳಿ ಹೋದ. ಬದುಕು ಎಷ್ಟೇ ಹೆದರಿಸಿದ್ರೂ, ಯಾವಾಗಲೂ ನಗ್ತಾ ನಗಿಸ್ತಾ ತಮಾಷೆಯಾಗೆ ಇರೋ ಇವ್ನು, ಏನ್ ಬರೆದಿರಬಹುದು ಅನ್ನೋ ಕುತೂಹಲದಲ್ಲಿ ಅವತ್ತು ಆ ಚಿತ್ರಕಥೆನ ಓದಿದೆ. ಒಬ್ಬನೇ ನಗ್ತಾ ನಗ್ತಾ, ಎಲ್ಲ ಪಾತ್ರಗಳ ಜೊತೆ ಪ್ರಯಾಣ ಮಾಡ್ತಾ, ಓದು ಮುಗಿದಿದ್ದೇ ಗೊತ್ತಾಗ್ಲಿಲ್ಲ! ಇವತ್ತಿನ ಬೆಂಗಳೂರನ್ನ ಎಷ್ಟು ಅರ್ಥಪೂರ್ಣವಾಗಿ ಕಟ್ಟಿದ್ರು ಅಂದ್ರೆ, ಮಹಾನಗರಗಳ ಪಡಿಪಾಟಿಲುಗಳನ್ನ ನಗಿಸ್ತಾ ಮನ ಮುಟ್ಟೊ ಹಂಗೆ ಬರೆದಿದ್ರು. ಆದ್ರೆ ಚಿತ್ರಕಥೆ ಎಂಡ್ ಆಗಿರಲಿಲ್ಲ"

Sivakarthikeyan: ಬಹುನಿರೀಕ್ಷಿತ ʻಪರಾಶಕ್ತಿʼ ಸಿನಿಮಾದಲ್ಲಿ ʻಡಾಲಿʼ ಧನಂಜಯ್‌ ನಟನೆ; ಏನು ಪಾತ್ರ?

ಇದು 100% entertainer ಸಿನಿಮಾ

"ಕೂಡಲೇ ಪೂರ್ಣಂಗೆ ಕಾಲ್ ಮಾಡಿ, ‘ಇದನ್ನ ಯಾಕೆ ಕಂಪ್ಲೀಟ್ ಮಾಡಿಲ್ಲ? ಮಾಡಿ, ನಾನೇ ನಿರ್ಮಾಣ ಮಾಡ್ತಿನಿ’ ಅಂದೆ. ‘ನೀನ್ ಆಕ್ಟಿಂಗ್‌ನೂ ಮಾಡ್ಬೇಕು’ ಅಂದ. ‘ಮಾಡ್ತಿನಿ’ ಅಂದೆ. ಶಶಾಂಕ್ ಸೋಗಾಲ್‌ಗೆ ಕಾಲ್ ಮಾಡಿ, ʻಓದು ಚೆನ್ನಾಗಿದೆʼ ಅಂದೆ. ಆಲ್‌ರೆಡಿ ನಿರ್ದೇಶಕ ಆಗಿ ಗೆದ್ದಿದ್ರು, ಈ ಪ್ರಾಜೆಕ್ಟ್‌ನಲ್ಲಿ ಪೂರ್ಣನ ಜೊತೆ ಇರ್ತಿನಿ ಅಂದ. ಕಥೆ ಕಂಪ್ಲೀಟ್‌ ಮಾಡಿದ್ರು. Most lovable ending!

ಡಾಲಿ ಧನಂಜಯ್‌ ಹಂಚಿಕೊಂಡಿರುವ ಪೋಸ್ಟ್‌



ನಿರ್ಮಾಣಕ್ಕೆ ಗೆಳೆಯ ಹರ್ಷ ಜೊತೆಯಾದ. ಜೇನುಕಲ್ ಸಿದ್ದಪ್ಪನಿಗೆ ಪೂಜೆ ಸಲ್ಲಿಸಿ ಕೆಲಸ ಶುರು ಮಾಡಿದ್ವಿ. ಹತ್ತು ಹಲವು ಹೊಸ ಅದ್ಭುತ ಪ್ರತಿಭೆಗಳನ್ನ, ಒಂದಷ್ಟು GenZ ಹುಡುಗರನ್ನ ಸೇರಿಸಿಕೊಂಡು, ಪೂರ್ಣಚಂದ್ರ ನಿರ್ದೇಶನದಲ್ಲಿ ಒಂದೊಳ್ಳೆ 100% entertainer ಸಿನಿಮಾ ಕಟ್ಟಿದಿವಿ. ಇನ್ನು ನಿಮ್ಮ ಮುಂದೆ ಬರೋದಷ್ಟೇ ಬಾಕಿ. ಬಹಳ ಉತ್ಸುಕತೆಯಿಂದ ಪೋಸ್ಟ್‌ ಪ್ರೊಡಕ್ಷನ್ ಕೆಲಸ ನಡೀತಾ ಇದೆ. ಹಬ್ಬದ ಸೀಸನ್‌ಗೆ ನಿಮ್ಮ ಮುಂದೆ ಸಿನಿಮಾ. ಸದ್ಯದಲ್ಲೇ ಶೀರ್ಷಿಕೆ ಘೋಷಣೆ. ಓಡು ಗೆಲುವೆ ನೀ ಆದಷ್ಟು ದೂರ.. ಪಡೆದೆ ತೀರುವೆವು ನೀ ಹೋದಷ್ಟು ದೂರ..."

ಸದ್ಯ ಇಷ್ಟು ಮಾಹಿತಿಯು ಡಾಲಿ ಧನಂಜಯ್‌ ಅವರ ಕಡೆಯಿಂದ ಬಂದಿದೆ. ಇದರ ಶೀರ್ಷಿಕೆ ಏನು? ಯಾವಾಗ ತೆರೆಗೆ ಬರಲಿದೆ ಎಂಬುದೆಲ್ಲಾ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.