ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬಿಹಾರ ರಾಜಕೀಯದಲ್ಲಿ ಸಂಚಲನ: ಜೆಡಿಯು ಸೇರಿದ ನಿತೀಶ್ ಕುಮಾರ್ ಪುತ್ರ ನಿಶಾಂತ್; ಡಿಸಿಎಂ ಪಟ್ಟಕ್ಕೆ ಹಾದಿ ಸುಗಮ

Nitish Kumar’s son joins politics: ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಕುಮಾರ್ ಭಾನುವಾರ (ಮಾರ್ಚ್‌ 8) ಅಧಿಕೃತವಾಗಿ ಜನತಾದಳ (ಸಂಯುಕ್ತ)ಕ್ಕೆ ಸೇರ್ಪಡೆಗೊಂಡರು. ಅವರು ಪಾಟ್ನಾದಲ್ಲಿರುವ ಪಕ್ಷದ ಕಚೇರಿಗೆ ಆಗಮಿಸಿ ತಮ್ಮನ್ನು ಸ್ವಾಗತಿಸಲು ನೆರೆದಿದ್ದ ಕಾರ್ಯಕರ್ತರನ್ನು ಅಭಿನಂದಿಸಿದರು.

ಬಿಹಾರ ಸಿಎಂ ನಿತೀಶ್ ಕುಮಾರ್ ಪುತ್ರ ನಿಶಾಂತ್ ಜೆಡಿಯುಗೆ ಸೇರ್ಪಡೆ

ನಿತೀಶ್ ಕುಮಾರ್ ಮತ್ತು ಅವರ ಪುತ್ರ ನಿಶಾಂತ್ (ಸಂಗ್ರಹ ಚಿತ್ರ) -

Priyanka P
Priyanka P Mar 8, 2026 3:00 PM

ಪಾಟ್ನಾ, ಮಾ. 8: ಬಿಹಾರ ಸಿಎಂ ನಿತೀಶ್ ಕುಮಾರ್ (Bihar CM Nitish Kumar) ಅವರ ಪುತ್ರ ನಿಶಾಂತ್ ಕುಮಾರ್ ಭಾನುವಾರ (ಮಾ. 8) ಅಧಿಕೃತವಾಗಿ ಜನತಾದಳ (ಸಂಯುಕ್ತ)ಕ್ಕೆ ಸೇರ್ಪಡೆಗೊಂಡರು. ಅವರು ಪಾಟ್ನಾದಲ್ಲಿರುವ (Patna) ಪಕ್ಷದ ಕಚೇರಿಗೆ ಆಗಮಿಸಿ ತಮ್ಮನ್ನು ಸ್ವಾಗತಿಸಲು ನೆರೆದಿದ್ದ ಕಾರ್ಯಕರ್ತರನ್ನು ಅಭಿನಂದಿಸಿದರು. ಅಧಿಕೃತ ಘೋಷಣೆಗೆ ಮುನ್ನ ಮುಖ್ಯಮಂತ್ರಿ ನಿತೀಶ್ ಕುಮಾರ್ ಬೆಂಬಲಿಗರೊಂದಿಗೆ ಸ್ವಲ್ಪ ಹೊತ್ತು ಸಂವಾದ ಕೂಡ ನಡೆಸಿದರು.

ಸಭರಯನ್ನು ಉದ್ದೇಶಿಸಿ ಮಾತನಾಡಿದ ನಿಶಾಂತ್ ಕುಮಾರ್, ತಮ್ಮ ತಂದೆ ನಿತೀಶ್ ಕುಮಾರ್ ಅವರನ್ನು ರಾಜ್ಯಸಭೆಗೆ ಕಳುಹಿಸುವ ನಿರ್ಧಾರವನ್ನು ಗೌರವಿಸುವುದಾಗಿ ಹೇಳಿದರು. ʼʼನನ್ನ ತಂದೆ ರಾಜ್ಯಸಭೆಗೆ ಹೋಗಲು ನಿರ್ಧರಿಸಿದ್ದಾರೆ. ನಾವು ಅವರ ನಿರ್ಧಾರವನ್ನು ಗೌರವಿಸುತ್ತೇವೆ. ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇವೆʼʼ ಎಂದು ಅವರು ತಿಳಿಸಿದರು.

ವಿಡಿಯೊ ವೀಕ್ಷಿಸಿ:



ನಿತೀಶ್ ಕುಮಾರ್ ರಾಜ್ಯಸಭೆಗೆ ತೆರಳಿದ ನಂತರ ನಿಶಾಂತ್ ಉಪಮುಖ್ಯಮಂತ್ರಿಯಾಗಬಹುದು ಎಂಬ ಊಹಾಪೋಹಗಳ ನಡುವೆಯೇ ಅವರು ಜೆಡಿಯು ಸೇರಿದ್ದಾರೆ. ನಿಶಾಂತ್ ಕುಮಾರ್ ಎಂಜಿನಿಯರಿಂಗ್ ಪದವೀಧರರು.

ನಿಶಾಂತ್ ಕುಮಾರ್ ಅವರ ರಾಜಕೀಯ ಪ್ರವೇಶದ ಬಗ್ಗೆ ಎರಡು ವರ್ಷಗಳಿಂದಲೂ ಊಹಾಪೋಹಗಳು ಹರಿದಾಡುತ್ತಿದ್ದವು. 2025ರ ಡಿಸೆಂಬರ್‌ನಲ್ಲ ಜೆಡಿ(ಯು)ನ ಕಾರ್ಯಾಧ್ಯಕ್ಷ ಸಂಜಯ್ ಝಾ, ನಿಶಾಂತ್ ಕುಮಾರ್ ಅವರ ಸಮ್ಮುಖದಲ್ಲಿ ಪಕ್ಷದ ಸದಸ್ಯರು ಮತ್ತು ಬೆಂಬಲಿಗರು ಪಕ್ಷಕ್ಕಾಗಿ ಕೆಲಸ ಮಾಡಬೇಕೆಂದು ಬಯಸುವುದಾಗಿ ಹೇಳಿದರು.

ಬಿಹಾರ ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ?; ರಾಜಕೀಯದಲ್ಲಿ ಹೊಸ ತಿರುವು

ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿದ ನಿತೀಶ್ ಕುಮಾರ್

ಮಾರ್ಚ್ 16ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು 75 ವರ್ಷದ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ. ಬಿಹಾರದಲ್ಲಿ ನಡೆಸಿದ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ನಿತೀಶ್ ಕುಮಾರ್ ಅವರಿಗೆ ಸುಶಾಸನ್ ಬಾಬು (ಅಂದರೆ ಉತ್ತಮ ಆಡಳಿತದ ವ್ಯಕ್ತಿ) ಎಂಬ ಹೆಸರಿದೆ. ಅವರು ಶೀಘ್ರದಲ್ಲೇ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ.

ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ವಿಧಾನಸಭೆ ಕಾರ್ಯದರ್ಶಿ ಖ್ಯಾತಿ ಸಿಂಗ್ ಅವರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಬಿಹಾರದ ಐದು ರಾಜ್ಯಸಭಾ ಸ್ಥಾನಗಳಿಗೆ ಮಾರ್ಚ್ 16ರಂದು ಚುನಾವಣೆ ನಡೆಯಲಿದೆ.

ನಿತೀಶ್ ಕುಮಾರ್ ನಂತರ ಬಿಹಾರದ ಮುಂದಿನ ಮುಖ್ಯಮಂತ್ರಿ ಯಾರು?

ಬಿಹಾರದ ಸುದೀರ್ಘ ಅವಧಿಯ ಮುಖ್ಯಮಂತ್ರಿ ನಿತೀಶ್ ಕುಮಾರ್ ಗುರುವಾರ (ಮಾರ್ಚ್‌ 5) ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ, ʼʼನಾನು ಈ ಬಾರಿ ರಾಜ್ಯಸಭೆಯ ಸದಸ್ಯನಾಗಲು ಬಯಸುತ್ತೇನೆ. ಬಿಹಾರದ ಅಭಿವೃದ್ಧಿಗಾಗಿ ಹೊಸದಾಗಿ ರಚನೆಯಾಗಲಿರುವ ಸರ್ಕಾರಕ್ಕೆ ನನ್ನ ಪೂರ್ಣ ಬೆಂಬಲ ಮತ್ತು ಮಾರ್ಗದರ್ಶನ ಸದಾ ಇರಲಿದೆʼʼ ಎಂದು ತಿಳಿಸಿದ್ದಾರೆ.

ಪ್ರಧಾನಿ ಮೋದಿ, ಅಮಿತ್ ಶಾ ಭೇಟಿಗಾಗಿ ದೆಹಲಿಗೆ ತೆರಳಿದ ನಿತೀಶ್ ಕುಮಾರ್; ಬಿಹಾರ ರಾಜಕೀಯದಲ್ಲಿ ಬೀಸುತ್ತಾ ಬದಲಾವಣೆ ಗಾಳಿ?

ನಿತೀಶ್ ಕುಮಾರ್ ಅವರ ಈ ನಿರ್ಧಾರದ ಬೆನ್ನಲ್ಲೇ, ಬಿಹಾರದ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಕುತೂಹಲ ಮನೆ ಮಾಡಿದೆ. ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಮೂವರು ಪ್ರಮುಖ ನಾಯಕರ ಹೆಸರು ಮುಂಚೂಣಿಯಲ್ಲಿವೆ.

ಪ್ರಸ್ತುತ ಬಿಹಾರದ ಉಪಮುಖ್ಯಮಂತ್ರಿಯಾಗಿರುವ ಸಾಮ್ರಾಟ್ ಚೌಧರಿ ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿ. ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವರಾಗಿರುವ ನಿತ್ಯಾನಂದ ರೈ ಬಿಹಾರದ ಮುಂದಿನ ನಾಯಕತ್ವದ ರೇಸ್‌ನಲ್ಲಿರುವ ಮತ್ತೊಬ್ಬ ಪ್ರಮುಖ ನಾಯಕ. ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಕುಮಾರ್ ಅವರ ಹೆಸರೂ ಕೇಈ ಬರುತ್ತಿದೆ.