ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IND vs NZ: ಭಾರತವನ್ನು ಮಣಿಸಿ ನ್ಯೂಜಿಲೆಂಡ್‌ ಟಿ20 ವಿಶ್ವಕಪ್‌ ಗೆಲ್ಲಲಿದೆ ಎಂದ ಮೊಹಮ್ಮದ್‌ ಆಮಿರ್‌!

ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳು 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಫೈನಲ್‌ನಲ್ಲಿ ಕಾದಾಟ ನಡೆಸಲಿವೆ. ಈ ಪಂದ್ಯಕ್ಕೂ ಮುನ್ನ ಪಾಕಿಸ್ತಾನ ಮಾಜಿ ವೇಗಿ ಮೊಹಮ್ಮದ್‌ ಆಮಿರ್‌ ಭವಿಷ್ಯ ನುಡಿದಿದಾರೆ. ಭಾರತ ತಂಡವನ್ನು ಮಣಿಸಿ ನ್ಯೂಜಿಲೆಂಡ್‌ ತಂಡ ಚೊಚ್ಚಲ ಟಿ20 ವಿಶ್ವಕಪ್‌ ಮುಡಿಗೇರಿಸಿಕೊಳ್ಳಲಿದೆ ಎಂದು ಹೇಳಿದ್ದಾರೆ.

ನ್ಯೂಜಿಲೆಂಡ್‌ ಎದುರು ಭಾರತ ಸೋಲಲಿದೆ ಎಂದ ಮೊಹಮ್ಮದ್‌ ಆಮಿರ್‌!

ಭಾರತ ತಂಡದ ವಿರುದ್ಧ ಭವಿಷ್ಯ ನುಡಿದ ಪಾಕ್‌ ಮಾಜಿ ವೇಗಿ. -

Profile
Ramesh Kote Mar 8, 2026 5:09 PM

ಅಹಮದಾಬಾದ್‌: ಪಾಕಿಸ್ತಾನದ ಮಾಜಿ ವೇಗದ ಬೌಲರ್ ಮೊಹಮ್ಮದ್ ಆಮಿರ್ (Mohammad Amir) ಮತ್ತೊಮ್ಮೆ ಭಾರತ ತಂಡದ ವಿರುದ್ಧ ಭವಿಷ್ಯವಾಣಿ ನುಡಿದಿದ್ದಾರೆ. ಭಾನುವಾರ ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯಲಿರುವ 2026ರ ಐಸಿಸಿ ಟಿ20 ವಿಶ್ವಕಪ್ (T20 World Cup 2026) ಫೈನಲ್‌ನಲ್ಲಿ (IND vs NZ) ಭಾರತ ತಂಡವನ್ನು ಮಣಿಸಿ ನ್ಯೂಜಿಲೆಂಡ್ ತಂಡ ಚೊಚ್ಚಲ ಚುಟುಕು ವಿಶ್ವಕಪ್‌ ಮುಡಿಗೇರಿಸಿಕೊಳ್ಳಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಈ ಹಿಂದೆ ವೆಸ್ಟ್‌ ಇಂಡೀಸ್‌ ವಿರುದ್ಧ ಸೂಪರ್‌-8ರ ಪಂದ್ಯದಲ್ಲಿ ಸೋಲಿಲಿದೆ ಹಾಗೂ ಸೆಮಿಫೈನಲ್‌ನಲ್ಲಿಯೂ ಇಂಗ್ಲೆಂಡ್‌ ವಿರುದ್ಧ ಸೋಲು ಅನುಭವಿಸಲಿದೆ ಎಂದು ಭವಿಷ್ಯ ಹೇಳಿದ್ದರು. ಆದರೆ, ಭಾರತ ತಂಡ ಈ ಎರಡೂ ಪಂದ್ಯಗಳನ್ನು ಗೆಲ್ಲುವ ಮೂಲಕ ಫೈನಲ್‌ಗೆ ಪ್ರವೇಶ ಮಾಡಿತ್ತು.

“ಈ ಪಂದ್ಯ ಮುಂಬೈ ಪಿಚ್‌ನಲ್ಲಿದ್ದ ಪಂದ್ಯ ಹಾಗಿರಲಾರದು ಎಂದು ನಾನು ಭಾವಿಸುತ್ತೇನೆ. ಅಹಮದಾಬಾದ್ ಪಿಚ್ ವೇಗ ಮತ್ತು ಬೌನ್ಸ್ ನೀಡುತ್ತದೆ. ನ್ಯೂಜಿಲೆಂಡ್ ತಂಡ ಭಾರತವನ್ನು ದೀರ್ಘ ಕಾಲ ಪರೀಕ್ಷಿಸಲಿದೆ. ಎರಡೂ ತಂಡಗಳು ಗೆಲ್ಲುವ ಸಾಮರ್ಥ್ಯ ಹೊಂದಿವೆ. ಆದರೆ ಫೈನಲ್‌ಗೆ ಎರಡೂ ತಂಡಗಳು ತಲುಪಿರುವುದೇ ದೊಡ್ಡ ವಿಷಯ. ಒಟ್ಟಾರೆ ಬೌಲಿಂಗ್ ಮತ್ತು ಫೀಲ್ಡಿಂಗ್ ದೃಷ್ಟಿಯಿಂದ ನೋಡಿದರೆ ನ್ಯೂಜಿಲೆಂಡ್‌ಗೆ ಸ್ವಲ್ಪ ಮುನ್ನಡೆ ಇದೆ,” ಎಂದು ಮೊಹಮ್ಮದ್‌ ಆಮಿರ್‌ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

ಟಿ20 ಚಾಂಪಿಯನ್‌, ರನ್ನರ್‌ ಅಪ್‌ ತಂಡಕ್ಕೆ ಸಿಗುವ ಬಹುಮಾನ ಮೊತ್ತವೆಷ್ಟು?

ನ್ಯೂಜಿಲೆಂಡ್ ಭಾರತವನ್ನು ಸೋಲಿಸಬಹುದು: ಆಮಿರ್‌

ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಹ್ಯಾರಿ ಬ್ರೂಕ್ ಮತ್ತು ಟಾಮ್ ಬ್ಯಾನ್ಟನ್ ಕ್ರಮವಾಗಿ ಸಂಜು ಸ್ಯಾಮ್ಸನ್ ಮತ್ತು ಹಾರ್ದಿಕ್ ಪಾಂಡ್ಯ ಅವರ ಕ್ಯಾಚ್‌ಗಳನ್ನು ಬಿಟ್ಟದ್ದು ಭಾರತಕ್ಕೆ ಲಾಭವಾಯಿತು ಎಂದು ಆಮಿರ್ ಹೇಳಿದರು. ಆ ಕ್ಯಾಚ್‌ಗಳು ಪಡೆದಿದ್ದರೆ ಪಂದ್ಯವೇ ಬದಲಾಗಬಹುದಿತ್ತು ಎಂದು ಅವರು ಅಭಿಪ್ರಾಯಪಟ್ಟರು.

“ಕೊನೆಯ ಪಂದ್ಯದಲ್ಲಿ ಬಿಟ್ಟ ಕ್ಯಾಚ್‌ಗಳೇ ದೊಡ್ಡ ವ್ಯತ್ಯಾಸ ತಂದವು. ಹ್ಯಾರಿ ಬ್ರೂಕ್ ಸಂಜು ಸ್ಯಾಮ್ಸನ್ ಅವರ ಕ್ಯಾಚ್ ಬಿಟ್ಟರು, ಪಾಂಡ್ಯ ಅವರ ಕ್ಯಾಚ್ ಕೂಡ ಬಿಟ್ಟರು. ಅವು ಪಂದ್ಯ ಗೆಲ್ಲಿಸಬಹುದಾದ ಕ್ಯಾಚ್‌ಗಳು ಆಗಿದ್ದವು. ಇಂಗ್ಲೆಂಡ್ ಮಾಡಿದ ತಪ್ಪುಗಳನ್ನು ನ್ಯೂಜಿಲೆಂಡ್ ತಪ್ಪಿಸಿದರೆ, ಅವರು ಭಾರತವನ್ನು ಸೋಲಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ನಾನು ನಂಬುತ್ತೇನೆ,” ಎಂದು ಆಮಿರ್‌ ಹೇಳಿದರು.

ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ ಹವಾಮಾನ ಹೇಗಿದೆ?

ಗುಂಪು ಹಂತದಲ್ಲಿ ಭಾರತ ತನ್ನ ಎಲ್ಲಾ ಪಂದ್ಯಗಳನ್ನೂ ಗೆದ್ದಿತ್ತು. ಆದರೆ ಸೂಪರ್-8ತ ಹಂತದ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 76 ರನ್‌ಗಳ ಅಂತರದಿಂದ ಸೋಲು ಅನುಭವಿಸಿತು. ಬಳಿಕ ಜಿಂಬಾಬ್ವೆ ವಿರುದ್ಧ ಗೆಲುವು ಸಾಧಿಸಿ ತಂಡ ತನ್ನ ಅಭಿಯಾನವನ್ನು ಪುನರುಜ್ಜೀವನಗೊಳಿಸಿತು. ತದ ನಂತರ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ವಿರುದ್ಧವೂ ಜಯ ಸಾಧಿಸಿದ ಭಾರತ ತಂಡ ಫೈನಲ್‌ಗೆ ದಾರಿ ಮಾಡಿಸಿಕೊಂಡಿತು.

ಇದೀಗ ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡ, ಪುರುಷರ ಟಿ20 ವಿಶ್ವಕಪ್ ಕಿರೀಟವನ್ನು ಯಶಸ್ವಿಯಾಗಿ ಉಳಿಸಿಕೊಳ್ಳುವ ಮೊದಲ ತಂಡವಾಗುವ ಜೊತೆಗೆ ತವರಿನಲ್ಲಿ ಈ ಪ್ರಶಸ್ತಿಯನ್ನು ಗೆಲ್ಲುವ ಮೊದಲ ತಂಡವಾಗುವ ಗುರಿಯನ್ನು ಹೊಂದಿದೆ.