ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Fact Check: ಹೊಸ ಕೇಂದ್ರಾಡಳಿತ ಪ್ರದೇಶ ರಚನೆಗೆ ಸರ್ಕಾರದಿಂದ ಸಿದ್ಧತೆ? ವೈರಲ್‌ ಸುದ್ದಿಯ ಅಸಲಿಯತ್ತೇನು?

ದೇಶದಲ್ಲಿ ಹೊಸ ಕೇಂದ್ರಾಡಳಿತ ಪ್ರದೇಶ ರಚನೆಯಾಗಿದೆ ಎನ್ನುವ ಸುದ್ದಿಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಇದು ಸುಳ್ಳು ಸುದ್ದಿ ಎಂದು ಸರ್ಕಾರದ ಅಧಿಕೃತ ಸತ್ಯ ಪರಿಶೀಲನಾ ಸಂಸ್ಥೆಯಾದ ಮಾಧ್ಯಮ ಮಾಹಿತಿ ಕೇಂದ್ರ ಹೇಳಿದೆ. ಸಿಲಿಗುರಿ ಕಾರಿಡಾರ್ ಬಳಿ ಬಿಹಾರ ಮತ್ತು ಪಶ್ಚಿಮ ಬಂಗಾಳದ ಕೆಲವು ಭಾಗಗಳನ್ನು ಒಟ್ಟುಗೂಡಿಸಿ ಹೊಸ ಕೇಂದ್ರಾಡಳಿತ ಪ್ರದೇಶವನ್ನು ರಚಿಸಲು ಯೋಜನೆ ಮಾಡಲಾಗುತ್ತಿದೆ ಎನ್ನುವ ಸುಳ್ಳು ಸುದ್ದಿಯೊಂದು ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿತ್ತು.

ಹೊಸ ಕೇಂದ್ರಾಡಳಿತ ಪ್ರದೇಶ ರಚನೆ ?

ಸಂಗ್ರಹ ಚಿತ್ರ -

ನವದೆಹಲಿ: ಬಿಹಾರ (Bihar) ಮತ್ತು ಪಶ್ಚಿಮ ಬಂಗಾಳದ (West bengal) ಕೆಲವು ಜಿಲ್ಲೆಗಳನ್ನು ಸೇರಿಸಿ ಹೊಸ ಕೇಂದ್ರಾಡಳಿತ ಪ್ರದೇಶವನ್ನು (New Union Territory Plan) ರಚಿಸಲು ಕೇಂದ್ರ ಸರ್ಕಾರ ಯೋಜನೆ ಹಾಕಿಕೊಂಡಿದೆ ಎನ್ನುವ ಸುದ್ದಿಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ (Viral News) ಹರಿದಾಡುತ್ತಿದ್ದು, ಇದು ಸುಳ್ಳು ಸುದ್ದಿ (fact check) ಎಂದು ಸರ್ಕಾರದ ಅಧಿಕೃತ ಸತ್ಯ ಪರಿಶೀಲನಾ ಸಂಸ್ಥೆಯಾದ ಮಾಧ್ಯಮ ಮಾಹಿತಿ ಕೇಂದ್ರ ಹೇಳಿದೆ. ಹೊಸ ಕೇಂದ್ರಾಡಳಿತ ಪ್ರದೇಶ ಯೋಜನೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ನಕಲಿ ಸುದ್ದಿ ಎಂದು ಅದು ಸ್ಪಷ್ಟಪಡಿಸಿದೆ.

ಕೇಂದ್ರ ಸರ್ಕಾರವು ಸಿಲಿಗುರಿ ಕಾರಿಡಾರ್ ಬಳಿ ಬಿಹಾರ ಮತ್ತು ಪಶ್ಚಿಮ ಬಂಗಾಳದ ಕೆಲವು ಜಿಲ್ಲೆಗಳನ್ನು ಒಟ್ಟುಗೂಡಿಸಿ ಹೊಸ ಕೇಂದ್ರಾಡಳಿತ ಪ್ರದೇಶವನ್ನು ರಚಿಸಲು ಯೋಜಿಸುತ್ತಿದೆ ಎನ್ನುವ ಸುದ್ದಿಯೊಂದು ಕಳೆದ ಕೆಲವು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಇದು ಸುಳ್ಳು ಎಂದು ಸರ್ಕಾರ ಶನಿವಾರ ಹೇಳಿದೆ.

ಭಾರತದಲ್ಲಿ ವೇಗ ಪಡೆದುಕೊಂಡ ’ಹಾರ್ಲೆ-ಡೇವಿಡ್ಸನ್ ಮತ್ತು ಹೀರೋ ಮೋಟೋಕಾರ್ಪ್ ಪ್ರೀಮಿಯಂ ನೆಟ್‌ವರ್ಕ್’

ಮಾಧ್ಯಮ ಮಾಹಿತಿ ಕೇಂದ್ರವು ಈ ಕುರಿತು ಸ್ಪಷ್ಟನೆಯನ್ನು ನೀಡಿದ್ದು, ಈ ಹೇಳಿಕೆಗೆ ಯಾವುದೇ ಆಧಾರವಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುವ ಮಾಹಿತಿಯನ್ನು ಪರಿಶೀಲಿಸದ ಯಾರೂ ನಂಬಬೇಡಿ ಎಂದು ಹೇಳಿದೆ.

ಈ ಕುರಿತು ಸಾಮಾಜಿಕ ಮಾಧ್ಯಮವಾದ ಎಕ್ಸ್ ನಲ್ಲಿ ಮಾಹಿತಿ ನೀಡಿರುವ ಮಾಧ್ಯಮ ಮಾಹಿತಿ ಕೇಂದ್ರ, ಸಿಲಿಗುರಿ ಕಾರಿಡಾರ್ ಬಳಿ ಬಿಹಾರ ಮತ್ತು ಪಶ್ಚಿಮ ಬಂಗಾಳದ ಜಿಲ್ಲೆಗಳನ್ನು ಒಳಗೊಂಡ ಹೊಸ ಕೇಂದ್ರಾಡಳಿತ ಪ್ರದೇಶವನ್ನು ರಚಿಸಲು ಸರ್ಕಾರ ಯೋಜಿಸುತ್ತಿದೆ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಹೇಳುತ್ತಿವೆ. ಇದು ನಕಲಿ ಸುದ್ದಿ. ಅಂತಹ ಕೇಂದ್ರಾಡಳಿತ ಪ್ರದೇಶ ರಚನೆಯ ಕುರಿತು ಸರ್ಕಾರದೊಳಗೆ ಯಾವುದೇ ಪ್ರಸ್ತಾಪ ಚರ್ಚೆಯಲ್ಲಿಲ್ಲ ಎಂದು ಹೇಳಿದೆ.

ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಈ ಮಾಹಿತಿಯು ದಾರಿತಪ್ಪಿಸುವಂತಿದೆ. ಆನ್‌ಲೈನ್‌ನಲ್ಲಿ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳುವಾಗ ಎಚ್ಚರಿಕೆ ವಹಿಸುವಂತೆ ತಿಳಿಸಿರುವ ಅದು, ಹಂಚಿಕೊಳ್ಳುವ ಮೊದಲು ಯಾವಾಗಲೂ ಅಧಿಕೃತ ಮೂಲಗಳಿಂದ ಮಾಹಿತಿಯನ್ನು ಪರಿಶೀಲಿಸಿ ಎಂದು ತಿಳಿಸಿದೆ.



ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ವದಂತಿಗಳ ಪ್ರಕಾರ, ಪ್ರಸ್ತಾವಿತ ಪ್ರದೇಶವು ಮಾಲ್ಡಾ ಮತ್ತು ಉತ್ತರ ದಿನಾಜ್‌ಪುರ ಸೇರಿದಂತೆ ಪಶ್ಚಿಮ ಬಂಗಾಳ ಜಿಲ್ಲೆಗಳೊಂದಿಗೆ ಬಿಹಾರ ಜಿಲ್ಲೆಗಳನ್ನು ಒಳಗೊಂಡಿರುತ್ತದೆ. ಇದು ಸೂಕ್ಷ್ಮ ಸಿಲಿಗುರಿ ಕಾರಿಡಾರ್ ಅನ್ನು ಸುರಕ್ಷಿತಗೊಳಿಸುವ ಪ್ರಯತ್ನಗಳ ಭಾಗವಾಗಿ ಪರಿಗಣಿಸಲಾಗುತ್ತಿದೆ ಎಂಬುದಾಗಿ ಹೇಳಲಾಗಿದೆ.

ಕಿರಿದಾದ ಈ ಭೂಪ್ರದೇಶವು ಭಾರತದ ಈಶಾನ್ಯ ಪ್ರದೇಶವನ್ನು ದೇಶದ ಉಳಿದ ಭಾಗಗಳೊಂದಿಗೆ ಸಂಪರ್ಕಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಈ ಪ್ರದೇಶದಲ್ಲಿ ಯಾವುದೇ ಹೊಸ ಕೇಂದ್ರಾಡಳಿತ ಪ್ರದೇಶವನ್ನು ರಚಿಸುವ ಬಗ್ಗೆ ಯಾವುದೇ ಅಧಿಕೃತ ಪ್ರಸ್ತಾಪವಿಲ್ಲ. ಸಿಲಿಗುರಿ ಕಾರಿಡಾರ್ ಉತ್ತರ ಪಶ್ಚಿಮ ಬಂಗಾಳದಲ್ಲಿ ಸಿಲಿಗುರಿ ನಗರದ ಸುತ್ತಲೂ ಇರುವ ಕಿರಿದಾದ ಭೂ ಮಾರ್ಗವಾಗಿದೆ.

ರಾಜ್ಯ ಬಜೆಟ್: ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ, ನಾಗರಿಕ-ಕೇಂದ್ರಿತ ಆಡಳಿತಕ್ಕಾಗಿ ಕೃತಕ ಬುದ್ಧಿಮತ್ತೆಯ ಸಮರ್ಥ ಬಳಕೆ

ಸುಮಾರು 20 ರಿಂದ 22 ಕಿಲೋ ಮೀಟರ್ ಅಗಲ, ಸುಮಾರು 60 ಕಿಲೋ ಮೀಟರ್ ಉದ್ದವನ್ನು ಹೊಂದಿರುವ ಸಿಲಿಗುರಿ ಕಾರಿಡಾರ್ ಪ್ರದೇಶ ದೇಶ ಸೇವೆಗೆ ಬಳಕೆಯಾಗುತ್ತಿದೆ. ಇದು ಆರ್ಥಿಕ, ಸಾರಿಗೆ ಮತ್ತು ಮಿಲಿಟರಿಯ ಜೀವನಾಡಿಯಾಗಿದೆ. ಸರಕು ಸಾಗಣೆಗೆ ಬಳಸುವ ಈ ದಾರಿ ಭಾರತದ ಎಂಟು ಈಶಾನ್ಯ ರಾಜ್ಯಗಳಾದ ಅಸ್ಸಾಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ಮೇಘಾಲಯ, ತ್ರಿಪುರ ಮತ್ತು ಸಿಕ್ಕಿಂಗಳಿಗೆ ಸಂಪರ್ಕಿಸುವ ಏಕೈಕ ಭೂ ಮಾರ್ಗ ಇದಾಗಿದೆ.