ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tirupati temple: ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಹಿಂದುಗಳಿಗೆ ಮಾತ್ರ ಉದ್ಯೋಗ: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು

Tirupati temple: ತಿರುಪತಿಗೆ ನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ. ಹೀಗಾಗಿ ಏಳು ಬೆಟ್ಟಗಳು ತಿಮ್ಮಪ್ಪನಿಗೇ ಸ್ವಂತ. ಇಲ್ಲಿ ಯಾವುದೇ ರೀತಿಯ ಅಪವಿತ್ರ ಕೆಲಸಗಳಿಗೆ ಅವಕಾಶ ನೀಡುವುದಿಲ್ಲ ಎಂದು ಆಂಧ್ರ ಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ.

ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಹಿಂದುಗಳಿಗೆ ಮಾತ್ರ ಉದ್ಯೋಗ

Profile Prabhakara R Mar 21, 2025 4:27 PM

ತಿರುಪತಿ: ಆಂಧ್ರಪ್ರದೇಶದ ಪ್ರಸಿದ್ಧ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ (Tirupati temple) ಹಿಂದುಗಳು ಮಾತ್ರ ಕೆಲಸ ಮಾಡಬೇಕು. ಇದಕ್ಕೆ ಸಂಬಂಧಿಸಿ ಟಿಟಿಡಿ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಆಂಧ್ರ ಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಆದೇಶಿಸಿದ್ದಾರೆ. ಕುಟುಂಬಸ್ಥರೊಂದಿಗೆ ಶುಕ್ರವಾರ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಬಳಿಕ ಸುದ್ದಿಗೋಷ್ಠಿಯಲ್ಲಿ ಸಿಎಂ ಚಂದ್ರಬಾಬು ನಾಯ್ಡು ( Chandrababu Naidu) ಮಾತನಾಡಿದ್ದು, ಟಿಟಿಡಿಯಲ್ಲಿ ಅನ್ಯಧರ್ಮೀಯ ನೌಕರರನ್ನು ಕೆಲಸದಿಂದ ತೆಗೆಯಲು ಆದೇಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಸದ್ಯ ತಿರುಮಲ ತಿರುಪತಿ ದೇವಸ್ಥಾನದಲ್ಲಿ (ಟಿಟಿಡಿ) ಅನ್ಯ ಧರ್ಮೀಯ ನೌಕರರು ಕೆಲಸ ಮಾಡುತ್ತಿದ್ದರೆ ಅವರ ಭಾವನೆಗಳಿಗೆ ಧಕ್ಕೆಯಾಗದಂತೆ ಅವರನ್ನು ಬೇರೆಡೆಗೆ ಸ್ಥಳಾಂತರಿಸಲಾಗುವುದು ಎಂದು ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ ದಾರುಣ ಘಟನೆಗಳು ನಡೆದಿವೆ. ಅಧಿಕಾರಕ್ಕೆ ಬಂದ ಮೇಲೆ ತಿರುಮಲದಿಂದಲೇ ಆಡಳಿತ ಶುದ್ಧೀಕರಣ ಆರಂಭ ಮಾಡುವುದಾಗಿ ಹೇಳಿದ್ದೆ. ಇದೀಗ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದೇವೆ. ತಿರುಮಲದಲ್ಲಿ ಮುಮ್ತಾಜ್‌ ಹೋಟೆಲ್‌ ಆರಂಭಕ್ಕೆ ಈ ಹಿಂದಿನ ಸರ್ಕಾರ ಅನುಮತಿ ನೀಡಿ, 20 ಎಕರೆ ಭೂಮಿ ಮಂಜೂರು ಮಾಡಿತ್ತು. ಅದೇ ರೀತಿ ವಿವಿಧ ಸಂಸ್ಥೆಗಳಿಗೆ ನೀಡಿದ್ದ ಸುಮಾರು 35 ಎಕರೆ ಭೂ ಮಂಜೂರಾತಿಯನ್ನು ರದ್ದುಮಾಡಲಾಗಿದ್ದು, ತಿರುಮಲ ಬೆಟ್ಟಗಳ ಬಳಿ ವಾಣಿಜ್ಯ ಚಟುವಟಿಕೆಗಳಿಗೆ ಅನುಮತಿ ನೀಡುವುದಿಲ್ಲ ಎಂದು ಹೇಳಿದ್ದಾರೆ.



ತಿರುಪತಿಗೆ ನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ. ಅನ್ನದಾಸೋಹಕ್ಕೆ ಸಾಕಷ್ಟು ಮಂದಿ ದೇಣಿಗೆ ನೀಡುತ್ತಿದ್ದಾರೆ. ಹೀಗಾಗಿ ಏಳು ಬೆಟ್ಟಗಳು ತಿಮ್ಮಪ್ಪನಿಗೇ ಸ್ವಂತ. ಇಲ್ಲಿ ಯಾವುದೇ ರೀತಿಯ ಅಪವಿತ್ರ ಕೆಲಸಗಳಿಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಿವಿಧ ರಾಜ್ಯಗಳ ರಾಜಧಾನಿಗಳಲ್ಲಿ ವೆಂಕಟೇಶ್ವರ ದೇಗುಲ

ದೇಶದ ವಿವಿಧ ರಾಜ್ಯಗಳ ರಾಜಧಾನಿಗಳಲ್ಲಿ ವೆಂಕಟೇಶ್ವರ ದೇವಸ್ಥಾನ ನಿರ್ಮಿಸಲು ತೀರ್ಮಾನ ಮಾಡಲಾಗಿದೆ. ಆಯಾ ರಾಜ್ಯಗಳ ಸಿಎಂಗಳು ಒಪ್ಪಿದರೆ ಶೀಘ್ರದಲ್ಲೇ ದೇಗುಲಗಳ ನಿರ್ಮಾಣ ಕಾರ್ಯ ಆರಂಭಿಸುತ್ತೇವೆ. ಅಷ್ಟೇ ಅಲ್ಲದೇ ಹಿಂದುಗಳು ಹೆಚ್ಚಾಗಿರುವ ವಿದೇಶಗಳಲ್ಲೂ ಟಿಟಿಡಿ ದೇಗುಲ ನಿರ್ಮಿಸುತ್ತೇವೆ. ವೆಂಕಟೇಶ್ವರ ದೇಗುಲಗಳನ್ನು ನಿರ್ಮಿಸಲು ಪ್ರತ್ಯೇಕವಾಗಿ ದೇಗಲು ಟ್ರಸ್ಟ್‌ ರಚಿಸಲಾಗುತ್ತದೆ. ಅಲ್ಲದೇ ʼಮಾಧವ ಸೇವೆʼ ಹೆಸರಲ್ಲಿ ಅನ್ನದಾನ ಸೇರಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂದು ಸಿಎಂ ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Kolar News: ಮುಡಿ ಕೊಡುತ್ತೇನೆ, ಪ್ರದೀಪ ನಾನು ಬೇಗ ಒಂದಾಗಬೇಕು... ಚಿಕ್ಕ ತಿರುಪತಿ ಹುಂಡಿಯಲ್ಲಿ ಸಿಕ್ತು ಲವ್‌ಲೆಟರ್‌!