ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Operation Sindoor: ಕಾಶ್ಮೀರದ ಉರಿಯಲ್ಲಿ ಪಾಕ್‌ ಶೆಲ್‌ ದಾಳಿ, ಮಹಿಳೆ ಸಾವು

Operation Sindoor: ಕಳೆದ ಕೆಲವು ದಿನಗಳಿಂದ ಈ ಪ್ರದೇಶದಲ್ಲಿ, ವಿಶೇಷವಾಗಿ ಉರಿ ಮತ್ತು ಕುಪ್ವಾರ ಪ್ರದೇಶಗಳಲ್ಲಿ ಗಡಿಯಾಚೆಗಿನ ಶೆಲ್ ದಾಳಿ ತೀವ್ರಗೊಂಡಿದ್ದು, ನಿವಾಸಿಗಳು ಮತ್ತು ಅಧಿಕಾರಿಗಳಲ್ಲಿ ಕಳವಳವನ್ನು ಮೂಡಿಸಿದೆ. ಗಡಿ ಭದ್ರತಾ ಪಡೆಗಳು ತಕ್ಕ ಪ್ರತ್ಯುತ್ತರ ನೀಡುತ್ತಿವೆ.

ಕಾಶ್ಮೀರದ ಉರಿಯಲ್ಲಿ ಪಾಕ್‌ ಶೆಲ್‌ ದಾಳಿ, ಮಹಿಳೆ ಸಾವು

ಹರೀಶ್‌ ಕೇರ ಹರೀಶ್‌ ಕೇರ May 9, 2025 7:15 AM

‌ಶ್ರೀನಗರ: ಒಂದೆಡೆ ಭಾರತ ಆಪರೇಶನ್‌ ಸಿಂದೂರ್‌ (Operation Sindoor) ತೀವ್ರಗೊಳಿಸಿದ್ದು, ಇಸ್ಲಾಮಾಬಾದ್‌ ಮೇಲೂ ದಾಳಿ ನಡೆಸಿದೆ. ಇತ್ತ ಜಮ್ಮು ಕಾಶ್ಮೀರದ (Jammu Kashmir) ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್‌ನಲ್ಲಿ (Uri) ಗಡಿಯಾಚೆಗಿನಿಂದ ಪಾಕ್‌ ಪಡೆಗಳು ಶೆಲ್ ದಾಳಿ (Cross border Shelling) ನಡೆಸುತ್ತಿದ್ದು, ಇದರಲ್ಲಿ ಒಬ್ಬ ಮಹಿಳೆ ಸಾವನ್ನಪ್ಪಿದ್ದಾರೆ. ಮತ್ತೊಬ್ಬರು ಗಾಯಗೊಂಡಿದ್ದಾರೆ.

ಅಧಿಕಾರಿಗಳ ಪ್ರಕಾರ, ರಜೇರ್ವಾನಿಯಿಂದ ಬಾರಾಮುಲ್ಲಾಗೆ ಪ್ರಯಾಣಿಸುತ್ತಿದ್ದ ನಾಗರಿಕ ವಾಹನವು ಮೊಹುರಾ ಬಳಿ ಶೆಲ್ ದಾಳಿಗೆ ಒಳಗಾಯಿತು. ಶೆಲ್ ವಾಹನಕ್ಕೆ ತಗುಲಿ, ರಜೇರ್ವಾನಿ ನಿವಾಸಿ ಬಶೀರ್ ಖಾನ್ ಅವರ ಪತ್ನಿ ನರ್ಗಿಸ್ ಬೇಗಂ ಸಾವನ್ನಪ್ಪಿದರು. ರಜೇರ್ವಾನಿ ನಿವಾಸಿ ಬಶೀರ್ ಖಾನ್ ಅವರ ಪತ್ನಿ ಹಫೀಜಾ ಎಂದು ಗುರುತಿಸಲಾದ ಮತ್ತೊಬ್ಬ ಮಹಿಳೆಗೆ ಈ ಘಟನೆಯಲ್ಲಿ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಬಾರಾಮುಲ್ಲಾದ ಸರ್ಕಾರಿ ವೈದ್ಯಕೀಯ ಕಾಲೇಜು (ಜಿಎಂಸಿ) ಗೆ ಕರೆದೊಯ್ಯಲಾಯಿತು. ಜಿಎಂಸಿ ಬಾರಾಮುಲ್ಲಾದ ಆರೋಗ್ಯ ಅಧಿಕಾರಿಯೊಬ್ಬರು ಸಾವು ಮತ್ತು ಗಾಯವನ್ನು ದೃಢಪಡಿಸಿದರು.

ಕಳೆದ ಕೆಲವು ದಿನಗಳಿಂದ ಈ ಪ್ರದೇಶದಲ್ಲಿ, ವಿಶೇಷವಾಗಿ ಉರಿ ಮತ್ತು ಕುಪ್ವಾರ ಪ್ರದೇಶಗಳಲ್ಲಿ ಗಡಿಯಾಚೆಗಿನ ಶೆಲ್ ದಾಳಿ ತೀವ್ರಗೊಂಡಿದ್ದು, ನಿವಾಸಿಗಳು ಮತ್ತು ಅಧಿಕಾರಿಗಳಲ್ಲಿ ಕಳವಳವನ್ನು ಮೂಡಿಸಿದೆ. ಗಡಿ ಭದ್ರತಾ ಪಡೆಗಳು ತಕ್ಕ ಪ್ರತ್ಯುತ್ತರ ನೀಡುತ್ತಿವೆ.

ಡ್ರೋನ್‌ಗಳಿಗೆ ತಡೆ

ಭಾರತದ ಮೇಲೆ ಪಾಕಿಸ್ತಾನ ತಡರಾತ್ರಿಯೂ ಕ್ಷಿಪಣಿ ದಾಳಿ ಮತ್ತು ಡ್ರೋನ್ ದಾಳಿ ನಡೆಸುತ್ತಿದೆ. ಭಾರತ ಮಾತ್ರ ಪಾಕಿಸ್ತಾನದ ಯಾವುದೇ ಡ್ರೋನ್‌ಗಳನ್ನು ಗಡಿಯಿಂದ ಒಳಗಡೆ ಪ್ರವೇಶಕ್ಕೆ ಬಿಡದೆ, ಎಲ್ಲ ಡ್ರೋನ್‌ಗಳನ್ನು ಹೊಡೆದುರುಳಿಸಿದೆ ಎಂದು ಭಾರತೀಯ ಸೇನೆಯಿಂದ ಮಾಹಿತಿ ಲಭ್ಯವಾಗಿದೆ. ಭಾರತದ ಮೇಲೆ ಪಾಕಿಸ್ತಾನ ಇದುವರೆಗೂ 50 ಡ್ರೋನ್‌ಗಳ ಮೂಲಕ ದಾಳಿ ಮಾಡಿತ್ತು. ಇದೀಗ ಎಲ್ಲಾ 50 ಡ್ರೋನ್‌ಗಳನ್ನು ನಿಷ್ಕ್ರಿಯಗೊಳಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ. ಪಾಕಿಸ್ತಾನದ ದಾಳಿಗೆ ಭಾರತೀಯ ಸೇನಾಪಡೆ ತಕ್ಕ ಪ್ರತ್ಯುತ್ತರ ನೀಡಿ 50 ಡ್ರೋನ್‌ಗಳನ್ನು ನಿಷ್ಕ್ರಿಯಗೊಳಿಸುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ: Operation Sindoor: ಪಾಕಿಸ್ತಾನದ ಎಫ್‌- 16 ಯುದ್ಧವಿಮಾನ, ಕ್ಷಿಪಣಿ ಹೊಡೆದುರುಳಿಸಿದ ಭಾರತ