ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pahalgam Terrorist Attack: ಭಾರತದ ಗಡಿದಾಟುತ್ತಿದ್ದಂತೆ ಪಾಕಿಸ್ತಾನ ಪ್ರಜೆಗೆ ಹೃದಯಾಘಾತ

ಭಾರತದಿಂದ ಗಡಿಪಾರು ಮಾಡಲಾದ ಪಾಕಿಸ್ತಾನಿ ವ್ಯಕ್ತಿಯೊಬ್ಬ ಬುಧವಾರ ಅಮೃತಸರದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಅಬ್ದುಲ್ ವಹೀದ್ (69) ಮೃತರು. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಅಬ್ದುಲ್ ವಹೀದ್ ಅವರನ್ನು ಶ್ರೀನಗರದಿಂದ ಅಮೃತಸರಕ್ಕೆ ಕರೆತಂದು ಪಾಕಿಸ್ತಾನಕ್ಕೆ ವಾಪಸ್ ಕಳುಹಿಸುವಾಗ ಈ ಘಟನೆ ನಡೆದಿದೆ.

ಗಡಿ ದಾಟುತ್ತಿದ್ದಂತೆ ಪಾಕ್‌ ಪ್ರಜೆಗೆ ಹೃದಯಾಘಾತ

ಅಮೃತಸರ: ಕಾಶ್ಮೀರದ (Jammu-Kashmir) ಪಹಲ್ಗಾಮ್‌ನ (Pahalgam Terrorist Attack) ಬೈಸರನ್ ಕಣಿವೆಯಲ್ಲಿ ಉಗ್ರರು 26 ಜನರನ್ನು ಕೊಂದ ಬಳಿಕ ಭಾರತ ಸರ್ಕಾರ ಪಾಕಿಸ್ತಾನಿ ಪ್ರಜೆಗಳ (Pak nationals) ವೀಸಾ ರದ್ದುಗೊಳಿಸಿದೆ. ಈ ಹಿನ್ನೆಲೆಯಲ್ಲಿ ಭಾರತದಿಂದ ಗಡಿಪಾರು ಮಾಡಲಾದ ಪಾಕಿಸ್ತಾನಿ ವ್ಯಕ್ತಿಯೊಬ್ಬ ಬುಧವಾರ ಅಮೃತಸರದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಅಬ್ದುಲ್ ವಹೀದ್ (69) ಮೃತರು. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಅಬ್ದುಲ್ ವಹೀದ್ ಅವರನ್ನು ಶ್ರೀನಗರದಿಂದ ಅಮೃತಸರಕ್ಕೆ ಕರೆತಂದು ಪಾಕಿಸ್ತಾನಕ್ಕೆ ವಾಪಸ್ ಕಳುಹಿಸುವಾಗ ಈ ಘಟನೆ ನಡೆದಿದೆ.

ಅಬ್ದುಲ್ ವಹೀದ್ ಅವರು ಕಳೆದ 17 ವರ್ಷಗಳಿಂದ ಭಾರತದಲ್ಲಿ ವಾಸಿಸುತ್ತಿದ್ದರು. ಅವರ ವೀಸಾ ಅವಧಿ ಮುಗಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವಾರ ಭಾರತವನ್ನು ತೊರೆಯಲು ಹೇಳಲಾದ ಅನೇಕ ಪಾಕಿಸ್ತಾನಿ ಪ್ರಜೆಗಳಲ್ಲಿ ವಹೀದ್ ಕೂಡ ಒಬ್ಬರು.

ದೀರ್ಘಾವಧಿಯ ವೀಸಾದೊಂದಿಗೆ ಭಾರತವನ್ನು ಪ್ರವೇಶಿಸಿದ ಮೋನಿಕಾ ರಜನಿ (35) ತಮ್ಮ 5 ವರ್ಷದ ಮಗಳು ಸೈಮಾರಾ ಅವರೊಂದಿಗೆ ಭಾರತಕ್ಕೆ ಬಂದಿದ್ದಾರೆ. ಈ ಕುರಿತು ಮಾತನಾಡಿರುವ ರಜನಿ, ನನ್ನ ಮಗಳು ಭಾರತದಲ್ಲಿ ಜನಿಸಿದ್ದಾಳೆ. ಎರಡೂ ದೇಶಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಅಟ್ಟಾರಿ ಗಡಿಯಲ್ಲಿರುವ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ ಯಾವಾಗ ಬೇಕಾದರೂ ಮುಚ್ಚಬಹುದು ಎಂಬ ಭಯದಿಂದ ತಾನು ಭಾರತಕ್ಕೆ ಬಂದಿದ್ದೇನೆ ಎಂದು ಹೇಳಿದ್ದಾರೆ.

ನಾನು ಹಿಂದೂ ಕುಟುಂಬಕ್ಕೆ ಸೇರಿದವಳು. ಸುಮಾರು ಒಂಬತ್ತು ವರ್ಷಗಳ ಹಿಂದೆ ವಿಜಯವಾಡದ ಹಿಂದೂ ವ್ಯಕ್ತಿಯನ್ನು ಮದುವೆಯಾಗಿದ್ದೆ. ವಿಜಯವಾಡದಲ್ಲಿರುವ ಅತ್ತೆ ಮತ್ತು ಪತಿ ನನ್ನನ್ನು ಸ್ವೀಕರಿಸಲು ಇಲ್ಲಿ ಕಾಯುತ್ತಿದ್ದರು ಎಂದು ಅವರು ತಿಳಿಸಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಭಾರತಕ್ಕೆ ದಾಟಿದೆ. ಅಲ್ಲಿ ಕಸ್ಟಮ್ಸ್ ಮತ್ತು ವಲಸೆ ಕ್ಲಿಯರೆನ್ಸ್‌ಗೆ ಸುಮಾರು ಮೂರು ಗಂಟೆಗಳು ಬೇಕಾಯಿತು. ತಮ್ಮ ತಾಯಂದಿರೊಂದಿಗೆ ಪ್ರಯಾಣಿಸುವ ಮಕ್ಕಳು ಸುಡುವ ಶಾಖದಿಂದಾಗಿ ಅಗತ್ಯವಿರುವ ಎಲ್ಲಾ ಕ್ಲಿಯರೆನ್ಸ್‌ಗಳಿಗಾಗಿ ಕಾಯುವುದು ಕಷ್ಟಕರವಾಗಿತ್ತು ಎಂದು ಅವರು ಹೇಳಿದರು.

ಇದನ್ನೂ ಓದಿ: Viral Video: ನಡುರಸ್ತೆಯಲ್ಲಿ ಮಹಿಳೆಗೆ ಪೊಲೀಸರಿಂದ ಕಪಾಳಮೋಕ್ಷ; ನೆಟ್ಟಿಗರು ಫುಲ್‌ ಗರಂ!

ವಿಜಯವಾಡಕ್ಕೆ ಹೊರಡುವ ಮೊದಲು ತಮ್ಮ ಕುಟುಂಬದೊಂದಿಗೆ ಅಮೃತಸರದಲ್ಲಿರುವ ಸ್ವರ್ಣ ದೇವಾಲಯಕ್ಕೆ ಭೇಟಿ ನೀಡುವುದಾಗಿಯೂ ಅವರು ಹೇಳಿದರು. ಭಾರತ ಪಾಕಿಸ್ತಾನಿ ಪ್ರಜೆಗಳಿಗೆ ವೀಸಾ ರದ್ದುಗೊಳಿಸಿರುವುದರಿಂದ ಹಲವಾರು ಗಡಿಯಾಚೆಗಿನ ಕುಟುಂಬಗಳು ದೂರವಾಗುತ್ತಿವೆ. ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಜನರು ತಮ್ಮವರಿಗೆ ವಿದಾಯ ಹೇಳುತ್ತಿದ್ದಾರೆ. ಪಹಲ್ಗಾಮ್ ದಾಳಿಯ ಅನಂತರ ಅಲ್ಪಾವಧಿಯ ವೀಸಾಗಳನ್ನು ಹೊಂದಿರುವ ಪಾಕಿಸ್ತಾನಿ ಪ್ರಜೆಗಳನ್ನು ತಮ್ಮ ತಾಯ್ನಾಡಿಗೆ ಕಳುಹಿಸಲು ಅಮೃತಸರಕ್ಕೆ ಕರೆತರಲಾಗುತ್ತಿದೆ. ಭಾರತ ಸರ್ಕಾರದ ಆದೇಶದ ಅನಂತರ ಅನೇಕ ಭಾರತೀಯರು ಪಾಕಿಸ್ತಾನದಿಂದ ಮರಳಿದ್ದಾರೆ.